Wednesday, April 21, 2010

ಪರಿಹಾರ ಇದೆಯೆ?

ಗೆಳೆಯರೆ,
ಮೊನ್ನೆ "ಮಲ್ಲೇಶರಂ"ನಲ್ಲಿರುವ "ಕಂತ್ರಿ ಸ್ಕ್ವೇರ್", ಕ್ಷಮಿಸಿ ಕನ್ನಡಕ್ಕೆ ಮನ್ನಣೆ ನೀಡದ ಆ "ಮಂತ್ರಿ ಸ್ಕ್ವೇರ್"ಅನ್ನು "ಕಂತ್ರಿ ಸ್ಕ್ವೇರ್" ಎಂದರೂ ನನಗೆ ಬೇಸರವಾಗುವುದಿಲ್ಲ. ಈ ಬರಹದ ಉದ್ದೇಶ ಕಂತ್ರಿ ಸ್ಕ್ವೇರ್‌ನ ಕನ್ನಡ ಕಡೆಗಣನೆ ತಿಳಿಸಲು ಅಲ್ಲ.. ಬದಲಾಗಿ ಕನ್ನಡ,ಕನ್ನಡಿಗರ ಸಂಸ್ಕೃತಿಯ ಮೇಲೆ ಪರಭಾಷಿಕರ ಆರ್ಭಟ. ಮಲ್ಲೇಶ್ವರದಲ್ಲಿ ಬಿಬಿಎಂ‌ಪಿ ಫಲಕಗಳ ಹೊರತಾಗಿ ಎಲ್ಲೆಲ್ಲಿಯೂ "ಮಲ್ಲೇಶ್ವರಂ" ಆಗೆ ಉಳಿದಿರುವುದು ದು:ಖಕರ ವಿಚಾರ. ಹೀಗೆ ಯೋಚಿಸುತ್ತಿರುವಾಗ ಶಿವನಸಮುದ್ರವನ್ನು "ಶಿವನಸಮುದ್ರಂ" ಎಂದು ಉದ್ದೇಶ ಪೂರಿತವಾಗಿ ಮುದ್ರಿಸಿದ/ಪ್ರಕಟಿಸಿದ ಬಗ್ಗೆ ಎಲ್ಲೊ ಚರ್ಚೆಯಾದ ವಿಚಾರ ಓದಿದ ನೆನಪು ಬಂತು.. ಜಾಗೃತ ಕನ್ನಡಿಗರು (ಬೆರಳೆಣಿಕೆಯ)!!!! ಇಂತಹ ಬೆಳವಣಿಗೆಯನ್ನು ಖಂಡಿಸುತ್ತಾ ಆಯಾ ಸಮಯ ಸಂದರ್ಭದಲ್ಲಿ ಪರಿಸ್ಥಿತಿಗನುಗುಣವಾಗಿ ದಿನಪತ್ರಿಕೆ ಮುಖೇನ ಅಥ್ವಾ ದೂರ್ಮಿಂಚೆ(ದೂರು+ಮಿಂಚೆ =ಮೈಲ್ ಕಂಪ್ಲೈಂಟ್)ಮೂಲಕ ಸೂಕ್ತ ಅಧಿಕಾರಿಗಳಿಗೆ/ಮೇಲ್ವಿಚಾರಿಕರಿಗೆ ಅವರ ತಪ್ಪನ್ನು ತಿಳಿಸಿ ಕೆಲವೊಮ್ಮೆ ಅವರ ಧೋರಣೆ ಖಂಡಿಸಿ ಪತ್ರ ಬರೆಯುತ್ತಲೆ ಹೋರಾಡುತಲಿದ್ದಾರೆ,ಇರುತ್ತಾರೆ.ಹಲವಾರು ಸಂದರ್ಭಗಳಲ್ಲಿ ಹಲವು ಪ್ರಕರಣಗಳಲ್ಲಿ ನಿರೀಕ್ಷಿತ ಫಲಿತಾಂಶ ಬಹು ಬೇಗನೆ ದೊರೆತಿದೆ ಕೆಲವೊಮ್ಮೆ ಕವಡೆ ಕಿಮ್ಮತು ಸಹ ದೊರಕದೆ ಹೋಗಿದೆ. ಹೆಚ್ಚಿನ ಬಾರಿ ಗೆಲುವನ್ನು ಸಂಭ್ರಮಿಸುತ್ತ ಕೆಲವು ಬಾರಿ ನೋವನ್ನು ನೆಕ್ಕಿಕೊಳ್ಳುತ್ತಾ ಕನ್ನಡಿಗ ಧೃತಿಗೆಡದೆ ನಡೆಯಲೇಬೇಕಾಗಿದೆ ಯಾಕೆಂದರೆ ಕನ್ನಡ ಪರ ಹಕ್ಕೊತ್ತಾಯ ಹೂವಿನ ಹಾಸಿನಷ್ಟು ಮೆತ್ತಗಿಲ್ಲ ಹೆಚ್ಚಿನ ಬಾರಿ ಕಲ್ಲು ಮುಳ್ಳುಗಳೆ ಸ್ವಾಗತಿಸುತ್ತವೆ.
ನೆನ್ನೆ ನಾನು ಗೂಗಲಿಸಿದ ಪದಗಳ ಜಾಡು ಬೆನ್ನತ್ತಿ ಹೋದಾಗ ಆಘಾತಕಾರಿ ವಿಷಯ ತಿಳಿಯಿತು!!! ಕರ್ನಾಟಕ,ಕನ್ನಡಿಗರ ಬಗ್ಗೆ ತಪ್ಪುಗಳು ಸಾವಿರಾರು ಯಾಕೆ ಲಕ್ಷ ಬಾರಿ ಪುನರಾವರ್ತನೆಯಾಗಿದೆ. ಈ ಫಲಿತಾಂಶಗಳು ಕೇವಲ ಕನ್ನಡಿಗರಿಗೆ ಸೀಮಿತವಾದ ಮಾಹಿತಿಯಾಗದೆ ಜಗತ್ತಿನ ಎಲ್ಲಾ ಮೂಲದ ಜನರನ್ನು ತಲುಪುವ ಮಾಹಿತಿ ಇದಾಗಿದೆ, ಈ ಮಾಹಿತಿ ಗೂಗಲಿನ ಹುಡುಕಾಟದ ಫಲಿತಾಂಶ ಆಧಾರಿತ. ಶಿವನಸಮುದ್ರ ಶಿವನಸಮುದ್ರಂ,ಕೋರಮಂಗಲ ಕೋರಮಂಗಲಂ,ಕಲಾಸಿಪಾಳ್ಯ ಕಲಾಸಿಪಾಲ್ಯಂ.. ಆಗಿದೆ. ಹೀಗೆ ಹುಡುಕುತ್ತಾ ಹೋದರೆ ಅದೆಷ್ಟಿದೆಯೊ!!! ದೂರ್ಮಿಂಚೆ ಬರೆದು ಪ್ರತಿಭಟಿಸಿ,ಅವರಿಗೆ ತಿಳಿಸಿ,ಸಿಗುವ ಫಲಕ್ಕೆ ಎಷ್ಟರ ಮಟ್ಟಿಗೆ ಗೆಲುವು ಅಂತ ಎದೆ ತಟ್ಟಿಕೊಳ್ಳಬಹುದು?ನೀವು ಯಾರು ಯಾರಿಗೆ, ಎಷ್ಟು ಬಾರಿಗೆ ಬರೆಯುತ್ತೀರಾ? ಸಾಯೋವರ್ಗು ದೂರ್ಮಿಂಚೆ ಬರೆದ್ರು ಬರಿತಾನೆ ಇರ್ಬೇಕಾಗುತ್ತೆ :( ಇಂದಿಗೂ ಸಹ ಬೆಂಗಳೂರಿನಲ್ಲಿರುವ ಟಾಟಾ ಇಂಡಿಕಾಂ ಸೇವಾ ಸಂಸ್ಥೆಯಲ್ಲಿ ನಿಮಗೆ ಕನ್ನಡದಲ್ಲಿ ಸೇವೆ ದೊರೆಯುವುದಿಲ್ಲ. ಕನ್ನಡಿಗರು ಎಷ್ಟೆ ಶಂಖ ಹೊಡೆದುಕೊಂಡರು ಈ ಪರಿಸ್ಥಿತಿ ಬದಲಾಗಿಲ್ಲ. ಕನ್ನಡ ಗ್ರಾಹಕರು ಬೇಕು ಆದರೆ ಇವರುಗಳು ಕನ್ನಡ ಸೇವೆ ಒದಗಿಸುವುದಿಲ್ಲ..
ಮೊದಲಿನ ಪ್ರಶ್ನೆ ಈ ಪರಿಸ್ಥಿತಿ ಸರಿಯಿದೆಯೆ? ತಪ್ಪಿದ್ದರೆ ಇದಕ್ಕೆ ಪರಿಹಾರ ಏನು? ಸರ್ಕಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದವರು ದಂಡ ವಿಧಿಸಲು ಆಗುವುದಿಲ್ಲವೆ? ಅನಿಸಿಕೆ ತಿಳಿಸಿ..

--
ಪ್ರಸಾದ್

No comments: