Tuesday, June 29, 2010

"ಮ"ಕಾರದಲ್ಲಿ ಅಡಗಿರುವ ಅಕಾಲ ಮೃತ್ಯು

on April 3, 2009

ಭಾರತದ ಭವಿಷ್ಯವನ್ನು ನೀವು ಊಹಿಸ ಬಲ್ಲಿರಾ?ನಿಮ್ಮ ಕಲ್ಪನಾ ಶಕ್ತಿ ಎಷ್ಟು ಮಂದವಾಗಿದೆಯೆಂದು ತಿಳಿಯಬೇಕೆ? ಮುಂದಿಟ್ಟಿರುವ ಪ್ರಶ್ನೆಗಳಿಗೆ ನಿಮ್ಮ ಬಳಿ ಉತ್ತರವಿದೆಯೆ? ಇರಲಿಕ್ಕಾದರು ಸಾಧ್ಯವೆ? ಓರೆ ಹಚ್ಚಲು ಮುಂದಕ್ಕೆ ಓದಿ...

೧.ಮನೆಯಿಂದ ಹೊರಗೆ ಕೆಲಸಕ್ಕೆ ಅಂತ ಹೆಜ್ಜೆ ಇಟ್ಟರೆ ಸುರಕ್ಷಿತವಾಗಿ ಹಿಂತಿರುಗಿ ಬರುತ್ತೀರಾ? - ಮೊನ್ನೆ ತಾನೆ ಬೆಂಗಳೂರಿನ ರಾಜಾಜಿನಗರದಲ್ಲಿ ಬಾಂಬ್ ಪತ್ತೆಯಾಗಿದೆ,ಇಡಿ ದೇಶದಲ್ಲೆಲ್ಲಾ ಬಾಂಬ್‌ನ ಸದ್ದು ಪ್ರತಿಧ್ವನಿಸುತ್ತಿದೆ,ಪಾನಿಪುರಿ ಅಂಗಡಿ ಸಹ ಸುರಕ್ಷಿತವಲ್ಲ,ಹೈದರಾಬಾದ್‌ನ ಲುಂಬಿನಿ ಪಾರ್ಕ್ ಹೊರಗಡೆ ನಡೆದ ಸ್ಪೋಟ ಇದಕ್ಕೆ ಸಾಕ್ಷಿ,ಐಐಎಸ್ಸಿಯಂತಹ ವಿದ್ಯಾದೇಗುಲದಲ್ಲಿ ಭಯೋತ್ಪಾದಕರ ದಾಳಿ,ದೇವಸ್ಥಾನಗಳಲ್ಲಿ ದಾಳಿಯಂತು ಮಾಮೂಲು ಎಲ್ಲಿಯ ಉದಾಹರಣೆ ಅಂತ ಕೊಡೊದು,ದವಾಖಾನೆ,ಚಿತ್ರ ಮಂದಿರಗಳಂತು ಮೆಚ್ಚಿನ ತಾಣ - ಇಷ್ಟು ಬಿಟ್ರೆ ಜನ ಎಲ್ಲಿ ಅಂತ ಓಡಾಡಬೇಕು? ಮನೆ ಒಳಗೆ ಕೂತಿರಬೇಕು ಅಷ್ಟೆ, ಆಮೇಲೆ ಮುಂದೊಂದು ದಿನ ಕಿಟಕಿ ಒಳಗಿಂದ ಬಾಂಬ್ ಹಾಕೊಕ್ಕೆ ಶುರು ಮಾಡಿದ್ರು ಸಹ ಏನು ಆಶ್ಚರ್ಯ ಇಲ್ಲ,ಕೂತಲ್ಲೆ ಸಾಯಬೇಕು.

೨.ನಿಮ್ಮ ಸ್ಥಳದಿಂದಲೆ ನಿಮ್ಮನ್ನು ಒಡಿಸಿ ನಿಮ್ಮ ಜಾಗದಲ್ಲಿ ಅನ್ಯರು ವಾಸಿಸುವುದನ್ನು ಸಹಿಸಬಲ್ಲಿರಾ? - ಭೂಮಿಯ ಮೇಲಿರುವ ಸ್ವರ್ಗ ಅಂತಲೆ ಎನಿಸಿಕೊಂಡ ಕಾಶ್ಮೀರದಲ್ಲಿ ದಿನ ಬೆಳಗಾದರೆ ಕೊಲೆ,ಸುಲಿಗೆ,ಅತ್ಯಾಚಾರ,ನಿಲ್ಲದ ಹತ್ಯಾಕಾಂಡಗಳು,೪ ಲಕ್ಷ ಜನರು ಜೀವದ ಹಂಗು ತೊರೆದು ರಾತ್ರೊ ರಾತ್ರಿ ತಮ್ಮ ಮನೆ ಮಠಗಳನ್ನು ತ್ಯಜಿಸಿ ದಿಲ್ಲಿಯ ಸ್ಲಮ್‌ಗಳಲ್ಲಿ ವಾಸಿಸುವಂತಾಗಿದೆ.
೩.ವರ್ಷದಲ್ಲಿ ಹನ್ನೆರಡು ತಿಂಗಳೂ ಪ್ರತಿ ತಿಂಗಳಿಗೊಂದಂತೆ ಇರುವ ಹಬ್ಬಗಳನ್ನು ಆಚರಿಸದೆ,ಮಕ್ಕಳು ಹೊಸ ಬಟ್ಟೆಗಳನ್ನು ತೊಟ್ಟು ನಲಿಯದೆ,ಮನೆಯು ಸಿಂಗಾರಗೊಳ್ಳದೆ,ಹಣೆಬೊಟ್ಟಿಲ್ಲದ ವಿಧವೆಯಂತೆ ಕಾಣುವ ರಂಗೋಲೆಯಿಲ್ಲದ ಅಂಗಣ,ಮುಂಡನೆ ಮಾಡಿಸಿಕೊಂಡವರಲ್ಲಿ ಮಾಯವಾದ ಹೂವಿನ ಹಾರದಂತೆ ಹೆಬ್ಬಾಗಿಲಲ್ಲಿ ಕಾಣದ ತಳಿರು ತೋರಣ,ಇವಾವುದು ಕಾಣದೆ ಬರಿದಾದ ಜೀವನವನ್ನು ಊಹಿಸಬಲ್ಲಿರಾ? ಜೀವನ ಅನ್ನೋದು ಕೇವಲ ಊ-ಮ-ಹೇ ಸುತ್ತಾನೆ ಇದ್ದಿದ್ರೆ ಬಹುಶ:ಈ ಬೆಳವಣಿಗೆಗಳು ಸ್ವಾಗತಾರ್ಹವೇನೊ ಆದ್ರೆ ಹಾಗಿಲ್ವಲ್ಲ. ಹಬ್ಬ ಹರಿದಿನ ಆಚರಿಸಬೇಕು,ಮನೆಯ ಮುಂದೆ ನೀರು ಹಾಕಿ ರಂಗೋಲಿಯಿಂದ ಅಂಗಣವನ್ನು ಸಿಂಗರಿಸಬೇಕು.ಮಕ್ಕಳು ಹೊಸ ಬಟ್ಟೆ ತೊಟ್ಟು ಹಬ್ಬದೂಟವನ್ನು ಮಾಡಿ ನಕ್ಕು ನಲಿಯಬೇಕು.ಈ ರೀತಿ ವರ್ಷಕ್ಕೆ ೨-೩ ದಿನಾ ಸಾಕಾ? ಅಥವಾ ತಿಂಗಳಿಗೊಂದರಂತೆ ಸಂಸ್ಕೃತಿ,ಜೀವನಾರ್ಥವನ್ನು ಬಿಂಬಿಸುವ ಹಬ್ಬಗಳು ಇರಬೇಕಾ?

ಇವೆಲ್ಲಾ ನಿಮ್ಮ ಸುತ್ತ ಮುತ್ತಲೆ ಆಗ್ತಿದೆನೋ ಅಥವ ನಿಮ್ಮ ನೆಂಟರು,ಇಷ್ಟರು,ಬಳಗದವರು ಈ ರೀತಿಯ ಸ್ಥಿತಿ ಗತಿಗೆ ಬಲಿಯಾದರೆ ಹೇಗೋ,ಒಮ್ಮೆ ಸುಮ್ನೆ ಊಹಿಸಿ ನೋಡಿ,ನಡುಕ ಹುಟ್ಟೊಲ್ವೆ? ಇವೆಲ್ಲವೂ ಸತ್ಯಕ್ಕೆ ತುಂಬಾ ದೂರ ಏನು ಉಳಿದಿಲ್ಲ.ಕರ್ನಾಟಕದ ಭದ್ರ ನೆಲೆಯಲ್ಲಿ ಕೂತು ಇದನ್ನೆಲ್ಲ ಓದಿದ್ರೆ ಕೆಲವರಿಗೆ ಆಕಳಿಕೆ ಸಹ ಬರಬಹುದು ಆದರೆ ಜಾಗತಿಕ ವಾಸ್ತವ ಹಾಗಿಲ್ವಲ್ಲ.ನಾವು ಯೊಚಿಸಬೇಕಿದೆ ನಮ್ಮ ಸಮಾಜದ ಮೇಲೆ ಇವುಗಳ ಪ್ರಭಾವ ಹೇಗೆ ನಿಯಂತ್ರಿಸಬಹುದು ಅಂತ.ಈಗ ಕೆಲವು ಘಟನೆಗಳ ಕಡೆ ಗಮ ಹರಿಸೋಣವೆ...

೧. ೨೦೦(ಇನ್ನೂರು)ವರ್ಷಗಳ ಹಿಂದೆ ಕಂಧಹಾರ್(ಅಫ್ಘಾನಿಸ್ತಾನ್)ನಲ್ಲಿ ಹಿಂದುಗಳು ಸನಾತನ ಧರ್ಮವನ್ನು ಆಚರಿಸುತ್ತಿದ್ದರು,ಪೂಜೆ ಪುನಸ್ಕಾರಗಳನ್ನು ನೆರವೇರಿಸುತ್ತಿದ್ದರು.
ಇಂದು?? ಕೇವಲ ಅಲ್-ಕೈದಾ ಹಾಗು ತಾಲಿಬಾನ್ ಅವರ ತಾಣವಾಗಿದೆ,ಕಣ್ಣಿಗೆ ಕಣ್ಣ್ಣು,ಕೈಗೆ ಕೈ ಎನ್ನುವ ಶರಿಯತ್ ಲಾ ಅನ್ನು ಪಾಲಿಸಲಾಗುತ್ತಿದೆ.

೨. ೧೦೦(ನೂರು)ವರ್ಷಗಳ ಹಿಂದೆ ಲಾಹೋರ್ ಹಾಗು ಕರಾಚಿ(ಪಾಕಿಸ್ತಾನ್)ನಲ್ಲಿ ಹಿಂದುಗಳು ಸನಾತನ ಧರ್ಮವನ್ನು ಆಚರಿಸುತ್ತಿದ್ದರು,ಪೂಜೆ ಪುನಸ್ಕಾರಗಳನ್ನು ನೆರವೇರಿಸುತ್ತಿದ್ದರು.ಇಂದು??ಹಿಂದುಗಳು ಓಡಿ ಭಾರತದತ್ತ ಬರುತ್ತಿದ್ದಾರೆ,೧೯೪೭ರಲ್ಲಿ ಪಾಕಿಸ್ತಾನ್ ಅನ್ನು ಸೃಷ್ಟಿಸಲಾಯಿತು ಆಗ ಹಿಂದುಗಳ ಸಂಖ್ಯೆ ೨೪% ಇತ್ತು ಇಂದು ೧% ಗಿಂತ ಕಮ್ಮಿ ಆಗಿದಾರೆ.ಹಾಗಿದ್ರೆ ಎಲ್ಲರು ಎಲ್ಲಿ ಹೋದರು?

೩. ೫೦(ಐವತ್ತು)ವರ್ಷಗಳ ಹಿಂದೆ ಶ್ರೀನಗರ್(ಕಾಶ್ಮೀರ್)ನಲ್ಲಿ ಹಿಂದುಗಳು ಸನಾತನ ಧರ್ಮವನ್ನು ಆಚರಿಸುತ್ತಿದ್ದರು,ಪೂಜೆ ಪುನಸ್ಕಾರಗಳನ್ನು ನಿರ್ಭಯವಾಗಿ ನೆರವೇರಿಸುತ್ತಿದ್ದರು.ಇಂದು??ಕಶ್ಮೀರಿ ಪಂಡಿತರನ್ನು ಹಗಲಲ್ಲೆ ಗುಂಡಿಟ್ಟು ಕೊಲ್ಲಲಾಗುತ್ತಿದೆ.ಭಾರತದ ಧ್ವಜಕ್ಕೆ ಬೆಂಕಿ ಹಚ್ಚಿ ಭಾರತ ಸರ್ಕಾರದ ವಿರುದ್ಧ ಘೋಷಣೆಗಳು ಸಾಮಾನ್ಯವಾಗಿವೆ.ಇದೆ ಶ್ರೀನಗರವನ್ನು ಇಸ್ಲಾಮಬಾದ್ ಅಂತ ನಾಮಕರಣ ಮಾಡಲು ಎಲ್ಲಾ ಹುನ್ನಾರ ನಡೆಯುತ್ತಿದೆ.ಪ್ರಸ್ತುತ ಅಲ್ಲಿನ ಸರ್ಕಾರದ election mandate ಸಹ ಇದೆ ಆಗಿದೆ,ಇದಕ್ಕೆ ಕಾಂಗ್ರೆಸ್ಸ್ ಸರ್ಕಾರದ ಕುಮ್ಮಕ್ಕು ಸಹ ಇದೆ.ಇದರ ಕನಿಷ್ಟ ಅರಿವಾದರು ನಿಮಗಿದೆಯೆ?

ಈ ಮೇಲೆ ಉಲ್ಲೇಖ ಮಾಡಿರುವ ಘಟನಾವಳಿಗಳನ್ನೊಮ್ಮೆ ಅವಲೋಕಿಸಿ, ೨೦೦, ೧೦೦, ೫೦ ವರ್ಷಗಳಲ್ಲಿ ಆದ ಬದಲಾವಣೆ ಗಮನಿಸಿ. ಮುಂದಿನ ೨೫,೫೦ ವರ್ಷಗಳಲ್ಲಿ ಏನಾಗಬಹುದೆಂದು ಊಹಿಸಲು ಸಾಧ್ಯವೆ?ಊಹಾತೀತ ವಿಷಯ, "ಭಾರತದಲ್ಲಿನ" ಹಿಂದುಗಳ ಬಾಳು. ನನಗೆ ಭಾರತದ ಈಶಾನ್ಯ ರಾಜ್ಯಗಳಲ್ಲಿ (ಅಸ್ಸಾಮ್,ಮೇಘಾಲಯ, ಅರುನಾಚಲ ಪ್ರದೇಶ,ನಾಗಾಲಾಂಡ್,...) ಕರುಣಾಮಯನಾದ ಕ್ರೈಸ್ತನ ಹೆಸರಿನಲ್ಲಿ ಹಾವಳಿ ಕೊಡುತ್ತಿರುವ ಭಯೋತ್ಪಾದಕ ಕ್ರೈಸ್ತ ಸಂಘಟೆನೆಗಳ ಬಗ್ಗೆ ಚರ್ಚಿಸುವುದು ಈ ಲೇಖನದ ಉದ್ದೇಶವಲ್ಲ,ಹಾಗೆಯೆ ದೀನ ಬಂಧು,ಶಾಂತಿ ದೂತನಾಗಿರುವ ಮೋಹಮ್ಮದ್ ಪೈಗಂಬರ್ ಆಗಲಿ ಕರುಣಾಳು ಅಲ್ಲಾನ ಹೆಸರಿನಲ್ಲಿ ಆಗುತ್ತಿರುವ ಹಿಂಸೆ,ಮುಸ್ಲಿಮ್ ಭಯೋತ್ಪಾದಕ ದಾಳಿಗಳ ಬಗ್ಗೆ ಚರ್ಚಿಸುವುದಕ್ಕಲ್ಲ. ಎಲ್ಲಿಂದಲೊ ಬಂದ ಮಂಗ್ಲಾಯ್ಡ್ ಬಾಬರ್,ನಮ್ಮ ಜನರನ್ನು ದಾಳಿ ಮಾಡಿ,ಅತ್ಯಾಚಾರ ನಡೆಸಿ,ಮಕ್ಕಳು ಹೆಂಗಸರು ಎನ್ನದೆ ಕಗ್ಗೊಲೆ ಮಾಡಿದ ಮಾದಕ ವ್ಯಸನಿಯಾಗಿದ್ದ ಬಾಬರ್‌ನ ಸಮಾಧಿಯನ್ನು ಧ್ವಂಸ ಮಾಡಿದ ಭಯೋತ್ಪಾದಕ ಹಿಂದುಗಳ ಬಗ್ಗೆಯು ಅಲ್ಲ.
ಭಾರತದ ನಕ್ಷೆ ದಿನೆ ದಿನೆ ಕುಗ್ಗುತ್ತಿರುವುದು ಆಶ್ಚರ್ಯವಲ್ಲ,ಇವೆಲ್ಲದರ ಕಡೆ ನಮ್ಮ ಗಮನ ಹರಿಯದೆ ಕೇವಲ ಸೆಕ್ಯುಲರ್ ಆಲೋಚನೆಗಳನ್ನೆ ತಲೆಗೆ ತುರುಕಲು ಹವಣಿಸುತ್ತಿರುವ ಭಾರತದ ಇಟಲಿಯ ಸರ್ಕಾರ ಹಾಗು ಅದರ ನಿಯಂತ್ರಣದಲ್ಲಿರುವ ಮೀಡಿಯಾ. ನಮ್ಮ ಗಮನ ಬೇರೆಡೆ ಇದ್ದರೆ ಇಂಥವನ್ನೆಲ್ಲ ನಿರಾಂತಕವಾಗಿ ಮುಂದುವರಿಸಿ ವೋಟ್ ಬ್ಯಾಂಕ್ ಖಾತ್ರಿ ಮಾಡಿಕೊಳ್ಳಬಹುದಲ್ಲವೆ.

ಇಂದು ಜಗತ್ತಿನಲ್ಲಿ ಸುಮಾರು ೧೩೦ ಕೋಟಿ ಮುಸ್ಲಿಮ್‌ ಜನಸಂಖ್ಯೆಯಿದೆ ಅದಕ್ಕೆ ತಕ್ಕ ಹಾಗೆ ೫೭ ಇಸ್ಲಾಮಿಕ್ ರಾಷ್ಟ್ರಗಳು ಸಹ ಇವೆ.ಇರಲಿ ಒಳ್ಳೆಯದು ನಮಗೆ ಅಭ್ಯಂತರವಿಲ್ಲ.೨೦೦ ಕೋಟಿ ಕ್ರೈಸ್ತರ ಜನಸಂಖ್ಯೆಯಿದೆ ಅದಕ್ಕೆ ತಕ್ಕ ಹಾಗೆ ೧೫೦ ಕ್ರೈಸ್ತ ರಾಷ್ಟ್ರಗಳು ಸಹ ಇವೆ.ಇರಲಿ ಒಳ್ಳೆಯದು ನಮಗೆ ಅಭ್ಯಂತರವಿಲ್ಲ.೧೧೦ ಕೋಟಿ ಹಿಂದು ಜನಸಂಖ್ಯೆಯಿದೆ ಅದಕ್ಕೆ ತಕ್ಕ ಒಂದಾದರು ಹಿಂದು ದೇಶವಿದೆಯ?ಉಹು ದುರ್ಬೀನು ಹಾಕಿಕೊಂಡರು ನಿಮಗೆ ಸಿಗುವುದಿಲ್ಲ.ಹಾಳಾಗಿ ಹೋಗಲಿ ನಾವು ಪ್ರತ್ಯೇಕ ರಾಷ್ಟ್ರ ಕೇಳುತ್ತಿಲ್ಲ,ಕನಿಷ್ಟ ಹಿಂದು ರಾಷ್ತ್ರವಾಗಿದ್ದ ಭಾರತವನ್ನು ಸೆಕ್ಯುಲರ್ ಎಂಬ ಪೊಳ್ಳುವಾದದಲ್ಲಿ ಒಡೆದು ಹಾಕಿರುವ ಸರ್ಕಾರದ ನೀತಿಯನ್ನು ವಿರೋಧಿಸಬೇಕಿದೆ.damage contain ಮಾಡುವ ಅವಶ್ಯಕತೆಯಿದೆ.
ಭಾರತದ ಇತಿಹಾಸ ಕೆದಕಿ ನೋಡಿದರೆ ಕಾಣುವುದು ಮುನಿಗಳು,ಸಂತರು ಹಾಗು ಋಷಿಗಳು.ಇವರುಗಳು ಅಂದು ಮಾಡಿರುವ ಅನ್ವಷಣೆಗಳ ಅರ್ಥ ಇಂದಿನ ವಿಜ್ಞಾನಿಗಳಿಗೆ ಅರಿಯದ ವಿಷಯವಾಗಿದೆ.ಭಾರತೀಯರೆಲ್ಲರಿಗು ಭಾರತ ಖಂಡ ಮಾತೃಭೂಮಿಯಾಗಿದೆ, ಆದ್ರೆ ಕೆಲವರಿಗೆ ಭೂಮಿಯಂತಹ ನಿರ್ಜೀವ ವಸ್ತುವನ್ನು ಮಾತೆಗೆ ಹೋಲಿಸುವುದು ಅವರುಗಳ ಧಾರ್ಮಿಕ ಭಾವನೆಗಳಿಗೆ ನೊವ್ವುಂಟು ಮಾಡುವ ಕಾರಣ ವಿಷಯ ಹೀಗೆಯೆ ಇಲ್ಲ.ಮಾತೆಯನ್ನು ವಂದಿಸುವುದು ಅತ್ಯಂತ ನಿಂದಕರ ಅದಕ್ಕೆ ಅಲ್ವೆ ವಂದೆ ಮಾತರಂ ನಾವು ಹೇಳುವುದಿಲ್ಲ, ಏನು ಮಾಡ್ಕೊತ್ಯೊ ಮಾಡ್ಕೊ ಅಂತ ಎದೆ ತಟ್ಟಿಕೊಂಡು ಸವಾಲು ಹಾಕುವುದು. ಇಂತಹ ನಡುವಳಿಕೆಯನ್ನು ಪ್ರಶ್ನಿಸಿದರೆ ಅದು ಕೋಮು ಸೌಹಾರ್ದತೆಯನ್ನು ಕೆದುಕುವ ಕಾರ್ಯ!!! ಸೌಹಾರ್ದತೆಯೆಂದರೆ ಸವಾಲು ಹಾಕಿಸಿಕೊಂಡು ನರವಿಲ್ಲದವರ ತರಹಬದುಕುವುದಾ?

ವೇದ ಪುರಾಣ ಕಾಲದಿಂದಲು ಭಾರತವು ಹಿಂದು ರಾಷ್ಟ್ರವಾಗಿ ಉಳಿದಿತ್ತು ಬೆಳೆದಿತ್ತು ಇತ್ತೀಚಿನವರೆಗು.೧೦೦೦ವರ್ಷ ಯಾರು ಯಾರೋ ಆಳಿ ಹೋದರು ಸಹ ಇಂದು ಭಾರತ ಅಖಂಡ ರಾಷ್ಟ್ರವಾಗಿ ಉಳಿದಿರುವ ಗುಟ್ಟು ಹಿಂದುಗಳ ಸಂಸ್ಕೃತಿ,ಆಧ್ಯಾತ್ಮಿಕ ಮೌಲ್ಯಗಳು ಅಷ್ಟೆ.ಬೇರೆ ಯಾವುದಾದ್ರು ಇಸ್ಲಾಮಿಕ್ ಅಥವ ಕ್ರೈಸ್ತ ದೇಶಗಳಲ್ಲಿ ಈ ರೀತಿಯ ಬೆಳವಣಿಗೆಗಳು ಕಂಡು ಬಂದಿದ್ದರೆ ಇಷ್ಟು ಹೊತ್ತಿಗೆ ಆ ದೇಶವು ಇತಿಹಾಸದ ಪುಟ ಸೇರುತ್ತಿತ್ತು.ನಮ್ಮ ಪ್ರತಿ ಪೂಜಾ ಕಾರ್ಯದ "ಸಂಕಲ್ಪ"ದಲ್ಲಿ ಮೊದಲು ಉಚ್ಚರಿಸುವುದು "ಭರತ ವರ್ಷೆ,ಭರತ ಖಂಡೆ,ಜಂಬೂ ದ್ವೀಪೆ..." ತಾನೆ.ಈ ರೀತಿಯ ದೇಶ ಭಕ್ತಿ/ಪ್ರೇಮವನ್ನು (ಭಾರತಿಯತೆಯನ್ನು) ಜ್ಞಾಪಿಸುವ ಪೂಜಾ ವಿಧಿ ಬೇರೆಯಲ್ಲಿರಲು ಸಾಧ್ಯವೆ? ದೇವರೊಬ್ಬನೆ ನಾಮ ಹಲವು ಎನ್ನುವ ಹಿಂದುವಿನ ಸಾರಥ್ಯದಲ್ಲಿ ಮಾತ್ರ ಈ ರಾಷ್ಟ್ರದ ಭವಿಷ್ಯ ಉಜ್ವಲವಿದೆ ಅದು ಬಿಟ್ಟು, ನೀನು ಪರಮ ಪಾಪಿ,(ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡದಿರಿ ಹುಚ್ಚಪ್ಪಗಳಿರಾ ಎಂದು ದಾಸರು ಈಗ ಹಾಡಿದ್ದರೆ ಹುಚ್ಚಾಸ್ಪತ್ರೆಗೆ ಹಾಕ್ತಿದ್ರೇನೊ ಯಾಕಂದ್ರೆ "ಇವರ"ಪ್ರಕಾರ ಮಾನವ ಪಾಪಿ!!,

ಗೌರವಿಸು ಜೀವನವ,ಗೌರವಿಸು ಚೇತನವ|

ಆರದೊ ಜಗವೆಂದು ಭೇದವೆಣಿಸದಿರು||

ಹೋರುವುದೆ ಜೀವನ ಸಮೃದ್ಧಿಗೋಸುಗ ನಿನಗೆ|

ದಾರಿಯಾತ್ಮೋನ್ನತಿಗೆ - ಮಂಕುತಿಮ್ಮ ||

ಈ ರೀತಿ ಜೀವನದ ಪ್ರಾಮುಖ್ಯತೆಯನ್ನು ಸೊಗಸಾಗಿ ಬಣ್ಣಿಸಿದ ಡಿ.ವಿ.ಜಿಯವರ ಕಗ್ಗವೆಲ್ಲಿ?) ನೀನು ಪಾಪಿಷ್ಟ, ನನ್ ಹತ್ರ ಬಾ ಎಲ್ಲ ಸರಿ ಮಾಡ್ತೀನಿ, ನಾನೆ ಕರ್ತೃ, ಎಲ್ಲಾ ವಿಷಯದಲ್ಲು "ನಾನೆ""ನಾನೆ" ಅಂತ ಪ್ರತಿಪಾದಿಸುವರ ಕೆಳಗಾಗಲಿ, ದಿನಕ್ಕೆ ಐದು ಬಾರಿ ಅಲ್ಲಾ ಒಬ್ಬನೆ ದೇವರು ಪೈಗಂಬರ್ ಒಬ್ಬನೆ ಪ್ರವಾದಿ(ಜೀಸಸ್‌ನು ಸಹ ಪ್ರವಾದಿ ಅಂತ ಒಪ್ಪಿಕೊಳ್ಳುತ್ತಾರೆ, ಆದರೆ ಜೀಸಸ್ ತಪ್ಪು ಹಾದಿಯಲ್ಲಿ ನಡೆದ(ಮುಸ್ಲಿಂ ರೀತಿಯ ಜೀವನ ನಡೆಸಲಿಲ್ಲ ಎನ್ನುವುದು ವಾದ) ಇದೆ ವಿಚಾರವಾಗಿ ಜೀಸಸ್ ಮರು ಹುಟ್ಟುತ್ತಾನೆ ಎಂಬುದನ್ನು ಎರಡು ಸಮುದಾಯದವರು ಒಪ್ಪುತ್ತಾರೆ. ಆದ್ರೆ ಹೇಗೆ ಜೀವನ ನಡೆಸುತ್ತಾನೆ ಎಂಬುದೆ ಇವರ ಆಂತರಿಕ ಘರ್ಷಣೆಗೆ ಕಾರಣ), ಅವನಿಗಿಂತ ಶ್ರೇಷ್ಠ ಮನುಷ್ಯ ಭೂಮಿಯಲ್ಲಿ ಹುಟ್ಟಿಲ್ಲ ಎಂದು ಲೌಡ್ ಸ್ಪೀಕರ್‌ನಲ್ಲಿ ಬೊಬ್ಬೆ ಹೊಡೆಯುವವರ ಸಾರಥ್ಯದಲ್ಲಿ ನಮ್ಮ ದೇಶ ಭವಿಷ್ಯ ಸುಭದ್ರ ಎನಿಸುತ್ತದೆಯೆ? ಇಷ್ಟೆಲ್ಲ ಕಣ್ಣಿಗೆ ರಾಚುತ್ತಿದ್ದರು ಕೈ ಕಟ್ಟಿಕುಳಿತಿರುವ ಪ್ರಮೇಯ ಕೇವಲ ಒಬ್ಬ ಹಿಂದುವಿಗೆ ಮಾತ್ರ ತನ್ನ ರಾಷ್ಟ್ರದಲ್ಲಿ ಅನುಭವಿಸಲು ಸಿಗುತ್ತದೆ. ಭೂಮಿಯ ಯಾವುದೆ ಭಾಗದಲ್ಲಿ ಈ ರೀತಿಯ "ಸೌಹಾರ್ದತೆ"ಕಾಣಲು ಸಾಧ್ಯವಿಲ್ಲ. ಯುಕೆ, ಯುಎಸ್ ನಲ್ಲಿ ಅವರವರ ಧರ್ಮಗಳನ್ನು ನಿರ್ಭಯವಾಗಿ ಯಾವುದೆ ಅಡೆ ತಡೆಯಿಲ್ಲದೆ ಆಚರಿಸುವ ಸ್ವಾತಂತ್ರ್ಯವಿದೆ, ಅಲ್ಲಿ ವಿದ್ಯಾರ್ಹತೆಗೆ ಬರವಿಲ್ಲ, ದುಡ್ಡಿಗೆ ಬರವಿಲ್ಲ, ಸಮಾಜದಲ್ಲಿ ಮೂಲೆಗುಂಪು ಮಾಡಲ್ಪಟ್ಟವರು ಅಂತ ಬೇಧಭಾವವಿಲ್ಲ, ಹೀಗಿದ್ದರು ಸಹ ಅಲ್ಲಿನವರೆ ಅಲ್ಲಿ ಬಾಂಬ್ ಹಾಕುತ್ತಾರೆ.ಇತರೆಡೆ ಅವರ ಸಹಯೋಗವನ್ನು ನೀಡುತ್ತಾರೆ ಇದರರ್ಥವೇನು?ನೀವು ಏನೇ ಸೌಲಭ್ಯ,ವಸತಿ ಸುಭದ್ರತೆ ಕಲ್ಪಿಸಿಕೊಟ್ಟರು ಇಸ್ಲಾಮಿಕ್ ಆಡಳಿತ ತರುವವರೆಗು ನಮ್ಮ ದಾಳಿ ಬಿಡುವುದಿಲ್ಲವೆಂದರ್ಥ ತಾನೆ. ಇಂತಹ ಮೃಗೀಯ ಭಾವನೆಗೆ ಎಲ್ಲರ ಸಹಕಾರವಿರಲು ಸಾಧ್ಯವಿಲ್ಲವೆ ಇಲ್ಲ ಯಾವ ಧರ್ಮದಲ್ಲಾದರು ಸಹ,ಆದ್ರೆ ಮೌನವಾಗಿ ವಿರೋಧಿಸುವವರೆ ಹೆಚ್ಚು ಆದರಿಂದ ಉಪಯೋಗವೇನು, ಈ ಭಯೋತ್ಪಾದಕರೆ ಮೊದಲಿನಿಂದ ಕೊನೆಯವರೆಗು ಮೇಲುಗೈ ಸಾಧಿಸುತ್ತಾರೆ. ಅವರದೆ ಧರ್ಮದವರು ಸಹ ಕೆಲವರು ಮಾಡುವ ನೀಚ ಕಾರ್ಯಗಳಿಗೆ ತಲೆತಗ್ಗಿಸಬೇಕಾಗುತ್ತದೆ.

ಇಂದು "ಮ"ಕಾರಗಳ ಮಧ್ಯೆ ಸಿಲುಕಿ ಮಿಕಿ ಮಿಕಿ ಅಂತ ದಿಟ್ಟಿಸುತ್ತಿರುವ ಮಧ್ಯಮ ವರ್ಗದ ಹಿಂದು/ಭಾರತೀಯನಿಗೆ ಮುಲ್ಲಾ,ಮಿಷಿನರಿ,ಮಾರ್ಕ್ಸಿಸ್ಟ್,ಮೆಕಾಲೆಯಿಸ್ಟ್,ಮೀಡಿಯಾ ಹಾಗು ಮೈನೊ ವಿಚಾರಗಳ ಅರಿವು ಇರಬೇಕಾದ್ದು ಅತ್ಯಾವಶ್ಯಕವಾಗಿದೆ.
ಹಿಂದೆ ೨೦೦,೧೦೦,೫೦ ವರ್ಷಗಳಲ್ಲಿ ಈ ರೀತಿಯೆಲ್ಲಾ ಆಗಿದೆ ಮುಂದಕ್ಕೆ ಏನು ಕಾದಿದೆಯೊ ಅನ್ನುವುದಕ್ಕಿಂತ ಇಷ್ಟು ವರ್ಷಗಳಲ್ಲಿ ಕೈ ಕಟ್ಟಿ ಕೂತ್ವಿ ಮುಂದೆಯು ಸಹ ಇಂತಹ ಅವಘಡ ಆಗುವುದನ್ನು ತಪ್ಪಿಸಲು ಏನಪ್ಪ ಮಾಡಬಹುದು ಅಂತ ಯೋಚಿಸಬೇಕಷ್ಟೆ. ಇವೆಲ್ಲ ಇಂದು ನಮ್ಮ ಸಮಾಜದ ಅವಿಚ್ಛಿನ್ನ ಭಾಗವಾಗಿ ಬೆಳೆದು ಬಿಟ್ಟಿದೆ,ಹೊಡಿ ಬಡಿ ಅನ್ನುವುದಕ್ಕಿಂತ ಇವೆಲ್ಲವುದನ್ನು ಜೊತೆ ಇಟ್ಟುಕೊಂಡು ಹೇಗೆ ಒಳ್ಳೆಯ ಸಮಾಜವನ್ನು ಕಟ್ಟಬಹುದು ಎನ್ನುವುದರ ಆಲೋಚನೆ ಮಾಡಬೇಕಾಗಿರುವುದು ಅನಿವಾರ್ಯವಾಗಿದೆ.

ಇಂದಿನ ಪ್ರಚಲಿತ ದಿನಗಳಲ್ಲಿ ಭಾರತವನ್ನು ಈ ಆರು "ಮ"ಕಾರಗಳು ಆಕ್ರಮಿಸಿವೆ.ಇವರುಗಳಿಗೆ ದೇಶದ ಮೇಲೆ ಎಳ್ಳಷ್ಟು ಪ್ರೀತಿಯಿಲ್ಲ,ಈ ದೇಶದ ಸಂಸ್ಕೃತಿಯೆಂದರೆ ತಿರಸ್ಕಾರ,ಹಿಂದು ಮೌಲ್ಯಗಳು ಕಾಲು ಕಸ,ಹಿಂದು ಎಂಬ ಪದ ಎಂದರೆ ಅಲರ್ಜಿ,ಇವರುಗಳಿಗೆ ತುರಿಕೆ ಶುರುವಾಗುತ್ತದೆ ಈ ಪದ ಕಿವಿಗೆ ಬಿದ್ದಾಕ್ಷಣ.ಇವುಗಳನ್ನು ನಿಯಂತ್ರಣದಲ್ಲಿಡಲಿಲ್ಲವೆಂದರೆ ಮುಂದೊಂದು ದಿನ ಹಿಂದುಗಳು ಬದುಕುವುದಕ್ಕಾಗಿ ಬೇರೆ ರಾಷ್ಟ್ರಗಳತ್ತ ಓಡಬೇಕಾಗುತ್ತದೆ ಇಲ್ಲವಾದರೆ ಇದ್ದೆ ಇದೆಯಲ್ಲ,ಮತಾಂತರ.ಯಾವನು ಶಕ್ತಿಶಾಲಿಯಾಗಿ ಜಾಲ ಹೊಂದಿರುತ್ತಾನೊ ಅವನ ಧರ್ಮಕ್ಕೆ ಮತಾಂತಗೊಳ್ಳಬೇಕಾಗುತ್ತದೆ. ಗೊವಾ ಇನ್ಕ್ವಝಿಷನ್ ಆಗ್ಲಿ ಮುಸ್ಲಿಮ್ ರಾಜರುಗಳು ಹಿಂದೆ ನಮ್ಮ ದೇಶವನ್ನು ಆಳಿದಾಗ ಇದೆ ಅಲ್ಲವೆ ನಡೆದಿದ್ದು ಈಗ ಮತ್ತೊಮ್ಮೆ ಅದೆ ಪುನರಾವರ್ತನೆಗೊಳ್ಳುತ್ತದೆಯೆ ಎಂಬ ಭಯ ಕಾಡಿದರೆ ಆಶ್ಚರ್ಯವಿಲ್ಲ. ಅರಬ್ ದೇಶಗಳಲ್ಲಿ ಕ್ರೈಸ್ತ ಮಿಷಿ-ನರಿಗಳು ಯಾಕೆ ಕೆಮ್ಮೊಕ್ಕೆ ಆಗೊಲ್ಲ ಅಂದ್ರೆ ಮತಾಂತರದಂತಹ ಚಿಲ್ಲರೆ ಕೆಲಸ ಮಾಡಿದರೆ ನಡು ರಸ್ತೆಯಲ್ಲಿ ಕಲ್ಲು ಹೊಡೆದು ಸಾಯಿಸುತ್ತಾರೆ. ಇಲ್ಲಿ ಹಾಗಿಲ್ಲವಲ್ಲ ಅದಕ್ಕೆ ರಾಜಾ ರೋಷವಾಗಿ ತಮ್ಮ ಕಾರ್ಯನಡೆಸುತ್ತಿದ್ದಾರೆ.

ಮುಸ್ಲಿಮ್ ಅಥವ ಕ್ರೈಸ್ತರು ಎಂದರೆ ಈ ಧರ್ಮಗಳ ಸಂಬಂಧಪಟ್ಟ ಎಲ್ಲರು ಅಲ್ಲ, ಕೇವಲ ಕಿತಾಪತಿಗಳಲ್ಲಿ ತೊಡಗಿರುವವರ ಮಾತ್ರ ಅನ್ವಯಿಸುತ್ತದೆ.ಏನ್ ಮಾಡ್ತೀರಾ? ಎಲ್ಲ ಭಯೊತ್ಪಾದಕರು ಮುಸ್ಲಿಂಗಳೆ ಆದ್ರೆ ಎಲ್ಲಾ ಮುಸ್ಲಿಂಗಳು ಭಯೊತ್ಪಾದಕರಲ್ವಲ್ಲ ಹಾಗೆ ಸಮಾಚಾರ.
ಮೊನ್ನೆ ತಾನೆ ಇಂಡಿಯಾ ಟುಡೆ ಕಾನ್‌ಕ್ಲೇವ್ ನಡೆಯಿತು,ಎಮ್.ಜೆ.ಅಕ್ಬರ್ ಹೆಸರಾಂತ ಜರ್ನಲಿಸ್ಟ್ (ಹಿಂದುಗಳನ್ನು ಜರೆಯೊ ಲಿಸ್ಟ್ ಅಲ್ಲಿ ಇವನು ಒಬ್ಬ) ಅವನ ವಾದದ ಪ್ರಕಾರ ಭಯೋತ್ಪಾದಕರು ಯಾವುದೆ ಧರ್ಮಕ್ಕೆ ಸೀಮಿತವಿಲ್ಲ, ಎಲ್ಲರೂ ಕೇವಲ ಮುಸ್ಲಿಂ ಭಯೋತ್ಪಾದಕರ ಬಗ್ಗೆ ಏಕೆ ಆಲೋಚಿಸುತ್ತೀರಾ?ಎಲ್.ಟಿ.ಟಿ.ಈ ನೋಡಿ ಅವರು ಹಿಂದುಗಳಲ್ಲವೆ ಹಾಗಾಗಿ ಹಿಂದು ಭಯೊತ್ಪಾದಕರಾಗಲಿಲ್ಲವೆ?ಅಸ್ಸಾಮ್,ನಾಗಾಲಾಂಡ್ ನಕ್ಸಲ್‌ಗಳನ್ನು ನೋಡಿ ಅವರೆಲ್ಲ ಕ್ರೈಸ್ತ ಸಮುದಾಯಕ್ಕೆ ಸೇರಿದ ಭಯೋತ್ಪಾದಕರಲ್ಲವೆ, ಅವರಲ್ಲಿ ಬೌದ್ಧರು ಇದ್ದಾರೆ ಹಾಗಾಗಿ ಬೌದ್ಧ ಭಯೊತ್ಪಾದಕರು ಇದ್ದಂತಾಗಲಿಲ್ಲವೆ ಹಾಗಾಗಿ ನಾವು ಭಯೊತ್ಪಾದಕರು ಕೇವಲ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂಬ ಆಲೋಚನೆ ಬಿಡಬೇಕು ಅಂದಾಗ ಕರತಾಡನ ಸುರಿಮಳೆಯಾಯಿತು ನನಗೆ ಕೆರದಿಂದ ತಾಡನ ಮಾಡುವ ಹಾಗೆ ಅನಿಸಿತು. ಅವರುಗಳು ಇಂತಹ ಕೂಟ ಏರ್ಪಡಿಸುವುದು ತಮ್ಮ ಸೆಕ್ಯುಲರ್ ಆಲೋಚನೆಗಳನ್ನು ಸಮರ್ಥಿಸುವುದ್ದಕ್ಕೋಸಕರ ಅಷ್ಟೆ ವಿಚಾರ ವಿನಿಮಯಕ್ಕಾಗಲಿ ಅಥವ ವಸ್ತು ಸ್ಥಿತಿಯ ಬಗ್ಗೆ ಚಿಂತನೆ ನಡೆಸುವುದ್ದಕ್ಕಾಗಲಿ ಅಲ್ಲ.

ಎಲ್.ಟಿ.ಟಿ.ಈ ಹಿಂದು ಭಯೋತ್ಪಾದಕರು ಅಂದ್ರೆ ಅವರ ಉದ್ದೇಶ ಹಿಂದುತ್ವವನ್ನು ಶ್ರೀಲಂಕಾದಲ್ಲಿ ಸ್ಥಾಪಿಸುವುದೆ?ಅವರ ಕ್ಷುಲ್ಲಕ ಕಾರಣಗಳಿಗೆ ಬಂದೂಕು ಹಿಡಿದರೆ ಅವರು ಬೌದ್ಧ ಭಯೋತ್ಪಾದಕರಾಗುತ್ತಾರೆಯೆ? ಇಲ್ಲಿ ಮುಸ್ಲಿಂ ಭಯೋತ್ಪಾದಕ ವಿಚಾರವನ್ನು ವಿಷಯಾಂತರ ಮಾಡಿ ಅದನ್ನು ತಿಳಿಗೊಳಿಸಿ ಅದೇನು ದೊಡ್ಡ ವಿಚಾರವಲ್ಲ ಎನ್ನುವುದನ್ನು ಬಿಂಬಿಸುವುದಕ್ಕೆ ಇಷ್ಟೆಲ್ಲಾ ಹುನ್ನಾರ.ಮುಸ್ಲಿಂ ಭಯೋತ್ಪಾದಕನ ಏಕೈಕ ಉದ್ದೇಶ ಇಸ್ಲಾಮ್ ಧರ್ಮವನ್ನು ಸ್ಥಾಪಿಸುವುದು.ಕಾಫಿರರನ್ನು(ಅಲ್ಲಾನನ್ನು ನಂಬದೆ/ಪೂಜಿಸದೆಯಿರುವವರು ನಾವಾದ್ರು ಅಗಬಹುದು ಮುಸ್ಲಿಂ ಆದ್ರು ಆಗಬಹುದು)ಸಾಯಿಸುವುದು,ಶರಿಯತ್ ಕಾನೂನು ಜಾರಿಗೆ ತರುವುದು ನಂತರದ ವಿಚಾರವಾಗುತ್ತದೆ.
ಇಂತಹ ವಿಚಾರಗಳು ನಮ್ಮ ನಿಮ್ಮ ಸ್ನೇಹಿತ ವರ್ಗದಲ್ಲಿ ಇರುತ್ತಾರೆ ಅಂತ ಹೇಳುತ್ತಿಲ್ಲಾ ನೀವು ಹಾಗೆ ತಪ್ಪಾರ್ಥವನ್ನು ಸಹ ಕಲ್ಪಿಸಿಕೊಳ್ಳಬೇಡಿ ಆದ್ರೆ, ಬೆಂಗಳೂರಿನಲ್ಲಿ ಅಭಿಯಂತರರಾಗಿ ಕೆಲಸ ಮಾಡುತ್ತಿದ್ದ ಭಯೋತ್ಪಾದಕರನ್ನು ಸಹ ನಾವು ಮರೆಯಬಾರದಲ್ಲವೆ?ಗ್ಲಾಸ್‌ಗೊ ಭಯೊತ್ಪಾದಕ ದಾಳಿಯಲ್ಲಿ ವೈದ್ಯನೊಬ್ಬ ಶಾಮೀಲಾಗಿದ್ದನಲ್ಲವೆ?LeT/Al-Qeda on a hiring spree,freshers welcome ಅನ್ನೊ ಜಾಹಿರಾತು ಕಾಣಿಸಿಕೊಳ್ಳುವುದು ಬಾಕಿಯಿದೆ.

’ಮ’ಕಾರದಲ್ಲಿ ಮೊದಲಿಗೆ ಮುಲ್ಲಾ/ಮೌಲ್ವಿಯ ಬಗ್ಗೆ ತಿಳಿಯಬೇಕೆಂದರೆ ಇವರುಗಳೆ ಸಮುದಾಯದ ನಿಯಂತ್ರಣಕಾರರು.ಫಾತ್ವ ಹೊರಡಿಸುವುದರ ಮೂಲಕ ಸಮುದಾಯ ಯಾರಿಗೆ ವೋಟ್ ಮಾಡ್ಬೇಕು,ಯಾರ ನಡತೆ ಹೇಗಿರಬೇಕು ಎನ್ನುವುದನ್ನು ರೂಪಿಸುವುದು ಸಹ ಇವರ ಒಂದು ಕಾರ್ಯ.ಆಶ್ಚರ್ಯಕರವೆಂದರೆ UPAಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಮಾಣ ಪತ್ರವನ್ನು ಸಹ ಕೊಟ್ಟಿದೆ ಮೌಲ್ವಿಗಳ ಫಾತ್ವ ಭಾರತದ ಕಾನೂನುಗಳ ಉಲ್ಲಂಘನೆ ಮಾಡುವುದಿಲ್ಲ ಎಂದು. ಇದನ್ನ ಕೋರ್ಟ್ ನಂಬಿರುವುದು ಸಹ ಅಷ್ಟೆ ಆಶ್ಚರ್ಯಕರ.
ಉದಾಹರಣೆಗೆ ಕೇರಳದಲ್ಲಿ ೧೨ MLAಗಳು ಅಲ್ಲಾನ ಹೆಸರನ್ನು ಹೇಳಿಕೊಂಡು ಪ್ರಮಾಣ ವಚನ ಸ್ವೀಕರಿಸಿದರು.ಯಾರೊ ಒಬ್ಬ ವ್ಯಕ್ತಿ ಇದು ಸಂವಿಧಾನದ ವಿರುದ್ಧವಾದ ನೀತಿ ಎಂದು PILಹಾಕಿದರೆ ಕೇರಳ ಹೈ ಕೋರ್ಟ್ ಅದನ್ನು ತಿರಸ್ಕರಿಸಿತು.ಅವನು ಛಲ ಬಿಡದೆ ಸುಪ್ರೀಂ ಕೋರ್ಟ್ ಬಾಗಿಲು ಬಡಿದ ಅಲ್ಲಿಯು ಸಹ ಇದೆ ವಾದ,ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವುದು ಒಂದೆ ಅಲ್ಲಾನ ಹೆಸರಿನಲ್ಲಿ ಸ್ವೀಕರಿಸುವುದು ಒಂದೆ ಎಂದು ತೀರ್ಪಿಟ್ಟಿತು.ಆದ್ರೆ ಬಹುಪಾಲು ಮುಲ್ಲಾ ಹಾಗು ಮೌಲ್ವಿಗಳು "ದೇವರು" ಅನ್ನುವುದು ಏನಿಲ್ಲ "ಅಲ್ಲಾ"ನೆ ಎಲ್ಲಾ ಎಂಬ ಹೇಳಿಕೆ ನೀಡಿದಾರೆ.ಇದರ ಅರ್ಥ ಕೆಲವು ಮೌಲ್ವಿಗಳೆ ದೇವರು ಅಂದ್ರೆ ಅಲ್ಲಾ ಅಲ್ಲ ಎನ್ನುತ್ತಿರಬೇಕಾದರೆ ನಮ್ಮ ಸುಪ್ರೀಂ ಕೋರ್ಟ್ ಎರಡು ಒಂದೆ ಎಂದು ಯಾರಿಗೆ ಸಮರ್ಥನೆ ನೀಡುತ್ತಿದೆ ಎಂದು ಅರ್ಥವಾಗದ ವಿಚಾರ.
ಮುಲ್ಲಾ ಹಾಗು ಮೌಲ್ವಿಗಳ ಉದ್ದೇಶ ಸಮುದಾಯವನ್ನು ಆದಷ್ಟು ಹಿಂದೆಯಿಡುವುದು,ಮುಂದೆ ಬರಲಿಕ್ಕೆ ಬಿಟ್ಟರೆ ಎಲ್ಲಿ ಪ್ರಶ್ನೆಗಳೇಳುತ್ತವೆಯೊ ಎಂಬ ಭಯ.ಏಕೆಂದರೆ ಇವರ ಧರ್ಮದಲ್ಲಿ ಪ್ರಶ್ನೆ ಮಾಡುವ ಹಕ್ಕು ಯಾರಿಗು ಇಲ್ಲ, ಪ್ರಶ್ನೆ ಕೇಳಿದರೆ ಅವನು ಮುಸ್ಲಿಂ ಅಲ್ಲವೆ ಅಲ್ಲ. ಈ ರೀತಿಯಾದ ವಿಚಾರವನ್ನು ಪ್ರತಿಪಾದಿಸುತ್ತದೆ ಧರ್ಮ.ತಮ್ಮ ಧರ್ಮಕ್ಕೆ ಆಪತ್ತು ಬಂದಿದೆ ಎಲ್ಲರು ಒಗ್ಗೂಡಬೇಕು, ಒಬ್ಬೊಬರೆ ತೀರ್ಮಾನ ತೆಗೆದುಕೊಂಡು ಏನು ಕೆಲಸ ಮಾಡಬೇಡಿರಿ ಎಂದು ಭಯ ಹುಟ್ಟಿಸಿ ತಮ್ಮ ನಿಯಂತ್ರಣದಲ್ಲಿಸಿಕೊಳ್ಳುತ್ತಾರೆ.ಈ ಕುಹಕವನ್ನೆಲ್ಲಾ ಅರಿಯುವ ಮುಸ್ಲಿಂರ ಖಾಂಂಈ ಜನರ ಸಂಖ್ಯೆ ಗಣನೆಗೆ ತೆಗೆದು ಕೊಳ್ಳುವ ಹಾಗಿಲ್ಲ ಹಾಗಾಗಿ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿದ್ದರು ಸಹ ಏನೂ ಮಾಡಲಾಗದೆ ಕೈ ಚೆಲ್ಲಿ ಕುಳಿತಿರುತ್ತಾರೆ.

’ಮ’ಕಾರದಲ್ಲಿ ಎರಡನೆಯದಾಗಿ ಮಿಷಿನರಿಗಳು,ಇವರುಗಳ ಕಾರ್ಯ ವೈಖರಿಯಲ್ಲೆ ಬೇಧವಿದೆ ಕೆಲವು ವರ್ಷಗಳ ಹಿಂದೆ ಮತಾಂತರಗೊಂಡ ಕುಟುಂಬಗಳು ಅತ್ಯಂತ ಹುರುಪಿನಿಂದ "ಸೇವೆ"ಸಲ್ಲಿಸಿದರೆ ತಮ್ಮ ಪಾಡಿಗೆ ತಾವಿದ್ದು ಧರ್ಮ ಪಾಲಿಸಿ ಸಮಾಜದಲ್ಲಿ ಹೊಂದಿಕೊಂಡು ಬದುಕುವ ಕ್ರೈಸ್ತ ಕುಟುಂಗಳೊಂದಿಗೆ ಹೋಲಿಸಿ ಅಪಾರ್ಥ ಮಾಡಿಕೊಳ್ಳಬೇಡಿ. ಜಗತ್ತಿನಲ್ಲಿ ಅತ್ಯಂತ ದೊಡ್ಡ ವ್ಯವಹಾರ ಮತ ಪ್ರಚಾರ ಮಾಡುವುದು,ಈ ಕೆಲಸಕ್ಕೆ ಜಗತ್ತಿನ ಎಲ್ಲಾ ಮೂಲಗಳಿಂದ ಹಣ ಬರುವುದು ಅಚ್ಚರಿಯಲ್ಲ.ಜಾಗತೀಕರಣದಿಂದ ಸಣ್ಣ ಪುಟ್ಟ ಕಾರ್ಖಾನೆಗಳೆಲ್ಲ ಮಣ್ಣು ತಿನ್ನಬೇಕಾಯಿತು ಏಕೆಂದರೆ ಎಲ್ಲರು ಅಲ್ಲೆ ಖರೀದಿಸತೊಡಗಿದರು, ವಾಲ್‌ಮಾರ್ಟ್ ಬಂದರೆ ತಳ್ಳುವ ಗಾಡಿಯಲ್ಲಿ ತರಕಾರಿ ಯಾರು ಕೊಳ್ಳುತ್ತಾರೆ? ಎಲ್ಲರು ವಾಲ್‌ಮಾರ್ಟ್‌ಗೆ ಓಡುತ್ತಾರೆ, ತಳ್ಳುಗಾಡಿಯವನು ಹೊಟ್ಟೆಗೆ ಬೇರೆ ಮಾರ್ಗ ನೋಡಿಕೊಳ್ಳಬೇಕು ಇಲ್ಲವಾದರೆ ನೇಣಿಗೆ ಶರಣಾಗಬೇಕು. ಹಾಗೆಯೆ ಹೊರಗಿನಿಂದ ಬೆಂಬಲಿತ "ನರಿ"ಗಳು ಬಂದು ಆಮಿಷವೊಡ್ಡಿ ಸ್ಥಳೀಯ ಆಚರಣೆಗೆ ಬೆಂಕಿಯಿಟ್ಟು "kingdom of christ"ಸ್ಥಾಪಿಸಿ ಜಾಗ ಖಾಲಿ ಮಾಡುವ ಹೊತ್ತಿಗೆ ಮೂಲ ಆಚರಣೆ/ಧರ್ಮಕ್ಕೆ ಕೊಳ್ಳಿಯಿಟ್ಟಾಗಿರುತ್ತದೆ.ಒರ್ರಿಸ್ಸಾದಲ್ಲಿ ೮೪-ವರ್ಷದ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿಯವರನ್ನೆ ಹತ್ಯೆಗೈಸಿದರಲ್ಲ? ಇವರು ಮಾಡಿದ ತಪ್ಪು ಮತಾಂತರಗೊಂಡ ಹಿಂದುಗಳನ್ನು/ದಲಿತರನ್ನು ಮತ್ತೆ ಹಿಂದುತ್ವಕ್ಕೆ ತರುವ ಶುದ್ಧೀಕರಣ ಕಾರ್ಯ ಮಾಡಿ ಸಫಲರಾಗಿದ್ದರು.ಇವರು ಇದ್ದರೆ ತಮ್ಮ ಬೇಳೆ ಬೇಯುವುದಿಲ್ಲವೆಂದು ಅವರಿಗೆ ಕೊಲೆ ಮಾಡಿಸಿದರು.
"ಸತ್ಯದರ್ಶಿನಿ"ಯಂತಹ ಸತ್ಯ ಕಥೆಯನ್ನೆ ಬಿಂಬಿಸಿದ ಭೂಪರಲ್ಲವೆ "ನರಿ"ಗಳು,ಕೃಷ್ಣನನ್ನು ೧೬೦೦೦ ಸ್ತ್ರೀಯರೊಂದಿಗೆ "ಸಹವಾಸ"ಮಾಡಿದ ಮನುಷ್ಯನನ್ನು ದೇವರು ಅಂತ ಹೇಗೆ ಒಪ್ಪಿಕೊಳ್ಳುತ್ತೀರಿ ಎಂಬುದನ್ನು ಸಹ ವಾದ ಮಾಡಿದರು.ಪಾಪ ವಿಷಯ ಅರಿಯದ ಮುಗ್ಧರು, ಹೌದಲ್ವ ಈ ಪ್ರಶ್ನೆ ನ್ಯಾಯ ಸಮ್ಮತವಾಗಿದೆ ಎಂದು ತಲೆಯಾಡಿಸಬಹುದು ಆದ್ರೆ ಅದು ಹಾಗಲ್ಲವಲ್ಲ..೧೬೦೦೦ ಸ್ತ್ರೀಯರು ಅವನನ್ನು ಮನಸ್ಸಿನಲ್ಲೆ ಆರಾಧಿಸುತ್ತಿದ್ದರು, ಅವನನ್ನೆ ಸರ್ವಸ್ವ ಎಂದು ಪರಿಗಣಿಸಿದ್ದರು.ಹಾಗೆಂದ ಮಾತ್ರಕ್ಕೆ ಅವನಿಗೆ ಅವರ ಜೊತೆಗೆಲ್ಲ ಸಂಬಂಧವಿತ್ತೆಂದು ಹೇಳಲಿಕ್ಕಗುತ್ತದೆಯೆ?ಇವರುಗಳು ಯಾರ ಹತ್ತಿರವು ಪ್ರಮಾಣ ಮಾಡಿರಲಿಲ್ಲ ಕೃಷ್ಣನೆ ನನ್ನ ಗಂಡನೆಂದು.ಈಗ ಪ್ರತಿ ಹೆಣ್ಣು ಸಹ ಕ್ರೈಸ್ತ ಧರ್ಮದಲ್ಲಿ "ನನ್" ಆಗಬೇಕೆಂದರೆ "ಏಸುವೆ ತನ್ನ ಗಂಡ"ನೆಂದು ಪ್ರಮಾಣ ಮಾಡಬೇಕು ಇದರ ಅರ್ಥವೇನು?? :-0 ಈ ಪ್ರಮಾಣದ ಪ್ರಕಾರ ಜೆಸಸ್‌ಗೆ ಕೋಟಿ ಕೋಟಿ ಹೆಂಡಿರು!!! ಕೃಷ್ಣ ನ ಲೆಖ್ಖ ೧೬,೦೦೦ಕ್ಕೆ ಮುಗಿದರೆ ಏಸುವಿನದ್ದು ನಿತ್ಯ ಏರುವ ಖಾತೆ. - ಇದು ಕೆಸರೆರಚುವ ಪ್ರಯತ್ನವಲ್ಲ ಆರೋಪವನ್ನು ಕೇಳಿ ಉದ್ಭವಸಿದ ಪ್ರಶ್ನೆ.
ಮುಗ್ಧರನ್ನು ಬುಟ್ಟಿಗೆ ಹಾಕಿ ದುಡ್ಡಿನಿಂದಲೊ ದರ್ಪದಿಂದಲೊ ಮತಾಂತರ ಮಾಡಿ ಕೊನೆಗೆ ಹಿಂದುಗಳು ಅನ್ನೊರು ಒಂದು ಕಾಡು ಜನಾಂಗದವರು ಕರ್ತೃವನ್ನು ಪೂಜಿಸದೆ ಕಲ್ಲುಗಳಿಗೆ ಹೂವ ಹಾರ ಹಾಕಿ ಅದನ್ನೆ ಪೂಜೆ ಅಂತ ಕರಿತಿದ್ರು ಅಂತ ಇತಿಹಾಸ ಸೃಷ್ಟಿಸೊಕ್ಕೆ ಹೊರಟಿರೋರ ಬಗ್ಗೆ ಎಚ್ಚರದಿಂದಿರದೆ ಅವರು ಎನಾದ್ರು ಮಾಡಿಕೊಳ್ಲಿ ನಮ್ಗೇನು ಅಂತ ಸುಮ್ನೆ ಕೂತ್ರೆ ಸರಿನಾ?

ಮುಂದುವರೆಯುವುದು.....

ನಾನು ಮುಂದಿಟ್ಟಿರುವ ವಿಚಾರಗಳು ಯಾರಿಗಾದರು ನೋವ್ವುಂಟು ಮಾಡಿದಲ್ಲಿ ಕ್ಷಮೆಯಾಚಿಸುತ್ತೇನೆ, ಆದರೆ ಸತ್ಯ ಯಾವಾಗಲು ಕಹಿಯಲ್ಲವೆ!!! ನನ್ನ ಮಾತುಗಳು ಸುಳ್ಳು ಎನ್ನುವುದಾದರೆ , ದಯವಿಟ್ಟು ಅದು ಸುಳ್ಳು ಎಂಬುದನ್ನು ರುಜುಮಾಡಲು ಆಧಾರಗಳನ್ನು ಕೊಟ್ಟು ಹೇಳಿ. ಇಲ್ಲವಾದರೆ ನಿಮ್ಮ ನಂಬಿಕೆಯೆ ಯಾವಾಗಲು ಸತ್ಯವಾಗೆ ಇರುತ್ತದೆ ಹಾಗೆಯೆ ಇರಲಿ,ಒಳ್ಳೆಯದು ನನಗೆ ಅಭ್ಯಂತರವಿಲ್ಲ. ತಪ್ಪಾದ ಮಹಿತಿಯನ್ನು ನಾನು ಹೇಳಿದ್ದರೆ ಅದನ್ನು ತೆಗೆದು ಹಾಕಲು ನಾನು ತಯಾರಿದ್ದೇನೆ.

No comments: