Friday, December 18, 2009

ಬೇಸರವಾದಾಗ ಬಂದ ಆಲೋಚನಾ ಲಹರಿ....

ಅವಿರತ ಗುಂಪಿನ ಚಿತ್ರಗಳನ್ನ ನೋಡಿದಾಗ ನಾನು ಸಹ ದುಡ್ಡು ಕೊಟ್ಟಿದ್ದರೆ ಚಂದ ಅನಿಸುತ್ತಿತ್ತು ಜೊತೆಗೆ ಬೇಸರ ಸಹ ಆಯ್ತು.. ಅವಿರತ ಗುಂಪಿನವರು ಕಾರ್ಯಕ್ರಮದಿಂದ ಬಂದ ದುಡ್ಡಿನಲ್ಲಿ ನೆರೆ ಪೀಡಿತ ಪ್ರದೇಶದಲ್ಲಿ ಶಾಲೆ ಕಟ್ಟಿಸಲು ಯೋಜನೆ ಹಾಕಿಕೊಂಡಿದ್ದಾರೆ, ನೆರೆಯಾದಾಗ ನಾನು ಸಹ ಬಹಳ ಹುಮ್ಮಸ್ಸಿನಿಂದ ಓಡಾಡಿದ್ದೆ ಕೈಲಾದ ನೆರವು ಮಾಡೋಣ ಅಂತ. ಆದರು ಸಹ ಯಾರೂ ನನ್ನೊಂದಿಗೆ ಕೈ ಜೋಡಿಸಲು ಮುಂದಾಗಲಿಲ್ಲ ಹಾಗಾಗಿ ನೆರವು ನೀಡುವುದರ ಕನಸು ಸಹ ಕಮರಿಹೋಯಿತು. ದು:ಖವೂ ಆಯಿತು ಕಾಲಾಂತರದಲ್ಲಿ ಅದರ ನೆನೆಪು ಸಹ ಅಳಿಯಿತು. ಆದ್ರೆ ಇಂದು ಚಿತ್ರಗಳನ್ನ ನೋಡಿದಾಗ ಮುಂದಿನ ಬಾರಿ ಖಂಡಿತವಾಗಲು ನೆರವು ಮಾಡುವುದರ ಮನಸ್ಸು ಮಾಡಿದೆ. ಹಿಂದಿನ ಬಾರಿ ನಾನಲ್ಲದೆ ನನ್ನ ಸ್ನೇಹಿತರನ್ನು ಪರಿಚಯದವರನ್ನು ಸಹ ಯಾಚಿಸಿ ದೊಡ್ಡದಾಗಿ ಸಹಾಯ ಮಾಡುವ ಆಲೋಚನೆಯಿತ್ತು ಆದರೆ ನನ್ನ ಕೆಲವು ಗೆಳೆಯರನ್ನ ನೋಡಿ ಅವ್ರು ಇವ್ರು ಅಂತ ಹಿಂದೆ ಓಡಾಡದೆ ಯಾರು ಕೆಲಸ ಮಾಡ್ತಿರ್ತಾರೊ ಅವರಿಗೆ ನನ್ನಿಂದ ಎಷ್ಟು ಸಹಾಯವೊ ಅಷ್ಟು ಮಾಡಿದರಾಯ್ತು ಅಂತ ತೀರ್ಮಾನ ಮಾಡಿದ ಮೇಲೆ ಮನಸ್ಸು ಹಗುರವಾಯ್ತು.