Tuesday, June 29, 2010

ಅಳುತ್ತಿರುವ ನಿಮ್ಮ ವಿಂಡೊಸ್‌ ಕಂಪ್ಯೂಟರ್ಅನ್ನು ಟ್ವೀಕಿಸಿ, ಚುರುಕುಗೊಳಿಸಿ...ಭಾಗ ೨

on April 22, 2009

ಎರಡನೆಯ ಭಾಗ ಶುರುವಾಯಿತು, ವಿಂಡೊಸ್‌ಅನ್ನು ಮತ್ತಷ್ಟು ಚುರುಕುಗೊಳಿಸಲು ಸಜ್ಜಾಗಿ..

ಡಿಸ್‌ಪ್ಲೆ ಸೆಟ್ಟಿಂಗ್ಅನ್ನು ಆಪ್ಟಿಮೈಸ್‌ಗೊಳಿಸುವುದು.

ನಿಮ್ಮ ವಿಂಡೊಸ್ ಎಕ್ಸ್.ಪಿ ನೋಡಲು ಆಕರ್ಷಕವಾಗಿ ಕಾಣಬಹುದು ಆದರೆ ಕಾರ್ಯಸಾಧನೆಯಲ್ಲಿ ಮಂದಗತಿಯಾದ್ರೆ ಮೈ ಯಾರಿಗ್ತಾನೆ ಉರಿಯೋಲ್ಲಾ?
ವಿಂಡೊಸ್‌ "ಸಿಸ್ಟಂ ರಿಸೋರ್ಸ್"ಅನ್ನು(ಮೆಮೊರಿ,cpuಕಾರ್ಯಸಾಧನೆ,ಕ್ಯಾಷ್ ಮೆಮೊರಿ,ರೆಜಿಸ್ಟರ್ಸ್,..) ಹೆಚ್ಚಾಗಿ ಗಣಕತೆರೆ ಬದಲಾದಾಗಲೆ
ನುಂಗುವುದು. ಯಾಕಂದರೆ ಪ್ರತಿ ಸಣ್ಣ ಕಾರ್ಯ ಪ್ರತಿಫಲಿಸಬೇಕೆಂದರೂ ಸಹ ಇಡಿ ಗಣಕತೆರೆಯನ್ನು ಪುನರ್ರಚಿಸಬೇಕಾಗುತ್ತದೆ ಈ ಕಾರ್ಯಕ್ಕೆ "ಸಿಸ್ಟಂ
ರಿಸೋರ್ಸ್" ಅಗತ್ಯ ಬೀಳುತ್ತದೆ ಹಾಗಾಗಿ cpuಗೆ ಕಮ್ಮಿ ಕೆಲಸ ಕೊಡುವುದರ ಮೂಲಕ ಕಂಪ್ಯೂಟರ್ ಹೆಚ್ಚು ವೇಗದಿಂದ ಅಗತ್ಯ ಕಾರ್ಯ ನಿರ್ವಹಿಸುವುದಕ್ಕೆ
ಸಹಾಯ ಮಾಡಬಹುದು. ಹೀಗೆ ಕಾರ್ಯ ತೀಕ್ಷ್ಣಗೊಳಿಸಲು ...

೧."ಮೈ ಕಂಪ್ಯೂಟರ್" ಮೇಲೆ ಬಲ ಕ್ಲಿಕ್ ಮಾಡಿ "ಗುಣಧರ್ಮಗಳು" ಕ್ಲಿಕ್ಕಿಸಿ.

೨."ಮುಂದುವರಿದ " ಟ್ಯಾಬ್ ಮೇಲೆ ಕ್ಲಿಕ್ ಮಾಡಿ.

೩.ನಂತರ ಅದರಲ್ಲಿ "ಕಾರ್ಯ ದಕ್ಷತೆ"ಗೆ ಸಂಬಂಧಿತ "ಸೆಟ್ಟಿಂಗ್‌ಗಳು" ಗುಂಡಿಯನ್ನು ಒತ್ತಿ .

೪."ದೃಷ್ಟಿ ಸಂಬಂಧಿತ ಪರಿಣಾಮ "ಸಂಬಂಧಿತ ಆಯ್ಕೆಯ ಟ್ಯಾಬ್ ಅನ್ನು ಆಯ್ಕೆಮಾಡಿ.

೫.ಇದರೊಳಗೆ ನಿಮಗೆ ೪ ಆಯ್ಕೆಯಿರುತ್ತದೆ

ಅ.ಮೊದಲನೆಯ ಆಯ್ಕೆ,ನೀವು ತಲೆ ಕೇಡಿಸಿಕೊಳ್ಳದೆ ಹಾಲಲ್ಲಾದ್ರು ಹಾಕು ನೀರಲ್ಲಾದ್ರು ಹಾಕು ಅಂತ ವಿಂಡೋಸ್‌ಗೆ ನಿರ್ಧಾರವನ್ನು ಬಿಡುವುದು.ಇದನ್ನು ಆಯ್ಕೆ ಮಾಡಿಕೊಂಡ್ರೆ,ಶಿವನೆ ಶಂಭುಲಿಂಗ!!! ನಿಮ್ಮ ಕಂಪ್ಯೂಟರ್ ಅಳೊಕ್ಕೆ ಶುರು ಮಾಡ್ತು ಅನ್ಕೊಳ್ಳಿ.

ಆ.ಎರಡನೆಯ ಆಯ್ಕೆ, ಸುಂದರವಾಗಿ ಕಂಡರೆ ಸಾಕು ಕಾರ್ಯಕ್ಷಮತೆ ಸುಮಾರಿದ್ರು ಪರ್ವಾಗಿಲ್ಲ ಅಂತ ನಿರ್ಧರಿಸಿದ್ರೆ ಇದನ್ನ ಆಯ್ಕೆ ಮಾಡಿಕೊಳ್ಳಬಹುದು.

ಇ.ಮೂರನೆಯ ಆಯ್ಕೆ, ಕಾರ್ಯಕ್ಷಮತೆ ಸಾಕು ಸೌಂದರ್ಯ ಸುಮಾರಿದ್ರು ಪರ್ವಾಗಿಲ್ಲ ಅಂತ ನಿರ್ಧರಿಸಿದ್ರೆ ಇದನ್ನ ಆಯ್ಕೆ ಮಾಡಿಕೊಳ್ಳಬಹುದು.

ಈ.ನಾಲ್ಕನೆಯ ಆಯ್ಕೆ, ನನ್ನ ಕಂಪ್ಯೂಟರ್ ಹೇಗೆ ಕೆಲಸ ಮಾಡ್ಬೇಕು ಎಷ್ಟು ಸುಂದರವಾಗಿ ಕಾಣಬೇಕು ಅಂತ ಯೋಚಿಸಿ ಎಲ್ಲಾ ನಿರ್ಧಾರ ನಾನೆ ತೊಗೊತೀನಿ ಎಂದರೆ ಇದನ್ನ ಆಯ್ಕೆ ಮಾಡಿ ಏಕೆಂದರೆ ಸುಂದರವಾಗಿ ಕಾಣಿಸುವುದು ತತ್ಪರಿಣಾಮವಾಗಿ ಕಂಪ್ಯೂಟರ್ ಕಾರ್ಯಕ್ಷಮತೆ ಮೇಲೆ ಹಿಡಿತ ಸಾಧಿಸುವುದು ಈ ಆಯ್ಕೆಯಿಂದ ಮಾತ್ರ ಸಾಧ್ಯ. ಈ ಆಯ್ಕೆಗಳಲ್ಲಿ ಕಮ್ಮಿ ಆಯ್ಕೆಗಳು ಟಿಕ್ ಆದಲ್ಲಿ ಸೌಂದರತೆ ಹಾಗು ಕಾರ್ಯಕ್ಷಮತೆ ಮಿಶ್ರವಾಗುತ್ತದೆ. ನಿರ್ಧಾರ ನಿಮಗೆ ಬಿಟ್ಟಿದ್ದು, ನನ್ನ ಕಂಪ್ಯೂಟರ್‍ನಲ್ಲಿ ಕೇವಲ ಎರಡು ಮಾತ್ರ ಆಯ್ಕೆ ಮಾಡಿಕೊಂಡಿದ್ದೇನೆ (ಕೆಳಗಿನಿಂದ ೨ ಹಾಗು ೩ನೆಯದು - use common task in folders ಹಾಗು use drop shadows for icon labels on desktop) ಮೆಮೊರಿ ವಿಚಾರ ಬಂತೆಂದರೆ ಸಕ್ಕಥ್ ಜಿಪುಣ್ರಾಗೊದ್ರಲ್ಲೆ ಜಾಣತನ ಇದೆ :)

ಪೇಜ್‌ಫೈಲ್ ಅನ್ನು ಆಪ್ಟಿಮೈಸ್‌ಮಾಡುವುದು

ಪೇಜ್‌ಫೈಲ್ ಎನ್ನುವುದು ಮೆಮೊರಿಗೆ ಸಂಬಂಧಿತ ವಿಚಾರ,ಈ ಮೆಮೊರಿಯ ಗಾತ್ರ ಎಷ್ಟಿರಬೇಕೆಂದು ಕಂಪ್ಯೂಟರ್‍ನ ಬದಲು ನಾವೆ ನಿರ್ಧರಿಸಿದರೆ ಅದಕ್ಕೆ ಕಮ್ಮಿ ಕೆಲಸ ಕೊಟ್ಟಂತೆ ಹಾಗಾಗಿ ಅದರ ಕೆಲಸ ಸುಲಭವಾಗಿ ಬೇರೆ ಕೆಲಸಗಳ ಕಡೆ ಗಮನಹರಿಸಿ ಕಾರ್ಯವನ್ನು ತ್ವರಿತವಾಗಿ ಮುಗಿಸುತ್ತವೆ. ಪೇಜ್‌ಫೈಲ್ ಗಾತ್ರವನ್ನು ಹೊಂದಿಸುವ ಮುನ್ನ ಕಂಪ್ಯೂಟರ್‍ನ RAM ಗಾತ್ರ ಎಷ್ಟು ಎಂಬುದನ್ನು ತಿಳಿದುಕೊಂಡಿರಬೇಕಾಗುತ್ತದೆ. ಇದನ್ನು ತಿಳಿಯಲು ನಾವು

೧."ಮೈ ಕಂಪ್ಯೂಟರ್" ಮೇಲೆ ಬಲ ಕ್ಲಿಕ್ ಮಾಡಿ "ಗುಣಧರ್ಮಗಳು" ಕ್ಲಿಕ್ಕಿಸಿ.

೨. ಅದರಲ್ಲಿ "ಸಾಮಾನ್ಯ" ಎಂಬ ಟ್ಯಾಬ್‌ಅನ್ನು ಕ್ಲಿಕ್ಕಿಸಿ.

೩. ನಿಮಗೆ "ಬೆಂಬಲ ಮಾಹಿತಿ" ಎನ್ನುವ ಗುಂಡಿ ಕಾಣುತ್ತದೆ ಅದರ ಮೇಲ್ಗಡೆ ನೀವು ಬಳಸುತ್ತಿರುವ ಕಂಪ್ಯೂಟರ್‍ನ RAM ಗಾತ್ರ ಎಷ್ಟು ಎಂಬುದನ್ನು ತಿಳಿಸಲಾಗಿರುತ್ತದೆ. ಇದೆ ನಮಗೆ ಬೇಕಾಗಿರುವ ಮಾಹಿತಿ :)

ಈಗ ಪೇಜ್‌ಫೈಲ್ ಗಾತ್ರವನ್ನು ಹೊಂದಿಸಲು ನಾವು ಮಾಡಬೇಕಾಗಿರುವ ಕೆಲಸ...

೧."ಮೈ ಕಂಪ್ಯೂಟರ್" ಮೇಲೆ ಬಲ ಕ್ಲಿಕ್ ಮಾಡಿ "ಗುಣಧರ್ಮಗಳು" ಕ್ಲಿಕ್ಕಿಸಿ.

೨."ಮುಂದುವರಿದ " ಟ್ಯಾಬ್ ಮೇಲೆ ಕ್ಲಿಕ್ ಮಾಡಿ.

೩.ನಂತರ ಅದರಲ್ಲಿ "ಕಾರ್ಯ ದಕ್ಷತೆ"ಗೆ ಸಂಬಂಧಿತ "ಸೆಟ್ಟಿಂಗ್‌ಗಳು" ಗುಂಡಿಯನ್ನು ಒತ್ತಿ .

೪.ಪುನಹ ಅದರೊಳಗಿರುವ "ಮುಂದುವರಿದ " ಟ್ಯಾಬ್ ಮೇಲೆ ಕ್ಲಿಕ್ ಮಾಡಿ.

೫.ಇದರೊಳಗಿರುವ ಮೂರು ವಿಭಾಗಗಳಲ್ಲಿ "ವರ್ಚುಯಲ್ ಮೆಮೊರಿ" ಎನ್ನುವುದರಲ್ಲಿ ಲಭ್ಯವಿರುವ "ಬದಲಿಸು" ಎಂಬ ಗುಂಡಿಯನ್ನು ಒತ್ತಿರಿ.

೬.c drive ಅನ್ನು ಒಂದು ಬಾರಿ ಕ್ಲಿಕ್ ಮಾಡಿ (ಇದರ ಸೂಚ್ಯವಾಗಿ ಅದರ ಮೇಲೆ ನೀಲಿ ಪಟ್ಟಿಯಿಂದ ಕಾಣುತ್ತದೆ)

೭.ನಂತರ ಕೆಳಗೆ "ಆಯ್ಕೆ ಮಾಡಲಾದ ಡ್ರೈವ್ ನ ಪೇಜ್‍ಫೈಲ್‌ನ ಗಾತ್ರ" ಎಂಬ ವಿಭಾಗವಿರುತ್ತದೆ
ಅದರಲ್ಲಿ ಮೂರು ಆಯ್ಕೆಗಳಿರುತ್ತವೆ

ಅ.ನಿಗದಿಪಡಿಸಿದ ಗಾತ್ರ

ಆ.ಕಂಪ್ಯೂಟರ್ ನಿಭಾಯಿಸುವ ಗಾತ್ರ

ಇ.ಪೇಜ್ ಫೈಲ್ ಅವಶ್ಯಕವಿಲ್ಲ.

ನಿಮ್ಮ RAM ಗಾತ್ರ ೫೧೨ MBಗಿಂತ ಕಿರಿದಾಗಿದ್ದರೆ (೫೦೦ಕ್ಕಿಂತ ಕಿರಿದು - ಅಂದ್ರೆ ೧೨೮MB ಅಥವಾ ೨೫೬MB ) ಎರಡನೆಯದನ್ನು ಆಯ್ಕೆ ಮಾಡಿ.

ನಿಮ್ಮ RAM ಗಾತ್ರ ೫೧೨ MBಗಿಂತ ಹಿರಿದಾಗಿದ್ದರೆ (೪೦೦ಕ್ಕಿಂತ ಹಿರಿದಾಗಿದ್ದರೆ ಸಾಕು) ಮೊದಲನೆಯದನ್ನು ಆಯ್ಕೆ ಮಾಡಿ.

"ನಿಗದಿಪಡಿಸಿದ ಗಾತ್ರ"ವನ್ನು ನೀವು ಆಯ್ಕೆ ಮಾಡುವುದರ ಮೂಲಕ ಗಾತ್ರವನ್ನು ನಿರ್ಧರಿಸುವ ಮೊತ್ತ ನಿಮ್ಮದಾಗುತ್ತದೆ. ನಿಮ್ಮ RAM ಗಾತ್ರ ಎಷ್ಟಿರುತ್ತದೆಯೊ ಅದೆ ಮೊತ್ತವನ್ನು "ಆರಂಭದ ಗಾತ್ರ"(MB): ದಲ್ಲಿ ನಮೂದಿಸಬೇಕಾಗುತ್ತದೆ. "ಗರಿಷ್ಟ ಗಾತ್ರ"(MB): ದಲ್ಲಿ ಅದರ ಎರಡರಷ್ಟು ಮೊತ್ತವನ್ನು ನಮೂದಿಸಿ. ನಮೂದಿಸಿದ ನಂತರ "ಸರಿ" ಎನ್ನುವುದನ್ನು ಒತ್ತಿ, ನಂತರ "ಅನ್ವಯಿಸು" ಎನ್ನುವುದನ್ನು ಒತ್ತಿ, ನಂತರ "ಸರಿ" ಎನ್ನುವುದನ್ನು ಒತ್ತಿ. ಮತ್ತೆ "ಮುಂದುವರಿದ " ಟ್ಯಾಬ್ ಕಾಣಿಸಿರುತ್ತದೆ ಇಲ್ಲು ಸಹ "ಅನ್ವಯಿಸು" ಎನ್ನುವುದನ್ನು ಒತ್ತಿ, ನಂತರ "ಸರಿ" ಎನ್ನುವುದನ್ನು ಒತ್ತಿದರೆ ಪೇಜ್‌ಫೈಲ್ ಅನ್ನು ಟ್ವೀಕಿಸಿದಂತೆಯೆ ಸರಿ :)

ಡಿಲೀಟ್ ಕಾರ್ಯವನ್ನು ಮಾನ್ಯ ಮಾಡದೆ ಕಾರ್ಯಸಾಧಿಸುವುದು:

ಇದು ಕಂಪ್ಯೂಟರ್‌ನ ಕಾರ್ಯನಿರ್ವಹಣೆಗೆ ಸಂಬಂಧಿತವಲ್ಲದ್ದಿದ್ದರು, ನಿಮಗು ಅನ್ಸುತ್ತೆ "ಒಹ್, ಎಷ್ಟ್ ಬೇಗ ಆಗೋಯ್ತು!!!" ಅಂತ :)
ಈ ಥರ ಅನಿಸಬೇಕು ಅಂದ್ರೆ

೧.ಪು.ಬು ಮೇಲೆ ಬಲ ಕ್ಲಿಕ್ ಮಾಡಿ ನಂತರ ಅದರಲ್ಲಿ ಗುಣಧರ್ಮಗಳನ್ನು ಕ್ಲಿಕ್ ಮಾಡಿ

೨."ಡಿಲೀಟ್ ಮಾನ್ಯ ಮಾಡುವ ಡೈಲಾಗ್ ತೋರು"ಎಂಬ ಚೆಕ್ ಬಾಕ್ಸ್ ಇರುತ್ತದೆ ಅದರಲ್ಲಿ ಟಿಕ್ ಗುರುತು ಇದ್ದಲ್ಲಿ ಆ ಟಿಕ್ ಗುರುತಿನ ಮೇಲೆ ಒಂದು ಬಾರಿ ಕ್ಲಿಕ್ ಮಾಡಿ ತೆಗೆಯಿರಿ.

೩.ನಂತರ "ಸರಿ" ಎನ್ನುವುದನ್ನು ಒತ್ತಿ.

ಅಪ್ಪಿ ತಪ್ಪಿ ನೀವೇನಾದ್ರು ಅಗತ್ಯವಿರುವ ಕಡತವನ್ನು ಅಕಸ್ಮಾತಾಗಿ ಡಿಲೀಟ್ ಮಾಡಿದಿರಿ ಅನ್ಕೊಳ್ಳಿ ಹೆದರುವ ಅವಶ್ಯಕತೆಯಿಲ್ಲ, ಆ ಕಡತ ನಿಮಗೆ ಪು.ಬುವಿನಲ್ಲಿ ಲಭ್ಯವಿರುತ್ತದೆ. ಅಲ್ಲಿ ಹೋಗಿ ಆ ಕಡತದ ಮೇಲೆ ಬಲ ಕ್ಲಿಕ್ ಮಾಡಿ ಮರುಸ್ಥಾಪಿಸಿದರೆ ಆಯಿತು, ತೊಂದರೆ ಇಲ್ಲ. ಅದು ಯಥಾಸ್ಥಾನದಲ್ಲಿ ಪ್ರತ್ಯಕ್ಷವಾಗುತ್ತದೆ.

Custom size - ನಿಗದಿಪಡಿಸಿದ ಗಾತ್ರ
Properties - ಗುಣಧರ್ಮಗಳು
Advanced - ಮುಂದುವರಿದ
Performance - ಕಾರ್ಯ ದಕ್ಷತೆ
General - ಸಾಮಾನ್ಯ
Initial size - ಆರಂಭದ ಗಾತ್ರ
Maximum size - ಗರಿಷ್ಟ ಗಾತ್ರ
Change - ಬದಲಿಸು
Apply - ಅನ್ವಯಿಸು
OK - ಸರಿ
Recycle bin - ಪು.ಬು (ಪುನರ್ಬಳಕೆ ಬುಟ್ಟಿ)
Restore - ಮರುಸ್ಥಾಪಿಸಿ
Display Delete Confirmation Dialog - ಡಿಲೀಟ್ ಮಾನ್ಯ ಮಾಡುವ ಡೈಲಾಗ್ ತೋರು

ಮುಂದುವರೆಯುವುದು....

No comments: