Wednesday, March 24, 2010

ಬಿ.ಬಿ.ಎಮ್.ಪಿ ಚುನಾವಣೆ ಬರ್ತಿದೆ... ನಿಮ್ ಪಕ್ಷ ಯಾವ್ದು??

ಬಿ.ಬಿ.ಎಮ್.ಪಿ ಚುನಾವಣೆ ಬರ್ತಿದೆ... ನಿಮ್ ಪಕ್ಷ ಯಾವ್ದು??

ನಮ್ ಕನ್ನಡಿಗರನ್ನ ನೋಡೆ "ಮನೆಗೆ ಮಾರಿ ಊರಿಗೆ ಉಪಕಾರಿ"ಅಂತ ಮಾತು ಸೃಷ್ಟಿ ಆಗಿರ್ಬಹುದು ಅಂತೀನಿ.. ಚಿಲ್ರೆ ಪಲ್ರೆ ವಿಷ್ಯಕ್ಕೆ ಆನ್ಲೈನ್‌ನಲ್ಲಿ ಇಷ್ಟಿಷ್ಟುದ್ದ ಲೇಖನಗಳು, ಅದಕ್ಕೆ ಅದಕ್ಕಿಂತಲು ಉದ್ದವಾದ ಕಾಮೆಂಟುಗಳು!! ಸಂವಾದವೇನು ಚರ್ಚೆಯೇನು.. ಕೈಗೆ ಸಿಕ್ಕಿದ್ದರೆ ಹೊಡೆದೆಬಿಡುವ ರೊಚ್ಚು ಕಿಚ್ಚು ಕಾಮೆಂಟಿಸುವ ಭರ!!ಎಷ್ಟು ಸಂತೋಷವೆನಿಸುತ್ತದೆ ಈ ರೀತಿಯ involvement, ಹೌದು ಪಾಲ್ಗೊಳ್ಳುವಿಕೆ ಇರಲೆಬೇಕು ಆಗಲೆ ಚೆಂದ ಸರಿ ತಪ್ಪು, ಸೋಲು ಗೆಲುವು ಆಮೇಲಿನ ವಿಚಾರ ಅಲ್ಲವೆ.

ಎಷ್ಟು ಲೇಖನ ಬಂದಿದೆ ಬಿ.ಬಿ.ಎಮ್.ಪಿ ಚುನಾವಣೆಯ ಬಗ್ಗೆ?? ಅದರ ಮಹತ್ವದ ಬಗ್ಗೆ?? ಯಾವ ಮಟ್ಟದ ಚರ್ಚೆಯಾಗಿದೆ?? ಆನ್ಲೈನ್ ಎಲ್ನೋಡಿದ್ರು ಬನವಾಸಿ ಬಳಗದವರು ಹಾಗು ಕೆಲವೆ ಕೆಲವು ಪುಡಿ ಕನ್ನಡಿಗರ ಆರ್ಭಟ.. ಇಷ್ಟೆನಾ ಆನ್ ಲೈನ್ ಸಮುದಾಯದ ಬೆಂಗಳೂರಿನ ಕನ್ನಡಿಗರ ಒಕ್ಕೊರಲು :-( ಸಾಕಾ ಇಷ್ಟು ? ಎಲ್ಲಾ ಇತರೆ ವಿಚಾರವನ್ನು ಪುಂಖಾನು ಪುಂಖವಾಗಿ ಪುಟಗಟ್ಟಲೆ ವಿಶ್ಲೇಷಿಸುವ ಸಾಹಿತಿಗಳ ಸಮುದಾಯವೆಲ್ಲಿ?

ಬ್ರಾಹ್ಮಣ, ಗೌಡ, ಲಿಂಗಾಯಿತ, ಕುರುಬ, ಹಿಂದು, ಮುಸ್ಲಿಮ್, ಕ್ರಿಶ್ಚಿಯನ್, ಸಿಖ್, ದಲಿತ... ಇನ್ನು ಯಾವ ಯಾವ ಗುಂಪಿನವರು, ಸಮುದಾಯದವರು ಈ ಬೇಧವನ್ನೆಲ್ಲ ಮರೆತು ಒಮ್ಮೆ, ಕೇವಲ ಒಮ್ಮೆ ಈ ಬಾರಿ ಈ ಎಲ್ಲಾ ಕ್ಷುಲ್ಲಕ, ಅನಿಷ್ಟ, ಅನಗತ್ಯವಾದ ಬೇಧಗಳನ್ನು ದೂರ ಅಟ್ಟಿ ಕನಿಷ್ಟ ಬಿ.ಬಿ.ಎಮ್.ಪಿ ಚುನಾವಣೆಗೆ ಸೀಮಿತವಾದರು ಸಹ ನಾವು, ನಮ್ಮವರು, ನಮ್ದು ಎನ್ನುವ ಅಂಶಗಳಾದ ಕನ್ನಡ,ಕರ್ನಾಟಕ,ಕನ್ನಡಿಗ ಎನ್ನುವ ದೃಷ್ಟಿಕೋನದಿಂದ ಯೋಚಿಸಿ ಮತ ಚಲಾಯಿಸಿದರೆ ಆಗ ಮಾತ್ರ ಅದು ಕನ್ನಡಿಗರ ಒಗ್ಗಟಿನ ಗೆಲುವು ಆಗುವುದು ಖಚಿತ.ಈ ಸರ್ತಿ ಬಿ.ಬಿ.ಎಮ್.ಪಿ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷವಾಗಿರುವ ಕ.ರ.ವೆ ಗೆಲ್ಲಲೆ ಬೇಕು.. ಆಗ ಮಾತ್ರ ಅದು ಕನ್ನಡಿಗರ ಗೆಲುವಾಗುತ್ತೆ ಇಲ್ಲವಾದರೆ ಅದು ಅಧಿಕಾರ ದಾಹಕ್ಕಾಗಿ ಪರಭಾಷಿಕರಿಗೆ ಮಣೆ ಹಾಕುವ ಪುಢಾರಿಗಳ ಗೆಲುವು ಎಂಬುದೆ ಅರ್ಥ..

ಕನ್ನಡಿಗರು ಧ್ವನಿ ಎತ್ತಬೇಕು, ನರ ಸತ್ತವರಂತೆ ಬದುಕುವುದು ಬಿಡಬೇಕು. ದೌರ್ಜನ್ಯ ಅನ್ಯಾಯದ ವಿರುದ್ಧ ಧ್ವನಿ ಏರಿಸುವುದು ಕಲಿಯಬೇಕು(ಈ ಮಾತು ಹೇಳ್ಬೇಕಾಗಿರೊದು ವಿಪರ್ಯಾಸ)

ಕನಿಷ್ಟ, ಕೀಲಿಮಣೆ ಅಂದ್ರೆ ಆಂಗ್ಲ ಅಂತ ತಿಳಿದಿರುವವರು ಆಂಗ್ಲದಲ್ಲಾದ್ರು ಪ್ರಾದೇಶಿಕ ಪಕ್ಷಕ್ಕೆ ತಮ್ಮ ಬೆಂಬಲ ಸೂಚಿಸಬೇಕು.. ಒಟ್ನಲ್ಲಿ ಚರ್ಚೆ ಆಗಬೇಕು, ಪಾಲ್ಗೊಳ್ಳುವಿಕೆ ಇರಬೇಕು.

ಇದೆಲ್ಲ ಆಗಲ್ಲಾರಿ, ಯಾವುದಾದರು ಹುಡುಗಿಯೊ/ಮಹಿಳೆಯೊ ಏನಾದರು ನನ್ಗೆ ಸಹಾಯ ಬೇಕು ನಿಮ್ಗೆ ಗೊತ್ತಿದ್ಯಅಂತ ಯಾಹೂ ಅಥವಾ ಗೂಗಲ್ ಗುಂಪಿಗೆ ಮಿಂಚೆ ಕಳಿಸಿದರೆ ಆಗ ಮಿಂಚೆಗಳ ಸುರಿಮಳೆ ನೋಡಬೇಕು.. ಪರ್ವಾಗಿಲ್ವೆ ಇಷ್ಟು ಜನ ಈ ಮಿಂಚೆಯನ್ನು ಓದಿದಾರೆ ಅಂತ ಆಶ್ಚರ್ಯವಾದರು ಸೋಜಿಗವಲ್ಲ.

ಬರಿ ಹುಡುಗರೆ ಯಾಕೆ ಪ್ರಚಾರದಲ್ಲಿ ತೊಡಗಬೇಕು?? ಮಹಿಳೆಯರಿಗೆ ಸವಲತ್ತುಗಳು ಬೇಕಾದಾಗ ಮಾತ್ರ ಅವರು ಧ್ವನಿ ಎತ್ತಬೇಕೆ? ಚುನಾವಣೆ ಎನ್ನುವುದು ಎಲ್ಲರಿಗು ಸಂಬಂಧಪಟ್ಟ ವಿಚಾರ. ಇದು ಕನ್ನಡ ಕನ್ನಡಿಗರ ಉಳಿವಿನ ಪ್ರಶ್ನೆ!! ಕರ್ನಾಟಕದಲ್ಲಿ ಕನ್ನಡ ಪರವಾದ ಪ್ರಾದೇಶಿಕ ಪಕ್ಷ ಗೆದ್ದರೆ ಅದು ಕನ್ನಡಿಗರಾದ ನಮ್ಮ ಮರ್ಯಾದೆ ಉಳಿದಂತೆ. ನಾವು ಮರ್ಯಾದೆ ಬಿಟ್ಟು ಬದುಕುವ ಲೆವೆಲ್ಲಿಗೆ ಒಗ್ಗಿಕೊಂಡಿದ್ದೆವೆಯೆ?

ಇಂದು ಹಲಸೂರಿನಲ್ಲಿ ೨೦೦-೩೦೦ ಮಂದಿ ತಮಿಳರು ಒಕ್ಕೊರಳಿನಲ್ಲಿ ತಮಿಳಿನಲ್ಲಿ!! ಬಿ.ಬಿ.ಎಮ್.ಪಿ ಚುನಾವಣೆಗೆ ಪ್ರಚಾರ ಮಾಡುತ್ತಿರುವ ಉದ್ದೇಶವೇನು? ಬೆಂಗಳೂರೇನು ತಮಿಳರ ಸ್ವತ್ತೆ? ಬೆಂಗಳೂರಿನ ಕೊಳೆಗೇರಿ ಖಾಲಿ ಮಾಡಿಸಿದರೆ ಅರ್ಧ ತಮಿಳುನಾಡು, ಆಂಧ್ರ, ಬಿಹಾರಿ, ಬಾಂಗ್ಲಾದೇಶವನ್ನೆ ಹೊರಗಟ್ಟಿದಂತೆ.. ಇನ್ನು ವಿಚಿತ್ರವೆಂದರೆ ಈ ಪರಭಾಷಿಕರೆ ಕನ್ನಡಿಗ ಸಮುದಾಯವನ್ನು ಆಳುವವರು ಯಾರು ಎಂದು ನಿರ್ಧರಿಸುವ ತಾಕತ್ತು ಇರುವವರು!!! ಈ ತಾಕತ್ತು ದಯಪಾಲಿಸಿದವರು ನಮ್ಮ ಓದಿದ ಮುಟ್ಠಾಳ ಕನ್ನಡಿಗ ಸಮುದಾಯದವರು. ಛೆ!! ನಾಚಿಕೆಯಾಗಬೇಕು ಮತ ಚಲಾಯಿಸದೆ ಅಸಡ್ಡೆ ಮಾಡುವವರಿಗೆ.

ಚೆನ್ನಾಗಿ ಓದಿಕೊಂಡು ಕತ್ತೆ ಥರ ಹಗಲು ರಾತ್ರಿ ದುಡಿದು ಮನೆ ಚೆನ್ನಾಗಿ ನೋಡಿಕೊಂಡರೆ ಸಾಕೆ? ಜೀವನ ಸಾರ್ಥಕವೆ? ಸಮಾಜದ ಒಳಿತಿಗೆ ಪೂರಕವಾಗಿರುವ ಕೈಲಾದ ಸೇವೆಯಾಗಿರುವ ಮತ ಚಲಾವಣೆ ಮಾಡದ ಜೀವನವೂ ಸಾರ್ಥಕವೆ? ಈ ಸರ್ತಿ ಕ.ರ.ವೆ ನಮ್ಮ ಪಕ್ಷವೆಂದು ಭಾವಿಸಿ (ಯಾಕಂದ್ರೆ ಅರವತ್ತು ವರ್ಷ ರಾಷ್ಟ್ರೀಯ ಪಕ್ಶಗಳ ಬೆನ್ನತ್ತಿ ಮಣ್ಣು ತಿಂದು ಬುದ್ದಿ ಭ್ರಮಣೆ ಆಗಿದೆ, ಈ ಸರ್ತಿ ಭಾವಿಸಿದರೆ ಮುಂದೆ ಅದು ನಮ್ಮದೆ ಅಂತ ತಿಳಿಯುತ್ತೆ) ಅದು ಗೆದ್ದು ಬರುವ ಹಾಗೆ ಮಾಡುವುದು ಕನ್ನಡಿಗರಾದ ನಮ್ಮೆಲ್ಲರ ಕರ್ತವ್ಯ...

ಕಳೆದ ಇಪ್ಪತ್ತು ವರ್ಷದಿಂದ ನಾಡು ನುಡಿಗಾಗಿ ಹೋರಾಡಿದ ಕ.ರ.ವೆಯವರಿಗೆ ನಾವು ಕನ್ನಡಿಗರಾಗಿ ಬೆಂಬಲ ಮತ್ಯಾವಾಗ ಸೂಚಿಸಲು ಸಾಧ್ಯ?? TV9 ನೋಡ್ತಾ ನಾರಯಣ ಗೌಡ್ರು ಭಾಷಣ ಕೇಳಿದ್ರಾ? ಅವರಿಂದಲೆ ಇವತ್ತು ಗಡಿ ಭಾಗಗಳಲ್ಲಿ ಕನ್ನಡ ಉಳಿದಿದೆ ಅಲ್ವಾ? ಅಂತ ಮೆಚ್ಚುಗೆ ಪಡಿಸಿಬಿಟ್ಟರೆ ಸಾಲದು ಅವರನ್ನು ಚುನಾಯಿತರನ್ನಾಗಿ ಮಾಡಿದಾಗಲೆ ಅವರ ಇಷ್ಟು ವರ್ಷದ ಸಾಧನೆಗೆ ಮರ್ಯಾದೆ ಕೊಟ್ಟಂತೆ. ಮುಂದಿನ ಯೋಜನೆಗಳಿಗೆ ಪ್ರೋತ್ಸಾಹಿಸಿದಂತೆ.

ಊರು ಕೊಳ್ಳೆ ಹೊಡೆದಾದ ಮೇಲೆ ಕೋಟೆ ಬಾಗಿಲು ಹಾಕಿದ್ರಂತೆ ಹಾಗೆ ಬೆಂಗಳೂರನ್ನು ಪರಭಾಷಿಕರು ಕೊಳ್ಳೆ ಹೊಡೆದು ಅವರನ್ನು ಸ್ವಾಮಿಗಳಾಗಿ ಮಾಡಿಕೊಳ್ಳುವುದನ್ನು ತಪ್ಪಿಸಬೇಕು. ಈಗಾಗ್ಲೆ ಪರಭಾಷಿಕರು ಸಾಕಷ್ಟು ಮ್ಯಾನೇಜ್‌ಮೆಂಟ್ ಹುದ್ದೆಗಳಲ್ಲಿ ಪ್ರಭಾವಿ ವ್ಯಕ್ತಿಗಳಾಗಿ ಇದ್ದು ಕನ್ನಡಿಗರು "ಆಯ್ತು ಸ್ವಾಮಿ" ಎನ್ನುವ ಬದಲು "ಜಿ ಹುಜೂರ್" ಎನ್ನುವ ವಿಷಮಯ ಸ್ಥಿತಿಯುಂಟಾಗಿದೆ. ನಮ್ಮ ನಾಡಿನಲ್ಲೆ ನಾವು ಸ್ವಾಮಿಗಳಾಗಿ ಉಳಿಯಬೇಕೆಂದರೆ ಪ್ರಾದೇಶಿಕ ಹಿತವನ್ನು ಕಾಯುವ ಪಕ್ಷ ಕ.ರ.ವೆಗೆ ಮತ ಹಾಕಿ, ಹಾಕಿಸಿ ಗೆಲ್ಲಿಸಲೆಬೇಕು.

ಕರ್ನಾಟಕದಲ್ಲಿ ಕನ್ನಡಿಗನೆ ಸಾರ್ವಭೌಮನಾಗಿ ಉಳಿಯಬೇಕು. ಇಲ್ಲಿ ವಿಚಾರ ಹೇರುವ ಪ್ರಶ್ನೆ ಉದ್ಭವಿಸುವುದಿಲ್ಲ,, ಇದ್ದುದ್ದನ್ನು ಇದ್ದ ಹಾಗೆ ಹೇಳಿ ಸರಿಯಾದುದನ್ನು ತಿಳಿ ಹೇಳಿ ನಮಗೆ ನಾವೆ ನ್ಯಾಯ ಒದಗಿಸಿಕೊಳ್ಳುವ ಮಾರ್ಗ ಸೂಚಿಸುವ ಪರಿಯಷ್ಟೆ.

ನಾವು,ನಮ್ಮವರು,ಗೆಳೆಯರು,ಗೆಳತಿಯರು,ಪರಿಚಯಸ್ತರು, ನೆಂಟರು ಇಷ್ಟರು ಎಲ್ಲರ ಮಧ್ಯೆ ವಿಚಾರ ಹಂಚಿಕೊಳ್ಳಲೆಬೇಕಾಗಿದೆ, ಚುನಾವಣೆಯಾದ ಮೇಲೆ ಮತ್ತದೆ ಹಳೆ ಚಾಳಿ ಮುಂದುವರಿಸಿಕೊಳ್ಳಿ ಆದರೆ ಸದ್ಯಕ್ಕೆ ಚುನವಣೆ ಮುಗಿಯುವವರೆಗು ಕ.ರ.ವೆ ಪರವಾಗಿ ಬೆಂಬಲ ಸೂಚಿಸಿ.

ಅತಿ ಹೆಚ್ಚು ಪರಭಾಷಿಕರಿಗೆ ಟಿಕೆಟ್ ಕೊಟ್ಟು ಅಧಿಕಾರದ ಲಾಲಸೆಗೋಸ್ಕರ ಸಾಕಿದವರಿಗೆ ಕಚ್ಚುವ ನಾಯಿಗಳನ್ನು ತಯಾರಿಸುತ್ತಿರುವ ರಾಷ್ಟ್ರೀಯ ಪಕ್ಷಗಳಲ್ಲಿ ಮೊದಲಾದ ಜೆಡಿಎಸ್ ನಂತರ ಬರುವ ಕಾಂಗ್ರೆಸ್ ಹಾಗು ಬಿಜೆಪಿಯನ್ನು ಬಗ್ಗು ಬಡಿಯಲೆಬೇಕು, ಬಡಿದು ಸಂದೇಶ ಸಾರಲೇಬೆಕು ಕನ್ನಡಿಗರು ನರಸತ್ತವನಲ್ಲ ಎಂದು.

ಬೆಂಗಳೂರು ನಮ್ಮದು, ಅದನ್ನು ಕಾಪಾಡುವ ಸೈನಿಕರು ನಾವು, ಕನ್ನಡಾಂಬೆಯನ್ನು ಆಶ್ರಯಿಸಿದ ಮುದ್ದಿನ ಕಣ್ಮಣಿಗಳು ನಾವು, ಕನ್ನಡ ತಾಯಿಯ ಗೌರವಕ್ಕೆ ತೊಂದರೆಯಾಗದಂತೆ ಖಡ್ಗ ಹಿರಿದಾದರು ಎಲ್ಲ ದಿಕ್ಕಿನಿಂದಲು ಕಾಪಾಡುವುದು ನಮ್ಮ ಆದ್ಯ ಕರ್ತವ್ಯ. ಈಗಾಗಲೆ ಕನ್ನಡ,ಕರ್ನಾಟಕ,ಕನ್ನಡಿರಿಗೋಸ್ಕರ ಜೀವನ ಮುಡಿಪಾಗಿಟ್ಟಿರುವ ಕ.ರ.ವೆಯವರ ಪರವಾಗಿ ಮತ ಚಲಾಯಿಸಿ ಬೆಂಬಲ ಸೂಚಿಸಿದರೆ ಮಿಕ್ಕ ಕೆಲಸ ಅವರು ಮಾಡುತ್ತಾರೆ..

ಈ ಸಮಯದಲ್ಲಿ ನಾವು ಹಿಂಜರಿಯಲೇಬಾರದು ಕ.ರ.ವೆ ಪರವಾಗಿ ಮತ ಚಲಾಯಿಸಲೆಬೇಕು ಅವರಿಗೋಸ್ಕರ ನಮ್ಮ ಬಳಗದಲ್ಲಿ ಪ್ರಚಾರ ಮಾಡಲೇಬೇಕು...ಗಾಳಿ ಬಂದಾಗ ತೂರಿಕೊ ಎನ್ನುವ ಹಾಗೆ ಈಗ ಬದಲಾವಣೆಯ ಗಾಳಿ ಬರುವ ಸಮಯ, ಸರಿಯಾದ ದಿಕ್ಕಿನಲ್ಲಿ ಬೀಸುವ ಹಾಗೆ ಮಾಡುವ ಶಕ್ತಿ ಕನ್ನಡಿಗರ ಒಗ್ಗೂಡುವಿಕೆಯಲ್ಲಿದೆ.

ಕಬ್ಬಿಣ ಕಾದಾಗ ಬಾರಿಸಬೇಕು, ಇದೆ ಸದಾವಕಾಶ --- ಕ.ರ.ವೆ ಪರ ಮತ ಚಲಾಯಿಸಿ ಕನ್ನಡಿಗರ ಮರ್ಯಾದೆ ಉಳಿಸಿ ಇಲ್ಲವಾದರೆ ಮುಂದೊಂದು ದಿನ ಖಂಡಿತವಾಗಿಯು ನಮ್ಮನ್ನು ನೋಡಿ ಕರುಣಾನಿಧಿ ಅಥವಾ ಜಯಲಲಿತ ಗಹಗಹಿಸಿ ನಕ್ಕಾರು,ತಮ್ಮ ನೆಲದಲ್ಲೆ ತಮ್ಮವರ ಮತ ದಕ್ಕಿಸಿಕೊಳ್ಳಲಾಗದ ನಾಲಾಯಕ್ಕುಗಳು ಕನ್ನಡಿಗರು ಎಂದು.

ಜೈ ಕರ್ನಾಟಕ

-ಪ್ರಸಾದ್

prasad.preeti@gmail.com

ಸೂಚನೆ : ಈ ಲೇಖನ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರು ಪರಿಚಯಸ್ತರಿಗೆ ಮಿಂಚೆ ಮುಂದೂಡಿ(Forward) ಇಷ್ಟ ಆಗ್ಲಿಲ್ಲಾ ಅಂದ್ರು ಸಹ ಮುಂದೂಡಿ, ಯಾವ ಅಂಶ ನಿಮಗೆ ಇಷ್ಟವಾಗಲಿಲ್ಲ ಎಂದು ತಿಳಿಸಿ ಚರ್ಚೆ ಮಾಡೊಣ. ಒಟ್ನಲ್ಲಿ ಚರ್ಚೆ ಆಗಲಿ, ಪಾಲ್ಗೊಳ್ಳುವಿಕೆ ಹೆಚ್ಚಾಗಲಿ, ವಿಷಯ ಹರಡಲಿ.

No comments: