Tuesday, June 29, 2010

ಪರಿಸರ ಪ್ರೇಮಿಗಳಿಗೆ ಕಿವಿಮಾತು

on May 8, 2009

೧.ನಿಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ಕಾಳಜಿಯಿದೆಯೆ?
೨.ನೀವು ಗ್ಲೋಬಲ್ ವಾರ್ಮಿಂಗ್ ಎನ್ನುವುದರ ಬಗ್ಗೆ ಚಿಂತಿತರಾಗಿದ್ದೀರಾ?
೩.ಗ್ಲೋಬಲ್ ವಾರ್ಮಿಂಗ್‌ನ ವಿಚಾರದಲ್ಲಿ ‌ನೀವು ನಿಸ್ಸಹಾಯಕರು ಎಂದೆನೆಸುತ್ತಿದೆಯೆ?
೪.ಸ್ವಚ್ಛವಾದ ಸಮಾಜಕ್ಕಾಗಿ, ನಿಮಗೆ ಕೆಲವು ಮಾಹಿತಿ ಬೇಕೆ?
೫.ತ್ಯಾಜ್ಯ ವಸ್ತು ನಿರ್ವಹಣೆ ಬಗ್ಗೆ ನೀವು ಇತರರೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಬೇಕೆ?
ಹಾಗಿದ್ದರೆ ಮುಂದೆ ಓದಿ...

ಗ್ಲೋಬಲ್ ವಾರ್ಮಿಂಗ್ ಅನ್ನೋದು ಎಲ್ರುಗೂ ತಿಳ್ದಿರೊ ವಿಚಾರ ಅಂತ ಗೊತ್ತು(ಕನಿಷ್ಠ ಈ ಲೇಖನವನ್ನ ಓದೋರಿಗಾದ್ರು ತಿಳ್ದಿರುತ್ತೆ ಅಂದ್ಕೊಂಡಿದೀನಿ) ಅದಕ್ಕೆ ಅದರ ಬಗ್ಗೆ ಕೊರೆತ ಶುರು ಹಚ್ಕೊಂಡಿಲ್ಲ :) ಖುಷಿ ಪಡಿ. ನಿಮಗೆ ಟಾರ್ಚರ್ ಕೊಡೊಕ್ಕೆ ಬಂದಿರೋದು ಬಡಪಾಯಿ ಆಗಿ ಜೀವ್ಸಿತಿರೊ ನಮ್ಮಂತವರು ಸಾಧ್ಯವಾದಷ್ಟು ಏನು ಮಾಡಬಹುದು ಅಂತ ಹಂಚಿಕೊಳ್ಳೊಕ್ಕೆ ಆಷ್ಟೆ.ನಿಮ್ಗು ತಿಳಿದಿರೋ ಆಲೋಚನೆಗಳನ್ನ ಹಂಚಿಕೊಂಡರೆ ಇನ್ನಷ್ಟು ಸಹಾಯ ಆಗೋದ್ರಲ್ಲಿ ಸಂಶಯವಿಲ್ಲ.
ಹೆಚ್ಚಿನಾಂಶದಲ್ಲಿ ಭೂಮಿನ ಹಾಳು ಮಾಡೊದೆಲ್ಲ ಕಾರ್ಖಾನೆಗಳೆ ಆಗಿದ್ರು ಸಹ ಕೊನೆಗೆ ಏನಾದ್ರು ನೈಜ್ಯವಾದ ಬದಲಾವಣೆ ಮಾಡ್ಬೇಕು/ತರಬೇಕು ಅಂದ್ರೆ ಒತ್ತಡ ಬರೊದು ಬಡಪಾಯಿ ಸಾಮಾನ್ಯ ಮನುಷ್ಯರು ಮೇಲೇನೆ. ಏನ್ಮಾಡೊದು?? ನಾಗರೀಕತೆ ಅನ್ನೋದು ಹೆಚ್ಚದಂತೆಲ್ಲಾ ಸೌಕರ್ಯಗಳು (ಬೇಡದೆ ಇರೋವು ಜಾಸ್ತಿ)ಸಹ ಜಾಸ್ತಿ ಆಗ್ತ ಹೋಗುತ್ತೆ, ಕೆಲವೊಮ್ಮೆ ಈ ಸೌಕರ್ಯಗಳು ಅನಿವಾರ್ಯವು ಕೂಡ!!! ಅದೆ ವಿಪರ್ಯಾಸ, ಗೊತ್ತಿದ್ದು ಗೊತ್ತಿದ್ದು ಅಸಹಾಯಕರಾಗಿ ಏನೂ ಮಾಡೊಕ್ಕೆ ಆಗದೆ ಪರಿಸರ ಮಾಲಿನ್ಯದಲ್ಲಿ ನಮ್ಮ contributionಸಹ ಆಗಿ ಹೊಗುತ್ತೆ.ಮಜಾ ಸುದ್ದಿ ಅಂದ್ರೆ ಜಗತ್ತಿನಲ್ಲಿ "ಕಾರ್ಬನ್ ಟ್ರೇಡಿಂಗ್" ಅಂತ ಒಂದು ಸೌಕರ್ಯ ಇದೆ.

ಮೂಲವಾಗಿ ನಮ್ಮ ಪರಿಸರ ಹಾಳಾಗ್ತಿರೋದಕ್ಕೆ ಹಲವಾರು ಕಾರಣಗಳಿದ್ರು ಸಹ ಕಾರ್ಬನ್ ಬಿಡುಗಡೆಯಾಗುವುದು ಇವೆಲ್ಲಾ ಕಾರಣಗಳಲ್ಲಿ ಅತ್ಯಂತ ಪ್ರಮುಖವಾದುದು.ಹಾಗಾಗಿ ಜಗತ್ತಿನ worstಜನರೆಲ್ಲ ಒಂದು ಕಡೆ ಗುಂಪುಗೂಡಿ ಕಾರ್ಬನ್ ತಡೆಗಟ್ಟುವುದಕ್ಕೆ ಒಂಡು ಮನೆ ಹಾಳು ಯೋಜನೆ ಹಾಕಿಕೊಂಡ್ರು,ಈ ಯೋಜನೆಗೆ "ಕಾರ್ಬನ್ ಟ್ರೇಡಿಂಗ್"ಅಂತ ಕೂಡ ನಾಮಕರಣ ಮಾಡಿದ್ರು ಚಪ್ಪಾಳೆನೂ ಸಹ ಹೊಡೆದ್ರು ಊಟ ಹಾಗು ಪಾನೀಯದ ಜೊತೆ.ಇದು ಯಾಕೆ ಮನೆ ಹಾಳು ಯೋಜನೆ ಅಂತ ನಾನು ಕರೀತೀನಿ ಗೊತ್ತಾ? ಈ ಯೋಜನೆ ಪ್ರಕಾರ ಗುಂಪಿನ ಸದಸ್ಯರಿಗೆ(ಆಯಾ ದೇಶದ ಪ್ರತಿನಿಧಿ) ಪ್ರತಿ ವರ್ಷ ಲೆಖ್ಖ ಕೊಡಬೇಕು,ನಾವು ಮಾಡೊ ಕೆಲಸದಿಂದ ಇಂತಿಷ್ಟು ಕಾರ್ಬನ್ ಬಿಡುಗಡೆಯಾಯ್ತು ಅಂತ.ಬರಿ ಲೆಖ್ಖ ಕೊಟ್ರೆ ಕೆಲಸ ಮುಗಿದುಹೋಗೊಲ್ಲ ದುಡ್ಡು ಕೂಡ ಕೊಡಬೇಕು.ಎಲ್ರು ಸಹ ಕಾರ್ಬನ್ ಬಿಡುಗಡೆ ಮಾಡೊದ್ರಿಂದ ಎಲ್ಲ ದೇಶದವರು ಸಹ ದಂಡ ಕಟ್ಟುತಾರೆ. ಈ ರೀತಿ ಸಂದಾಯ ಆಗೊ ಹಣವನ್ನ ಹಸಿರು ಚಳುಚಳಿಗೆ ಬಳಸಿಕೊತಾರೆ, ಗಿಡ ನೇಡೊ ಕಾರ್ಯಕ್ರಮ ಆಗ್ಲಿ ಅಥ್ವಾ ಬೇರೇನೆ ಆಗಿರ್ಲಿ ಒಟ್ನಲ್ಲಿ ಹಸಿರಿನಲ್ಲಿ ದುಡ್ಡನ್ನ ಹೂಡುತ್ತಾರೆ. ಇಲ್ಲಿ ಯೋಚಿಸ್ಬೇಕಾಗಿರೋದು ಏನಂದ್ರೆ ಇಗರ್ಜಿಗಳಲ್ಲಿ confession box ಅಂತ ಇರೊಲ್ವೆ ಇದು ಸಹ ಒಂಥರಾ ಅದೆ schemeu,ಮತ್ತೆ ಶಾಸ್ತ್ರಿಗಳ ಜೊತೆ ಚರ್ಚೆ ಮಾಡಿ ಈ ರೀತಿ ತಪ್ಪು ನಡೆದು ಹೋಗಿದೆ ಪರಿಹಾರ ಅಂತ ಏನಾದ್ರು ಪೂಜೆ ಗೀಜೆ ಅಂತ ಮಾಡ್ಸಿ ಮತ್ತೆ ಅದೆ ತಪ್ಪು ಪುನರಾವರ್ತನೆ ಮಾಡೊಕ್ಕೆ ಸಿದ್ಧ ಆಗೊಲ್ವೆ. ಅದೆ ರೀತಿ "ಕಾರ್ಬನ್ ಟ್ರೇಡಿಂಗ್"ಸಹ ತಪ್ಪು ತಿದ್ದಿಕೊಳ್ಳೊ ವಿಚಾರ ಇಲ್ಲ ಮಾಡಿದಕ್ಕೆ ಶಾಸ್ತಿ ಅಷ್ಟೆ, ಮತ್ತೆ ಮಾಡಿದ ತಪ್ಪನ್ನ ಮಾಡೊಕ್ಕೆ ಎಲ್ಲಾ ಸ್ವಾತಂತ್ರ್ಯ ಇದೆ !!!

ಸದಸ್ಯರು ಪ್ರತಿ ವರ್ಷ ದುಡ್ಡು ಕೊಡ್ತಾರೆ ಅವು ಮತ್ತೆ ಹಸಿರಿನಲ್ಲಿ ಹೂಡಿಕೆ ಆಗುತ್ತೆ ಎಲ್ಲ ನಿಜ ಆದ್ರೆ ನಾವು ಹಾಳು ಮಾಡೊದು exponential ವೇಗದಲ್ಲಿ ಇರ್ಬೇಕಾದ್ರೆ ಇವರು ಮಾಡೊ ತ್ಯಾಪೆ ಕಾರ್ಯಕ್ರಮಕ್ಕೆ ಹೊಂದಾಣಿಕೆ ಆಗುತ್ತಾ?? ಹಾಳು ಮಾಡೊದು ಜಾಸ್ತಿ ಆಗಿದ್ದಾಗ ಅದನ್ನ ಸರಿ ಮಾಡೊ ಪ್ರಯತ್ನಗಳು ಏಷ್ಟರ ಮಟ್ಟಿಗೆ ಫಲಕಾರಿಯಾಗುತ್ತೆ? ಹಾಳು ಮಾಡೊಕ್ಕೆ ನಿಮಿಷ ರಿಪೇರಿ ಮಾಡೊಕ್ಕೆ ವರುಷ!!! ಏನೂ ಮಾಡದೆ ಇರೊದಕ್ಕಿಂತ ಏನೊ ಮಾಡ್ತಿದೀವಿ ಅಂತ ತಮಗೆ ತಾವೆ ಸಮಾಧಾನ ಹೇಳ್ಕೊಳ್ಳೊಕ್ಕೆ ಅಂತ ಇದೆ ಈ ಯೋಜನೆ...
ಹೊಸ ಸುದ್ದಿ ಏನೂ ಅಂದ್ರೆ ವಿಪ್ರೊ/ಫಿಲಿಪ್ಸ್ ಕಾರ್ಖಾನೆಯವರು ೫೫/- ರೂ ಬೆಲೆ ಬಾಳೊ CFLಬಲ್ಬ್‌ಗಳನ್ನ ೧೫/- ರೂ ಮಾರಾಟ ಮಾಡೊ ಯೋಜನೆ ಇದೆ. ಅಲ್ಲಾ ಈಗಿನ ಕಾಲದಲ್ಲಿ ವ್ಯಾಪರಕ್ಕೆ ಅಂತಾನೆ ನಿಂತಿರೊ ಜನ ೪೦/- ರೂ ಕಳ್ಕೊಂಡು ವ್ಯಾಪಾರ ಮಾಡ್ತಾರೆ ಅಂದ್ರೆ ನಂಬೊ ಅಂಥಾ ವಿಚಾರನಾ ನೀವೆ ಹೇಳಿ... ಆದ್ರೆ ಈ ಕಥೆಯಲ್ಲಿ ತಿರುವು ಬರೊದೆ ಸರ್ಕಾರ ಇವರಿಗೆ ಕೊಡೊ ದುಡ್ಡಿಂದ. ಇದು ಯಾವ್ ಹೊಸ schemeu ಅಂತ ಅಚ್ಚರಿ ಪಡ್ಬೇಡಿ. ನಡೆಯೋದಿಷ್ಟೆ, ಇವರು ೪೦/-ರೂ ನಷ್ಟ ಮಾಡಿಕೊಂಡು ಮಾರುತ್ತಾರೆ, ಸರ್ಕಾರ ಏನ್ಮಾಡುತ್ತೆ ಅಂದ್ರೆ ಲೆಖ್ಖ ಒಪ್ಪಿಸುತ್ತೆ, ಈ ವರ್ಷ ನಾವು ಇಷ್ಟು CFLಬಲ್ಬ್‌ಗಳನ್ನ ತಯಾರಿಸಿ ಉಪಯೋಗಿಸಿದ್ವಿ ಹಾಗಾಗಿ ಕಾರ್ಬನ್ ಬಿಡುಗಡೆ ಕಮ್ಮಿ ಆಗಿದೆ ಅಂತ, ಇದಕ್ಕೆ ಮೆಚ್ಚಿ ನಮ್ ಸರ್ಕಾರಕ್ಕೆ ಸಂಸ್ಥೆ ದುಡ್ಡು ಕೊಡ್ತಾರೆ. ಈಗ ಸರ್ಕಾರ ಇದೆ ದುಡ್ಡನ್ನ ವಿಪ್ರೊ ಹಾಗು ಫಿಲಿಪ್ಸ್ ಅವರಿಗೆ ಕೊಡುತ್ತೆ ಹಿಂಗೆ ಎಲ್ಲಾರುನು ಖುಷಿಯಿಂದ ಇರೋ ಯೋಜನೆ ಎಷ್ಟರ ಮಟ್ಟಿಗೆ ಫಲಕಾರಿಯಾಗುತ್ತೆ ಅಂತ ನೋಡಬೇಕಷ್ಟೆ... ಅವರು ಮಾಡ್ಕೊಳ್ಳೋದು ಮಾಡಿಕೊಳ್ಳಲಿ ನಾವು ಏನು ಮಾಡಬಹುದು ಅಂತ ವಿಚಾರ ಮಾಡೋಣ ಬನ್ನಿ.

ಮೊದಲನೆಯದಾಗಿ ತ್ಯಾಜ್ಯ ಅನ್ನೋದನ್ನೆ ಹೇಗೆ ಕಮ್ಮಿ ಮಾಡಬಹುದು ಅನ್ನೋದು ಮುಖ್ಯ ವಿಚಾರ.
೧.ಧೀರ್ಘಬಾಳಿಕೆ ವಸ್ತುಗಳನ್ನ ಕೊಳ್ಳುವುದು--ಕಮ್ಮಿ ಬಾಳಿಕೆಯ ಅಗ್ಗದ ವಸ್ತುವನ್ನು ಕೊಂಡರೆ ಆಗಾಗ ತಿಪ್ಪೆಗೆ ಎಸೆಯೋದು ಜಾಸ್ತಿಯಾಗಿ ತ್ಯಾಜ್ಯವಸ್ತುವಿನ ರಾಶಿ ಹೆಚ್ಚಾಗುತ್ತೆ "ಹನಿ ಹನಿ ಗೂಡಿದ್ರೆ ಹಳ್ಳ"
೨.ಕೆಲಸ ಮಾಡದ ವಸ್ತುಗಳನ್ನು ಸಾಧ್ಯವಾದಷ್ಟು ರಿಪೇರಿ ಮಾಡಿಸಿ ಉಪಯೋಗಿಸುವುದು--ಪೂರ್ಣವಾಗಿ ಬದಲಾಯಿಸುವ ಮುನ್ನ ಒಮ್ಮೆ ಪರಿಶೀಲಿಸಿ,ಯೋಚಿಸಿ ವಸ್ತುವನ್ನು ಬದಲಾಯಿಸಬೇಕೆ ಅಥವಾ ರಿಪೇರಿ ಮಾಡಿದರೆ ಸಾಕೆ ಅಂತ.
೩.ಆದಷ್ಟು ಪುನರ್ಬಳಕೆಯಾಗುವಂತಹ ವಸ್ತುಗಳನ್ನು ಕೊಳ್ಳುವುದು ಹಾಗು ಇತರರಿಗೂ ಪ್ರೋತ್ಸಾಹಿಸುವುದು.--ವಸ್ತುಗಳನ್ನು ಕೊಳ್ಳಲು ಹೊರಡಬೇಕಾದರೆ ಮನೆಯಿಂದಲೆ ಬಟ್ಟೆಯ ಚೀಲವನ್ನು ಒಯ್ಯಬಹುದು ಇಲ್ಲವಾದಲ್ಲಿ ಅಂಗಡಿಯ ಕೈಗೆ ತುರುಕುವ ಪ್ಲಾಸ್ಟಿಕ್ ಚೀಲವನ್ನು ಉಪಯೋಗಿಸಬೇಕಾಗಿ ಬರುವುದು.ರೆಚಾರ್ಜೆಬಲ್ ಬ್ಯಾಟರಿಯನ್ನು ಉಪಯೊಗಿಸಬಹುದು (ಮೂಮೂಲಿ ಎವೆರೆಡಿ ಬ್ಯಾಟರಿ ಜೋಡಿ ೩೦/- ರೂ ಇರಬಹುದು ಆದರೆ ಪ್ಯಾನಸೋನಿಕ್ ರೆಚಾರ್ಜೆಬಲ್ ಬ್ಯಾಟರಿ ಜೋಡಿ ೧೦೦/- ರೂ,ಆದರೆ ಒಮ್ಮೆ ಯೋಚಿಸಿ ಕ್ಯಾಮೆರಾಗಳಿಗೆ ಉಪಯೋಗಿಸುವಾಗ ಎಷ್ಟು ಬ್ಯಾಟರಿ ಬದಲಿಸ್ತೀವಿ ಅಂತ ಧೀರ್ಘಕಾಲದಲ್ಲಿ ಎವೆರೆಡಿಗಿಂತ ಪ್ಯಾನಸೋನಿಕ್ ರೆಚಾರ್ಜೆಬಲ್ ಬ್ಯಾಟರಿಯೆ ಉತ್ತಮ,ಜೇಬಿಗು ಹಾಗು ಪರಿಸರದ ಮೇಲೂ),ಅಗತ್ಯಕ್ಕಿಂತ ಹೆಚ್ಚಿನ ದಿನಪತ್ರಿಕೆಯಾಗಲಿ,ವೃತ್ತಪತ್ರಿಕೆಯಾಗಲಿ ತರಿಸುವುದನ್ನು ನಿಲ್ಲಿಸಬಹುದು(ಒಂದು ದಿನಪತ್ರಿಕೆ ಹೊರಬರುವುದಕ್ಕೆ ಅದೆಷ್ಟು ಮರಗಳು ಬಲಿಯಾಗುತ್ತವೆಯೋ!! ಜಾಹಿರಾತುಗಳಿಂದ ದುಡ್ಡು ಹುಟ್ಟದಿದ್ದರೆ ಒಂದು ದಿನಪತ್ರಿಕೆಯ ಬೆಲೆ ೫೦-೬೦/- ರೂ ಆಗುತ್ತೇನೊ!! ಇನ್ನು ಹೆಚ್ಚಿನ ಗುಣ ಮಟ್ಟದ ಪತ್ರಿಕೆಗಳನ್ನ ಜನ ನೋಡೊ ಹಾಗೆ ಆಗುತ್ತೆ ಹೊರತು ಕೊಳ್ಳೊ ಹಾಗೆ ಇರೊಲ್ಲ).
೪.ಸಣ್ಣ ಪ್ರಮಾಣದಲ್ಲಿ ಕೊಳ್ಳುವುದನ್ನು ಕಡಿಮೆ ಮಾಡುವುದು-- ಚಿಕ್ಕ ಚಿಕ್ಕ ಪೊಟ್ಟಣಗಳನ್ನು ಖರೀದಿಸಿದರೆ packaging ಹೆಚ್ಚಾಗಿ ಅನಗತ್ಯ ತ್ಯಾಜ್ಯ ಉಂಟಾಗುತ್ತದೆ
೫.ನಿಮಗೆ ಅನಗತ್ಯ ಎನಿಸುವ ವಸ್ತುಗಳನ್ನು ನಿಮ್ಮ ಪರಿಚಯಸ್ತರಲ್ಲಿ ಹಂಚಿಕೊಳ್ಳುವುದು ಅಥವಾ ಸಂಘ ಸಂಸ್ಥೆಗಳಿಗೆ ದಾನ ಮಾಡುವುದು.-- ಮಾರಿಬಿಡಿ ತೊಂದರೆ ಇಲ್ಲಾ, ನಿಮಗೆ ಯಾರು ಗೊತ್ತಿಲ್ಲದಿದ್ದರೆ ಯಹೂ ಗುಂಪುಗಳಲ್ಲಿ ಮಾಹಿತಿ ನೀಡಿ. ಒಟ್ಟಿನಲ್ಲಿ ವಸ್ತುಗಳು ಆದಷ್ಟು ಪುನರ್ಬಳಕೆಯಾಗಬೇಕು ಅನಗತ್ಯವಾಗಿ ತ್ಯಾಜ್ಯ ವಸ್ತುವಾಗಬಾರದು.
೬.ಟಾಕ್ಸಿಕ್ ವಸ್ತುಗಳನ್ನು ಬಳಸುವುದು ಕಡಿಮೆ ಮಾಡಿ. -- ಪ್ಲಾಸ್ಟಿಕ್,paint,ಕೆಮಿಕಲ್ಸ್ ಅಗತ್ಯ ಪ್ರಮಾಣದಲ್ಲಷ್ಟೆ ಬಳಸಿ,ಕಂಪ್ಯೂಟರ್ ಮಾನಿಟರ್ ಸಹ ಇಂತಿಷ್ಟು ಅಂತ ಕೆಮಿಕಲ್ ಅನ್ನು ಬಿಡಿಗಡೆ ಮಾಡುತ್ತೆ ಹಾಗಾಗಿ ಯಂತ್ರವನ್ನು switch-off ಮಾಡದೆ ಇದ್ರು ಸಹ ಕನಿಷ್ಠ ಮಾನಿಟರನ್ನಾದರು off ಮಾಡಿ.ಚರ್ಮದ ವಸ್ತುಗಳು(ಚರ್ಮ್ ಟಾಕ್ಸಿಕ್ ಅಲ್ಲ :) ಆದ್ರೆ ಅದನ್ನ ಸಿದ್ಧವಸ್ತು ಅನ್ನೊ ಲೆವೆಲ್‌ಗೆ ತರೊ ಅಷ್ಟು ಹೊತ್ತಿಗೆ ಡೈ ನಲ್ಲಿ ಮುಳುಗೆದ್ದಿರುತ್ತೆ, ಈ ಡೈ ಅನ್ನೊದು ಹಾನಿಕರ),ಆರ್ಟಿಫಿಷಿಯಲ್ ಡೈ ಬಳಸಿರುವ ವಸ್ತುಗಳ ಬಳಕೆಯನ್ನು ನಿಯಂತ್ರಿಸಿ.ಬಟ್ಟೇ ಒಗೆಯೋಕ್ಕೆ ಬಳಸುವ ಡಿಟರ್ಜೆಂಟ್‌ ಸಹ ಹಾನಿಕಾರಕ ಕೆಮಿಕಲ್‌ಗಳ ಮೊಲ ಆ ಲೆಖ್ಖಕ್ಕೆ ಬಟ್ಟೆ ಒಗೆದ ನಂತರ ನೀರು ಚೆಲ್ಲುತ್ತೀವಲ್ಲಾ ಅದು ಸಹ ವಿಷ!!! ಏನ್ ಮಾಡ್ತೀರಾ ಬಟ್ಟೆ ಒಗೆಯೋದು ಬಿಡೊಕ್ಕೆ ಆಗುತ್ಯೆ?? ನಿರ್ಮಾ ನಿರ್ಮಾ, ಇದು ಎಲ್ಲ ನಮ್ ಕರ್ಮ :( .

ಪ್ಲಾಸ್ಟಿಕ್ ಅಂತು ಎಷ್ಟು ಉಪಯೋಗವೋ ಅದಕ್ಕಿಂತಲೂ ಹಾನಿಕರ, ಕೆಲವು ಸನ್ನಿವೇಶದಲ್ಲಿ ಆಪತ್ಭಾಂಧವ ಥರ ಕೆಲಸ ಮಾಡಿದ್ರೆ ಕೆಲವೆಡೆ ಇದೆ ಆಪತ್ತಿಗೆ ಮೊಲ ಸಹ. ಪೇಪರ್‌ಅನ್ನು ಪುನರ್ಬಳಕೆ ಮಾಡುವುದರಿಂದ(ಹಳೆ ದಿನಪತ್ರಿಕೆ ಕೊಳ್ಳುವ ಅಂಗಡಿಗಳು ಕಾರ್ಖಾನೆಗೆ ಮಾರಿ ಅವು ಪುನರ್ಬಳಕೆ ಮಾಡುವುದಕ್ಕೆ ಸಹಯೋಗಿಸುತ್ತಾರೆ) ಪುನರಬಳಕೆಯಾದ ಪೇಪರ್‌ನಿಂದ ಹೊಸ ಪೇಪರ್ ತಯಾರಿಸಲು ೫೫% ಕಮ್ಮಿ ಶಕ್ತಿ ಬೇಕಾಗುತ್ತದೆ!!! ೯೫%ರಷ್ಟು ವಾಯು ಮಾಲಿನ್ಯ ತಡೆಗಟ್ಟುತ್ತದೆ. ಇಷ್ಟೆಲ್ಲ ಆಗೊಕ್ಕೆ ಸಹಯೋಗಿಸೋದು ನಮ್ ಕೈಯಲ್ಲೆ ಇದೆ ಹಾಗಾಗಿ ಮುಂದಿನ ಸಲ ಕೆಮ್ಮಿದ್ರು,ಕೆರ್ಕೊಂಡ್ರು ಪೇಪರ್ ನ್ಯಾಪ್ಕಿನ್ ಬಳಸುವುದನ್ನ ಬಿಟ್ರೆ ಒಳ್ಳೆದು ಬಟ್ಟೆಯ ಕೈವಸ್ತ್ರ ಉಪಯೋಗಿಸುವುದು ಉತ್ತಮ,ಅನಗತ್ಯ ದಾಖಲೆಗಳ ಅಚ್ಚುಗಳನ್ನು(ಪ್ರಿಂಟ್ -ಔಟ್)ತೆಗೆಯುವುದನ್ನು ತಡೆಗಟ್ಟಿ.

ಇದೆಲ್ಲ ಮಾಡ್ಬೇಕು ಅಂತ ಇಚ್ಛೆಯಾದ್ರೆ ಮೊದಲು ಮಾಡ್ಬೇಕಾಗಿರೊ ಕೆಲಸ ನಿಮ್ಮ ಮನೆಯ ಕಸದಬುಟ್ಟಿಗಳನ್ನು ಯಾವ ಯಾವ ಪದಾರ್ಥಗಳ್ಳು ಆಕ್ರಮಿಸಿಕೊಳ್ಳುತ್ತವೆ ಎಂಬುದನ್ನು ಪಟ್ಟಿ ಮಾಡಬೇಕು.ಪಟ್ಟಿ ಮಾಡಿದ ನಂತರ ಯಾವ ವಸ್ತು ಪುನರ್ಬಳಕೆಯಾಗಬಹುದಿತ್ತು,ಯಾವುದನ್ನು ಇನ್ನೂ ಹೆಚ್ಚಿನ ದಿವಸ ಬಳಸಬಹುದಿತ್ತು,ಯಾವ ವಸ್ತುಗಳನ್ನು ಇತರರಿಗೆ ಕೊಟ್ಟಿದ್ದರೆ ಉಪಯೋಗ ಆಗ್ತಿತ್ತು,ಯಾವ ವಸ್ತು ಕೊಳ್ಳುವುದು ಅನಗತ್ಯವಾಗಿತ್ತು ಅನ್ನೋ ಯೋಚನೆಗಳು ತಾನಾಗಿಯೆ ಬರುತ್ತೆ. ಈ ರೀತಿ ಪಟ್ಟಿ ಮಾಡಿ ಆದಮೇಲೆ ಅದು ಪುನರಾವರ್ತನೆಯಾಗದ ಹಾಗೆ ಎಚ್ಚರವಹಿಸಿದರೆ ಮುಗಿಯಿತು ನಮ್ಮ ಪಾಲಿನ ಕೈಲಾದ ಸಹಾಯಮಾಡಿದ ತೃಪ್ತಿ ಸಿಗುತ್ತದೆ.

ನಿಮ್ಮ ಆಲೋಚನೆಗಳನ್ನು ಹಂಚಿಕೊಂಡರೆ ಸಂತೋಷ

--- ಪ್ರಸಾದ್

No comments: