Tuesday, June 29, 2010

ಕೇಳಲೂ ಬೇಡಿ... ಕೇಳಿಸ್ಲೂ ಬೇಡಿ... ಲೈಫ್ ಎಲ್ಲರದ್ದಾಗಿಸಿ...

on January 8, 2009

ಕನ್ನಡ ಬಿಗ್ ಎಫ್.ಎಮ್ ವಾಹಿನಿ ಕೇಳ್ತಾ ಇದ್ರೆ ತಲೆ ಆಡಿಸ್ಕೊಂಡು ಹೇಳ್ಬೇಕು ಅನ್ಸೋದು "ಕೇಳಿ.. ಕೇಳಿಸಿ... ಲೈಫ್ ನಿಮ್ಮದಾಗಿಸಿ.." ಅಂತ.. ಆದ್ರೆ ಅದು ಕೇವಲ ರೇಡಿಯೊ ವಾಹಿನಿಗಳಿಗೆ ಮಾತ್ರ ಸೂಕ್ತ ಆಗ್ತಿರೊದು ದು:ಖದ ಸಂಗತಿ. ಇಂದಿನ ಅಂತರ್ಜಾಲದ ಯುಗದಲ್ಲಿ ಐಟಿ/ತಂತ್ರಙ್ನಾನ ಪ್ರಿಯರಿಗೆ ಅತ್ಯಂತ ಪ್ರಿಯವಾದದ್ದು ಹಾಡುಗಳನ್ನು ಕದಿಯೊದು. ಹೌದು, ದುಡ್ಡು ಕೊಟ್ಟು ಹಾಡುಗಳನ್ನು ಕೊಳ್ಳದೆ ಡೌನ್ ಲೊಡ್ ಮಾಡುವುದು ಶಿಕ್ಷಾರ್ಹ ಅಪರಾಧ ಆದರೆ ಇದೆ ಕಾನೂನು ಆನ್ಲೈನ್ ಹಾಡು ಕೇಳುವುದುಕ್ಕೆ ಅನ್ವಯಿಸುವುದಿಲ್ಲ ಏಕೆಂದರೆ ಪ್ರತಿ ಬಾರಿ ಆ ತಾಣಕ್ಕೆ ಭೇಟಿ ಕೊಟ್ಟಲ್ಲಿ ಆ ತಾಣವು ಜನಪ್ರಿಯವಾಗುವ ಹಾಗೆ ರೇಟಿಂಗ್ ಆಗುತ್ತದೆ. ಇದರಿಂದ ಕಂಪನಿಗಳು ಆ ತಾಣದಲ್ಲಿ ತಮ್ಮ ಜಾಹಿರಾತು ಹಾಕಿ ಉತ್ಪನ್ನ/ಸಾಮಗ್ರಿಗಳನ್ನು ಮಾರುಕಟ್ಟೆ ಮಾಡುತ್ತದೆ ಹಾಗಾಗಿ ಈ ರೀತಿಯಿಂದ ಎಲ್ಲರು ದುಡ್ಡು ಮಾಡುತ್ತಾರೆ. ಬಹಳಷ್ಟು ಜನರಿಗೆ ಈ ಮಾಹಿತಿ ತಿಳಿದಿರುತ್ತದೆ ಆದರೂ ಸಹ ಅವುಗಳನ್ನು ಉಡಾಫೆ ಮಾಡಿ ಕದಿಯೋದು ಮುಂದುವರೆಸುತ್ತಾರೆ... after all, we are indians ಅಲ್ವಾ? ಕಾನೂನಿನ ಪ್ರಕಾರ ಯಾವುದನ್ನ ಸರಿಯಾಗಿ ಪಾಲಿಸಲಾಗುತ್ತದೆ ಅಂತ ಲೆಖ್ಖ ಹಾಕಿದರೆ ಬೆರಳೆಣಿಕೆಯದು ಸಿಗುತ್ತದೆ. ಹ್ಮ್ಮ್.. ಈಗ ಈ ಉಡಾಫೆಯ ಪ್ರವೃತ್ತಿಗೂ ನಮ್ಮ ದೇಶಕ್ಕೆ ಬಂದೊದಗಿರೊ ಅಥವಾ ಬಂದೊದಗಲಿರುವಂತಹ ಸಂಕಷ್ಟಕ್ಕೂ ಏನಪ್ಪಾ ಸಂಭಂದ ಅಂತ ಲೆಖ್ಖ ಹಾಕಿದರೆ ಪರಿಣಾಮ ಅಘಾದವಾದದ್ದು ಅಂತ ಊಹೆಗು ನಿಲುಕೋಲ್ಲ ಅಥವಾ ನಮ್ಗೇನು ಅನ್ನೊ ಮತ್ತೊಂದು ಧೋರಣೆ. ನಮಗೆ ನೇರವಾಗಿ ತೊಂದರೆ ಆಗೊವರೆಗು ಆ ವಿಚಾರ ನಮಗೆ ಸಂಭಂದಿಸಿದ್ದಲ್ಲ ಅನ್ನೊ (ದುರಾ)ಆಲೊಚನೆ ಸಹ ಒಂದು, ಏನೆ ಆದ್ರು ಈಗ ಪ್ರಸ್ತಾಪ ಆಗುತ್ತಿರುವ ವಿಷಯದಲ್ಲಿ ಹಾಡು ಕದಿಯುವ ಪ್ರತಿ ಭಾರತೀಯನ ನೇರ ಹಸ್ತವಿದೆ. ಈ ತೊಂದರೆಯ ಮೂಲ, ಅಂತರ್ಜಾಲದಲ್ಲಿ ಕನ್ನ ಹಾಕೊಕ್ಕೆ ಕಾಯ್ತ ಕೂತಿರೊ ಕಳ್ಳಕಾಕರರು, "hackers" ಅನ್ನೊದು ಸೂಕ್ತವಾದ ಪದ.
ಇದಕ್ಕೂ ಹಾಡು ಕದಿಯೊಕ್ಕು ಹೆಂಗಪ್ಪಾ ಲಿಂಕು ಅಂತ ತಲೆ ಕೆರ್ಕೊಂಡ್ರೆ ಆಶ್ಚರ್ಯ ಇಲ್ಲ. ನೆರೆಮನೆಯಲ್ಲಿ ಕಾಯ್ಕೊಂಡು ಕೂತಿದಾರೆ ಹೆಂಗಪ್ಪ ಭಾರತದ ಗಣಕಯಂತ್ರಗಳನ್ನ ಲಗ್ಗೆ ಹಾಕೋದು? ಅಂತ ಅವರಿಗೆ ನೇರವಾಗಿ ಅಂತು ಆಕ್ರಮಣ ಮಾಡೊ talent ಇಲ್ಲ, ಗೊತ್ತಿರೋದೊಂದೆ ಬೆನ್ನ ಹಿಂದೆ ಚಾಕು ಹಾಕೋದು.. ಕತ್ತಿ ಮಸೆದುಕೊಂಡು ಕಾಯ್ತ ಇದಾರೆ, ನಾವು ಅವರಿಗೆ ಗುರಿಯಾಗುವುದೊಂದೆ ಬಾಕಿ, ಗುರಿ ಸಿಕ್ಕ ತಕ್ಷಣ ಎರಗುವುದರಲ್ಲಿ ಎರಡನೆ ಮಾತಿಲ್ಲ. ಇವೆಲ್ಲಾ ವಿಷಯ ಹೆಂಗೆ ಒಂದಕ್ಕೊಂದು ಹೊಸೆದುಕೊಂಡಿದೆ ಅಂದ್ರೆ ಭಾರತದ ಗಣಕಯಂತ್ರಗಳ ಮೇಲೆ ಲಗ್ಗೆ ಹಾಕೋಕ್ಕೆ ಅವರ ಹೊಸ ಅನ್ವೇಷಣೆ ಏನಂದ್ರೆ ಹಾಡಿನ ಜೊತೆ ವೈರಾಣು ತಂತ್ರಾಶ ಹೊಂದಿಸಿ ಸೆರ್ವರ್ ಗಳಲ್ಲಿ ಇಡುವುದು. ಅಮಾಯಕ ಭಾರತೀಯನೊಬ್ಬ ಹಾಡು ಕದಿಯೊಕ್ಕೆ ಹೋದರೆ ಹಾಡಿನ ಜೊತೆ ವೈರಾಣುವನ್ನು ಸಹ ಅರಿವಿಗೆ ಬಾರದಂತೆ ಗಣಕಯಂತ್ರದಲ್ಲಿ ತೂರಿಸುವುದು. ಪ್ರಶ್ನೆ ಬರಬಹುದು ವೈರಾಣು ತಡೆಗಟ್ಟುವ ತಂತ್ರಾಶವು ನಿಮ್ಮ್ ಬಳಿ ಲಭ್ಯವಿದೆಯಲ್ಲ ಅಂತ :-) ಇಲ್ಲೆ ನಾವು ಜಾಣ ಮೂರ್ಖರಾಗುವುದು, ಎಲ್ಲಾ ಪ್ರಸಿಧ್ಧ ವೈರಾಣು ತಡೆಗಟ್ಟುವ ತಂತ್ರಾಶವು ದಿನೆ ದಿನೆ ಬಿಡುಗಡೆ ಆಗುವ ವೈರಾಣುಗಳನ್ನು ಕನಿಷ್ಟ ಗುರುತಿಸುವಲ್ಲಿ ಶಕ್ತವಾಗಿರುವುದಿಲ್ಲ. ಆ ಕಂಪನಿಗಳು ಈ ವೈರಾಣುವನ್ನು ಗುರುತಿಸಿ ಲಸಿಕೆ ತಯಾರು ಮಾಡಿ process ಪ್ರಕಾರ ತಂತ್ರಾಶ ಬಿಡುಗಡೆ ಮಾಡುವ ಹೊತ್ತಿಗೆ ಬೇಕಾದಷ್ಟು ಹಾನಿ ಆಗಿರುತ್ತದೆ.
ಕೊಳ್ಳೆ ಹೊಗೋದು ನಮ್ಮ ಅಮೂಲ್ಯವಾದ ಗುಪ್ತ/ವೈಯಕ್ತಿಕ ಮಾಹಿತಿ, ಅದನ್ನು ತೆಗೆದುಕೊಂಡು ಅವರೇನು ಮಾಡಿಯಾರು ಅಂತ ಬೀಗುವ ಅವಶ್ಯಕತೆ ಇಲ್ಲ. ದಿನಪತ್ರಿಕೆ ಓದೊ ಹವ್ಯಾಸ ಇರೊವ್ರಿಗೆ ತಿಳಿದಿರ್ಬೇಕು ಮಿಂಚೆಯ ಮೂಲಕ ಕೋಟಿಗಟ್ಟಲೆ(ಇಲ್ಲದಿರುವ) ಹಣದ ಆಸೆಗೆ ಲಕ್ಷಾಂತರ ಸುರಿದು ಮಣ್ಣು ತಿಂದ ಅಭಿಯಂತರರಿಗೆ ನಮ್ಮ ದೇಶದಲ್ಲಿ ಕೊರತೆಯಿಲ್ಲ. ಇವರೊಬ್ಬರೆ ಅಲ್ಲ, ಗಣಕ ಯಂತ್ರವನ್ನು ಉಪಯೊಗಿಸುವ ಪ್ರತಿಯೊಬ್ಬನು ಸಹ ಇದಕ್ಕೆ ಬಲಿಯಾಗುವ ಎಲ್ಲಾ ಸಾಧ್ಯತೆ ಇದೆ ಹಾಗು ತಮ್ಮ ಅಡ್ಡ್ರೆಸ್ಸ್ ಬುಕ್ ನ ಸಂಪರ್ಕದಲ್ಲಿರುವ ಪ್ರತಿಯೊಬ್ಬರನ್ನು ಸಹ vulnerable ಮಾಡ್ತಾರೆ. ಕಾಂಡಮ್ ಇಲ್ಲದೆ ಲೈಂಗಿಕ ಸಂಪರ್ಕ ಮಾಡಿ AIDSಗೆ ತಾವು ಬಲಿ ಆಗಿ ನಂಬಿದವರನ್ನು ಬಲಿಪಶು ಮಾಡೊ ಲೆಖ್ಖಾಚಾರ ಇಂತಹ ಕೆಲಸ. ಇವರೆಲ್ಲ ಬಲಿಯಾಗೋದೆ ತಮ್ಮ ಗುಪ್ತ/ವೈಯಕ್ತಿಕ ಮಾಹಿತಿ ಪರಕೀಯರ ಕೈಗೆ ಸಿಕ್ಕಿದ್ದರ ಫಲದಿಂದ, ಅಲ್ಲಿ, ಇಲ್ಲಿ ಹೋಗಿ ಸಿಕ್ಕ ಕಡೆ ಹಾಡು ಕದಿಯೊದ್ರಿಂದ. ಇದಕ್ಕೆಲ್ಲಾ ಮೂಲ ಸ್ಪೈ ವೇರ್ ಅನ್ನೊ ಒಂದು ವಿಧದ ವೈರಾಣುವಿನಿಂದ. ಈ ವೈರಾಣುವಿನ ಕೆಲಸ ತಾನು ಕೂತ ಗಣಕ ಯಂತ್ರದ ಮಾಹಿತಿಯನ್ನು ಮತ್ತೊಂದು ನಿಗದಿತ ಗಣಕ ಯಂತ್ರಕ್ಕೆ ಕಳುಹಿಸುವುದು. www.songs.pk ಎನ್ನುವ ಹಾಡಿನ ತಾಣದಿಂದ ಈ ಪರಿಯ ವೈರಾಣುಗಳು ಭಾರತದ ಗಣಕಯಂತ್ರಗಳ ಮೇಲೆ ಲಗ್ಗೆ ಹಾಕ್ತಾ ಇವೆ.. ನೀವು ಹೋಗಿ ಆ ತಾಣಕ್ಕೆ ಭೇಟಿ ಕೊಡೊದು, ಹಾಡು ಕದಿಯೋದು, ಕದ್ದ ಹಾಡನ್ನು ಹಂಚೋದು ಇದರಿಂದ ಲಿಂಕ್ ಹೆಚ್ಚು ಜನರಿಗೆ ತಲುಪುವುದು ಯಾವುದು ಬೇಡ, ಕದಿ ಬೇಡಿ... ಕೇಳಲೂ ಬೇಡಿ... ಕೇಳಿಸ್ಲೂ ಬೇಡಿ... ಲೈಫ್ ಎಲ್ಲರದ್ದಾಗಿಸಿ... pk ಎನ್ನುವುದು ಪಾಕಿಸ್ತಾನದ ಸರ್ವರ್ ಅನ್ನು ಸೂಚಿಸುತ್ತದೆ, ದಯವಿಟ್ಟು ಈ ವಿಷಯವನ್ನು ಆದಷ್ಟೂ ಹರಡಿ, ವರದಿಯ ಪ್ರಕಾರ ಈಗಾಗಲೆ ೧೨ ಲಕ್ಷ ಭಾರತೀಯರು ಈ ತಾಣವನ್ನು ಹಾಡು ಕದಿಯಲು ತಮ್ಮನ್ನು ನೋಂದಣಿಸಿಕೊಂಡಿದ್ದಾರೆ. ಮುಖ್ಯ ವರದಿಗಾಗಿ ಉಲ್ಲೇಖಿಸಿರುವ ಕೊಂಡಿಯನ್ನು ನೋಡಿ

http://in.news.yahoo.com/20/20090106/1416/tnl-pak-hackers-plan-attack-on-indian-cy.html

No comments: