Tuesday, June 29, 2010

three"ಸಂ" is awesome

on January 19, 2009
ಇಂದು ಕನ್ನಡಿಗರು ಜಾಗತಿಕ ಮಟ್ಟದಲ್ಲಿ ವೈಯಕ್ತಿಕವಾಗಿ ಎಷ್ಟೆ ಬೆಳೆದಿದ್ದರು ಸಮಾಜ,ದೇಶ,ವಾಣೀಜ್ಯದ ವ್ಯವಹಾರಗಳಲ್ಲಿ ಎಷ್ಟೆ ಮುಂದುವರೆದಿದ್ದರು ಸಹ ಅವರುಗಳು ಹೆಚ್ಚಾಗಿ ವಿಫಲವಾಗಿರುವುದು "ಕನ್ನಡಿಗ"ಎಂದು ಗುರುತಿಸಿಕೊಳ್ಳುವುದರಲ್ಲಿ. ಹೀಗಿರುವಾಗ ಒಬ್ಬ "ಎಚ್ಚೆತ್ತ" ಕನ್ನಡಿಗ "3ಕ" ಕನ್ನಡ,ಕನ್ನಡಿಗ,ಕರ್ನಾಟಕ ಉದ್ದೇಶಕ್ಕೆ ಕೈಲಾದ ಸೇವೆ ಮಾಡುವ ಯೋಚನೆ ಬಂದಾಗ ಒಂದು ನಿರ್ದಿಷ್ಟ ಯೋಜನೆ ಕೈಗೆತ್ತುಕೊಂಡು ಆ ನಿಟ್ಟಿನಲ್ಲಿ ಕಾರ್ಯನಿರತವಾಗುವುದು ಸಹಜ. ಅವರುಗಳು ಹೀಗೆ ಸಾಗಿದಾಗ, ಸಾಧನೆಯ ಪಥದಲ್ಲಿ ಹಲವಾರು ಜನ ಪರಿಚಿತರಾಗುವುದು ಸಹಜವೆ . ಹೀಗೆ ಪರಿಚಯವಾದವರ ಗುರಿ ಉದ್ದೇಶಗಳನ್ನು ಅರಿತು ಮುಂದೆ ಸಾಗುತ್ತಾರೆ. ಆಗೋದು ಏನು ಅಂದ್ರೆ, ಇವರ ನಿಸ್ಸ್ವಾರ್ಥ ಉದ್ದೇಶವು ಹಾಗು ಪರಿಚಯವಾಗುವ "ಜನರ" ನಿಸ್ಸ್ವಾರ್ಥ ಸೇವೆ ಹೆಚ್ಚಿನಾಂಶದಲ್ಲಿ ಬೇರೆಯದ್ದೆ ಆಗಿರುತ್ತದೆ. ಎಡವಟ್ಟು ಆಗೋದು ಇಲ್ಲೆ... ಇಬ್ಬರದ್ದು ನಿಸ್ಸ್ವಾರ್ಥ ಸೇವೆಯೆ, ಇದರಲ್ಲಿ ಕಿಂಚಿತ್ ಸಹ ಸಂಶಯವಿಲ್ಲ ಆದರೂ ಸಹ ಇಂತಹ ಉದ್ದೇಶಗಳು ಈಡೆರುವುದಕ್ಕೆ ಜನ ಬೆಂಬಲವಿರುವುದಿಲ್ಲ, ಕಾರ್ಯಗತಗೊಳುವುದು ವಿಳಂಬವಾಗುತ್ತದೆ ಅಥವ ಕುಸಿದೆ ಬೀಳಬಹುದು ಇವು ಯಾವುದು ಇಲ್ಲವಾದಲ್ಲಿ ಆಮೆ ವೇಗದಲ್ಲಿ ಸಾಗುವುದು. ಉದಾಹರಣೆಗೆ ೧೦೦+ ಕನ್ನಡ ಪರವಿರುವ ಯಾಹೂ,ಗೂಗಲ್,ಆರ್ಕುಟ್ ಗುಂಪಿನಲ್ಲಿ ಆಯೋಜಿತವಾಗುವ ಭೇಟಿಗಳು ಹಾಗು ಅವುಗಳ ಕಾರ್ಯಸೂಚಿ ನೋಡಿದಲ್ಲಿ ಸತ್ಯದ ಅರಿವಾಗುತ್ತದೆ. ಸಮಾಜದಲ್ಲಿ ಒಂದು ಕನ್ನಡಪರ ಬದಲಾವಣೆ ತರಬೇಕೆಂಬ ಹಂಬಲ, ಅದಕ್ಕಾಗಿ ಸಂಘರ್ಷ ಮಾಡುವ ಛಲ ಉದ್ದೇಶವಾಗಿಟ್ಟುಕೊಂಡೆ ಈ ಭೇಟಿಗಳು ಆಯೋಜಿತವಾಗಿರುತ್ತದೆ. ಮೊದಲ ಭೇಟಿಯಲ್ಲಿ ೧೦೦ ಜನರು ಅತ್ಯುತ್ಸಾಹದಿಂದ ಬಂದು ಪರಿಚಯ ಮಾಡಿಕೊಂಡು, ಕನ್ನಡ ಪರ ತಮ್ಮ ಉದ್ದೇಶ,ಆಸೆ ಆಕಾಂಕ್ಷೆಗಳ ಬಗ್ಗೆ ಅತ್ಯುತ್ಸಾಹದಿಂದ ಮಾತಾಡಿ ಹೋದವರು ಎರಡನೆಯ ಭೇಟಿಯಲ್ಲಿ ನಾಪತ್ತೆ!!! ಆದರೆ ಆಶ್ಚರ್ಯ ಪಡಬೇಕಿಲ್ಲ ೧೦೦ ಮಂದಿಯ ಗುಂಪು ೧೦ ಆದರೂ ಅದು ದೊಡ್ಡ ವಿಚಾರವಲ್ಲ, ಕಾರಣ ಹಲವಿರಬಹುದು ಅದು ಈ ಸಂದರ್ಭದಲ್ಲಿ ನಿರರ್ಥಕ ಆದರೆ ಮೊದಲ ಭೇಟಿಯಲ್ಲಿದ್ದ ಕಿಚ್ಚು, ಸಂಘಟನೆಯ ಬಗ್ಗೆ ಒಲವು ಏಕಾಏಕಿ ಕಾಣೆಯಾಗಿರುತ್ತದೆ. ಸರಿನಪ್ಪ, ಒಪ್ಕೊಳ್ಳೋಣ ೧೦೦ ಮಂದಿಯ ಕುರಿ ಮಂದೆಗಿಂತ ೧೦ ಮಂದಿಯ ಆನೆ ಗುಂಪು ಉದ್ದೇಶಗಳನ್ನು ಕಾರ್ಯಗತಗೊಳಿಸುವುದಕ್ಕೆ ಸಾಕೆಂದು "ಸಿಕ್ಕ" ಅಥವ ೧೦೦ ರಲ್ಲಿ "ಮಿಕ್ಕ" ವ್ಯಕ್ತಿಗಳೊಂದಿಗೆ ಹಂಚಿಕೊಂಡು ಸಾಗಿದರೆ ಯಾವ ವೇಗದಲ್ಲಿ ಸಾಗಬಹುದು? ದೊಡ್ಡ ಓಟದ ಕುದುರೆಯಾಗುಲು ಸಾಧ್ಯವೆ? ಇದೆಲ್ಲವು ಕನ್ನಡ ಪರ ಉದ್ದೇಶದ"ಕೊನೆಯಾಟ"ದ ದಿಸೆಯ ಕಡೆಗೆ ಸಾಗುತ್ತದೆ. ಗಿಡದ ಬುಡ ದೊಡ್ಡದಾಗದೆ, ಚಿಗುರೊಡೆಯುವ ಮೊಗ್ಗು ಹೂವಾಗಿ ಅರಳಬೇಕ್ಕಾದ್ದು ಪೋಷಣೆಯಿಲ್ಲದೆ ಕಮರಿಹೋಗುತ್ತದೆ. ಇಲ್ಲಿ ಗಮನಿಸಬೇಕಾಗಿರುವುದೆ ಸಂಚಲನೆಯ ಕೊರತೆ.. ಏಕೆಂದರೆ ಇಂತಹ ಗುಂಪುಗಳು ಶುರುವಾಗುವುದೆ ಒಂದು ನಿರ್ದಿಷ್ಟ ಗುರಿ ಇಟ್ಟುಕೊಂಡು, ತಮ್ಮ ಗುರಿಯ ಬಗ್ಗೆ ಮಾತ್ರ ವಿಚಾರ ಮಾಡಿಕೊಂಡು ದಾರಿಯಲ್ಲಿ ಪರಿಚಯವಾದ ಬೇರೆಯವರ ಗುರಿಗೆ ಸ್ಪಂದಿಸದೆ "ನಾನು" ಯೋಜಿಸಿದ್ದು ಕಾರ್ಯಗತವಾದರೆ ಸಾಕು, ಬೇರೆ ಗುಂಪುಗಳಲ್ಲಿರುವ ವ್ಯಕ್ತಿಗಳು "ನನ್ನ" ಉದ್ದೇಶಕ್ಕೆ ಪೂರಕವಾಗಿ ಸಹಾಯ ಮಾಡುವವರು ಬಂದರೆ ತೊಂದರೆ ಇಲ್ಲ ಆದರೆ "ನನ್ನ" ಗುರಿ ಮೊದಲ ಆದ್ಯತೆ ಅಂತ ಲೆಖ್ಖಾ ಮಾಡುವುದರ ಫಲವಾಗಿದೆ ಅಂತ ನನ್ನ ಅಂಬೋಣ. ಇಲ್ಲ ಇರಬೇಕ್ಕಾದ್ದು "ನಾನು" ಆಯೋಜಿಸಿದ್ದು ಮೊದಲ ಆದ್ಯತೆ ಅಂತ ಅಲ್ಲ, "ನಾವು" ಕನ್ನಡಿಗರಾಗಿ ಕನ್ನಡ ಪರ ಕಾರ್ಯಗಳಿಗಾಗಿ ಹೆಗಲಿಗೆ ಹೆಗಲು ಕೊಟ್ಟು ಒಬ್ಬರಿಗೊಬ್ಬರು ನೆರವಾಗುತ್ತಿದ್ದೀವಾ? ಎಂಬ ಆಲೋಚನೆ ಮಾಡಬೇಕಾಗಿದೆ. ಎಲ್ಲಾರು ಎಲ್ಲದನ್ನು ಒಂದೆ ಸಮಯದಲ್ಲಿ ನಿರ್ವಹಿಸುವುದಕ್ಕೆ ಆಗುದಿಲ್ಲ, ಅದಕ್ಕೆ "time slicing" ಅನ್ನೋ concept ಬಳಸಿ ಯಾವ ಯಾವ ಗುರಿಗಳನ್ನು ಅನುಷ್ಠಾನಗೊಳಿಸುವುದರಲ್ಲಿ ಹಿನ್ನಡೆಯಾಗುತ್ತಿದೆ ಎಂಬುವುದರ ಬಗ್ಗೆ ಆಲೋಚಿಸಿ ನಮ್ಮ ಕಾರ್ಯವೈಖರಿಯನ್ನು ಸಮಯಕ್ಕೆ ತಕ್ಕ ಹಾಗೆ ಬದಲಾಯಿಸಿಕೊಳ್ಳಬೇಕಾಗುತ್ತದೆ, ಹಿನ್ನೆಡೆಯೆ ಹೆಚ್ಚು ಯಾಕೆಂದರೆ ಇಂತಹ ಕೆಲಸಗಳಲ್ಲಿ ತೊಡಗುವವರು ನಮ್ಮ ದಿನ ನಿತ್ಯದ ಅಮೂಲ್ಯವಾದ ಸಮಯದಲ್ಲಿ ಒಂದು ಭಾಗದ ಸಮಯವನ್ನು ಇಂತಹ ಚಟುವಟಿಕೆಗಳಿಗೆಯೆ ಮುಡಿಪಾಗಿಟ್ಟಿರುತ್ತಾರೆ ಹಾಗಾಗಿ ಪರಿಸ್ಥಿತಿ ಒತ್ತಡಗಳಿಂದ ಹಿನ್ನೆಡೆ ಆಗುವುದು ಸಹಜ ಆದರೆ ಅದು ಆವರಿಗಿರುವ ಆ ನಿಟ್ಟು,ಗುರಿ ಸಾಧಿಸಬೇಕೆಂಬ ಛಲದ ಮುಂದೆ ಏನೇನೂ ಅಲ್ಲ. ಹಾಗಾಗಿ ಇಂತಹ ಧ್ಯೇಯ,ಉದ್ದೇಶಗಳು ಕಾರ್ಯಗತಗೊಳಿಸುವುದಕ್ಕೆ ನೆರವಾಗುವುದು ಪ್ರತಿಯೊಬ್ಬ ಕನ್ನಡಿಗನ ನಿಲುವಾಗಿರಬೇಕು. ಇಂತಹ ಉದ್ದೇಶವಿರುವ ಪ್ರತಿ ಗುಂಪಿನ "ಮುಖ್ಯ ವ್ಯಕ್ತಿಗೆ" ಅಥವ "ಒಬ್ಬ ವ್ಯ್ಯಕ್ತಿಗೆ" ಸಕ್ರಿಯವಾಗಿರುವ ಗುಂಪುಗಳು ಅಥವ ತೊಡಗಿಸಿಕೊಂಡಿರುವರ ಉದ್ದೇಶಗಳ ಕಿರುಪರಿಚಯವಿರುತ್ತದೆ ಆದರು ಸಹ ಆಲೋಚನೆಗಳನ್ನು ಹಂಚಿಕೊಳ್ಳುವುದರಲ್ಲಿ ಕ್ರಿಯಾಶೀಲರಾಗಿರುವುದಿಲ್ಲ್ಲ. ನಾನು ಗುಂಪುಗಳ ಮಧ್ಯೆ "ಅಹಂ"ನ ಘರ್ಷಣೆ ಬಗ್ಗೆ ಕೇಳಿದ್ದೇನೆ ಹೊರತು ಎರಡು ಸಂಘದವರು ಕೂತು ಮಾತನಾಡಿ ಪರಸ್ಪರ ಸಹಾಯ ಮಾಡುವ/ಪಡೆಯುವ ವಿಚಾರದ ಬಗ್ಗೆ ಕೇಳಿಲ್ಲ. ಪರಸ್ಪರ ಹೊಂದಾಣಿಕೆಯಿದ್ದಲ್ಲಿ ಬೇರೆ ಗುಂಪುಗಳ ಕಾರ್ಯಸೂಚಿಗಳ ಬಗ್ಗೆ ಎಂದಿಗೂ ಸಹ ಗುಂಪಿನ ಮೈಲ್/ಬ್ಲಾಗ್ ನಲ್ಲಿ ಉಲ್ಲೇಖವಾಗಿಲ್ಲ.. ಸೋಜಿಗ!!!! ಒಂದು ಗುಂಪಿನರು ಮತ್ತೊಂದು ಗುಂಪಿನವರೊಂದಿಗೆ ಸಂಪರ್ಕಿಸಿ, ಉದ್ದೇಶಗಳೇನು? ಕಾರ್ಯಗಳು ಹೇಗೆ ಸಾಗುತ್ತಿದೆ? ಸದ್ಯದ ಯೋಜನೆ ಏನು? ಸಹಾಯದ ಅವಶ್ಯಕತೆಯಿದೆಯೆ ಅಥವಾ ನಮ್ಮ ಗುಂಪಿನ ಚಟುವಟಿಕೆಗಳಿಗೆ ಅವರಿಂದ ಸಹಾಯ ಪಡೆಯಲು ಸಾಧ್ಯವೆ ಎಂಬ ಮಾಹಿತಿಯನ್ನು ಸಹ ಕಲೆ ಹಾಕುವ "ತೊಂದರೆ" ತೆಗೆದುಕೊಂಡಿದ್ದು ನನ್ನ ಗಮನಕ್ಕೆ ಬಂದಿಲ್ಲ.
ಕರ್ನಾಟಕ ರಕ್ಷಣಾ ವೇದಿಕೆ - ಅಖಿಲ ಕರ್ನಾಟಕ ಕನ್ನಡ ಪರ ಸಂಘಗಳ ಒಕ್ಕೂಟವಾಗಿರದೆ ಮತ್ತೊಂದು ಕನ್ನಡ ಪರ ಸಂಘವಾಗಿದ್ದರೆ ಬಹುಶ: ಇವತ್ತಿಗೆ ಅದು ಜನಪ್ರಿಯವಾದಷ್ಟು ಆಗಲು ಸಾಧ್ಯವಿರುತ್ತಿರಲಿಲ್ಲ ಅನ್ನುವುದು ನನ್ನ ಅನಿಸಿಕೆ. ಕ.ರ.ವೇ ಯಲ್ಲಿ ನೀವು ಸಂಘರ್ಷ, ಸಂಘಟನೆ, ಸಂಚಲನೆ ಎಂಬ ಮೂರು "ಸಂ" ಗಳು ಕಾರ್ಯನಿರತವಾಗಿರುವುದನ್ನು ಕಾಣಬಹುದು. ಸಂಘರ್ಷವೆಂದರೆ ಹೋರಾಟ ಮಾಡುವುದು, ಪ್ರತಿಭಟಿಸುವುದು. ಸಂಚಲನೆಯೆಂದರೆ ಸಂಘಟನೆಯ ವಿಸ್ತಾರ,ನಿರ್ಮಾಣ ಹಾಗಿಗಿಯೆ ಇಂದು ನೀವು ಪ್ರತಿ ನಗರ,ಜಿಲ್ಲೆ,ಹಳ್ಳಿ ಗಳಲ್ಲಿ ಕ.ರ.ವೇ ಯ ಘಟಕವನ್ನು ಕಾಣಬಹುದು. ಸಂಘಟನೆಯೆಂದರೆ ಸಂಘದ ಬಲವರ್ಧನೆ ಇಂದು ಇಷ್ಟು ಘಟಕಗಳಿಗೆ ಜನಬೆಂಬಲ ಹಾಗು ದಿನೆ ದಿನೆ ಹೆಚ್ಚು ಜನಪ್ರಿಯವಾಗುತ್ತಿರುವುದೆ ಇದರ ಸೂಚಿ. ಹಾಗಾಗಿ ೧೦೦+ ಗುಂಪಿನಲ್ಲಿ ಹರಿದು ಹಂಚಿ,ಕಳೆದು ಹೋಗಿರುವ ಪ್ರತಿಭೆಗಳು ಒಟ್ಟಾಗಿ ಸೇರಿ ತಮ್ಮ ಯೋಜನೆಯ ಬಗ್ಗೆ ಇತರರೊಂದಿಗೆ ಚರ್ಚೆ ಮಾಡಿ ಸಹಾಯ ಒದಗಿಸಿ ಅಥವಾ ಪಡೆದು ಒಂದು ಮುಕ್ತವಾದ ಕನ್ನಡ ಪರ ನಿಲುವನ್ನು ತಾಳಬೇಕಾಗಿದೆ. ಪ್ರತಿ ಗುಂಪಿನ ವೈಶಿಷ್ಟ್ಯತೆ ಏನಪ್ಪ ಅಂದ್ರೆ ಅವರ ಗುಂಪಿನಲ್ಲಿ ಸಮಾಜದ ಹಲವಾರು ಗಣ್ಯವ್ಯಕ್ತಿಗಳು ಸದಸ್ಯರಾಗಿರುತ್ತಾರೆ ಆದರೆ ಸದ್ದೆ ಇರುವುದಿಲ್ಲ... ಮಾರ್ಗದರ್ಶಣಕ್ಕಾಗಿ ಆದರು ಅವರ ಮಾತು ಹೊರಬರುವುದೆ ಇಲ್ಲ... ಗುಂಪಿನ ಸದಸ್ಯರ ಎಣಿಕೆ ೨೦೦೦+ ಆದ್ರೆ ಕ್ರಿಯಾಶೀಲರಾಗಿರುವವರ ಸಂಖ್ಯೆ ೧೦-೧೨ :-o ಇದು ಖಂಡಿತವಾಗಲೂ ಪ್ರಗತಿಯ ಹಾದಿಯ ದಿಕ್ಸೂಚಿಯಲ್ಲ.
ಈಗ ಉದಾಹರಣೆಗೆ ಒಂದು ವಿಷಯ ತೆಗೆದು ಕೊಳ್ಳೋಣ..
ಸದ್ಯಕ್ಕೆ, ಬೆಂಗಳೂರಿನಲ್ಲಿರುವ schenider electric ಸಂಸ್ಥೆಯವರು ITI,s.s.l.c ಪಾಸ್ ಆದವರು ಅಥವ ನಪಾಸು ಅದವರಿಗು ಸಹ ಆದರೆ ಮುಖ್ಯವಾಗಿ ೧೮ ವಯೋಮಿತಿಯನ್ನು ದಾಟಿದವರಿಗೆ ಉಚಿತವಾಗಿ ೪ ತಿಂಗಳ "electrician course" ತರಬೇತಿ ಶಿಬಿರ ಏರ್ಪಡಿಸಿದ್ದಾರೆ ಅರ್ಜಿ ಹಾಕಲು ಕೊನೆಯ ದಿನಾಂಕ ೨೧ ಜನೇವರಿ ಅಂದರೆ ಇನ್ನು ೨ ದಿನಗಳ ನಂತರ!!!!, ತರಬೇತಿ ಮುಗಿದ ಮೇಲೆ schenider electric ಸಂಸ್ಥೆಯು "certified electrcian" ಅಂತ ಪ್ರಮಾಣ ಪತ್ರವನ್ನು ಸಹ ಕೊಡುತ್ತದೆ. ಇದು ನಮ್ಮ ನಿರುದ್ಯೋಗಿ ಕನ್ನಡಿಗರಿಗೆ ಬಳಸಿಕೊಳ್ಳಲು ಒಳ್ಳೆಯ ಸದಾವಕಾಶ, ಈ ವಿಚಾರವನ್ನು ನಾನು ಈಗಾಗ್ಲೆ ಹಲವು ಯಾಹೂ ಗುಂಪುಗಳಿಗೆ ಮೈಲ್ ಮಾಡಿದೀನಿ ಆದರು ಸಹ ಅವಶ್ಯಕತೆಯಿರುವ ಕನ್ನಡಿಗರನ್ನು ತಲುಪುತ್ತದೆ ಎಂಬ ನಂಬಿಕೆ ನನಗಿಲ್ಲ :-) ಅದಕ್ಕೆ ನನ್ನ ಸ್ನೇಹಿತರಿಗೆ ಕರೆ ಮಾಡಿ ಹಳ್ಳಿಯ ಕಡೆ ಸಂಪರ್ಕ ಇರುವವರಿಗೆ ಸಹ ತಿಳಿಸಿದ್ದೇನೆ ಯಾಕೆಂದರೆ ಇದು ಕೇವಲ ೨೧ ಜನೆವರಿ ತನಕ ಫಾರ್ವರ್ಡ್ ಮಾಡಲಾಗುವ ಒಂದು ಸುದ್ದಿಯಾಗೆ ಉಳಿದುಬಿಡಬಾರದು :-( .
ಹೋದ ಸರ್ತಿ ಸಹ ಪೆಟ್ರೋಲ್ ಬಂಕ ನಲ್ಲಿ ನೇಮಕಾತಿ ನಡೆದಾಗ ಇಂತಹದೆ ಕರೆಬಂದಿತ್ತು ಆದರೆ ಅದು ತರಬೇತಿಯಲ್ಲದೆ ಕೆಲಸದ ವಿಚಾರವಾಗಿತ್ತು. ಸಂಬಳ ಕೇವಲ ೨೫೦೦/- ಅಂತ ಮೂಗು ಮುರಿದವರೆಷ್ಟೊ!!! ಆದ್ರೆ ಪರನಾಡಿನವರು ಇಂತಹ ಅವಕಾಶ ಬಿಡುತ್ತಾರೆಯೆ?? ಮೊದಲು ಒಳಗೆ ನುಗ್ಗಿ ನಂತರ ಕಿತಾಪತಿ ಆರಂಭಿಸುತ್ತಾರೆ.. ಈ ಸರ್ತಿಯೂ ಕೂಡ ಅದೆ ಪುನರಾವಾರ್ತಿಯಾಗ ಬಾರದೆಂದರೆ ನಾವು ಆದಷ್ಟು ಜನರಿಗೆ ಸುದ್ದಿ ಮುಟ್ಟಿಸಿ ಅವಶ್ಯಕತೆಯಿದ್ದವರನ್ನು ಸುದ್ದಿ ತಲುಪುತ್ತಿದೆಯೆ ಅನ್ನುವುದನ್ನು ನಿಂತು ನೋಡಬೇಕಾಗಿದೆ.
"3ಸಂ"ಕೇವಲ ಔಪಚಾರಿಕವಾದ ಮಾತಾಗದೆ ಕಾರ್ಯಗತವಾಗುತ್ತದೆಯೆ ಎಂದು ಕಾದು ನೋಡಬೇಕಾಗಿದೆ...

ರವಿ ಅಂತ ನನ್ನ ಸ್ನೇಹಿತ, rkrules(at)gmail(dot)com - ಈ ಐಡಿ ಗೆ ಮೈಲ್ ಮಾಡಿ ಹೆಚ್ಚಿನ ವಿವರ ತಿಳಿದುಕೊಳ್ಳಬಹುದು

ವಿ.ಸೂ: ಈ ತರಬೇತಿಗೆ ಸಂಬಂಧಪಟ್ಟ ಕಡತವನ್ನು ತಿಳಿಸಿರುವ ಕೊಂಡಿಯಿಂದ ಡೌನ್ಲೊಡ್ ಮಾಡಿಕೊಳ್ಳಿ

https://www.yousendit.com/download/WnBUZGVVNkdWRDkzZUE9PQ

Dear All,

Regarding the electrician training convey the following details to the
referred candidates.

Date of enrollment: 21st Jan 2009
Time: 9.30am

Electrician training Location:
Aide et Action India
iLead - Bangalore
No.4, 2nd cross,
7th Main, KSRTC layout
J.P.Nagar 2nd Phase
Bangalore 560078

Contact: Srinivasan, Sridhara
Office phone: 080-26592341, 9731920010, 9880720951,
9731754107,9980514557

Thanks and Best Regards
Roshini D'Souza
Senior Executive - BIPBOP
Global Technology Centre
Schneider Electric India Pvt Ltd
Ph: 28417000 extn :6334
Ph: 99642 82600

No comments: