Tuesday, June 29, 2010

ಅಳುತ್ತಿರುವ ನಿಮ್ಮ ವಿಂಡೊಸ್‌ ಕಂಪ್ಯೂಟರ್ಅನ್ನು ಟ್ವೀಕಿಸಿ, ಚುರುಕುಗೊಳಿಸಿ...ಕೊನೆ ಕಂತು

on April 29, 2009

ಮೂರಕ್ಕೆ ಮುಕ್ತಾಯ ಮಾಡೊಣ ಅಂತ ಮಿಕ್ಕ ಎಲ್ಲಾ ಟ್ವೀಕ್‌ಗಳನ್ನು ಇದರಲ್ಲೆ ತುರುಕ್ತಿದೀನಿ.
ಈ ಲೇಖನದ ಟ್ವೀಕ್‌ಗಳನ್ನು ಮಾಡುವ ಮೊದಲು ನಾವು "ಸಿಸ್ಟಂ ರೆಜಿಸ್ಟರ್ಸ್" ಬಗೆ ತಿಳ್ಕೊಂಡು ಮುಂದುವರಿಯೋದು ಅತ್ಯಾವಶ್ಯಕ.
"ಸಿಸ್ಟಂ ರೆಜಿಸ್ಟರ್ಸ್"ಅನ್ನೋದು ವಿಂಡೊಸ್‌ನ ತುಂಬಾ ಆಂತರಿಕ ವಿಷಯ, ತಿಳಿಯದೆ ಕೈ ಹಾಕಿ ಕುಲಗೆಡಿಸಿದ್ರೆ ವಿಂಡೊಸ್‌ಅನ್ನು ಮತ್ತೊಮ್ಮೆ ಸ್ಥಾಪಿಸಬೇಕಾಗುತ್ತದೆ ಹಾಗಾಗಿ ಎಚ್ಚರ!!!
ನಿಮ್ಮ ಸಿಸ್ಟಂನಲ್ಲಿ ಸ್ಥಾಪಿಸಿ/ಅನುಸ್ಥಾಪಿಸುವ ಪ್ರತಿ ಒಂದು ತಂತ್ರಾಶದ ಆಯ್ದ ಕೆಲವು ಮಾಹಿತಿಯನ್ನು "ಸಿಸ್ಟಂ ರೆಜಿಸ್ಟರ್ಸ್"ಅನ್ನೊ ಒಂದು ವಿಭಾಗದಲ್ಲಿ ವಿಂಡೊಸ್‌ ಕಲೆಹಾಕಿರುತ್ತದೆ.ಪ್ರತಿ ತಂತ್ರಾಶವು ಹೇಗೆ ಶುರು ಆಗಬೇಕು,ಅವುಗಳ ಗುಣ ಧರ್ಮಗಳ ಮಾಹಿತಿ,ಹೀಗೆಯೆ ಅನೇಕ ಮಾಹಿತಿ ಇರುತ್ತದೆ. ಹಾಗಾಗಿ ನಾವು ಇಲ್ಲಿ ಮಾಡುವ ಬದಲಾವಣೆಗಳು ನೇರವಾಗಿ ತಂತ್ರಾಶ ಹೇಗೆ ಕೆಲಸ ಮಾಡುತ್ತದೆ ಎಂಬುದರ ಮೇಲೆ ಪ್ರಭಾವ ಬೀರುತ್ತದೆ.ಇಲ್ಲಿ ಕೆಲಸ ಕೆಟ್ಟರೆ ಅಲ್ಲೂ ಸಹ ಕೆಟ್ಟಿತು ಅಂದುಕೊಳ್ಳಿ, ಹಾಗಾಗಿ ಬದಲಾವಣೆಯನ್ನು ತಿಳಿದು ಜಾಗೃತೆಯಿಂದ ಸೂಚಿಸಿದಷ್ಟೆ ಮಾಡಿ.

ವಿಂಡೋಸ್‌‌ನ ಸಿಸ್ಟಂ ಕಡತಗಳೆ ಕೈ ಕೊಟ್ಟಲ್ಲಿ ಮರುಸ್ಥಾಪನಾ ಬಿಂದು ಉಪಯೋಗಿಸಿ ಹೇಗೆ ಕಾರ್ಯಶೀಲತೆಯನ್ನು ಮರಳಿ ಪಡೆಯಬಹುದೊ ಹಾಗೆಯೆ "ಸಿಸ್ಟಂ ರೆಜಿಸ್ಟರ್ಸ್" ಜೊತೆ ಕೆಲಸ ಮಾಡುವಾಗ ಸಹ ಎಲ್ಲ ಮಾಡಿದ ಎಲ್ಲಾ ಬದಲಾವಣೆಗಳನ್ನು ಮರುಪಡೆಯಲು "ರೆಜಿಸ್ಟ್ರಿ ಬ್ಯಾಕ್‌ಅಪ್" ಮಾಡಿಕೊಳ್ಳಬಹುದು. ಆದ್ರೆ ಇದನ್ನು ನಾವೆ ಕೈಯ್ಯಾರೆ ಮಾಡ್ಬೇಕಾಗುತ್ತದೆ ಕಂಪ್ಯೂಟರ್ ತಾನಗಿಯೆ ಮಾಡುವುದಿಲ್ಲ.
"ರೆಜಿಸ್ಟ್ರಿ" ಜೊತೆ ಕೆಲಸ ಮಾಡಲು
೧.start->run ಎಂಬುದನ್ನು ಕ್ಲಿಕ್ಕಿಸಿ
೨.ಪುಟಿಯುವ ಇನ್ಪುಟ್ ಬಾಕ್ಸ್ ನಲ್ಲಿ regedit ಎಂದು ಟೈಪಿಸಿ "ಸರಿ" ಗುಂಡಿಯನ್ನು ಒತ್ತಿ.

ಈಗ ನೀವು ವಿಂಡೊಸ್‌ನ ಆಂತರಿಕ ಜಗತ್ತಿಗೆ ಹೆಜ್ಜೆ ಇಟ್ಟಿದೀರಾ,ಪ್ರತಿ ಹೆಜ್ಜೆಯನ್ನು ಸಾವಧಾನವಾಗಿ ಇಡಿ,ಅಪಘಾತಕ್ಕೆ ಅವಸರವೆ ಕಾರಣ!!!.
ಈಗ "ರೆಜಿಸ್ಟ್ರಿ ಸಂಕಲನ"ಎಂಬ ವಿಂಡೊ ನೋಡಬಹುದು ಅದನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು (ಎಡ ಹಾಗು ಬಲ ಭಾಗ) ಹಾಗು ಎರಡು ಬಾರ್ ಇರುತ್ತವೆ (ಮೆನು ಹಾಗು ಸ್ಟೇಟಸ್)
ಮೆನು ಬಾರ್ ಮೇಲೆ ಇದ್ದರೆ ಸ್ಟೇಟಸ್ ಬಾರ್ ಕೆಳಗೆ ಇರುತ್ತದೆ.ನೀವು "ರೆಜಿಸ್ಟ್ರಿ ಸಂಕಲನ" ವಿಂಡೊನ ಎಡಭಾಗದಲ್ಲಿ ಕಾಣುವ ಮೈ ಕಂಪ್ಯೂಟರ್ ಅನ್ನು ಸಿಂಗಲ್ ಕ್ಲಿಕ್ ಮಾಡಿ ಆಯ್ಕೆ ಮಾಡಿದಾಗ ಅದೆ ವಿಂಡೊನ ಕೆಳಭಾಗದಲ್ಲಿರುವ ಸ್ಟೇಟಸ್ ಬಾರ್‌, ಆಯ್ಕೆ ಮಾಡಿದ್ದನ್ನು ತೋರಿಸುತ್ತದೆ. ಇದೆ ರೀತಿಯಾಗಿ ನೀವು HKEY_CLASSES_ROOT(ಮೈ ಕಂಪ್ಯೂಟರ್‌ನ ಎಡ ಭಾಗದಲ್ಲಿರುವ + ಚಿನ್ಹೆಯನ್ನು ಕ್ಲಿಕ್ಕಿಸಿದಾಗ ಇದು ಕಾಣುತ್ತದೆ) ಎಂಬುದನ್ನು ಆಯ್ಕೆ ಮಾಡಿದರೆ ಸ್ಟೇಟಸ್ ಬಾರ್‌ನಲ್ಲಿ My Computer\HKEY_CLASSES_ROOT ಎಂದು ತೋರಿಸುತ್ತದೆ, ಹೀಗೆ ಸ್ಟೇಟಸ್ ಬಾರ್‌ನ ಸಹಾಯದಿಂದ ನಾವು ಯಾವ ಫೋಲ್ಡರ್‌ಅನ್ನು ಆಯ್ಕೆ ಮಾಡಿದ್ದೀವಿ ಎಂದು ತಿಳಿಯಬಹುದು.

ಈಗ ಬ್ಯಾಕ್‌ಅಪ್ ಮಾಡಲು "ರೆಜಿಸ್ಟ್ರಿ ಸಂಕಲನ" ವಿಂಡೊನಲ್ಲಿ ಕಾಣುವ ಮೈ ಕಂಪ್ಯೂಟರ್ ಮೇಲೆ ಒಂಡು ಬಾರಿ ಕ್ಲಿಕ್ ಮಾಡಿ,ಸ್ಟೇಟಸ್ ಬಾರ್‌ನಲ್ಲಿ ಒಮ್ಮೆ ನೋಡಿ ಖಾತ್ರಿ ಮಾಡಿಕೊಳ್ಳಿ. ನಂತರ ಮೆನು ಬಾರ್‌‍ನಲಿರುವ "ಕಡತ"ಮೆನು ಮೇಲೆ ಕ್ಲಿಕ್ಕಿಸಿ,ಅಲ್ಲಿ ಕಾಣುವ "ರಫ್ತು" ಎಂಬುದನ್ನು ಆಯ್ಕೆಮಾಡಿದಾಗ ಮತ್ತೊಂದು ಸಣ್ಣ ವಿಂಡೊ ಪುಟಿಯುತ್ತದೆ ಅದೆ "ರೆಜಿಸ್ಟ್ರಿ ರಫ್ತು ಕಡತ"ವಿಂಡೊ. ಇದರಲ್ಲಿ ನಿಮಗೆ ಸೃಷ್ಟಿಸಲಾಗುವ ಕಡತವನ್ನು ಎಲ್ಲಿ ಉಳಿಸಬೇಕೆಂಬುದರ ವಿವರ ಹಾಗು ಉಳಿಸಲು ಮಾಹಿತಿಯ ವ್ಯಾಪ್ತಿಯನ್ನು ತಿಳಿಸಬೇಕಾಗುತ್ತದೆ, ಚುಟುಕಾಗಿ ಹೇಳಬೇಕಾದರೆ ಎಷ್ಟು ಮಾಹಿತಿಯನ್ನು ಎಲ್ಲಿ ಉಳಿಸಬೇಕೆಂದು ತಿಳಿಸುವುದೆ ಈ ಕಾರ್ಯದ ಉದ್ದೇಶ. ಮುಂದೆ ಅಕಸ್ಮಾತ್ ರೆಜಿಸ್ಟ್ರಿ ಕೆಟ್ಟಲ್ಲಿ, "ಈ" ಸ್ಥಳದಿಂದ "ಈ" ಕಡತದಲ್ಲಿರುವ "ಈ" ವ್ಯಾಪ್ತಿಯಲ್ಲಿರುವ ಮಾಹಿತಿಯನ್ನು ಮರುಸ್ಥಾಪಿಸಬೇಕಾದಲ್ಲಿ ಸಹಾಯಕ್ಕೆ ಬೇಕಾದ "ಈ"ಗಳನ್ನು ಸೂಚಿಸಿ ಈ ರೀತಿ ಬ್ಯಾಕ್‌ಅಪ್ ತೆಗೆದುಕೊಂಡಿದ್ದನ್ನು ಬಳಸುವುದೆ ಈ ಕಾರ್ಯದ ಉದ್ದೇಶ.
"ರೆಜಿಸ್ಟ್ರಿ ಸಂಕಲನ" ವಿಂಡೊನ ಕೆಳಭಾಗದಲ್ಲಿ ರಫ್ತು ವ್ಯಾಪ್ತಿ ಎಂಬ ಸಣ್ಣ ವಿಭಾಗವಿರುತ್ತದೆ, ಇಲ್ಲಿ "ಎಲ್ಲಾ" ಎಂಬುದನ್ನು ಆಯ್ಕೆ ಮಾಡಿ. ನಂತರ ಈ ವಿಭಾಗದ ಮೇಲ್ಗಡೆ ಕಾಣುವ "ಕಡತದ ಹೆಸರು" ಎಂಬಲ್ಲಿ c:\registry_backup\regbackup ಎಂದು ಟೈಪಿಸಿ "ಉಳಿಸು"ಎನ್ನುವ ಗುಂಡಿಯನ್ನು ಒತ್ತಿ.
ಈಗ ವಿಂಡೋಸ್ ನಿಮ್ಮ ಆದೇಶವನ್ನು ಪ್ರಾಮಾಣಿಕವಾಗಿ c: ಡ್ರೈವ್‌ನಲ್ಲಿ registry_backup ಎಂಬ ಹೊಸದೊಂದು ಫೋಲ್ಡರ್ ಸೃಷ್ಟಿಸಿ ಅದಕ್ಕೆ regbackup ಎಂದು ನಾಮಕರಣವನ್ನು ಸಹ ಮಾಡಿ .reg ಎಂಬ ಎಕ್ಸ್ಟೆನ್‌ಷನ್‌ನೊಂದಿಗೆ ಉಳಿಸಿರುತ್ತದೆ.
ನೀವೇನಾದರು ರೆಜಿಸ್ಟ್ರಿಯಲ್ಲಿ ಬದಲಾವಣೆ ಮಾಡಿ, ಎಲ್ಲಾ ಬದಲಾವಣೆಗಳನ್ನು ಅಳಿಸಬೇಕೆಂದರೆ ಬದಲಾವಣೆ ಮಾಡುವ ಮುನ್ನ ಬ್ಯಾಕ್‌ಅಪ್ ಮಾಡಿದ ಕದತವನ್ನು,ಕಡತ ಮೆನುಗೆ ಹೋಗಿ ಅಲ್ಲಿ "ಅಮದು" ಎನ್ನುವುದನ್ನು ಆಯ್ಕೆಮಾಡಿ ನೀವು ಉಳಿಸಿದ .reg ಅನ್ನು ಸೂಚಿಸಿ "ತೆರೆ" ಎಂಬ ಗುಂಡಿಯನ್ನು ಒತ್ತಬೇಕು ಆಗ ಎಲ್ಲ ಬದಲಾವಣೆಗಳು ಅಳಿಸಿಹೋಗುತ್ತವೆ. ಸ್ವಲ್ಪ ತಡೆಯಿರಿ ನೀವು ಮಾಡಿದ ಬದಲಾವಣೆಗಳು ಇನ್ನು ಸಕ್ರಿಯವಾಗಿರುವುದಿಲ್ಲಾ, ಹಾಗೆ ಸಕ್ರಿಯಗೊಳಿಸಲು F5 ೨-೩ ಬಾರಿ ಒತ್ತಬೇಕು ಅಥವಾ ಮೆಷೀನ್‌ಅನ್ನು ಪುನರ್ಶುರು ಮಾಡಬೇಕು.
ಇಲ್ಲಿಗೆ ರೆಜಿಸ್ಟ್ರಿಯ ಅಮದು ಹಾಗು ರಫ್ತಿನ ವಿಚಾರ ಮುಗಿಯಿತು.
ಮುಂದಕ್ಕೆ...
ರೆಜಿಸ್ಟ್ರಿಯಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡಿ ನಮ್ಮ ಕಂಪ್ಯೂಟರ್‌ಅನ್ನು ಚೂಟಿ ಮಾಡುವ ವಿಷಯದ ಕಡೆ ಗಮನ ಹರಿಸೋಣ :)

ಫೋಲ್ಡರ್ ಅನ್ನು ಆದಷ್ಟು ಬೇಗನೆ ತೆರೆಯುವುದು - ಕೊನೆಯ ಸರ್ತಿ ಫೋಲ್ಡರ್ ಹಾಗು ಅದರ ಉಪ ಫೋಲ್ಡರ್ಅನ್ನು ಯಾವ ಸಮಯದಲ್ಲಿ ತೆರೆಯಲಾಗಿತ್ತು ಎಂಬ ಮಾಹಿತಿಯನ್ನು ಜ್ಞಾಪಕ ಇಟ್ಟುಕೊಳ್ಳದೆ ಇರುವ ಮೂಲಕ ಕೆಲಸ ಕಮ್ಮಿ ಕೊಟ್ಟು ವಿಂಡೊಸ್‌ಅನ್ನು ಚೂಟಿಯಾಗೊಸೋಣ
೧.start->run ಎಂಬುದನ್ನು ಕ್ಲಿಕ್ಕಿಸಿ
೨.ಪುಟಿಯುವ ಇನ್ಪುಟ್ ಬಾಕ್ಸ್ ನಲ್ಲಿ regedit ಎಂದು ಟೈಪಿಸಿ "ಸರಿ" ಗುಂಡಿಯನ್ನು ಒತ್ತಿ.
೩.ರೆಜ್ ಎಡಿಟ್ ತೆರೆದ ನಂತರ ಮೈ ಕಂಪ್ಯೂಟರ್‌ನ ಕೆಳಗೆ ಐದು ಫೋಲ್ಡರ್‌ಗಳನ್ನು ಕಾಣಬಹುದು, ಇದರಲ್ಲಿ HKEY_LOCAL_MACHINE ಎಂಬ ಫೋಲ್ಡರ್‌ನ ಪಕ್ಕದಲ್ಲಿರುವ "+" ಚಿನ್ಹೆಯನ್ನು ಒಮ್ಮೆ ಕ್ಲಿಕ್ಕಿಸಿ
೪.ಅದರಳೊರಗಿರುವ ಉಪ-ಫೋಲ್ಡರ್‌ಗಳಲ್ಲಿ System ಎಂಬ ಫೋಲ್ಡರ್‌ನ ಪಕ್ಕದಲ್ಲಿರುವ "+" ಚಿನ್ಹೆಯನ್ನು ಒಮ್ಮೆ ಕ್ಲಿಕ್ಕಿಸಿ.
೫.ನಂತರ ಅದರಳೊರಗಿರುವ ಉಪ-ಫೋಲ್ಡರ್‌ಗಳಲ್ಲಿ CurrentControlSet ಎಂಬ ಫೋಲ್ಡರ್‌ನ ಪಕ್ಕದಲ್ಲಿರುವ "+" ಚಿನ್ಹೆಯನ್ನು ಒಮ್ಮೆ ಕ್ಲಿಕ್ಕಿಸಿ.
೬.ನಂತರ ಅದರಳೊರಗಿರುವ ಉಪ-ಫೋಲ್ಡರ್‌ಗಳಲ್ಲಿ Control ಎಂಬ ಫೋಲ್ಡರ್‌ನ ಪಕ್ಕದಲ್ಲಿರುವ "+" ಚಿನ್ಹೆಯನ್ನು ಒಮ್ಮೆ ಕ್ಲಿಕ್ಕಿಸಿ.
೭.ನಂತರ ಅದರಳೊರಗಿರುವ ಉಪ-ಫೋಲ್ಡರ್‌ಗಳಲ್ಲಿ FileSystem ಎಂಬ ಫೋಲ್ಡರ್‌ನ ಮೇಲೆ ಒಮ್ಮೆ ಕ್ಲಿಕ್ಕಿಸಿ.
೮.ಸ್ಟೇಟಸ್ ಬಾರ್‌ನಲ್ಲಿ “HKEY_LOCAL_MACHINE\System\CurrentControlSet\Control\FileSystem” ಎಂಬುದು ಡಿಸ್ಪ್ಲೆ ಆಗಿರಬೇಕು
೮.ಈಗ ವಿಂಡೋನ ಬಲಭಾಗದಲ್ಲಿ ನಿಮಗೆ ಕೆಲವು ರೆಜಿಸ್ಟ್ರಿ,ಅದರ ಬಗೆ ಹಾಗು ಅದರ ಡೇಟಾ ಮೌಲ್ಯಗಳ ಪಟ್ಟಿ ಕಾಣುತ್ತದೆ.
೯.ಈ ಪಟ್ಟಿಯಲ್ಲಿ NtfsDisableLastAccessUpdate ಎಂಬ ರೆಜಿಸ್ಟರ್ ಇದೆಯೆ ಎಂಬುದನ್ನು ನೋಡಿ.
೧೦.ಅದು ಇದ್ದರೆ ಅದರ ಡೇಟಾ (೧) ಎಂಬುದಾಗಿದೆಯೆ ಎನ್ನುವುದನ್ನು ನೋಡಿ,()ರೊಳಗೆ ಸೊನ್ನೆ ಇರಕೂಡದು ಅದು "ಒಂದು" ಆಗಿರಬೇಕು.
೧೧.ಅದು ಸೊನ್ನೆ ಆಗಿದ್ದರೆ NtfsDisableLastAccessUpdateನ ಮೇಲೆ ಎರಡು ಬಾರಿ ಕ್ಲಿಕ್ ಮಾಡಿ, ಪುಟಿಯುವ ಪುಟಾಣಿ ವಿಂಡೊನಲ್ಲಿ "ಡೇಟಾ ಮೌಲ್ಯ" ೧(ಒಂದು) ಎಂದು ನಮೂದಿಸಿ ಸರಿ ಎನ್ನುವ ಗುಂಡಿಯನ್ನು ಒತ್ತಿ.
೧೨.ಈಗ NtfsDisableLastAccessUpdateನ ರೆಜಿಸ್ಟ್ರಿ ಡೇಟಾ ೧ ಎಂದು ಸೂಚಿಸುತ್ತಿರಬೇಕು.

ಅಕಸ್ಮಾತ್ “HKEY_LOCAL_MACHINE\System\CurrentControlSet\Control\FileSystem” ಎಂಬ ಹಾದಿಯಲ್ಲಿ NtfsDisableLastAccessUpdate ಎಂಬ ರೆಜಿಸ್ಟ್ರಿ ಇಲ್ಲವಿರಲಿಲ್ಲವೆಂದರೆ ಚಿಂತಿಸುವ ಅಗತ್ಯವಿಲ್ಲ,ಅದನ್ನು ನೀವೆ ಸೃಷ್ಟಿಸಿ ಬದಲಾಯಿಸಬೇಕು. ಸೃಷ್ಟಿಸುವ ವಿಧಾನ :

೧.“HKEY_LOCAL_MACHINE\System\CurrentControlSet\Control\FileSystem” ಎಂಬ ಹಾದಿಯಲ್ಲಿ ವಿಂಡೊನ ಬಲಭಾಗದಲ್ಲಿ ಕಾಣುವ ಖಾಲಿ ಜಾಗದಲ್ಲಿ ಬಲ ಕ್ಲಿಕ್ ಮಾಡಿ.
೨.ಪುಟಿಯುವ ಮೆನುವಿನಲ್ಲಿ "ಹೊಸ" ಎಂಬುವುದರೊಳಗೆ DWORD Value ಎಂಬುದನ್ನು ಆಯ್ಕೆ ಮಾಡಿ.
೩.ಮಾಡಿದ ನಂತರ New Value #1 ಎಂಬ ಹೆಸರಿನೊಂದಿಗೆ ಹೊಸದಾದ ರೆಜಿಸ್ಟ್ರಿ ಸೃಷ್ಟಿಯಾಗುತ್ತದೆ, ಬೇರೆ ಕಡೆ ಕ್ಲಿಕ್ ಮಾಡುವ ಮುನ್ನ ಅದಕ್ಕೆ NtfsDisableLastAccessUpdate ಎಂಬ ಹೆಸರು ಕೊಡಿ.(ಇಲ್ಲಿಂದಲೆ ನಕಲಿಸಿದರೆ ಒಳಿತು ಇಲ್ಲವಾದಲ್ಲಿ ಸಣ್ಣಾಕ್ಷರ ಹಾಗು ದೊಡ್ಡಾಕ್ಷರಗಳ ಗಮನ ಇಟ್ಟುಕೊಂಡು ನೀವೆ ಹೆಸರನ್ನು ನಮೂದಿಸಿ).
೪.ಮೂಲಭೂತವಾಗಿ ಈ ಹೊಸದಾಗಿ ಸೃಷ್ಟಿಯಾದ ರೆಜಿಸ್ಟ್ರಿಯ ಮೌಲ್ಯ ಸೊನ್ನೆಯಾಗಿರುತ್ತದೆ,ಅದನ್ನು ಒಂದು ಎಂದು ಬದಲಾಯಿಸಲು ಮೇಲೆ ಸೂಚಿಸಿದಂತೆ ಕ್ರಮಾಂಕ ೧೧ನ್ನು ನೋಡಿ.

ಇದು ಮಾಡಿದ ನಂತರ F5 ೨-೩ ಮೂರು ಬಾರಿ ಒತ್ತಿ :)

ವಿಂಡೊಸ್ ಸಜ್ಜಾಗುವ ಸಮಯವನ್ನು ಕಡಿಮೆಗೊಳಿಸುವುದು.
ವಿಂಡೋಸ್ ಸಜ್ಜಾಗಲು ಹಲವಾರು ಕಡತಗಳನ್ನು ಮಾಹಿತಿಗೋಸ್ಕರ ಹುಡುಕುತ್ತದೆ. ಸಾಮಾನ್ಯವಾಗಿ ಈ ಮಾಹಿತಿಯೆಲ್ಲವು ಅನೇಕ ಕಡತಗಳಲ್ಲಿ ಹಂಚಿ ಹೋಗಿರುತ್ತದೆ ಹಾಗೆ ಈ ಕಡತಗಳು ಸಹ ಮೆಮೊರಿಯಲ್ಲಿ ವಿವಿದೆಢೆ ಹರಡಿರುತ್ತದೆ. ಎಲ್ಲ ಕಡತಗಳನ್ನು ಶಿಸ್ತುಭದ್ಧವಾಗಿ ಹತ್ತಿರದಲ್ಲಿಟ್ಟರೆ ಹುಡುಕುವ ಸಮಯ ಕಡಿಮೆಗೊಂಡು ಸಜ್ಜಾಗುವುದು ಬೇಗನೆಯಾಗುತ್ತದೆ.

೧.start->run ಎಂಬುದನ್ನು ಕ್ಲಿಕ್ಕಿಸಿ
೨.ಪುಟಿಯುವ ಇನ್ಪುಟ್ ಬಾಕ್ಸ್ ನಲ್ಲಿ regedit ಎಂದು ಟೈಪಿಸಿ "ಸರಿ" ಗುಂಡಿಯನ್ನು ಒತ್ತಿ.
೩.ರೆಜ್ ಎಡಿಟ್ ತೆರೆದ ನಂತರ ಮೈ ಕಂಪ್ಯೂಟರ್‌ನ ಕೆಳಗೆ ಐದು ಫೋಲ್ಡರ್‌ಗಳನ್ನು ಕಾಣಬಹುದು, ಇದರಲ್ಲಿ HKEY_LOCAL_MACHINE ಎಂಬ ಫೋಲ್ಡರ್‌ನ ಪಕ್ಕದಲ್ಲಿರುವ "+" ಚಿನ್ಹೆಯನ್ನು ಒಮ್ಮೆ ಕ್ಲಿಕ್ಕಿಸಿ
೪.ಅದರಳೊರಗಿರುವ ಉಪ-ಫೋಲ್ಡರ್‌ಗಳಲ್ಲಿ SOFTWARE ಎಂಬ ಫೋಲ್ಡರ್‌ನ ಪಕ್ಕದಲ್ಲಿರುವ "+" ಚಿನ್ಹೆಯನ್ನು ಒಮ್ಮೆ ಕ್ಲಿಕ್ಕಿಸಿ.
೫.ನಂತರ ಅದರಳೊರಗಿರುವ ಉಪ-ಫೋಲ್ಡರ್‌ಗಳಲ್ಲಿ Microsoft ಎಂಬ ಫೋಲ್ಡರ್‌ನ ಪಕ್ಕದಲ್ಲಿರುವ "+" ಚಿನ್ಹೆಯನ್ನು ಒಮ್ಮೆ ಕ್ಲಿಕ್ಕಿಸಿ.
೬.ನಂತರ ಅದರಳೊರಗಿರುವ ಉಪ-ಫೋಲ್ಡರ್‌ಗಳಲ್ಲಿ Dfrg ಎಂಬ ಫೋಲ್ಡರ್‌ನ ಪಕ್ಕದಲ್ಲಿರುವ "+" ಚಿನ್ಹೆಯನ್ನು ಒಮ್ಮೆ ಕ್ಲಿಕ್ಕಿಸಿ.
೭.ನಂತರ ಅದರಳೊರಗಿರುವ ಉಪ-ಫೋಲ್ಡರ್‌ಗಳಲ್ಲಿ BootOptimizeFunction ಎಂಬ ಫೋಲ್ಡರ್‌ನ ಮೇಲೆ ಒಮ್ಮೆ ಕ್ಲಿಕ್ಕಿಸಿ.
೮.ಈಗ ವಿಂಡೋನ ಬಲಭಾಗದಲ್ಲಿ ನಿಮಗೆ ಕೆಲವು ರೆಜಿಸ್ಟ್ರಿ,ಅದರ ಬಗೆ ಹಾಗು ಅದರ ಡೇಟಾ ಮೌಲ್ಯಗಳ ಪಟ್ಟಿ ಕಾಣುತ್ತದೆ.
೯.ಈ ಪಟ್ಟಿಯಲ್ಲಿ Enable ಎಂಬ ರೆಜಿಸ್ಟರ್‌ಅನ್ನು ಆಯ್ಕೆ ಮಾಡಿ, ಅದರ ನೇಟಾ Y ಎಂದಾಗಿರಬೇಕು.
೧೦.ಅದು Y ಇರದೆ ಇದ್ದ ಪಕ್ಷದಲ್ಲಿ ಅದರ ಮೇಲೆ ಎರಡು ಬಾರಿ ಕ್ಲಿಕ್ ಮಾಡಿ.
೧೧.ಪುಟಿಯುವ ಬಾಕ್ಸ್‌ನಲ್ಲಿ ಡೇಟಾ ಮೌಲ್ಯವನ್ನು Y ಎಂದು ನಮೂದಿಸಿ, ಸರಿ ಎನ್ನುವ ಗುಂಡಿಯನ್ನು ಒತ್ತಿ.

ಮೆನುಗಳು ಆದಷ್ಟು ಬೇಗನೆ ಸ್ಪಂದಿಸುವ ಹಾಗೆ ಮಾಡುವುದು.
ನೀವು ಮೆನುಗಳ ಮೇಲೆ ಕ್ಲಿಕ್ ಮಾಡಿದಾಗ, ಆ ಕ್ಲಿಕ್ಕಿಗೆ ನಿಮ್ಮ ಕಂಪ್ಯೂಟರ್ ಎಷ್ಟು ಬೇಗನೆ ಸ್ಪಂದಿಸುತ್ತದೆ ಎಂಬುದನ್ನು ಒಂದು ಟೈಮರ್ ನ ಮೂಲಕ ನಿಯಂತ್ರಿಸಲಾಗುತ್ತದೆ. ಈ ಟೈಮರ್‌ನ ಮೌಲ್ಯ ಸಣ್ಣದ್ದಿದಷ್ಟು ಮೆನುಗಳು ಕ್ಲಿಕ್ಕಿಗೆ ಬೇಗನೆ ಸ್ಪಂದಿಸುತ್ತವೆ. ಥಿಯೋರಾಟಿಕಲಿ ಈ ಮೌಲ್ಯವನ್ನು ಸೊನ್ನೆ ಕೂಡ ಮಾಡಬಹುದು ಆದರೆ ಅದು ಕಾರ್ಯಚರಣೆಗೆ ಪೂರಕವಾಗಿರುವುದಿಲ್ಲ ಹಾಗಾಗಿ ಈ ಮೌಲ್ಯವನ್ನು ೧೦೦ ಎಂದು ಮಾಡಿದರೆ ಉತ್ತಮ. ಇದನ್ನು ಮಾಡಲು..
೧.start->run ಎಂಬುದನ್ನು ಕ್ಲಿಕ್ಕಿಸಿ
೨.ಪುಟಿಯುವ ಇನ್ಪುಟ್ ಬಾಕ್ಸ್ ನಲ್ಲಿ regedit ಎಂದು ಟೈಪಿಸಿ "ಸರಿ" ಗುಂಡಿಯನ್ನು ಒತ್ತಿ.
೩.ರೆಜ್ ಎಡಿಟ್ ತೆರೆದ ನಂತರ ಮೈ ಕಂಪ್ಯೂಟರ್‌ನ ಕೆಳಗೆ ಐದು ಫೋಲ್ಡರ್‌ಗಳನ್ನು ಕಾಣಬಹುದು, ಇದರಲ್ಲಿ HKEY_CURRENT_USER ಎಂಬ ಫೋಲ್ಡರ್‌ನ ಪಕ್ಕದಲ್ಲಿರುವ "+" ಚಿನ್ಹೆಯನ್ನು ಒಮ್ಮೆ ಕ್ಲಿಕ್ಕಿಸಿ
೪.ಅದರಳೊರಗಿರುವ ಉಪ-ಫೋಲ್ಡರ್‌ಗಳಲ್ಲಿ Control Panel ಎಂಬ ಫೋಲ್ಡರ್‌ನ ಪಕ್ಕದಲ್ಲಿರುವ "+" ಚಿನ್ಹೆಯನ್ನು ಒಮ್ಮೆ ಕ್ಲಿಕ್ಕಿಸಿ.
೫.ನಂತರ ಅದರಳೊರಗಿರುವ ಉಪ-ಫೋಲ್ಡರ್‌ಗಳಲ್ಲಿ Desktop ಎಂಬ ಫೋಲ್ಡರ್‌ನ ಮೇಲೆ ಒಮ್ಮೆ ಕ್ಲಿಕ್ಕಿಸಿ.
೬.ಈಗ ವಿಂಡೋನ ಬಲಭಾಗದಲ್ಲಿ ನಿಮಗೆ ಕೆಲವು ರೆಜಿಸ್ಟ್ರಿ,ಅದರ ಬಗೆ ಹಾಗು ಅದರ ಡೇಟಾ ಮೌಲ್ಯಗಳ ಪಟ್ಟಿ ಕಾಣುತ್ತದೆ.
೭.ಈ ಪಟ್ಟಿಯಲ್ಲಿ MenuShowDelayಎಂಬ ರೆಜಿಸ್ಟರ್‌ಅನ್ನು ಆಯ್ಕೆ ಮಾಡಿ,ಅದರ ಮೇಲೆ ಎರಡು ಬಾರಿ ಕ್ಲಿಕ್ ಮಾಡಿ.
೮.ಪುಟಿಯುವ ಬಾಕ್ಸ್‌ನಲ್ಲಿ ಡೇಟಾ ಮೌಲ್ಯವನ್ನು ೧೦೦ ಎಂದು ನಮೂದಿಸಿ, ಸರಿ ಎನ್ನುವ ಗುಂಡಿಯನ್ನು ಒತ್ತಿ.

ಇಲ್ಲಿಗೆ ರೆಜಿಸ್ಟ್ರಿ ಸಂಬಂಧಿತ ಟ್ವೀಕ್‌ಗಳು ಮುಗಿದವು. ಮಿಕ್ಕ ಇತರೆ ವಿಧಾನದ ಟ್ವೀಕ್‌ಗಳತ್ತ ಗಮನ ಹಾಯಿಸೋಣ.

XP,DMA ವಿಧಾನದಲ್ಲಿ ಡೇಟಾ ಸ್ಥಳಾಂತರಿಸುತ್ತಿರುವುದನ್ನು ಖಾತ್ರಿ ಪಡಿಸಿಕೊಳ್ಳುವುದು.
ಸಾಮಾನ್ಯಯವಾಗಿ ಹಾರ್ಡ್ ಡಿಸ್ಕ್ ಅಥವಾ ಸಿಡಿಗಳು ಡೇಟಾ ಸ್ಥಳಾಂತರಿಸುವುದಕ್ಕೆ ಎರಡು ಮಾರ್ಗವಿದೆ, ಮೊದಲನೆಯದು ನಿಧಾನವಾದ PIO ವಿಧಾನ ಎರಡನೆಯದು DMA ವಿಧಾನ.
ಕೆಲವು ಬಾರಿ ವೈರಾಣುಗಳ ಹಾವಳಿಯಿಂದ ಕಂಪ್ಯೂಟರ್‌ಗಳು ತಾವಾಗಿಯೆ DMA ವಿಧಾನದಿಂದ PIO ವಿಧಾನನಕ್ಕೆ ಸರಿದಿರುತ್ತದೆ.ಅದು ಯಾವ ವಿಧಾನದಲ್ಲಿದೆ ಎಂಬುದನ್ನು ನೋಡಲು..
೧.ಮೈ ಕಂಪ್ಯೂಟರ್ ಮೇಲೆ ಬಲ ಕ್ಲಿಕ್ಕಿಸಿ, ಗುಣಧರ್ಮಗಳನ್ನು ಆಯ್ಕೆ ಮಾಡಿ.
೨.ಶುರುವಾಗುವ ವಿಂಡೋನಲ್ಲಿ "ಹಾರ್ಡ್‌ವೇರ್" ಎಂಬ ಟ್ಯಾಬ್ ಅನ್ನು ಕ್ಲಿಕ್ಕಿಸಿ ಆಯ್ಕೆ ಮಾಡಿ.
೩.ಅದರಲ್ಲಿ ಕಾಣುವ "ಡಿವೈಸ್ ಕಾರ್ಯನಿರ್ವಾಹಕ" ಎಂಬ ಗುಂಡಿಯನ್ನು ಕ್ಲಿಕ್ಕಿಸಿ.
೪.ಆಗ ಮತ್ತೊಂದು "ಡಿವೈಸ್ ಕಾರ್ಯನಿರ್ವಾಹಕ" ವಿಂಡೊ ಶುರುವಾಗುತ್ತದೆ.
೫.ಈ ವಿಂಡೊನಲ್ಲಿ "IDE ATA/ATAPI Controllers" ಎಂಬುದು ಕಾಣುತ್ತದೆ, ಅದರ ಮೇಲೆ ಎರಡು ಬಾರಿ ಕ್ಲಿಕ್ ಮಾಡಿ.
೬.Primary IDE Channel ಹಾಗು Secondary IDE Channel ಎಂಬುದು ಇರುತ್ತವೆ. ಇಲ್ಲಿ ಬೇರೆ Controllers ಸಹ ಪಟ್ಟಿಯಾಗಿರಬಹುದು ಆದರೆ ನಮ್ಮ ಗಮನ ಇಲ್ಲಿ ಸೂಚಿಸಿದ ಎರಡು Channelನ ಮೇಲೆ ಮಾತ್ರ.
೭. ಈಗ Primary IDE Channelಮೇಲೆ ಬಲ ಕ್ಲಿಕ್ ಮಾಡಿ ಗುಣಧರ್ಮ ಆಯ್ಕೆ ಮಾಡಿ.
೮.ಇದರೊಳಗೆ "ಮುಂದುವರಿದ ಸೆಟ್ಟಿಂಗ" ಎಂಬ ಟ್ಯಾಬ್‌ಅನ್ನು ಆಯ್ಕೆ ಮಾಡಿ.
೯.ಇದರೊಳಗೆ ಸ್ಥಳಾಂತರಿಸುವ ವಿಧ ಎಂಬ ಕೆಳಬೀಳುವ ಮೆನು DMA if Available ಎಂಬುದು ಆಯ್ಕೆ ಆಗಿರಬೇಕು ಅದು ಹಾಗೆ ಇರದೆ PIO Only ಅಂತ ಇದ್ದಲ್ಲಿ ಅದನ್ನು ಬದಲಾಯಿಸಿ.ಸರಿ ಎಂಬ ಗುಂಡಿಯನ್ನು ಒತ್ತಬೇಕು
೧೦.ಇದೆ ರೀತಿಯಾಗಿ Secondary IDE Channel ಅನ್ನು ಬದಲಾಯಿಸಿದ/ಪರಿಶೀಲಿಸದ ನಂತರ "ಡಿವೈಸ್ ಕಾರ್ಯನಿರ್ವಾಹಕ" ವಿಂಡೊ ಮುಚ್ಚಿರಿ.

ಸ್ವಾಪ್ ಫೈಲ್ ಕಾರ್ಯ ದಕ್ಷತೆಯನ್ನು ಹೆಚ್ಚಿಸಿವುದು.
ಈ ಟ್ವೀಕ್ ಮಾಡುವುದರಿಂದ ಲಭ್ಯವಿರುವ ನಿಮ್ಮ RAMನ ಕೊನೆಯ ಮೆಮೊರಿಯು ಸಹ ಉಪಯುಕ್ತವಾಗಿ ಬಳಸಲಾಗುವುದು, ಈ ಟ್ವೀಕ್ ಅತ್ಯಂತ ಪರಿಣಾಮಕಾರಿ ಕೂಡ!!
೧.start->run ಎಂಬುದನ್ನು ಕ್ಲಿಕ್ಕಿಸಿ
೨.ಪುಟಿಯುವ ಇನ್ಪುಟ್ ಬಾಕ್ಸ್ ನಲ್ಲಿ msconfig ಎಂದು ಟೈಪಿಸಿ "ಸರಿ" ಗುಂಡಿಯನ್ನು ಒತ್ತಿ.
೩.ನಂತರ ಪುಟಿಯುವ ವಿಂಡೊನಲ್ಲಿ System.ini ಎಂಬ ಟ್ಯಾಬ್‌ಅನ್ನು ಆಯ್ಕೆ ಮಾಡಿ.
೪.ಅದರೊಳಗೆ ಪಟ್ಟಿಯಾಗಿರುವ 386enh ಎಂಬುದರ ಮೇಲೆ ಎರಡು ಬಾರಿ ಕ್ಲಿಕ್ ಮಾಡಿ.(ಆಗ ಈ ಆಯ್ಕೆ ನೀಲಿ ಬಣ್ಣದಿಂದ ಹೈಲೈಟ್ ಆಗಬೇಕು)
೫.ನಂತರ ಅಲ್ಲೆ ಲಭ್ಯವಿರುವ "ಹೊಸದು" ಎಂಬ ಗುಂಡಿಯನ್ನು ಒತ್ತಿ .
೬. ತತ್‌ಕ್ಷಣವೆ 386enh ಕೆಳಗೆ ಖಾಲಿಯಾದ ಬಾಕ್ಸ್ ಒಂದು ಸೃಷ್ಟಿಯಾಗುತ್ತದೆ, ಅದರೊಳಗೆ ConservativeSwapfileUsage =1 ಎಂದು ಟೈಪಿಸಿ (ಇಲ್ಲಿಂದ ನಕಲು ಮಾಡಿ ಅಂಟಿಸಿದರೆ ಉತ್ತಮ, ಸಣ್ಣಾಕ್ಷರ ದೊಡ್ಡಾಕ್ಷರದೆಡೆ ಗಮನವಿರಲಿ!!)
೭.ನಂತರ "ಸರಿ" ಎನ್ನುವುದನ್ನು ಕ್ಲಿಕ್ಕಿಸಿ.
೮.ನಂತರ ಕಂಪ್ಯೂಟರ್‌ಅನ್ನು "ಪುನರ್ಶುರು"ಮಾಡಿ.

ಇಷ್ಟೆಲ್ಲ ಟ್ವೀಕ್‌ಗಳನ್ನು ಮಾಡಿಯಾದ ಮೇಲೆ ಕಟ್ಟಕಡೇಯದಾಗಿ(ನನಗೆ ತಿಳಿದಿರುವಂತೆ)ಮೆಮ್ಮೊರಿಯನ್ನು ನಿರ್ವಹಿಸಲು Cacheman ಎಂಬ ತಂತ್ರಾಂಶವನ್ನು ಸ್ಥಾಪಿಸುವುದು. ತಂತ್ರಾಂಶವನ್ನು ಈ ಕೊಂಡಿಯ ಮೂಲಕ ಡೌನ್ ಲೋಡ್ ಮಾಡಿಕೊಳ್ಳಬಹುದು.
http://sites.google....

ನಿಮ್ಮ ಕಂಪ್ಯೂಟರ್‌ಗೆ ಉಳಿಸಿಕೊಂಡಾದ ಮೇಲೆ ಅದರೊಳಗಿರುವ ರೆಜಿಸ್ಟರ್ ಸಂಖ್ಯೆಯನ್ನು cacheman ಸ್ಥಾಪಿಸಿ ಆದಮೇಲೆ ನಾಮೂದಿಸಲು ಮರೆಯಬೇಡಿ.(help->Enter CustomerID)

೧.cacheman ಸ್ಥಾಪಿಸಿ ಆದಮೇಲೆ ಅದನ್ನು ಶುರು ಮಾಡಿ,"ಜಾದುಗಾರನನ್ನು ತೋರು" ಎಂಬ ಮೆನುವನ್ನು ಕ್ಲಿಕ್ಕಿಸಿ.
೨.ಇದರೊಳಗೆ "ಎಲ್ಲಾ" ಎಂಬುದನ್ನು ಆಯ್ಕೆ ಮಾಡಿ.

೩."disk cache" ಎಂಬ ವಿಂಡೊ ಮೊದಲ ಬಾರಿಗೆ ಶುರುವಾಗುತ್ತದೆ,ಇಲ್ಲಿ ಆಯ್ಕೆ ಮಾಡಲು ಏನು ಇರುವುದಿಲ್ಲಾ ಹಾಗಾಗಿ "ಮುಂದಿನ"ಎಂಬುದರ ಮೇಲೆ ಕ್ಲಿಕ್ಕಿಸಿ.
೪.ಈಗ ಕಾಣುವ ನಾಲ್ಕು ಆಯ್ಕೆಗಳಲ್ಲಿ "ಕಡತ ಹಂಚಿಕೊಳ್ಳುವುದನ್ನು ಅತ್ಯಂತ ಹೆಚ್ಚಾಗಿ ಚೊಕ್ಕಮಾಡು" ಎಂಬುದನ್ನು ಆಯ್ಕೆ ಮಾಡಿ "ಮುಗಿಸು"ಎಂಬುದರ ಮೇಲೆ ಕ್ಲಿಕ್ಕಿಸಿ.

ಈಗ
೫."Icon cache" ಎಂಬ ವಿಂಡೊ ಮೊದಲ ಬಾರಿಗೆ ಶುರುವಾಗುತ್ತದೆ.
೬.ಈಗ ಕಾಣುವ ಎರಡು ಆಯ್ಕೆಗಳಲ್ಲಿ "ಅತ್ಯಂತ ಹೆಚ್ಚಾದ Icon cacheನ ಮೂಲಭೂತವಾದ ಗಾತ್ರವನ್ನು ಸೆಟ್ ಮಾಡು" ಎಂಬುದನ್ನು ಆಯ್ಕೆ ಮಾಡಿ "ಮುಗಿಸು"ಎಂಬುದರ ಮೇಲೆ ಕ್ಲಿಕ್ಕಿಸಿ.

ಈಗ
೭."RAM" ಎಂಬ ವಿಂಡೊ ಮೊದಲ ಬಾರಿಗೆ ಶುರುವಾಗುತ್ತದೆ.
೮.ಈಗ ಕಾಣುವ ಎರಡು ಆಯ್ಕೆಗಳಲ್ಲಿ "DLLಗಳನ್ನು ಮೆಮೊರಿಯಿಂದ ಇಳಿಸು" ಎಂಬುದನ್ನು ಮಾತ್ರ ಆಯ್ಕೆ ಮಾಡಿ "ಮುಗಿಸು"ಎಂಬುದರ ಮೇಲೆ ಕ್ಲಿಕ್ಕಿಸಿ.

ಈಗ
೯."Tweaks" ಎಂಬ ವಿಂಡೊ ಮೊದಲ ಬಾರಿಗೆ ಶುರುವಾಗುತ್ತದೆ.
೧೦.ಈಗ ಕಾಣುವ ಎರಡು ಆಯ್ಕೆಗಳಲ್ಲಿ "ಹಿರಿದಾದ IO pagelock ಮಿತಿ ಮೌಲ್ಯ" ಎಂಬುದನ್ನು ಆಯ್ಕೆ ಮಾಡಿ.
೧೧.ಕೆಳಗೆ "Disable NTFS last access update" ಎಂಬುದನ್ನು ಟಿಕ್ ಮಾಡಿ, "ಮುಂದಿನ"ಎಂಬುದರ ಮೇಲೆ ಕ್ಲಿಕ್ಕಿಸಿ.
೧೨.ಈ ವಿಂಡೊನಲ್ಲಿ ಕಾಣುವ ಯಾವದನ್ನು ಸಹ ಆಯ್ಕೆ ಮಾಡದೆ "ಮುಂದಿನ"ಎಂಬುದರ ಮೇಲೆ ಕ್ಲಿಕ್ಕಿಸಿ.
೧೩.ಈ ವಿಂಡೊನಲ್ಲಿ ಕೆಳಗಡೆ ಇರುವ "ಮೆನು ತೋರಲು ತಡಮಾಡುವುದು" ಎಂಬುದನ್ನು ಆಯ್ಕೆ ಮಾಡಿ,"ಮುಂದಿನ"ಎಂಬುದರ ಮೇಲೆ ಕ್ಲಿಕ್ಕಿಸಿ.
೧೪.ಈ ವಿಂಡೊನಲ್ಲಿರುವುದನ್ನು ಆಯ್ಕೆ ಮಾಡಿ, "ಮುಗಿಸು"ಎಂಬುದರ ಮೇಲೆ ಕ್ಲಿಕ್ಕಿಸಿ.

ನಂತರ "ಕಡತ" ಮೆನುಗೆ ಹೋಗಿ,"ಸೆಟ್ಟಿಂಗ್‌ಗಳನ್ನು ಉಳಿಸಿ"ಎಂಬುದನ್ನು ಕ್ಲಿಕ್ಕಿಸಿ..
ನಂತರ cacheman ಅನ್ನು ಮುಚ್ಚಿ, ಅದು ಪುನರ್ಶುರು ಮಾಡಬೇಕೆ ಎಂಬುದನ್ನು ಕೇಳುತ್ತದೆ, ಹೌದು ಎಂದು ಕ್ಲಿಕ್ಕಿಸಿ.

ಇಲ್ಲಿಗೆ ಟ್ವೀಕಾಯಣ ಸಮಾಪ್ತಿ(ನನ್ ಕಡೆಯಿಂದ), ನಿಮ್ಗೆ ಇನ್ನಷ್ಟು ತಿಳಿದು ಬಂದಲ್ಲಿ ದಯವಿಟ್ಟು ಹಂಚಿಕೊಳ್ಳಿ.

ತಂತ್ರಾಂಶ - Software
ಗುಣ ಧರ್ಮ -Properties
ಕಡತ - File
ಮರುಸ್ಥಾಪನಾ ಬಿಂದು - System restore
ರೆಜಿಸ್ಟ್ರಿ ಸಂಕಲನ - Registry editor
ರಫ್ತು - Export
ರೆಜಿಸ್ಟ್ರಿ ರಫ್ತು ಕಡತ - Registry export file
ರಫ್ತು ವ್ಯಾಪ್ತಿ - Export Range
ಎಲ್ಲಾ - All
ಕಡತದ ಹೆಸರು - File name
ಉಳಿಸು - Save
ಅಮದು -Import
ತೆರೆ - Open
ಗುಂಡಿ - Button
ಸರಿ - OK
ಡೇಟಾ ಮೌಲ್ಯ - Data Value
ಮೂಲಭೂತ - Default
ಸಜ್ಜು - Boot
ಸ್ಪಂದಿಸುವುದು - Response
ಸ್ಥಳಾಂತರ - Transfer
ಡಿವೈಸ್ ಕಾರ್ಯನಿರ್ವಾಹಕ - Device manager
ಕಾರ್ಯ ದಕ್ಷತೆ - Performance
ಹೊಸದು-New
ಪುನರ್ಶುರು- Restart
ಜಾದುಗಾರನನ್ನು ತೋರು - Show wizard
ಮುಂದಿನ - Next
ಕಡತ ಹಂಚಿಕೊಳ್ಳುವುದನ್ನು ಅತ್ಯಂತ ಹೆಚ್ಚಾಗಿ ಚೊಕ್ಕಮಾಡು - Maximise throughput for file sharing
ಮುಗಿಸು - Finish
ಅತ್ಯಂತ ಹೆಚ್ಚಾದ Icon cacheನ ಮೂಲಭೂತವಾದ ಗಾತ್ರವನ್ನು ಸೆಟ್ ಮಾಡು - Set maximum default size for Icon cache
DLLಗಳನ್ನು ಮೆಮೊರಿಯಿಂದ ಇಳಿಸು - Unload DLL from memory
ಹಿರಿದಾದ IO pagelock ಮಿತಿ ಮೌಲ್ಯ - Largest IO page lock limit value
ಮೆನು ತೋರಲು ತಡಮಾಡುವುದು - Menu show delay
ಸೆಟ್ಟಿಂಗ್‌ಗಳನ್ನು ಉಳಿಸಿ - Save settings

ಮುಗಿಯಿತು

ಪ್ರಸಾದ್

No comments: