Tuesday, November 3, 2009

ಚಂದವಲ್ಲದಮಾಮ...

ಮೊನ್ನೆ ಸುದ್ದಿ ಹರಿದಾಡ್ತಾ ಇತ್ತು... ಚಂದಮಾಮ ಕನ್ನಡ ಆವೃತ್ತಿ ಬಂದಿದೆ, ಚಂದಮಾಮ ಕನ್ನಡ ಆವೃತ್ತಿ ಬಂದಿದೆ ಅಂತ.ನಂಗು ತುಂಬಾ ಸಂತೋಷ ಆಯ್ತು ಯಾಕಂದ್ರೆ ನಾನು ಸಹ ಕಾಮಿಕ್ಸ್ ಪ್ರಿಯ, ಚಿಕ್ಕವನಾಗಿದ್ದಾಗ ತುಂಬಾ ದುಬಾರಿ ಅನಿಸಿದ ಆ ಕಾಮಿಕ್ಸ್ ಪುಸ್ತಕ ಹಳೆಯದಾದ ಮೇಲೆ ರದ್ದಿ ಅಂಗಡಿಯಲ್ಲಿ ತುಂಬಾ ಕಡಿಮೆ ಬೆಲೆಗೆ ಸಿಕ್ಕಾಗ ಕೊಂಡು ಓದಿರುವ ಘಟನೆ ನೆನಪಾದವು, ಪರಿಚಯಸ್ತರ ಮನೆಗೆ ಹೋದಾಗ ಅವರ ಬಳಿ ಚಂದಮಾಮ ಇದೆಯೆ ಅಂತ ನನ್ನ ಅಮ್ಮನನ್ನು ಕಾಡಿಸಿ ಪೀಡಿಸಿ ದೊರೆತಾಗ,ಎರವಲು ಪಡೆದು ಖುಷಿಯಿಂದ ಕುಪ್ಪಳಿಸಿದ ನೆನಪುಗಳು ಒಂದು ಕ್ಷಣ ಕಣ್ಮುಂದೆ ಹಾಯ್ದು ಹೋದವು. ನಂಗೆ ಅದರ ವರ್ಣಮಯ ಚಿತ್ರಣ, ಮನಸ್ಸಿನಲ್ಲಿ ಅಚ್ಚಾಗುತ್ತಿದ್ದ ಕಥೆಗಳ ಸಾರ, ಪ್ರತಿ ಕಥೆಯಲ್ಲೊಂದು ಸಂದೇಶ, ತಿಳಿಸುತ್ತಿದ್ದ ರೀತಿ, ಬಳಸುತ್ತಿದ್ದ ಪದಪುಂಜ,ಸರಳವಾದ ನುಡಿ..ಸರಳತೆಯೆ ಬಂಡವಾಳವಾಗಿತ್ತೆಂದರು ಮಾತು ಹುಸಿಯಲ್ಲವೆನಿಸುತ್ತದೆ.

ಮಕ್ಕಳಿಗೆ ಜೀವನದಲ್ಲಿ ಅವಶ್ಯಕವಿರುವ ನೀತಿ ಪಾಠಗಳನ್ನು ಹಾಗು ನೈತಿಕತ್ಯೆಯನ್ನು ತಿಳಿಸುತ್ತಿದ್ದ ಬಗೆ ಎಲ್ಲವು ಸಹ ನನ್ನನ್ನು ಅದರ ಅಭಿಮಾನಿಯಾಗುವಂತೆ ಮಾಡಿತ್ತು ಇತರೆ ಸಾವಿರಾರು ಮಕ್ಕಳಂತೆ ಕಾಮಿಕ್ಸ್ ಓದುವ ಹಂಬಲವಿರುವ ನೂರಾರು ವಯಸ್ಕರಂತೆ. ಚಂದಮಾಮ ದೊರೆಯುತ್ತಿದ್ದರು ಸಹ ಆಂಗ್ಲದಲ್ಲಿ ಬರುತ್ತಿದ್ದ ಹಲವಾರು ಕಾಮಿಕ್ಸ್‌ಗಳೊಂದಿಗೆ ಪೈಪೋಟಿಯಲ್ಲಿತ್ತು ಯಾಕಂದ್ರೆ ಚಂದಮಾಮ ಇದ್ದಿದ್ದು ಕನ್ನಡದಲ್ಲಿ, ಮಕ್ಕಳ ಬಿಳುಪಾದ ಮನಸ್ಸಿನ ಮೇಲೆ ಕಥೆಯ ತಿಳಿಸುತ್ತಿದ್ದ ಅಂಶ ಸರಿಯಾಗಿ ನಾಟುತ್ತಿತ್ತು,ನಮ್ಮ ನಾಡಿನ ಸಂಸ್ಕೃತಿಗೆ ಹತ್ತಿರವಾಗಿತ್ತು ಹಾಗಾಗಿ ಊಹಿಸಿಕೊಳ್ಳಲು ಬಲು ಸುಲಭವಾಗುತ್ತಿತ್ತು. ಆಂಗ್ಲ ಕಾಮಿಕ್ಸ್ ಸ್ವಲ್ಪ ಭಿನ್ನವಿದ್ದರು ಸಹ ಅದ್ರ ವಿಶೇಷತೆಯೆ ಬೇರೆ ಭಾರತೀಯ ಕಥೆಗಳಿದ್ದರು ಸಹ ಮನಸ್ಸಿಗೇಕೊ ಚಂದಮಾಮದಷ್ಟು ಹತ್ತಿರವನಿಸುತ್ತಿರಲಿಲ್ಲ. ಇಷ್ಟು ವರ್ಷಗಳ ನಂತರ ಆನ್ಲೈನ್ ಅಲ್ಲು ಸಹ ಕನ್ನಡ ಆವೃತ್ತಿ ಬಿಡುಗಡೆಯಾದ ಸುದ್ದಿ ಕೇಳಿದ ಮೇಲೆ ಹೇಗಾಗಿರಬೇಡ ಊಹಿಸಿ...
ನಾನು ಛಕ್ಕನೆ ತಾಣಕ್ಕೆ ಭೇಟಿ ಕೊಟ್ಟೆ www.chandamama.com, ಆನ್ಲೈನ್ ಆವೃತಿಯಲ್ಲೂ ಸಹ ಅದೆ ವೈವಿಧ್ಯಮತೆ,ಭಿನ್ನತೆ,ವರ್ಣಮಯತೆಯ ಹಿಡಿತ. ಸಂತಸದಿಂದ ಒಂದೆರಡು ಕಥೆಯೋದಲಿಕ್ಕೆ ವಿಭಾಗಗಳಲ್ಲಿ ಕಣ್ಣು ಹಾಯಿಸಿದೆ.. ಯಾಕೊ ಕಣ್ಣುರಿಯಲು ಶುರುವಾಯಿತು, ರಕ್ತ ದಳದಳನೆ ಸುರಿಯಿತು..ನನ್ನ ಕಣ್ಣಿಂದಲೆ ಸ್ವಾಮಿ ಇದು ಸತ್ಯ. ಕಾರಣ ಇಷ್ಟೆ.. ಒಂದು ಕಥೆಯ ಶೀರ್ಷಿಕೆ "ಓರು ದೊಡ್ಡ ಶಿಲ್ಪಿ" ಅಂತ ಇತ್ತು.. ನಾನು ಅದನ್ನ ಮೊದಲ ಬಾರಿಗೆ ಓದಿದಾಗ ನಂಬಕ್ಕೆ ಆಗ್ಲಿಲ್ಲ.. ಕಣ್ಣುಜ್ಜಿಕೊಂಡು ಎರಡನೆ ಸರ್ತಿ ಓದಿದೆ, ತಮಿಳಿನ ಮಸಾಲೆಯ ಘಾಟು ಕನ್ನಡದ ಊಟದಲ್ಲಿ ಯಾಕೆ ಬರ್ತಿದೆ ಅಂತ ನೋಡೊಕ್ಕೆ ಮೊದಲು
ಹುಡುಕಿದ್ದೆ "ಸಂಪರ್ಕಿಸಿ" ಅನ್ನೊ ಕೊಂಡಿಯನ್ನು, ನೋಡಿದ್ರೆ ಅಲ್ಲಿ ಹಾಕಿದ್ರಪ್ಪ ಚೆನ್ನೈ ವಿಳಾಸ. ಆಗ ಅನ್ಕೊಂಡೆ ಹ್ಮ್ಮ ಇಲ್ಲಿದೆ ಇದರ ಕಾರಣ ಅಂತ. ಹಾಳಾಗ್ ಹೋಗ್ಲಿ ಅಂತ ಕಥೆ ಓದಲು ಮುಂದುವರೆಸಿದೆ. ಅದ್ ಯಾವ್ ಸೀಮೆ ಕಥೆನೊ ಎನೊ ಪ್ರಕಟಿಸಿದವನಿಗೆ ಪ್ರಿಯ ಆಗಿರ್ಬೇಕು. ಸತ್ವವಿಲ್ಲದೆ ಕಥೆ.. ಓದಿದೆ ಮೇಲೆ ಆ ಕಥೆ ಯಾಕೆ ಬರೆದ್ರು, ಇದನ್ನು ಸಹ ಕಥೆ ಅಂತಾರ ಅನ್ನೊ ಯೋಚನೆಯಲ್ಲಾ ಬಂತು.. ಉತ್ತರ ಮಾತ್ರ ಗೊತ್ತಾಗ್ಲಿಲ್ಲ. ತಾಣದ ಇತರೆ ಕಥೆಯತ್ತ ಕಣ್ಣು ಹಾಯಿಸಿದೆ, ಅಲ್ಲಿ ಬರ್ದಿದ್ದ ಸ್ವಾಮಿ "ಒಂದು ಉತ್ತಮವಾದ ಪೂವು"ಅಂತ, ಹೂವು ಅನ್ನೊದನ್ನ ಪೂವು ಅಂತ ಯಾವ್ #$%#ಮಗ ಬರೆದ್ನೋ ಅವ್ನು ಸಿಕ್ಕಿದ್ರೆ ತಿಥಿ
ಮಾಡಿರ್ತಿದೆ. ಆಗ್ಲೆ ನಂಗೆ ಮೈ ಧಗ ಧಗ ಅಂತ ಉರಿಯೊಕ್ಕೆ ಶುರು ಆಗಿದ್ದು.. #$%#@%, #$#$%#@%#, $#$%#, @%#$#$%#@%#$ ಅಂತ ಮನ್ಸಾರೆ ಬೈಕೊಂಡು ತಮಿಳರ ಹಾಳು ಬುದ್ಧಿ ಎಲ್ಲ್ ಹೋದ್ರು ನಾಯಿ ಥರ ಉಚ್ಚೆ ಹುಯ್ತಾ ತಮ್ಮದ್ದೆ ಈ ಜಾಗ ಅನ್ನೊ ಗುರುತು ಮೂಡಿಸೊ ಪ್ರಯತ್ನ ಚಂದಮಾಮ ಅನ್ನೊ ಕಾಮಿಕ ಪುಸ್ತಕದಲ್ಲು ಕಾಣಿಸಿಕೊಂಡಿದ್ದು ತುಂಬಾ ಬೇಜಾರಾಯ್ತು ಇಷ್ಟೆಲ್ಲ ಆದ್ರು ಸಹ ಮತ್ತೆ ಓದತೊಡಗಿದೆ ಇನ್ನೇನೇನು ಹಾಳುಗೆಡುವೋಕ್ಕೆ ಪ್ರಯತನ ಮಾಡಿದಾರೆ ಅಂತ. ಯಾವ ವಿಭಾಗ, ಯಾವ ಕಥೆ ತೊಗೊಂಡ್ರು ಅಲ್ಲಿ ತಮಿಳಿನ ಸೋಂಕು, ಬೀರ್ಬಲ್ ಹೋಗಿ ಭೀರ್ಬಲ್ಲ, ಬೀರ್ಬಲ್ ಇದನ್ನ ಓದಿದ್ರೆ ನೇಣು
ಹಾಕೊಂಡಿರ್ತಿದ್ನೇನೊ ಏನೊ. ಒಂದು ವಿಭಾಗದಲ್ಲೊಂತು "ನಿಮ್ಮ ಕರ್ನಾಟಕದ ಬಗ್ಗೆ " ಅಂತೆ ಇದೆ.. ಈ ರೀತಿ ವಿಭಾಗ ಇದ್ರೆ ನಾನು ಏನು ಅಂತ ಹೇಳಲಿ?? ಓದ್ತಿರೋದು ಕನ್ನಡ ಆವೃತ್ತಿ, ನಮ್ಮ ಕರ್ನಾಟಕ ಬಗ್ಗೆ ಅಂತ ಓದುವುದು ಸಮಂಜಸ ಅನ್ಸುತ್ತೊ ಅಥವಾ "ನಿಮ್ಮ ಕರ್ನಾಟಕ ಬಗ್ಗೆ" ಅಂತ, ಪರಕೀಯರು ನಮ್ಮ ಭಾಷೆಯಲ್ಲಿ ನಮ್ಮದನ್ನು ನಮಗೆ ತಿಳಿಸಿ ಹೇಳಿದ ಭಾವನೆ ಉಂಟಾಗುವುದಿಲ್ಲ? ಈ ರೀತಿ ಹೇಳಿಸಿಕೊಂಡಂತೆ ಓದಿದರೆ ಅದು ಮನಸ್ಸಿಗೆ ಹತ್ತಿರವೆನಿಸುತ್ತದೆಯೆ? ಇವೆಲ್ಲ ಕೇವಲ ಸ್ಯಾಂಪಲ್ ಅನ್ನೊ ಹಾಗೆ ಕೊಟ್ಟ ಉದಾಹರಣೆಗಳು. ನಿಮ್ಗು ಕಣ್ಣು ಉರಿಸ್ಕೊಬೇಕು ಅಂದ್ರೆ ತಾಣಕ್ಕೆ ಭೇಟಿ ಕೊಡಿ..
ಇಷ್ಟೆಲ್ಲ ಅನುಭವಿಸಿ ಸುಮ್ನೆ ಬೈಕೊಂಡು ಕೂತ್ರೆ ಅಲ್ಲಿಗೆ ಕೆಲ್ಸ ಮುಗಿದಹಾಗಾ?? ಉಹು ನಾವು ಅವರಿಗೆ ಅವರ ತಪ್ಪು ತಿಳಿಸಬೇಕು ಅದು ಹೇಗೆ --- ತುಂಬಾ ವಿನಯಪೂರ್ವಕವಾಗಿ :( . ನಂಗು ತಡ್ಕೊಳಕ್ಕೆ ಆಗ್ದೆ ಇರೊ ಅಷ್ಟು ಕೋಪ ಬಂದ್ರು ಖಾರವಾದ ಮಾತು ನುಂಗಿ ನುಂಗಿ ೪ ಸಾಲು ಬರೆದೆ. ಸ್ವಾಮಿ ನೀವು ಕನ್ನಡ ಆವೃತ್ತಿ ಪ್ರಕಟಿಸಿರೋದು ತುಂಬಾ ಸಂತೋಷದ ಸುದ್ದಿ.. ಅದು ಇದು ಅಂತ ಸ್ವಲ್ಪ ಹೊಗಳಿ ಇಟ್ಟೆ ಕೊನೆಗೆ ಬತ್ತಿ.. ಇಷ್ಟೆಲ್ಲ ತಪ್ಪು ಆಗಿದೆ, ಇವು ಕನ್ನಡ ಪದಗಳೆ ಅಲ್ಲ.. ಈ ರೀತಿ ಇದ್ರೆ ಯಾರು ಓದೊ ಮನ್ಸು ಮಾಡಲ್ಲ ನಿಮ್ಗೆ ತಪುಗಳನ್ನ ತಿದ್ದೊಕ್ಕೆ ಸಹಾಯ ಬೇಕು ಅಂದ್ರೆ ತಿಳಿಸಿ ನಾನು ವಾಲಂಟೀರ್ ಮಾಡ್ತೀನಿ ಅಂತ. ಕಾದು ನೋಡ್ಬೇಕು ಅದು ಬಿನ್ ಗೆ ಹೋಯ್ತಾ ಅಥ್ವಾ ಫ್ಲಾಗ್ ಆಗಿ ಫೊಲ್ಲೊ ಉಪ್ ಅಂತ ಗುರುತು ಆಗಿದ್ಯ ಅಂತ.. ನೀವು ಬರೆದ್ರೆ ಬಹುಶ: ಕನ್ನಡ ಕಂದಮ್ಮಗಳು ತಮಿಳು ಕಲಿಯದೆ ಸ್ವಚ್ಚ ಅಚ್ಚ ಕನ್ನಡ ಕಲಿಯುವ ಅವಕಾಶ ಒದಗಿಸಿಕೊಟ್ಟ ಹಾಗಾಗುತ್ತೆ
ಯೊಚ್ಸಿ....