Tuesday, June 29, 2010

"೫.೫ ಲಕ್ಷ ಅಭಿಯಂತರಲ್ಲಿ ...ಗೇಟ್ಸ್, ಜಾಬ್ಸ್.." - ಜಾಣ ಕುರುಡೋ ಅಥವಾ ಇದೆ ವಾಸ್ತವವೋ?

ಸಂಪದ.ನೆಟ್ ಎಂಬ ತಾಣದಿಂದ ಉಚ್ಛಾಟಿತನಾದ(ಕುತಂತ್ರದಿಂದ) ಮೇಲೆ ಅಲ್ಲಿ ಪ್ರಕಟಿಸಿದ್ದ ನನ್ನ ಎಲ್ಲಾ ಬರಹಗಳನ್ನು ಮತ್ತೊಮ್ಮೆ ಇಲ್ಲಿ ಪ್ರಕಟಿಸುತ್ತಿದ್ದೇನೆ ಅಷ್ಟೆ...

March 5, 2009

ಪ್ರತಾಪ್ ಸಿಂಹ ನವರ ಲೇಖನ "೫.೫ ಲಕ್ಷ ಅಭಿಯಂತರಲ್ಲಿ ...ಗೇಟ್ಸ್, ಜಾಬ್ಸ್.." ಅನ್ನೋ ಲೇಖನದ ಬಗ್ಗೆ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದೇನೆ. ನಾನು ವ್ಯಕ್ತಪಡಿಸಿರುವ ವಿಚಾರಗಳು, ಅಭಿಪ್ರಾಯಗಳು ಪ್ರತಾಪ್ ಸಿಂಹ ಅವರ ಲೇಖನ ಪ್ರತಿ ವಾಕ್ಯಕ್ಕೂ ಉತ್ತರಿಸಲು ಪ್ರಯತ್ನಿಸಿದ್ದೇನೆ ಹಾಗಾಗಿ ಲೇಖನ ಓದಬೇಕಾದರೆ ಪ್ರತಾಪ್ ಸಿಂಹ ರವರ ಲೇಖನ ಹಾಗು ನನ್ನ ಈ ಬರಹ ಎರಡೂ ನಿಮ್ಮ ಗಣಕ ತೆರೆಯ ಮೇಲಿದ್ದು ಅವರ ಲೇಖನದ ಒಂದು ಸಾಲು ಓದಿ ತದನಂತರ ಆ ಸಾಲಿಗೆ ನನ್ನ ಅನಿಸಿಕೆ/ಅಭಿಪ್ರಾಯ/ವಾದ/ಸಮರ್ಥನೆಯನ್ನು ನನ್ನ ಬರಹದಲ್ಲಿ ಓದಿದರೆ ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ. ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸುವುದನ್ನು ಮರೆಯಬೇಡಿ..

ಅವರ ಲೇಖನದ ಕೊಂಡಿಗಳು :
೧. http://www.vijaykarnatakaepaper.com/epaper/pdf/2009/02/28/20090228a_008101003.jpg
೨. http://www.flickr.com/photos/36033019@N02/3329709427/
೩. http://www.pratapsimha.com/bettale-jagattu/ಐದೂವರೆ-ಲಕ್ಷ-ಎಂಜಿನಿಯರ್%e2%80%8cಗಳ/

ನಿಮ್ಮ ಸಮಯಕ್ಕೆ ಧನ್ಯವಾದಗಳು

ನಮಸ್ಕಾರ ಪ್ರತಾಪ್ ಅವರೇ ,
ನಾನು ನಿಮ್ಮ ಬರವಣಿಗೆಯ ಅಭಿಮಾನಿ ಇಂದಿಗೂ ಸಹ, ಯಾಕಂದ್ರೆ ನೀವು ಆಯ್ಕೆ ಮಾಡ್ಕೊಳ್ಳೋ ವಿಚಾರ, ಅದನ್ನ ತೆರೆದಿಡುವ ರೀತಿ, ಮನ ಮುಟ್ಟುತ್ತೆ ಹಾಗಾಗಿ ನೀವು ಓದುಗನಿಗೆ ಹತ್ತಿರ ಆಗ್ತೀರ. ನಿಮ್ಮ websiteಗೆ ನಾನು regular visitor, ನೂರಾರು ಅಭಿಮಾನಿಗಳ ತರಹ!! ಇವೆಲ್ಲ ನಿಮಗೆ ಗೊತ್ತಿರೋ ವಿಚಾರ ಅನ್ನೋದು ಸಹ ನಾನು ಅರ್ಥ ಮಾಡಿಕೊಳ್ಳಬಲ್ಲೆ. ನಿಮ್ಮ ಮೊದಲನೆಯ ಲೇಖನಕ್ಕೆ (ಕುರುಡು ಕಾಂಚನ ...ಕ್ಕೆ) sequel ಥರ ಬರ್ದಿರೋ ನಿಮ್ಮ ಎರಡನೇ ಲೇಖನ (೫.೫ ಲಕ್ಷದಲ್ಲಿ ಗೇಟ್ಸ್, ಜಾಬ್ಸ್,.... ), ಅದ್ರಲ್ಲಿ ಮುಂದಿಟ್ಟಿರುವ ಪ್ರಶ್ನೆಗಳು, ಉತ್ತರಿಸಬೇಕಾದವರಿಗೆ ತಲುಪಿರೋದೆ ಇಲ್ಲ ಅನ್ಕೊಂಡಿದೀನಿ ಯಾಕಂದ್ರೆ ನೀವು ಒತ್ತಿ ಒತ್ತಿ ಉಲ್ಲೇಖ ಮಾಡಿರೋ ಇನ್ಫೋಸಿಸ್ ಹಾಗು ವಿಪ್ರೊ ಚೇರ್ಮನ್ ಗಳು ಕನ್ನಡ ದಿನಪತ್ರಿಕೆ ಓದ್ತಾರೆ ಅನ್ನೋದೇ ನನ್ನ ಮೊದಲನೆಯ ಸಂಶಯ. ಹಾಗಾಗಿ ನಿಮ್ಮ ಅರ್ಧ ಪ್ರಶ್ನೆ (ಬಂಡವಾಳ ಶಾಹಿತನ್ನಕ್ಕೆ ಸಂಬಂಧಿತ ಪ್ರಶ್ನೆ) ಗೆ ಉತ್ತರ ಸಿಗೋದೆ ಇಲ್ಲ. ನೀವು ಬರೀತಾ ಬರೀತಾ, ರವಿ ಬೆಳೆಗೆರೆ S.L.ಭೈರಪ್ಪನವರ (ಮತಾಂತರ ವಿಚಾರ...) ಬಗ್ಗೆ ಬರೆದ ಹಾಗೆ ಈ ಲೇಖನ ಕಾಣ್ತಿದೆ. ವ್ಯತ್ಯಾಸ ಇಷ್ಟೇ, ರವಿ ಬೆಳೆಗೆರೆ ಸ್ಲ್ಭೈರಪ್ಪನವರ ವಿರುದ್ದ ಹರಿಹಾಯ್ದರು ನೀವು IT ಉದ್ಯಮದ ವಿರುದ್ಧ, ಅಷ್ಟೇ. ಇಬ್ಬರ ವಾದದಲ್ಲೂ research ನ ಕೊರತೆ ಎದ್ದು ಕಾಣುತ್ತೆ. ರವಿ ಬೆಳೆಗೆರೆ, S.L.ಭೈರಪ್ಪನವರ ಲೇಖನದ ಪರ/ವಿರುದ್ಧ ಮಾತಡೋದು ಬಿಟ್ಟು ವೈಯಕ್ತಿಕ ಆಗಿ ಹೋದ್ರು. SLB ಅಂತಹ ಮಹಾನ್ ಲೇಖಕರನ್ನೇ ೫ ಕೋಟಿ ಕನ್ನಡಿಗರ ಎದುರು ಜರೆದರು, ಈಗ ತಾವುಗಳು ಅದೇ ೫ ಕೋಟಿ + ಜಗತ್ತಿನ ನಾನಾ ಮೂಲೇಲಿ ಹೆಂಗೋ ಬದುಕಿಕೊಂಡು ಕೆಲಸ ಮಾಡ್ತಿರೋ ಅನಿವಾಸಿಗಳ ಎದುರಿಗೆ ನಾರಾಯಣ್ ಮೂರ್ತಿ, ಅಜಿಮ ಪ್ರೇಮ್ಜಿ ಅನ್ನೋರನ್ನೇ ಮಧ್ಯೆ ಎಳೆದು "idea" ಕೊಡ್ತಿದೀರ IT Industry ಹೇಗೆ ನಡೆಸಬೇಕಿತ್ತು ಅಂತ.

IT Industry ಕೇವಲ ನಾರಾಯಣ್ ಮೂರ್ತಿ ಅಥವ ಅಜಿಮ ಪ್ರೇಮ್ಜಿ ಇಂದ ನಡಿಬೇಕಿಲ್ಲ, ಅಷ್ಟಕ್ಕೂ ಕನ್ನಡಿಗರೇ ಮೂಲೆ ಗುಂಪು ಆಗಿರೋ ಈ ಕಂಪನಿಗಳಲ್ಲಿ, ನಮ್ ನೆಲದಲ್ಲಿ ಇದ್ಕೊಂಡು ನಮ್ಮವರನ್ನೇ ಅಸಡ್ಡೆ ಮಾಡಿರೋ ಇಂತಹ ಕಂಪನಿ ನಂಬಿಕೊಂಡು ಕನ್ನಡಿಗರು ಹೊಟ್ಟೆ ಹೊರೆದುಕೊಳ್ತಿಲ್ಲ ಕೆಲವು % ಬಿಟ್ರೆ, ಯಾಕಂದ್ರೆ ಕನ್ನಡಿಗರು ಈ ಕಂಪನಿಗಳಲ್ಲಿ minority sector!!! ಒಂದಷ್ಟು service related ಕಂಪನಿಗಳನ್ನೇ ಬೊಟ್ಟು ಮಾಡಿ ತೋರಿಸಿ ಇದೆ IT Industry ಅನ್ನೋದ್ರಲ್ಲಿ ಯಾವ ಅರ್ಥವೂ ಇಲ್ಲ. ನಿಮ್ಮ ಲೇಖನದಲ್ಲಿ ಮೊದಲಿಗೆ ಪ್ರಸ್ತಾಪ ಮಾಡಿರೋದು ಗತ ಕಾಲದ ವೈಭವ... ಸತೀಶ್ ಧವನ್, ಅಬ್ದುಲ್ ಕಲಾಮ್ ಅವರು "ಅಂದು" ಮಾಡಿದ್ದು "ಇಂದು" ಹೇಳ್ತಾ ಇದ್ದೀರಾ, ಹಾಗಾದರೆ "ಇಂದಿ"ನವರು ಏನು ಮಾಡ್ತಿದಾರೆ ಅನ್ನೋದು ವಿವರಿಸಲೇ ಇಲ್ಲ? "ಇಂದಿನವರು" ಹಳೆ ಕಥೆ ಹೇಳ್ಕೊಂಡು ಎದೆ ತಟ್ಕೊತಿದಾರ ಅಂತ ಅನುಮಾನ ಕಾಡ್ತಿದೆ!!! ಅಷ್ಟಕ್ಕೂ "ಇರೋ ಅಷ್ಟರಲ್ಲೇ" "ಅಂದೇ" "ಅಷ್ಟು" ಸಾಧನೆ ಮಾಡಿದವರಿಗೆ "ಇಂದು", "ಇರೋ ಇಷ್ತೆಲ್ಲದರಲ್ಲಿ" "ಏನು ಹೊಸತು ಮಾಡಿದಾರೆ"??? ಮತ್ತೊಬ್ಬ ಕಲಾಮ್, ಸತೀಶ್ ಧವನ್ ಹುಟ್ಲೇಇಲ್ಲ ಯಾಕೆ ಪ್ರಶ್ನೆ ಬರಲಿಲ್ಲ ನಿಮಗೆ?? ಅವೇ ಉಪಗ್ರಹಣ maintain/service ಮಾಡ್ಕೊಂಡು ತಾನೇ ಕೂತಿರೋದು ಈಗಿನವರು, ಅಥವಾ ಅಂಥಾದ್ದೆ "product"ಗಳನ್ನ manufacture ಮಾಡ್ತಿದಾರೆ ಅಲ್ವ, ಅಥ್ವಾ ಯಾರಿಗೂ ತಿಳಿಯದ ಹಾಗೆ fuel ಇಲ್ದೆ ಉಡಾಯಿಸೋ "innovation" ಮಾಡ್ತಿದಾರೆ ಹೇಗೆ? NAL/HAL/DRDO/BHEL/ITI/BEL/BSNL ಇವೆಲ್ಲ ಲಕ್ಷಾಂತರ ಜನರನ್ನ "ಸಾಕ್ತಿರೋ" public sector ಗಳು, ಏನು "innovate" ಮಾಡಿ ಯಾವ "product" ಬಿಡುಗಡೆ ಮಾಡ್ತಿದಾರೆ ಅನ್ನೋದಕ್ಕೆ ಉತ್ತರ ಹುಡುಕಿದರು ಸಿಗೋದಿಲ್ಲ. ನೀವು ಸಹ ಎತ್ತಿ ತೋರಿಸೋಕ್ಕೆ ಹಿಂಜರಿದಿದ್ದೀರ ಅಲ್ವ!! ಅಥವಾ ಕಮ್ಮಿ ಸಂಬಳ ತೊಗೊಂಡು ಸರ್ಕಾರಿ ಕಛೇರಿಗಳಲ್ಲಿ ಓತ್ಲಾ ಹೊಡೆಯೋದನ್ನ ಸಮರ್ಥಿಸ್ತಿದೀರ?? ಏನು ಅರ್ಥ ಆಗ್ಲಿಲ್ಲ, IT ಉದ್ಯಮದವರ ಮೇಲೆ ಆರೋಪ ಒಂದನ್ನು ಬಿಟ್ಟು!!!

ಅಲ್ಲ ನೀವೇ ಪ್ರಸ್ತಾಪ ಮಾಡಿದೀರಲ್ಲ SLV ಅಂದ್ರೆ Sea Loving Vehicles, ೨೦ ಕೋಟಿ ನೀರಿಗೆ, ೩೦ ಕೋಟಿ ಬಂಗಾಳ ಕೊಲ್ಲಿಗೆ ಅಂತ, ಇವೆಲ್ಲ ಮಾಧ್ಯಮದವರೇ ಮುದ್ದಾಗಿ ಅಚ್ಚು ಹಾಕಿ ಪ್ರಕಟಿಸಿದರು ಅಂತ. ಮುಳುಗ್ತಿರೋವ್ನಿಗೆ ಎಂದೂ ಹುಲ್ಲು ಕಡ್ಡಿ ಸಹ ಕೊಟ್ಟು ಬದುಕಿಸಿದ ಉದಾಹರಣೆಗಳೇ ಇಲ್ಲ, ಕಿತ್ಹೊಗಿರೋ ಮಾಧ್ಯಮದಲ್ಲಿ, ಏನಿದ್ರು ಬಿಸಿ ಬಿಸಿ ಸುದ್ದಿ, head lines ಇಷ್ಟೇ ಬೇಕಿರೋದು. ಯಾರು ಸತ್ರೆಷ್ಟು ಬಿಟ್ರೆಷ್ಟು? ೧೫೦೦ pink chaddi parcel ಮಾಡಿರು, ಪಬ್ ಗೆ ಹೋಗೋದೇ ಸ್ತ್ರೀ ಸಮಾನೆತಯೇ ಹಕ್ಕುಗಳು ಅಂತ ಬೇಕಾದ್ರೆ ಇಡಿ ಪುಟ ಬರದು ಬರದು, ಬೇಡದೆ ಇರೋ ವಿಚಾರಗಳನ್ನ ಓದುಗನ ಮನಸ್ಸು(ಆ ಕಡೆ ಹೋಗದೆ ಇದ್ರೂ ಸಹ) ತಲೆಗೆ ತುರುಕಿ, ಇದು ಪ್ರತಿ ಮಹಿಳೆ ಯೋಚನೆ ಮಾಡ್ಬೇಕಾಗಿರೋ ವಿಚಾರ ಅಂತ "ಆಲೋಚನೆಗಳನ್ನೇ" ಹೇರೋ ಪ್ರಯತ್ನ ಮಾಡಿ ಅದ್ರಲ್ಲಿ ಸಾಕಷ್ಟು ಫಲಕಾರಿ ಆಗೋ ಹಾಗೆ ಕೂಡ ಮಾಡ್ತೀರ. ಈಗ್ಲೂ ಅದೇ ಮಾಡ್ತಿದೀರ IT ಬಗ್ಗೆ ಸರಿಯಾದ ಮಾಹಿತಿ ಕೊಡದೆ ನಾಲ್ಕು ಕಂಪನಿ ಕಡೆ ಬೊಟ್ಟು ಇವೆ ಎಲ್ಲಾ, ಹಿಂಗೆ ಎಲ್ಲಾ ಅಂತ ಹೇರ್ತಾ ಇದ್ದೀರಾ. ಪಾಪ ತಿಳಿಯದೆ ಇರುವವರು ನಿಮ್ಮ ಮಾತನ್ನೇ ನಂಬಿ, ನಿಮ್ಮ ಲೇಖನದ ಪರವಾಗಿ ತಲೆ ಆಡಿಸೋಕ್ಕೆ ಶುರು ಮಾಡಿದಾರೆ ಅಂತ!!! ನಾನು ನಿಮ್ಮ ಮೇಲೆ ದೂಷಣೆ ಮಾಡೋದು ಎಷ್ಟು ಸರಿ? ನೀವು ಅಂಕಣಕಾರರು ಅಂತ ಬೇರೆ ಯಾರೋ ಮಾಡಿದ ತಪ್ಪಿಗೆ ನಿಮ್ಮ ದೂಷಿಸೋಕ್ಕೆ ಆಗೋಲ್ಲ ಅಲ್ವ, ಹಾಗೆಯೇ ಒಂದಷ್ಟು ಬೆರಳೆಣಿಕೆಯ service ಕಂಪೆನಿಗಳು ಇಡಿ IT industry ಅನ್ನೇ represent ಮಾಡುತ್ತೆ ಅನ್ನೋ ನಿಮ್ಮ ವಾದ ಸಹ ಅಷ್ಟೇ ತಪ್ಪು.

ನಮ್ ದೇಶದಲ್ಲಿ ಮನುಷ್ಯನಿಗೆ ಬೆಲೆ ಇಲ್ಲ (ಅದಕ್ಕೆ ಅಲ್ವ ಸಾವಿರಾರು ಬಲಿ ಆದರು ಯಕಶ್ಚಿತ್ ಒಬ್ಬ terrorist ಗೆ ನೇಣುಗಂಬ ಹತ್ತಿಸೋಕ್ಕೆ ಆಗದೆ ಇರೋ ಷಂಡತನ ಇರೋದು)... ಅದಕ್ಕೆ cheap labour ಧಂಡಿಯಾಗಿ ಸಿಗೋದು. ಬೇಕಿದ್ರೆ ಬಾ ಇಲ್ಲಾಂದ್ರೆ ಬಿಡು ಅಂತಾರೆ. ತಲೆ ಇರೋ ತಲೆಗಳಿಗೆ ಏನ್ರಿ ಕೊರತೆ ನಮ್ ದೇಶದಲ್ಲಿ!!! so half rate cheap rate ಅಂತ ನಮ್ಮ talent ನ ಅಗ್ಗಕ್ಕೆ ಮಾರಿಕೊಳ್ಳಬೇಕಾಗುತ್ತೆ, ಮನುಷ್ಯನಿಗೆ ಹೊಟ್ಟೆ ಮುಖ್ಯ, ಮಣ್ಣು ತಿನ್ಕೊಂಡು ಬದುಕೋಕ್ಕೆ ಆಗೋಲ್ಲ, ಈ ಜಗತ್ತಿನಲ್ಲಿ ಹಸಿವೆ ಅನ್ನೋದು ಇಲ್ದೆ ಇದ್ದಿದ್ರೆ ಈ ದರಿದ್ರತನ ಅನ್ನೋದೇ ಇರ್ತಿರ್ಲಿಲ್ಲ, ಎಲ್ಲಾರ್ ಮಾಡೋದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ತಾನೇ. ಮುಂಬೈನಲ್ಲಿ ಮರಾಠಿಗರು, ಬಿಹಾರಿಗಳ ವಿರುದ್ಧ ಕರ್ನಾಟಕದಲ್ಲಿ ಆದ ಘಟನೆಗಳೇ ಇವಕ್ಕೆ ನಿದರ್ಶನ. ನಾವು cheap ಆಗಿ ಒಳ್ಳೆ ಗುಣಮಟ್ಟ ಕೆಲಸ ಮಾಡ್ತೀವಿ ಅದಕ್ಕೆ ನಮ್ ಹತ್ರ ಬರ್ತಾರೆ, ಮನೆ ಕತ್ತಿಸೋನಿಗು ಸಹ cheap architect, cheap ಮೇಸ್ತ್ರಿ, cheap raw materials ಬೇಕಿರೋದು ಇದೆಲ್ಲದರ ಮೇಲೆ ಅದು ಗುಣಮಟ್ಟದ್ದು ಆಗಿರೋ ಅಂಥಾದು ಇರ್ಬೇಕು.

ವ್ಯವಹಾರ ಮಾಡೋಕ್ಕೆ ವಸ್ತುವಿನಲ್ಲಿ ಗುಣಮಟ್ಟ ಇರ್ಬೇಕು, ಆಗ್ಲೇ ಒಳ್ಳೆ ಬೆಲೆ ಸಿಗೋದು. ಈ ಗುಣಗಳು ನಿಮ್ಮಲ್ಲಿ ಇಲ್ಲ ಅಂದ್ರೆ ನೀವು ಅಂಕಣಕರ್ತ ಆಗ್ತಿರ್ಲಿಲ್ಲ. ನೀವು ನಾಳೆ ದಿನ ವಿಶ್ವೇಶ್ವರ್ ಭಟ್ ಅವರಿಗೆ, ನಂಗೆ ತಿಂಗಳಿಗೆ ೧ ಲಕ್ಷ ಸಂಬಳ ಬೇಕು ಅಂತ demand ಮಾಡಿದ್ರೆ ಓಡಿಸ್ತಾರೆ. paper circulation, ಅಷ್ಟು revenue generate ಮಾಡಿದ್ರೆ ಕೊಡ್ತಿದ್ರೆನೋ ಆದ್ರೆ ಆಗೋ ಒಂದಷ್ಟು ಲಕ್ಷ ಕಾಪಿಗೆ ನೀವು ೧,೦೦,೦೦೦ ಕೇಳೋದ್ರಲ್ಲಿ ಅರ್ಥವೇ ಇರೋಲ್ಲ ಅನ್ನೋದು ನಿಮಗೂ ತಿಳಿದಿರುತ್ತೆ. IT ಳು ಸಹ ಹಿಂಗೆನೆ ನಾವು ಗುಣಮಟ್ಟದ ಕೆಲಸ ಮಾಡಿಲ್ಲ ಅಂದ್ರೆ ಕಾಂಚನ, ಝನ ಝನ ಅನ್ನೋಲ್ಲ.. ಜಾಗತಿಕ ಮಾರುಕಟ್ಟೆ ಅವಲಂಬಿತ ಆಗಿರೋದಕ್ಕೆ ಅಷ್ಟು ಸಂಬಳ. ನಿಮಗೆ ಈಗ ೨೦-೨೫೦೦೦ ಬರ್ತಿರ್ಬಹುದು, ಇದೆ ಸಂಬಳ ಲೆಕ್ಕ ಹಿಡಿದು, ನೀವು ಬರೆಯೋ ಉತ್ಕೃಷ್ಟ ಲೇಖನಗಳನ್ನ ರಾಷ್ಟ್ರೀಯ ಮಟ್ಟದಲ್ಲಿ ಬರೆಯೋ ಅಂಕಣಕಾರ ತೊಗೊಳೋ ಸಂಭಾವನೆಗೆ compare ಮಾಡಿದ್ರೆ ನೀವು ಸಹ cheap labour ಅನ್ನೋದ್ರಲ್ಲಿ ಸಂಶಯ ಉಳಿಯೋಲ್ಲ. cheap labour ಅನ್ನೋದು ತುಂಬಾ relative ಪದ, ಅದನ್ನ ಸಂ ಸುಮ್ನೆ high cost country ಗೆ ಹೊಲೀಸಿ ಇಲ್ಲಿನವರು cheap labour ಅನೋದ್ರಲ್ಲಿ ಏನು ಹುರುಳಿಲ್ಲ. ಒಂದ್ ವಿಷ್ಯ ತಿಳ್ಕೊಳ್ಳಿ, ನಮ್ ದೇಶದ ಹಲವಾರು IT ಕಂಪೆನಿಗಳು ಶ್ರೀಲಂಕ, ಫಿಲಿಪೈನ್ ನತ್ತ ಮುಖ ಮಾಡಿವೆ, ಅಲ್ಲಿ cheap labour ಸಿಗುತ್ತೆ ಅಂತ, ಬೇಕಿದ್ರೆ ಈ ಮಾತು survey ಮಾಡಿ, ಸುಮ್ನೆ ನಾನಿಲ್ಲಿ ಉಲ್ಲೇಖ ಮಾಡ್ತಿಲ್ಲ . ಈ ಲೆಕ್ಕ ತೊಗೊಂಡ್ರೆ ನಾವು ಅವರಿಗಿಂತ great ಅಲ್ವ!! ಈಗ ಅಲ್ಲೊಬ್ಬರು ಪ್ರತಾಪ್ ಸಿಂಹ ಇದ್ರೆ ನಿಮ್ಮ ಲೇಖನವನ್ನೇ ಅವರ ದೇಶಕ್ಕೆ ಹೊಂದುವಂತೆ ತರ್ಜುಮಿಸಿ ಪ್ರಕಟಿಸಬಹುದು ಅಲ್ವ .

ವಿಜಯನಗರ, ಹಂಪೆ ಎಲ್ಲವೂ ನಮ್ ನಾಡಿನದ್ದೆ ಹಾಗಂತ ಅದರ ಗತ ವೈಭವ ಹೇಳ್ಕೊಂಡು ಕೂತರೆ ಈಗ ಅಲ್ಲಿ ಕಾಣ್ಸೋದು ಹಾಲು ಬಿದ್ದ ದೇವಸ್ಥಾನಗಳು, ಕುಡುಕರು, ವ್ಯಭಿಚಾರಿಗಳು, ಮಾದಕ ವ್ಯಸನಿಗಳು.ಹಂಗಿದ್ದಿದ್ದು ಹಿಂಗ್ಯಾಕೆ ಆಯ್ತು? ಪ್ರತಿ ೬-೭ ವರ್ಷಕ್ಕೊಮೆ ಏಳು/ಬೀಳೋ ಈ IT ಯಾ life cycle ಬಗ್ಗೆ ಇಷ್ಟೆಲ್ಲಾ (ಅಪ)ಪ್ರಚಾರ ಯಾಕೆ? ಜಗತ್ನಲ್ಲಿ globalization ಗೆ ಹೊಂದಿಕೊಂಡು ಕೆಲಸ ಮಾಡ್ತೀರೋ ಪ್ರತಿ ದೇಶವು ಸಹ ಒಂದು ಕಂಪನಿಗೆ ಏನಾದ್ರೂ ಆದ್ರೆ ಅದರ adverse effect ಇದಕ್ಕೆ ಆಗೋದು ಸಹಜ, ಈಗ ಮನೇಲಿ ಒಬ್ರಿಗೆ ಫ್ಲೂ ಬಂದ್ರೆ ಅದು ಮನೆಯವರೆಲ್ಲರಿಗೂ ಹರಡೋಲ್ವೆ? ಹಾಗೇನೆ ಇದು ಸಹ. ಅಂಥಾದ್ರಲ್ಲಿ ತಾವೂ ಗಾಬರಿ ಬಿದ್ದು, ಇತರರನ್ನು ಗಾಬರಿ ಬೀಳಿಸಿ, ಜಗತ್ತೇ ಮುಳುಗಿ ಹೋಯ್ತು ಇನ್ಮೇಲೆ ಅಂಧಾಕಾರದ ಜೀವನ ಅನ್ನೋ ರೀತಿ ಬಿಂಬಿಸೋದು ಎಷ್ಟು sari. BJP ಕರ್ನಾಟಕದಲ್ಲಿ ಇರೋ ಒಂದೇ ಕಾರಣಕ್ಕೆ ಕೇಂದ್ರ ಸರ್ಕಾರ ನಮಗೆ ತಾರತಮ್ಯ ಮಾಡ್ತಿರೋದು ತಿಳಿದ ವಿಷಯವೇ ಅಲ್ವ. ಮಲತಾಯಿ ಧೋರಣೆ ಇಂದ ಅಗತ್ಯ ಇರೋ ಅಷ್ಟು ವಿದ್ಯುತ್ಚಕ್ತಿ ಕೊಡದೆ ಇರೋದು ಮುಂದುವರೆದರೆ ಆಗ ಮಾತ್ರ ಅಂಧಕಾರತೆ ಆಗೋದು ನಮ್ಮಲ್ಲಿ :). IT ನ ಏಳು ಬೀಳುವಿನಲ್ಲಿ ಅಲ್ಲ

ISRO ಎಂಟು ಉಪಗ್ರಹಾನ ಒಮ್ಮೆಲೇ, ಒಂದೇ ಉಡಾವಣ ವಾಹಕದಿಂದ ಹಾರಿಸಿದ್ದರ ಹಿಂದೆ IT ಇಲ್ಲ ಅನ್ಕೊಂಡಿದೀರ?? ನಿರ್ಜೀವವಾದ mobile ಗೆ ಜೀವ ತುಂಬೋದು ISRO ಉಪಗ್ರಹ ಮಾತ್ರ ಅನ್ನೋದು ಅಂತ ನೀವು ಅನ್ಕೊಂದಿದ್ರೆ ಅದು ನಿಮ್ಮ ಬ್ರಾಂತು ಅಷ್ಟೇ. ಇಂಥಹ ನಿಮ್ಮ ವಿಷಯ ಜ್ಞಾನ ಅಳೆಯೋ ದುಸ್ಸಾಹಸಕ್ಕೆ ನಾನು ಕೈ ಹಾಕೋ ಧೈರ್ಯ ಮಾಡೋಲ್ಲ. ಖಚಿತ ತಂತ್ರಾಂಶ (embedded software) ಅನ್ನೋ ಒಂದು ವಿಭಾಗ ಇದೆ IT ಯಲ್ಲಿ, ಅದು ಇಲ್ದೆ ಈ BHEL/BEL ತಯಾರಿಸೋ IC (integrated chip) ಎಲ್ಲಾ ವೇಸ್ಟ್. ನೀವು ಉಲ್ಲೇಖ ಮಾಡಿದ "ಜೀವ ತುಂಬಿಸೋ" ಕಾರ್ಯಕ್ರಮಕ್ಕೆ ISRO ಅವರು ಅಮದು ಮಾಡಿಕೊಳ್ಳುವ ಪ್ರತಿ processors/ micro-controller ಗಳನ್ನ, ಖಚಿತ ತಂತ್ರಾಂಶದ ಸಹಾಯದಿಂದ ಹೃದಯ ಬಡಿತ ಶುರು ಮಾಡದೆ ಇದ್ರೆ, ಕಿಲೋ ಲೆಕ್ಖದಲ್ಲಿ ತೂಕಕ್ಕೆ ಹಾಕಿದ್ರು ತೊಗೊಳೋರು ಗತಿ ಇರೋಲ್ಲ, ಇನ್ನ "ಜೀವ ತುಂಬೋದು(ಚೇತನ ಬರಿಸೋದು)" ಆಮೇಲಿನ ಮಾತು.

ಬೆಂಗಳೂರಲ್ಲಿ ಕೂತ್ಕೊಂಡು ಅಮೇರಿಕ, ಬ್ರಿಟನ್, ಜರ್ಮನಿ ಜೊತೆ ಕೆಲಸ ಮಾಡಲು ಸಾಧ್ಯ ಆಗಿರೋದು ಕೇವಲ ISRO/CDoT ಒಂದೇ ಮುಖ್ಯ ಅಲ್ಲ ವ್ಯವಹಾರಕ್ಕೆ ಅಗತ್ಯ ಇರೋ ತಂತ್ರಾಂಶ ಸಹ ಅಷ್ಟೇ ಮುಖ್ಯ. ಸಂಪರ್ಕ ಇದ್ಬಿಟ್ರೆ ಸಾಕಾಗೋಲ್ಲ ಅಗತ್ಯ ಸಂಪನ್ಮೂಲ ಸಹ ಇರೋದು ಅಷ್ಟೇ ಮುಖ್ಯ. landline ಮೂಲಕ ಸಂಪರ್ಕಿಸಿ, ತಂತ್ರಾಂಶ ಬರೆಯೋಕ್ಕೆ ಆಗುತ್ತಾ? ಕಥೆ ಮಾತಾಡಬೇಕು ashte ಗ.ಯ(ಗಣಕ ಯಂತ್ರ) ಇಲ್ಲದೆ ಹೋದರೆ. ಕೂತು ಕೆಲಸ ಮಾಡಬೇಕು ಅಂದರೂ ಸಹ ತಂತ್ರಾಂಶ ಅಷ್ಟೇ ಮುಖ್ಯ. ತಂತ್ರಾಂಶವನ್ನ ಅಸಹಾಯಕ ಅಂತ ತೋರಿಸಿಬಿಟ್ರೆ ಏನು workout ಆಗೋಲ್ಲ ಯಾಕಂದ್ರೆ ನಾನು ಮೇಲೆ ಉಲ್ಲೇಖ ಮಾಡಿದಂತೆ ನಿಮ್ಮ ಮಾತುಗಳು ಸರಿಯಾದ ಅಡಿಪಾಯ ಇಲ್ಲದೆ ಬರೆದಂತಹವು ಅಂತ ತೋರಿಸುತ್ತದೆ. ತಂತ್ರಾಂಶ ಇಲ್ದೆ ಯಾವ artificial intelligence ಅಥವ ಸಂಕೀರ್ಣ ಯೋಜನ್ಗೆಳು execute ಆಗೋಕ್ಕೆ ಸಾಧ್ಯವೇ ಇಲ್ಲ ಇಂದಿನ ಕಾಲದಲ್ಲಿ. ಈಗ ಋಷಿ ಮುನಿಗಳ ಕಾಲಕ್ಕೆಹೋಗಿ ೦ ಕಂಡು ಹಿಡದ ಭಾರತೀಯರ ಉಲ್ಲೇಖ, ಇಡಿ ಮಾನವ ಇತಿಹಾಸದಲ್ಲೇ ಮೊದಲ ಸರ್ಜರಿ ಮಾಡಿದ ಶೂಶ್ರುತ ಮುನಿಗಳು, "father of modern surgery" ನ ಉಲ್ಲೇಖ ಮಾಡೋದು ಸಹ ಸದ್ಯದ ಪರಿಸ್ಥಿತಿಯಲ್ಲಿ ತಪ್ಪಾಗುತ್ತೆ . ನಾವು ಯಾವ್ದೇ ಬೇಸಿಕ್ ಕಾರ್ಯಾಚರಣೆನ ಹೀಗೆಳೆಯೋದರಲ್ಲಿ ದೊಡ್ಡತನ ಇಲ್ಲ. ಪ್ರತಿಯೊಂದು ಕಾರ್ಯವು ಅಥವ ವಿಜ್ಞಾನ ಬೇರೆದರ ಮೇಲೆ ಅವಲಂಬಿತ ಇದೆ. ಬೇರ್ಪಡಿಸಿ ಉದ್ಧಾರ ಆಗೋಕ್ಕೆ ಸಾಧ್ಯ ಇಲ್ಲ . ಎಲ್ಲಾ ವಿಂಗಡನೆಗಳನ್ನು ಸಹ ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕೇ ವಿನಃ , ಇದ್ರಿಂದಾನೆ ಅದು, ಇದು ಇಲ್ದೆ ಅದು ಇಲ್ಲ ಅನ್ನೋ ತುಲನೆ ಮಾಡೋದು ಹಾಸ್ಯಾಸ್ಪದ.

ISRO ನ ನೋಡಿ ಪಾಠ ಕಲಿಯಿರಿ ಅಂತ ಹೇಗೆ "ಕೇವಲ" ಒಂದು amerikan aerospace association ಹೇಳಿತೋ ಹಾಗೆಯೇ "ಇಡಿ ಜಗತ್ತು" ಅಂದ್ರೆ ಲಕ್ಷಾಂತರ, ಕೋಟ್ಯಾಂತರ ಅಸೋಸಿಯೇಷನ್ ಗಳು ಗುರುತಿಸುವ, inspire ಆಗುವುದು ನಮ್ಮ ಬೆಂಗಳೂರನ್ನ ನೋಡಿಯೇ ಅಲ್ವ?? ಅದು "ಸಿಲಿಕಾನ್ ಸಿಟಿ"ಯನ್ನು. ಭಾರತ ನಡುಗ್ತಿರೋದು ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಬೀಳುತ್ತೆ ಅನ್ನೋ ಒಂದೇ ಕಾರಣದಿಂದ ಅಷ್ಟೇ. ಕೆಲಸ ಕಳೆದುಕೊಂಡರೆ, ಹೊಟ್ಟೆ ಪಾಡಿಗೆ ಎಲ್ಲರಿಗು ಅನ್ಯ ಮಾರ್ಗ ಇರೋಲ್ವಲ್ಲ ಅದಕ್ಕೆ ಅಷ್ಟೇ. ನಿಮಗೆ ಗೊತ್ತಿರೋ ಹಾಗೆ ಮಾಧ್ಯಮ್ಮಕು ಸಹ recession effect ಆಗಿದೆ, advertisement ಬರ್ತಿಲ್ಲ ಕಾರಣ ಕಂಪನಿಲಿ product move ಆಗ್ತಿಲ್ಲ, ಇದರಿಂದ ದಿನ ಪತ್ರಿಕೆ sustain ಮಾಡೋದು ಕಷ್ಟ. ಹಾಗಾಗಿ ಕೆಲಸದಿಂದ ತೆಗಿತಿರೋದು ಅನಿವಾರ್ಯ ಆಗೋಗಿದೆ, ಹೀಗೆ ಕೆಲಸ ಕಲ್ಕೊಂದಿರೋ journalistgalu ಯಾಕೆ ಬೀದಿ ಬೀದಿ ಅಲಿತಿದಾರೆ?? ಅವರೆಲ್ಲ entrepreneurs ಆಗಬಹುದಲ್ವಾ? ಬರಿ ೫-೧೦ ಪುಟ ದಾಟದ "evening"ಅರ್ಸ್ ಅಥವ advertisement ನೆ ಹೆಚ್ಚು ಪ್ರಕಟಿಸೋ ಹತ್ತಾರು ಪ್ರತ್ರಿಕೆಗಳಲ್ಲಿ ಕೆಲಸ ಮಾಡ್ಕೊಂಡು ಬದುಕೊಕ್ಕು ರೆಡಿ ಆಗಿರೋದು ಯಾಕೆ? ೧೦,೦೦೦ ರೂಪಾಯಿಗೆ ಕೆಲಸ ಮಾಡ್ತಿದ್ದ journalist ಗೆ ಇವತ್ತು ೩೦೦೦/- ರೂಪಾಯಿನ ಕೆಲಸವು ಗತಿ ಇಲ್ಲ, ಯಾಕೆ?? cheap labour ಗೆ ಒಪ್ಪಿಕೊಂಡರು ಸಹ!!! ದಿನ ಪತ್ರಿಕಗಳು ಎಷ್ಟಿವೆ ಕನ್ನಡದ್ದು ಅಥವಾ ಬೆಂಗಳೂರು ಲೋಕಲ್ ನ್ಯೂಸ್ ಪ್ರಕಟಿಸೋದು ಎಷ್ಟಿವೆ ಅಂತ ಯಾರ್ಗಾದ್ರು ಕೇಳಿದ್ರೆ, ಪಾಪ ಮುಗ್ಧ ಜನರಿಗೆ ಏನು ಗೊತ್ತಿರುತ್ತೆ ಲೆಕ್ಕವಿಲ್ಲದಷ್ಟು ಇವೆ ಅಂತ :) ಒಂದ್ ಮೂರ್ನಾಲ್ಕು ಅಂತಾರೆ ಅಷ್ಟೇ. ಎಲ್ಲವೂ ದಿನದ ಕೊನೆಗೆ ಮೂಲೆ ಸೇರೋದಂತು ನಿಜ!! ವಿ.ಕ ದ ಕೆಲವು ಲೇಖನಕ್ಕೆ ಕತ್ತರಿ ಹಾಕಿ circulate ಮಾಡೋದು ಸಹ ಅಷ್ಟೇ ಸತ್ಯ :) ನಿಮ್ಮ ಲೇಖನಗಳು ಹಾಗು ಪುಕ್ಕಟೆಯಾಗಿ ಅಂತರ್ಜಾಲದಲ್ಲಿ (http://www.pratapsim...) ದೊರೆಯುವ ನಿಮ್ಮ ಪುಸ್ತಕಗಳು ಸಹಿತ circulate ಮಾಡಿ ಅವು ಹೆಚ್ಚು ಜನರನ್ನ ತಲುಪೋಕ್ಕೆ IT ಬೇಕೇ ಬೇಕು, ತಲುಪಿಸೋರು ಹೆಚ್ಚಿನವರಲ್ಲಿ IT ಅವರೆನೆ :).

out sourcing ಅನ್ನೋದು ನಿಲ್ಲಿಸೋಕ್ಕೆ ಸಾಧ್ಯವೇ ಇಲ್ಲ, recession ನ ಪ್ರಭಾವದಿಂದ ಅವರ ಖರ್ಚುಗಳನ್ನು ಮಿತಗೊಳಿಸಲು ಅಥವಾ ಅಂಕೆಯಲ್ಲಿಡಲು ಮತ್ತಷ್ಟು ಕೆಲಸಗಳನ್ನು ಭಾರತಕ್ಕೆ ಹಸ್ತಾಂತರಿಸುತ್ತಿದಾರೆ, ಈ ವಿಚಾರ ಯಾಕೆ ಹೇಳಿಲ್ಲ? ಕುರುಡು ಎನ್ನಬೇಕೆ!! ಇಂಥಹ ಕಾರ್ಯಾಚರಣೆಯ ಸಮಯದಲ್ಲಿ ಕೆಲಸ ಕಳೆದುಕೊಳ್ಳುವ ಭೀತಿ ಇರೋ ಯಾರೆ ಆದರು ನಡುಗ್ಲೆ ಬೇಕು, ಅಮೆರಿಕದವರು ಆದ್ರೇನು ಭಾರತೀಯರು ಆದ್ರೇನು, ಆಶ್ಚರ್ಯ ಯಾಕೆ? IT ಅವರಿಗೆ ಹೆಚ್ಚು ಏಟು ಅನ್ನೋ ಕುಹಕ ಬೇರೆನಾ ಇದ್ರಲ್ಲಿ? ಮಾಧ್ಯಮದವರು ಸಹಿತ ಅನುಭವಿಸುತ್ತಿದ್ದಾರೆ, ಗಣಿಗಾರಿಕೆಯವರು ಅನುಭವಿಸುತ್ತಿದ್ದಾರೆ, "product"oriented ಕಂಪೆನಿಗಳು ಸಹಿತ, . ಯಾರೇನು recession proof ಅಲ್ಲ ಕೇವಲ IT ಒಂದಕ್ಕೆನೆ ಹಾನಿ ಆಗ್ತಿರೋದು ಅನ್ನೋ ಪ್ರಚಾರ ಕೊಡೋಕ್ಕೆ. ಇಂದಿಗೂ ಸಹ "cheap labour + quality" is most sought after in IT industry or for that matter any industry, nim industrygu ಸಹ ಅನ್ವಯಿಸುತ್ತೆ :).

ನಿಜ, ಪರಸ್ಪರ ಹಳಿದುಕೊಳ್ಳೋ ಕಾಲ ಅಲ್ಲ ಅದಕ್ಕೆ ನಾನು ಕೇವಲ ಸಾಮ್ಯತೆ ತೋರಿಸ್ತಿದೀನಿ ಅಷ್ಟೇ, ಹಳಿಯೋ ಲೆವೆಲ್ ಗೆ ನಾನು ಪ್ರಕ್ರಿಯೆ ನೀಡಿದ್ದರೆ ಅದು ಬೇರೆ ಥರನದ್ದೆ ಆಗಿರೋದು, ನಿಮಗೆ ಅರ್ಥ ಅಗೋ ಉದ್ಯಮದ ಉದಾಹರಣೆ ಕೊಟ್ಟು ಸಾಮ್ಯಾತ ತೋರಿಸ್ತಿರೋದು ಅಷ್ಟೇ. ಯಾಕಂದ್ರೆ ನಿಮ್ಮ ಲೇಖನ ಓದಿದ ಯಾರಿಗೆ ಅದ್ರು ಸಹ IT ಅಂದ್ರೆ ಇಷ್ಟೇನಾ ಅನ್ನೋ ಸಂಕುಚಿತ ಮನೋಭಾವ ಬರಿಸೋ ಹಾಗಿದೆ. ಆದ್ರೆ ಅದು ನೀವು ತೋರಿಸಿದ ಹಾಗಿಲ್ಲ, "ಎಲ್ಲರ ಮನೆ ದೊಸೇನು ತೂತೆ" ಅಂತ ಜನರಿಗೆ ಅರ್ಥೈಸಬೇಕಿದೆ. ನೀವು ಸಹ IT ಅಂದ್ರೆ ಏನು ಅಂತ ಮತ್ತೊಮ್ಮೆ ಶೋಧಿಸಿ ಪರ ವಿರುದ್ಧ ಎರಡೂ ಬರೆಯಿರಿ, ಆಗ ಲೇಖನ ಸ್ವಾಗತಾರ್ಹ ಆಗುತ್ತೆ ಅದು ಬಿಟ್ಟು IT ಅಂದ್ರೆ ಏನು ಅಲ್ವೇ ಅಲ್ಲ ಅನ್ನೋ ಚಿತ್ರಣವನ್ನ ಬಿಂಬಿಸೋ ವ್ಯರ್ಥ ಪ್ರಯತ್ನ ಬಿಡಿ. ಈಗಾಗ್ಲೇ ಎರಡೂ ಲೇಖನ ಬರೆದು ಸಾಕಷ್ಟು ಹಾನಿ ಮಾಡಿದೀರಾ ಅದನ್ನೇ ದಯವಿಟ್ಟು ಪುನರಾವರ್ತನೆ ಮಾಡಬೇಡಿ ಅನ್ನೋದು ನನ್ನ ಕಳಕಳೀಯ ಪ್ರಾರ್ಥನೆ.

ಅಲ್ಲ ನೀವ್ ಹೇಳಿದೀರಲ್ಲ .. IBM ಅಂದ್ರೆ hardware, CisCo ಅಂದ್ರೆ networking, Microsoft, google ಅಂದ್ರೆ software (google ಅಂದ್ರೆ software ಅಲ್ಲ ಮಹಾ ಸ್ವಾಮೀ ಅದು ಕೇವಲ ಒಂದು search engine, ಅವರದೇ ತಂತ್ರಾಂಶ ವಿಭಾಗ ಇರೋದು ಸತ್ಯ ಆದ್ರೆ ಗೂಗಲ್ ಅಂದ್ರೆ ತಂತ್ರಾಂಶ anta ಯೋಚಿಸೊಲ್ಲ search engine ಅಂತ ಅಷ್ಟೇ ಯೋಚಿಸ್ತಾರೆ) ಹೀಗೆಲ್ಲ ಹೇಳಿದೀರಲ್ಲ, ನಿಮ್ಮ ಈ ಮಾತಿಗೆ ನಂಗೆ Marc Faber ಅವರು ಅಮೆರಿಕದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಹೇಳುರಿವ ಮಾತುಗಳು ನೆನಪಿಗೆ ಬರುತ್ತದೆ. Marc Faber ಅವರು ಅಮೇರಿಕಾದ ಖ್ಯಾತ investment analyst ಹಾಗು "Entrepreneur", ಇವರು ತಮ್ಮ ತಿಂಗಳಿನ ಅಂಕಣದಲ್ಲಿ ಹೇಳಿರೋದು ಏನಂದ್ರೆ.. "ಸರ್ಕಾರ ನಮಗೆಲ್ಲರಿಗೂ ೬೦೦$ rebate ಕೊಡ್ತಿದೆ, ಈ ಹಣವನ್ನ Wal-Mart ನಲ್ಲಿ ಖರ್ಚು ಮಾಡಿದ್ರೆ ಆ ದುಡ್ಡು ಚೀನಾಗೆ ಹೋಗುತ್ತೆ. petrol/ಅಡುಗೆ ಅನಿಲ ಖರೀದಿಸಿದರೆ ಅರಬ್ ದೇಶಕ್ಕೆ ಹೋಗುತ್ತೆ, ಹಣ್ಣು ತರಕಾರಿ ತೊಗೊಂಡ್ರೆ ಮೆಕ್ಸಿಕೋ, ಹೊಂಡುರಾಸ್ ಹಾಗು ಗ್ವಾಟೆಮಾಲಗೆ
ಹೋಗುತ್ತೆ. ಕಾರ್ ಕೊಂಡುಕೊಂಡರೆ ಜರ್ಮನಿ/ಜಪಾನ್ ಗೆ ಹೋಗುತ್ತೆ, ಕಸ (ಹಳೆ ಪಾತ್ರೆ, ಪಿಲಾಸ್ಟಿಕ್ ಸಾಮಾನ್ :)) ತೊಗೊಂಡ್ರೆ ತೈವಾನ್ ಗೆ ಹೋಗುತ್ತೆ , ಗ.ಯ ಕೊಂಡರೆ ಭಾರತಕ್ಕೆ ಆ ದುಡ್ಡು ಸೇರುತ್ತೆ, ಒಟ್ಟಿನಲ್ಲಿ ಅಮೆರಿಕದ ಅರ್ಥಿಕ ವ್ಯವಸ್ತೆಯನ್ನ ಯಾವುದು ಬೆಂಬಲಿಸುವುದಿಲ್ಲ. ಆ ದುಡ್ಡನ್ನ ನಮ್ಮಲ್ಲೇ ಇಟ್ಕೋಬೇಕು ಅಂದ್ರೆ ಇರೋದು ಒಂದೇ ಒಂದು ಮಾರ್ಗ, ಅದು ಏನಪ್ಪಾ ಅಂದ್ರೆ ವೇಶ್ಯೆಯರು ಹಾಗು ಬೀರ್ ನ ಮೇಲೆ ದುಡ್ಡು ಉಡಾಯಿಸಬೇಕು, ಯಾಕಂದ್ರೆ ಇವೆರಡೆ ಪದಾರ್ಥಗಳು US ನಲ್ಲಿ ತಯಾರು ಆಗ್ತಿರೋದು. ಹಾಗಾಗಿ ನಾನು ನನ್ನ ಭಾಗದ ಖರ್ಚನ್ನು ಹೀಗೆ ಮಾಡ್ತಿದೀನಿ" ಅಂತ ಹೇಳಿಕೆ ನೀಡಿದ್ದಾರೆ ಅಂದ್ಮೇಲೆ ನೀವೇ ಲೆಕ್ಕಾಚಾರ ಮಾಡಿ, ನಮ್ ಭಾರತ ಜಾಗತಿಕ ಮಟ್ಟದಲ್ಲಿ ಯಾವುದಕ್ಕೆ ಗುರುತಿಸಿಕೊಳ್ಳುತ್ತದೆ ಅಂತಂದ್ಬಿಟ್ಟು. ಇದರ ಬಗ್ಗೆ ನಾವು ಯೋಚನೆ ಮಾಡಲೇಬೇಕಾದ ಪರಿಸ್ಥಿತಿ ಅಲ್ವ? ಬರಿ ಮಣ್ಣು ಮರುಳು ಸಿಮೆಂಟ್ ಕಬ್ಬಿಣ ಅಂತ ಇದ್ಬಿಟ್ರೆ ಸಾಕಾ? ದೇಶದ ಗಡಿ ದಾಟಿ ನಮ್ಮ ಛಾಪು ಮೂಡಿಸೋದು ಹೇಗೆ? ಲಕ್ಷ್ಮಿ ಮಿತ್ತಲ್ ಹೊರ ದೇಶದಲ್ಲೇ ಯಾಕೆ ಖ್ಯಾತ ಆಗಬೇಕಿತ್ತು? ಅವರು ಸಹ ಇಲ್ಲಿನವರ ತಾನೇ? ಮೋಜಿಗೆ ಅಂತ ಕೆಲ ದಿನಗಳ ಮಟ್ಟಿಗೆ ದೇಶ ಬಿಟ್ಟು ಹೋದವರು ಅಲ್ಲಿನ oppurtunity ನ ಗ್ರಹಿಸಿ settle ಆಗಿಬಿಡೋದ? ಇಲ್ಲಿ ಅಂತಹ oppurtunity ಸಿಗುತ್ತಾ?? ಯಾರಾದ್ರೂ ಇದೆ ಅಂತ ಹೇಳೋ ಧೈರ್ಯ ಮಾಡ್ತೀರ? ಕಚಡ communist ಗಳು TATA nano ಪ್ರಾಜೆಕ್ಟ್ ಗು ಕಲ್ಲು ಹಾಕಿದ ಕ್ರಿಮಿಗಳು, ಲಕ್ಷ ಮಂದಿ ಹೊಟ್ಟೆ ಮೇಲೆ ಕಲ್ಲು ಹಾಕಿದವರು, ಇಂಥಹ competent market, growth oppurtunitites ನ ಚಿಕ್ಕಂದಿನಿಂದಲೇ ನೋಡಿ ಬೆಳೆದ ಭಾರತೀಯನಿಗೆ entrepreneur ಆಗೋ ಆಸೆ ಮೂದೊದ್ರಲ್ಲಿ ಸಂಶಾಯಾನೆ ಇರಬಾರದು, ಏನಂತೀರಾ :) ??

ಇನ್ಫೋಸಿಸ್, ವಿಪ್ರೊ, TCS, ಸತ್ಯಮ್ ಇವೆಲ್ಲ ದೈತ್ಯ ಕಂಪನಿ ಅನ್ನೋದೇನೋ ನಿಜ , ಹಾಗಂದ ಮಾತ್ರಕ್ಕೆ ಅವೇ ಇಡಿ ಭಾರತದ ಹೊರೆ ಹೊತ್ಕೊಂಡು ಓಡಾಡ್ತಿಲ್ಲ. ಅವರಿಗೆ ಅವರ ವ್ಯವಹಾರ ದೊಡ್ಡದು ಅಷ್ಟೇ, ಇದೆ bottomline. ಹಾಗೆಂದ ಮಾತ್ರಕ್ಕೆ ಪ್ರತಿ ಕಂಪನಿ ಸಹ product oriented ಆಗಿದ್ದು ಬಿಟ್ರೆ ಅದರ maintanence work ಯಾರ್ ಮಾಡ್ಬೇಕು? ಅದೇನು use & throw shaving stick ತ್ರಾಣ? so product ಎಷ್ಟು ಮುಖ್ಯವೋ service ಸಹ ಅಷ್ಟೇ ಮುಖ್ಯ bajaj scooter ಅಷ್ಟೊಂದು ಫೇಮಸ್ ಆಗೋಕ್ಕೆ ಕಾರಣ ಏನು? ಇಡಿ ಗಾಡಿ ಕೆಟ್ಟ ಕೆರ ಹಿಡಿದಿದ್ರು service ಮಾಡ್ಸೋಕ್ಕೆ ೩೦೦೦-೪೦೦೦ ರೂಪಾಯಿ ಅಷ್ಟೇ . A-one ಆಗೋಗುತ್ತೆ ಅಷ್ಟು ಕಡಿಮೆ ಖರ್ಚಿನಲ್ಲೇ, ಇದೆ ತರಹ ಎಲ್ಲಾ ಉದ್ದಿಮೆಗೂ ಒಂದು service division ಇರಲೇಬೇಕು. ಹಾಗೆಯೇ ಜಾಗತಿಕಮಟ್ಟದಲ್ಲಿ ನಮ್ ಭಾರತ software service division ಅನ್ಕೊಂಡ್ರೆ ಏನು ತಪ್ಪಿಲ್ಲ.

ಅಮೇರಿಕ ವರ್ಷಕ್ಕೆ ೭೦೦೦೦ engineering ಪದವಿಧರನನ್ನ ರೂಪಿಸುತ್ತೆ ಅಂದ್ರಲ್ಲ, ಅದ್ರಲ್ಲಿ ಎಷ್ಟು ಮಂದಿ ಭಾರತೀಯರು ಅಂತ ಸಹ ಹೇಳಬೇಕಿತ್ತು. ವಿದೇಶಿ university ಗಳಿಗೆ ಭಾರತೀಯ ವಿದ್ಯಾರ್ಥಿಗಳು ಅಂದ್ರೆ ಅಚ್ಚು ಮೆಚ್ಚು ಇದು ಸಹ ಗಮನ ಇರಿಸಿಕೊಳ್ಳಿ. ಇದೆಲ್ಲ ಕೇವಲ ISRO impression ಅಲ್ಲ, ನಮ್ಮ ದೇಶದ ವಿಧ್ಯಾರ್ಥಿಗಳ ನಡಾವಳಿ, ನಮ್ ದೇಶದ ಸಂಸ್ಕೃತಿಯ ಛಾಪು . ಇಡಿ europe ನ ಪದವೀದರರ ಸಂಖ್ಯೆ ೧ ಲಕ್ಷ ಆಗಿದ್ರೆನು ಈಗ? ಅವರಲ್ಲಿ ಕಲೆ/ ಇತಿಹಾಸ/ ಸಾಹಿತ್ಯ ವಿದ್ಯಾಭ್ಯಾಸಕ್ಕೂ engineering ನಷ್ಟೇ ಏನು, ಅದಕ್ಕಿಂತ ಹೆಚ್ಚು ಮನ್ನಣೆ, ಗೌರವ ಇದೆ . ನಮ್ಮಲಿ ಕುಂಚ ಹಿಡಿದು ಚಿತ್ರಕಲೆ ಮಾಡ್ತೀನಿ ಅಂದ್ರೆ, ಮೊದ್ಲು ಒದ್ದು ಅನಂತರ ಹೊಟ್ಟೆಗೆ ಹಿಟ್ಟಿನ ದಾರಿ ನೋಡ್ಕೋ ಅಂತ ಹೇಳ್ತಾರೆ. ಅವರು ಹೇಳೋದ್ರಲ್ಲೂ ಅರ್ಥ ಇದೆ, ನಮಗೆ ಶೋಕಿ ಜೀವನ ಬೇಕಿಲ್ಲ ಬೆಳೆಯುವ ಪರಿಸ್ಥಿತಿಯಲ್ಲಿ ಮೊದ್ಲು ಹೊಟ್ಟೆಗೆ, ಗೇಣು ಬಟ್ಟೆಗೆ ಆಮೇಲೆ ಮಿಕ್ಕಿದಕ್ಕೆ, ಅಪ್ಪ ಮಾಡಿದ್ದ ಆಸ್ತೀನೋ ಅಥವ ಓತ್ಲಾ ಹೊಡ್ಕೊಂಡು ಸರ್ಕಾರ ಕೊಡೊ ನಿರುದ್ಯೋಗ ಭತ್ಯೆ ತೊಗೊಂಡು ಜೀವನ ಮಾಡೋ ಹಾಗಿದ್ರೆ ನಮ್ ದೇಶದಲ್ಲೂ ಸಹ ೧ ಲಕ್ಷ ಜನ ಪಾಸು ಆಗ್ತಿದ್ರೆನೋ. ವಿಪರ್ಯಾಸ ಅಂದ್ರೆ ನಮಗೆ ಅಂತಹ ಮನೋ ಭಾವ ಇಲ್ಲ, ಆದರು ಸಹ ಎಷ್ಟು ಜನ ತಂತ್ರಾಂಶ ಅಭಿಯಂತರರು ತಮ್ಮ software career ತ್ಯಜಿಸಿ ಅವರ ಹವ್ಯಾಸಗಳ ಹಿಂದೆ ಹೋಗಿ ಸಫಲ ಆಗಿಲ್ಲ? ಉದಾಹರಣೆಗೆ ನಮ್ಮ ಕನ್ನಡತಿ "ನಂದಿತ"ಅವರನ್ನೇ ತೊಗೊಳ್ಳಿ "ಪಟ್ರೆ loves ಪದ್ಮ" ಚಿತ್ರದಲ್ಲಿ "ಹೇಯ್ ಹುಡುಗಿ, ನೀ ಒಮ್ಮೆ ನೋಡು " ಹಾಡಿಗೆ ಪ್ರಶಸ್ತಿ ತೊಗೊಂಡಿಲ್ವ? ಅವ್ರು ಸಹ ತಂತ್ರಾಂಶ ಅಭಿಯಂತರರೆ ಆಗಿದ್ರು ಮೊದಲು, ಇದು latest ಉದಾಹರಣೆ ಅಷ್ಟೇ. ಅವರೆಲ್ಲ software ತಲೆ ಉಳ್ಳವರು ತಾನೇ ? ಅನುಕೂಲ ಪರಿಸ್ಥಿತಿ ನೋಡಿ software ಬಿಟ್ರು, ಕಲಾ ಸೇವೇಲಿ ತೊಡಗಿಸಿಕೊಂಡರು. ಶೋಕಿಗೆ ಬಿದ್ದು ಹಾಳಾಗೊರನ್ನ ನೋಡಿ ನಾವೇ great ಅನ್ಕೊಂಡ್ರೆ ಅದಕ್ಕಿಂತ ಹುಚ್ಚತನ ಇಲ್ಲ. europe ಅಲ್ಲಿ ೧,೦೦,೦೦೦ ಆಗ್ಲಿ ಇಡಿ ಜಗತ್ತಿನ ಒಟ್ಟು ಅಭಿಯಂತರರ ಸಂಖ್ಯೆ ಒಂದೆಡೆ ಭಾರತೀಯ ಅಭಿಯಂತರ ಸಂಖ್ಯೆ ಒಂದೆದ ಆದರು ಸಹ ನಮ್ಮನ್ನು (ಭಾರತೀಯ ತಂತ್ರಾಂಶ ಅಭಿಯಂತರರನ್ನು) ತುಳಿಯಲು ಸಾಧ್ಯವೇ ಇಲ್ಲ. ಇಂದಿಗೂ, ಎಂದಿಗೂ, ಎಂದೆಂದಿಗೂ. ಏಳು ಬೀಎಳು ಸಹಜ ಅದಕ್ಕೆ ವ್ಯವಹಾರ ಅನ್ನೋದು ಆದ್ರೆ ಇದೆ ಅದರ ಹಣೆ ಬರಹ ಅಂತ ಬಿಂಬಿಸಿರೋ ನಿಮ್ಮ ಮಾತುಗಳಿಗೆ ಅಂದ್ರೆ ಏನು ಅನ್ನೋಣ ??

IBM, microsoft, dell ಅಂತಹ ಒಂದೂ ಕಂಪನಿ ಯಾಕೆ ರೂಪುಗೊಳ್ಳಲಿಲ್ಲ ಅಂತೀರಲ್ಲ ಈ ಕಂಪನಿಗಳಲ್ಲಿ higher management ಅಲ್ಲಿ ಯಾರ್ ಯಾರಿದ್ದಾರೆ ಅಂತ ನೋಡಿದೀರಾ? ಕನ್ನಡಿಗರು ಇರೋದು ಸಿಕ್ಕಾಪಟ್ಟೆ ವಿರಳ ಬಿಡಿ, ಉತ್ತರ ಭಾರತೀಯರು, ತಮಿಳನೋ ಅಥವ ಕುಟ್ಟಿಕ್ಕಾರನ್ ಇದ್ರೆ ಆಶ್ಚರ್ಯ ಪಡಬೇಕಿಲ್ಲ. ಸರ್ವೇ ಮಾಡಿ ನೋಡಿ :) ನಿಮಗೆ ಜಯವಾಗಲಿ!!! . Gates, Jobs, Dell ಅಂಥವರು ಹುಟ್ಟಿದ ನಾಡಿನಲ್ಲೇ ಅವರಿಗೆ compete ಮಾಡೋಕ್ಕೆ ಬೇರ್ಯಾರು ಹುಟ್ಟಲಿಲ್ಲ, ಕನಿಷ್ಠ ಪಕ್ಷ ಅಂಥವರ ಕಂಪನಿಯಲ್ಲಿ ಒಳ್ಳೆ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯರೇ ಹೆಚ್ಚು ಅನ್ನೋದನ್ನು ಸಹ ಅಲ್ಲಗಳೆಯೋಕ್ಕೆ ಆಗೋಲ್ಲ. ಅದೇನು ಕಮ್ಮಿ ಸಾಧನೆ ಅಲ್ಲ.

ಮಹಾ ಸ್ವಾಮೀ, Thumsup ಎಂಥ brand ನಮ್ ಭಾರತದ್ದು , Bisleri ಎಂಥಹ brand ನಮ್ ಭಾರತದ್ದು ಅವನ್ನೆಲ್ಲ ವಿದೇಶಿ ಕಂಪೆನಿಗಳು ಮಾರುಕಟ್ಟೆ ಮೌಲ್ಯಕ್ಕಿಂತ ೧೦-೨೦ರಷ್ಟು ಹೆಚ್ಚಿಗೆ ಕೊಟ್ಟು ಖರೀದಿಸಿ ಅವುಗಳ ಹೆಸರು ಕೆಡಿಸಿ, ಗುಣಮಟ್ಟ ಹಾಳುಗೆಡವಿ ತಮ್ಮ brand ಗಳೇ ಹಿರಿದು ಅನ್ನೋ ಭಾವನೆ ಮೂಡಿಸಲಿಲ್ವೆ, ಅದಕ್ಕೆ ಮಾಧ್ಯಮ ದವರು ಸಹಕರಿಸಲಿಲ್ವೆ , ಇಂದಿಗೂ ಸಹ ಸಹಕರಿಸ್ತಿಲ್ವೆ? ಸಫಲರು ಕೂಡ ಆದರು ತಾನೇ? ಇನ್ನ computer field ಅಲ್ಲಿ ಬೆಳೆಯೊಕ್ಕೆ ಬಿಡ್ತಾರ? ನಮ್ ಭಾರತೀಯರ "entrepreneurship"ನ ಹೆಚ್ಚಿನ ಬೆಲೆಗೆ ಕೊಂಡು ತಮ್ಮ ಕಂಪನಿಗಳಲ್ಲೇ ದುಡಿಸಿಕೊಳ್ಳುತ್ತಿದ್ದಾರೆ. ಒಟ್ನಲ್ಲಿ talent ಗೆ ಮೋಸ ಇಲ್ಲ. ನಮ್ಮಲಾಗಿದಿದ್ರೆ minority, ಆ ಜಾತಿ, ಈ ಜನಾಂಗ, ನಮಗೆ ಇಷ್ಟು seat ಬೇಕು, ಇಷ್ಟು ಜನ ನಮ್ಮವರು ಒಳ್ಳೆ ಹುದ್ದೆಗೆ ಹೋಗಲೇ ಬೇಕು ಅಂತ ಧರಣಿ ಹೂಡಿ ರಾಜಕೀಯ ಮಾಡಿ ಅದನ್ನು ಗಬ್ಬೆಬಿಸಿಬಿಡ್ತಿದ್ರು. ಈಗ IIT ಯಲ್ಲೇ ಸೀಟ್ ಹಂಚಿಕೆ ತೊಗೊಳ್ಳಿ, ಆ ಜಾತಿ ಈ ಪಂಗಡ ಅಂತ reservation ಇತ್ತು ಏನು ಮಹಾ ಸಾಧಿಸಿದರು?? ಕಾಲೇಜಿಗೆ entry ಕೊಟ್ರು ಸಹ ಪರೀಕ್ಷೇಲಿ ಉತ್ತೀರ್ಣ ಆಗೋ ತಾಕತ್ತು ಇರದೇ ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿ ವೇತನ ತೊಗೊಂಡು ಹಾಯಾಗಿ ಕಾಲ ಕಳಿತಿದಾರೆ.. ಇಂಥ ದೌರ್ಭಾಗ್ಯಕ್ಕೆ ಹೆಸರು ವಾಸಿ ನಮ್ ಭಾರತದ political system.

"innovation" ಅನ್ನೋದು ಆಗ್ತಿಲ್ಲ ಅಂದೋರು ಯಾರು?? ಕೃಷಿ ವಿಜ್ಞಾನದಲ್ಲಿ ಎಷ್ಟು ಬೆಳವಣಿಗೆ ಆಗಿದೆ, ರೇಷ್ಮೆ ತಂತ್ರಜ್ಞಾನ ಎಷ್ಟು ಬದಲಾಗಿದೆ, ಪಟ್ಟಿ ಮಾಡಿದ್ರೆ ಸಾವಿರ ಇದೆ, ಇಂದು ತುಳಿಯೋ cycle ಮಾದರಿ ನೋಡಿ, ನೀವು flashback ನೆನೆಸ್ಕೊಂಡು ಇವತ್ತು ನೋಡಿದ್ರೆ ನಿಮಗೆ ಎಲ್ಲೆಲ್ಲು innovation ಕಾಣುತ್ತೆ, ಪ್ರತಿ ವಿಷಯದಲ್ಲೂ ಸಹ!!! ಅದನ್ನ ಗುರುತಿಸೋ ಕಣ್ಣು ನಮಗೆ ಇರ್ಬೇಕು ಅಷ್ಟೇ. ITli ಮಾತ್ರ innovation ಆಗ್ತಿಲ್ಲ ಅನ್ನೋದೇ ನಿಮ್ಮ ಮಾತಿನ ಅರ್ಥ ಆಗಿದ್ರೆ ವಿದೇಶದಲ್ಲಿ ಕೂತೋ ಅಥವ ನಮ್ ದೇಶದ R & D centre ಗಳೇ ಆದರು ಸಹ ಕೆಲಸ ಮಾಡ್ತಿರೋದು ನಮ್ ತಲೆಗಳೇ. entrepreneurshipnalli ಕಾಣದ ದುಡ್ಡನ್ನು security ಅನ್ನು ಇವರು ಕೊಡ್ತಾರೆ. ಸ್ವಂತ ವ್ಯವಹಾರ ಆದ್ರೆ loss ಆದ ೨-೩ ತಿಂಗಳಿನಲ್ಲೇ ಬಾಗಿಲು ಹಾಕ್ಬೇಕು, ದೊಡ್ಡ ಕಾಮ್ಪನ್ಯಲಿ ಹಾಗೆ ಇರೋಲ್ಲ ಅಲ್ವ. so ಕೆಲಸ ಮಾಡ್ತಾರೆ ತಪ್ಪೇನು ? ೨೦೦೦ ಅಲ್ಲಿ recession ಆದಾಗ ಪೀಣ್ಯ ಒಂದರಲ್ಲೇ ನೂರಾರು entrepreneurship ಕಂಪೆನಿಗಳು ಕೊಚ್ಚಿ ಹೋದವು?? ಯಾರಾದ್ರೂ ಬಂದು ಕಾಪಾಡಿದ್ರ? ಇಲ್ಲ, ಸತ್ತವರು ಸತ್ರು ಅಷ್ಟೇ. ಅದ್ರಲ್ಲಿ ಕೆಲಸ ಮಾಡ್ತಿದ್ದೊರು ದೊಡ್ಡ ಬಂಡವಾಳ ಇರೋ ಕಂಪನಿಯಲ್ಲಿ ಇದ್ದಿದ್ರೆ ಕನಿಷ್ಠ ಅರ್ಧ ಜನ, ಕಡೆ ಪಕ್ಷ ಕಾಲು ಭಾಗ ಜನರಾದರೂ ನೆಮ್ಮದಿ ಇಂದ ಇರ್ತಿದ್ರು. ಆದ್ರೆ ಹಾಗೆ ಆಗ್ಲಿಲ್ವಲ್ಲ? ಎಲ್ಲಾ ಕಂಪೆನಿಗಳು ವ್ಯವಹಾರಕ್ಕೆ ಅಂತಾನೆ ಇರೋದು, ಬರೋ ದುಡ್ಡನ್ನ ದಾನಮಾಡೋಕ್ಕೆ ವ್ಯವಹಾರ ಮಾಡ್ತೀನಿ ಅಂದ್ರೆ ಯಾವ ಕಂಪನಿ ಸಹ ಉದ್ಧಾರ ಆಗೋಲ್ಲ. ಅವರ ದುಡ್ಡನ್ನ ಅವರು market ಮಾಡ್ತಾರೆ, ನಾವು ನಮ್ talent ನ market ಮಾಡ್ತೀವಿ. ನೀವು ಸಹ ಕೆಲ್ಸಕ್ಕೆ ಸೇರಿದ ಹೊಸತರಲ್ಲಿ ಅತಿ ಕಮ್ಮಿ ಹುದ್ದೆಯಲ್ಲಿದ್ದುಕೊಂಡೆ ಮೇಲಿನವರಿಗೆ ಸಹಾಯ ಮಾಡಿಕೊಂಡು, ನಿಮ್ಮ talent market ಮಾಡಿ ಹೆಸರು, ಮೆಚ್ಚುಗೆ ಗಳಿಸಿದವರಲ್ಲವೇ :). ಅದೆಲ್ಲ
ಮರೆತು ಹೋಯ್ತಾ IT ಕಡೆ ಬೊಟ್ಟು ಮಾಡುವಾಗ? ಮನುಷ್ಯ ಉದ್ಧಾರ ಆಗೋದೇ ತಾನು ನಡೆದು ಬಂದ ಹಾದಿಯನ್ನು ಮರೆಯದೆ ಇದ್ದಾಗ ಮಾತ್ರ? ನೀವು ಮರೆತ್ರ? ಬಿಟ್ರಾ? ಅಥ್ವಾ ಜ್ಞಾಪಕ ಇದ್ಯಾ? ಅನ್ನೋದು ನಿಮಗೆ ಮಾತ್ರ ಗೊತ್ತಿರಬೇಕು.

nokia ಕಂಪನಿ ಭಾರತ mobile ಕ್ಷೇತ್ರದಲ್ಲೇ ೫೦% ಅಂತ ಯಾಕೆ ಅಂತೀರಾ? asia pacific region ತೊಗೊಂಡ್ರೆ ಅದು ೮೦% ಅನ್ನು ಸಹ cover ಮಾಡುತ್ತೆ. ಈ ಬೆಳವಣಿಗೆ ಆಗಿರೋದು mobile ಅನ್ನೋದು ಒಂದು ಸಂಪರ್ಕ ಮಾಧ್ಯಮ ಆಗದೆ ಶೋಕಿ ಮಾಧ್ಯಮ ವಸ್ತು ಆಗಿದ್ದಕ್ಕೆ. ಮಾಧ್ಯಮಗಳು consumerism ಅನ್ನೋದನ್ನ ಹೆಚ್ಚಿಗೆ ಮಾಡಿದಕ್ಕೆ. ಇಂಥಾ ಬೆಳವಣಿಗೆಗೆ ಸಹಾಯ ಮಾಡಿದ ಮಾಧ್ಯಮಗಳಿಗೆ ಕಂಪನಿ ಚಿರಋಣಿ ಆಗಿರುತ್ತೆ ಬಿಡಿ. ಜನ ಸಾಲ ಸೋಲ ಆದರು ಮಾಡಿದ್ರು ಪರವಾಗಿಲ್ಲ ಕೈಲಿ ಒಂದು ಪಾಶ್ಚಾತ್ಯ ಗೀತೆ ಕೂಗುವ ರಿಂಗಣ ಇರೋ ಮೊಬೈಲ್ ಬೇಕೇ ಬೇಕು!!! ಅದಕ್ಕೆ ಈಗ, nokia ಅವರಿಗೆ ಯಾಕೆ ಎಲ್ಲಾ mobile ಕಂಪನಿ ಅವರು ಮುಟ್ಟಿಕೊಂಡು ನೋಡಿಕೊಳ್ಳೋ ಹಾಗೆ chinese mobile ಗಳು ಮಾರುಕಟ್ಟೆಯಲ್ಲಿ ಲಭ್ಯ ಇದೆ. ಅಗ್ಗದ ಬೆಲೆ ೨-೩ ವರ್ಷ ಉಪಯೋಗಿಸಿ ಬಿಸಾಕೊಕ್ಕೆ ಕೇವಲ ೩೦೦೦-೩೫೦೦ ಅಷ್ಟೇ. color display ಏನು, loud speaker ಏನು, touch panel screen ಏನು, ಆಹಾ!! ಒಂದು featureರ್ರಾ ಎರಡಾ?. ೩೦,೦೦೦ ಕೊಟ್ಟು sony erricsion, nokia ಕೊಂಡವನು ಸಹ ಒಮ್ಮೆ phone ಹೊರತೆಗೆಯಲು ಮುಜುಗರ ಬೀಳಬೇಕು, ಆ level ಗೆ mobile ಅನ್ನೋದು ಶೋಕಿ ಮೂಡಿಸಿದೆ. ಸಾಲದಕ್ಕೆ ಇಂತಹ chinese mobile ಗೆ IMIE ಸಂಖ್ಯೆ ಇರೋದಿಲ್ಲ ಹಾಗಾಗಿ ಟ್ರ್ಯಾಕ್ ಮಾಡುಲು ಸಹ ಆಗದೆ ಇರೋ ಕಾರಣ terrorist ಗಳು ಸಹ ಉಪಯೋಗಿಸಬಹುದು. ಒಟ್ನಲ್ಲಿ ಗ್ರಾಹಕನಿಗೆ ತಂತ್ರಜ್ಞಾನ ಯಾವನು ಮಾಡಿದಾನೆ ಅನ್ನೋದು ಮುಖ್ಯ ಅಲ್ಲ ಎಷ್ಟು ಕಡಿಮೆ ಬೆಲೆಗೆ ತಾನು ಶೋಕಿ ಮಾಡಬಹುದು ಅನೋದು ಅಷ್ಟೇ ಯೋಚನೆ. ಏಕಂದ್ರೆ ಇದರಲ್ಲೂ (chinese mobile ಅಲ್ಲೂ) ಸಹ ತಂತ್ರಜ್ಞಾನ ಇದೆ, network problem ಹಾಗು battery backup ತೊಂದ್ರೆ ಆಗಬಹುದು ಅಷ್ಟೇ. ಆದ್ರೆ ೩೦೦೦ ಮುಂದೆ ಅವೆಲ್ಲ ಅಲಕ್ಷ್ಯ. ಇವೆಲ್ಲ innovation "Just for cost advantage" ಅನ್ನೋದಕ್ಕೆನೆ ಶುರು ಆಗಿರೋದು. entrepreneurs ಮಾಡೋದು ದುಡ್ಡಿಗೆನೆ ಇಂತಹ R&D ಅಲ್ಲಿ ತೊಡಗಿಸಿಕೊಂಡವರು ಸಹ ಹೆಚ್ಚಾಗಿ ದುಡ್ಡಿಗೆನೆ. ಎಲ್ಲೋ ಅಪರೂಪಕ್ಕೆ ಇರ್ತಾರೆ ಬಿಡಿ. Just for Passion about subject" ಅಂತ ಕೆಲಸ ಮಾಡೋರು.

ನೀವು ಹೇಳಿದೀರಲ್ಲ nokia ಗೆ profit ಕಮ್ಮಿ ಆಗ್ತಿದ್ದ ಹಾಗೆ ಕಿಥಾಕ್ತಾರೆ, ತದನಂತರ ಬಂಡವಾಳ ಹಿಂದೆತೆಗುಕೊಂಡು ಜಾಗ ಖಾಲಿ ಮಾಡ್ತಾರೆ ಅಂತ, ಪ್ರತಿ ಮಾರುಕಟ್ಟೆಯಲ್ಲಿ ಬೇಡಿಕೆ ಇರೋವರ್ಗೆ ಮಾತ್ರ ವ್ಯವಹಾರ ನಡೆಯೋದು. ರಾತ್ರಿ ಹೊತ್ತು ಅಂಗಡಿ ಬಾಗಿಲು ಯಾಕೆ ಹಾಕ್ತಾರೆ!!! ATM ಮಾತ್ರ ಯಾಕೆ ಓಪನ್ ಇರುತ್ತೆ?? ಸಂಪ್ರದಾಯಿಕರು ಇರೋ sikh colony ಗೆ ಹೋಗಿ "Hair Cutting Saloon" ಅಂತ ಬೋರ್ಡ್ ಹಾಕೊಂಡು ಚೌರ ವೃತ್ತಿ ಆರಂಭಿಸಬೇಕು ಅನ್ನೋ ಥರ ಇದೆ ನಿಮ್ಮ ವಿಚಾರದ ಮಂಡನೆ. ಇಂತಹ ಪರಿಸ್ಥಿತಿಯಲ್ಲಿ ಹೇಗೆ ಪ್ರತಿ indsutry ಪ್ರತಿಕ್ರಯಿಸಬೇಕೋ ಹಾಗೇನೇ ಪ್ರತಿಕ್ರಯಿಸುತ್ತಿದೆ. ಬರಿ ವಿದೇಶಿ ಕಂಪನಿನೆ ಯಾಕೆ? ಪ್ರತಿ ವ್ಯವಹಾರದವನು ಅದೇ ಮಾಡೋದು ಇಲ್ಲಾಂದ್ರೆ ಅವನನ್ನ business man ಅನ್ನದೆ ಗೂಬ್ ನನ್ ಮಗ ಅಂತಾರೆ ಅಷ್ಟೇ . ತಂತ್ರಾಂಶ ಅಭಿಯಂತರರು ಅಂದ್ರೆ ಏನು ಮೇಲಿಂದ ಉದುರಿರೋಲ್ಲ ಹಾಂಗತ ಕೆಲವರು ಅಂದುಕೊಂಡಿರ್ತಾರೆ ಅದಕ್ಕೆ ಯಾರು ಏನು ಮಾಡೋಕ್ಕಾಗೋಲ್ಲ, ಪ್ರತಿ ಉದ್ಯಮಾದಲ್ಲೂ ಇಂಥಾ tuglaq ಗಳು ಇದ್ದೆ ಇರ್ತಾರೆ. ಒಬ್ಬ ಮನುಷ್ಯ ತಂತ್ರಾಂಶ ಅಭಿಯಂತ ಅಂತ ನೆನೆಸಿಕೊಂಡಾಕ್ಷಣ ತಲೆಗೆ ಬರೋದು ಕಾಂಚನ ಝನ ಝನ ಅಷ್ಟೇ, ಇವತ್ತು recession ಇದೆ, ಅದಕ್ಕೆ ಬೆಚ್ಚಿ ಬಿದ್ದದ್ದಾರೆ ಆದ್ರೆ ನಾಳೆ ಉದಯಿಸುವ silver lining ಶುರು ಆದಾಗ ಮತ್ತೆ ಬೆಲ್ಲಕ್ಕೆ ಮುತ್ತುವ ಇರುವೆಯಂತೆ ಬಂದೆ ಬರ್ತಾರೆ, ಬಂದೆ ತೀರಬೇಕು. ದುಡ್ಡೇ ದೊಡ್ಡಪ್ಪ ಆಗಿದೆ, ದುಡ್ಡಿರೋದೆ IT ಯನ್ನು ಅಳವಡಿಸಿಕೊಂಡ ವ್ಯವಹಾರದಲ್ಲಿ, costly ಕೂಲಿಯಲ್ಲಿ. ಚಿತ್ರ ಬಿಡಿಸಿದರೆ ಬರೋಲ್ಲ, ಲಂಚ legal ಆಗೋಲ್ಲ.

ಅಲ್ಲ ಸ್ವಾಮೀ ನಿಮಗೆ ಯಾರು ಹೇಳಿದ್ದು work culture ಅಂದ್ರೆ ೦೮೦೦ ರಿಂದ ರಾತ್ರಿ ೧೦೦೦ ವರ್ಗು ಕೆಲಸ ಮಾಡೋದು ಅಂತ. ಅವರ ಪಾದ scan ಮಾಡಿಸಿ ಕಳಿಸಿ ಹಣೆಗೆ ಒತ್ತಿಕೊಬೇಕು, ಪರೀಕ್ಷೆಗಳು ಮುಗಿದ ಮೇಲೆ ಮೇಷ್ಟ್ರುಗಳು ಕಂತೆಗಟ್ಟಲೆ ಉತ್ತರ ಹಾಳೆ ಗಂಟು ಕಟ್ಟಿಕೊಂಡು ಹಗಲು ರಾತ್ರಿ ಎನ್ನದೆ ಕೆಲಸ ಮಾಡೋಲ್ವೆ?? production ಜಾಸ್ತಿ ಇದೆ ಅಂದ್ರೆ menchanical/production line ನಲ್ಲಿ ಕೆಲಸ ಮಾಡೋವ್ರು Overtime ಅಂತ ಮಾಡೋಲ್ವಾ? ಹಾಗೇನೇ ನಮಗೂ ಕೆಲಸ ಜಾತಿ ಇದ್ದಲ್ಲಿ ಎಲ್ಲರಂತೆಯೇ ಹೆಚ್ಚಿನ ಸಮಯ ಕೆಲಸ ಮಾಡಬೇಕಾಗುತ್ತದೆ. ಅಲ್ಲ IT ಉದ್ಯಮದಲ್ಲಿ ಪ್ರತಿ ವ್ಯಕ್ತಿಯ performance check ಮಾಡೋಕ್ಕೆ process ಇದೆ. ಅದರಲ್ಲಿ ಅಳಿತಾರೆ ಇವನು ಈ ವರ್ಷ ಏನು ಕಿಸಿದ ಏನು ಬಿಟ್ಟ ಅಂತ. ಸುಮ್ನೆ ಸಂಬಳ ಕೊಡೋಲ್ಲ ಬೆಳಗೆ ೦೮೦೦ ರಿಂದ ೧೦೦೦ಕೆ ಬಂದ್ಬಿಟ್ರೆ ಅಲ್ಲ ಇಂತಹ timing idea ಕೊಟ್ಟೋರು ಆದರು ಯಾರು ಅಂತೀನಿ?? :-o

ಹಾಡಿದ್ದೆ ಹಾಡು ಕಿಸಿಬಾಯಿ ದಾಸ ಅನ್ನೋ ಹಾಗೆ ನಮ್ಮ ಕೆಲಸಗಳು ಇರೋಲ್ಲ, project ನ requirement ಸಹ ಒಂದೇ ಥರನದ್ದು ಇರೋಲ್ಲ so constant learning ಅನ್ನೋದು ನಮ್ಮ ಕೆಲಸದ ಒಂದು ಭಾಗ. ಇನ್ನ vision ಇಲ್ದೆ ಕೆಲಸ ಮಾಡೋದೇ ಸ್ವಾಮಿ? ಗುಣಮಟ್ಟ ಕಾಪಾಡಿಕೊಳ್ಳಬೇಕು, customer/client ನ ಜೊತೆ ಮಾತಾಡಿ ಅವನ ಸಂಶಯ/ ಪ್ರಶ್ನೆಗಳಿಗೆ ಉತ್ತರಕೊಟ್ಟು ವ್ಯವಹಾರನವನ್ನು ಉಳಿಸಿಕೊಳ್ಳಬೇಕು. ಇದೆಲ್ಲ ವಿಸಿಒನ್ ಇಲ್ದೆ ಸಾಧ್ಯಾನಾ? ಪ್ರತಿವರ್ಷ, project ಗೆ ಸಂಬಂಧಿತವಲ್ಲದ ಒಂದು ಯೋಜನೆ ಮಾಡಬೇಕು, ಹೊಸ ತಂತ್ರಜ್ಞಾನ ಬಗ್ಗೆ ತಿಳ್ಕೊಂಡು team ನವರಿಗೆ train ಮಾಡೋದು ಸಹ fore-sighted ನೆಸ್ಸ್ ನತ್ತ ನಮ್ಮ ಪ್ರಕ್ರಿಯೆ. ಎತ್ತು ಗಾಣವ, ತಾ ಸುತ್ತಿದಂತೆ ಸರ್ವಜ್ಞ ಅಂತ ಬೆಳಗ್ಗೆ office ಗೆ ಹೋದ್ಯ ಪುಟ್ಟ ರಾತ್ರಿ ಮನೆಗೆ ಬಂದ್ಯಾ ಪುಟ್ಟ ಅನ್ನೋ ರೀತಿ ಕೆಲಸ ಮಾಡಿದ್ರೆ ಒದ್ದು ಓಡಿಸ್ತಾರೆ. ಇದು ನಿಮ್ಮ ಉದ್ದಿಮೆಗೂ ಹತ್ತಿರವಾದ ವಿಷಯ ಅಂತ ಅರ್ತ್ಕೊತೀರ ಅನ್ಸುತ್ತೆ. ನೀವು breaking news ಕೊಟ್ಟಿಲ್ಲ ಅಂದ್ರೆ ಮುಗೀತು ಕಥೆ. ನಿಮ್ಮ paper ನ ಮೂಸಿ ನೋಡೋರು ಗತಿ ಇರೋಲ್ಲ. ಹಾಗೆಯೇ ಹೊಸ ತಂತ್ರಜ್ಞಾನ ಅಳವಡಿಸಿ ಹಳೆ product ಕೊಟ್ರು ಸಹ ಅದು innovation ಆಗಿರುತ್ತೆ, customerna satisfy ಮಾಡಿ ವ್ಯವಹಾರವನ್ನ ಗಟ್ಟಿ ಮಾದೊಕೊಲ್ಲೋದು vision ಹಾಗು foresightedness ಆಗಿರುತ್ತೆ.

ಈಗ ನಮ್ಮದೇ ಪ್ರತಿಭೆನ ಉಪಯೋಗಿಸಿ ಇಲ್ಲೇ ಮಾರುಕಟ್ಟೆ ಮಾಡಬಹುದು ಆದ್ರೆ ನೀವು ಅಷ್ಟು ಹಣ ಕೊಟ್ಟು ಕೊಂಡ್ಕೊತೀರ?? ೬೦೦೦/- ಬೆಲೆ ಬಾಳೋ windows XP home edition ನ SP ರಸ್ತೆನಲ್ಲಿ ಹೋಗಿ ಕೇಳಿದ್ರೆ 100/- ರೂಪಾಯಿಗೆ install ಮಾಡಿಕೊಡ್ತಾನೆ . ಕೋಟ್ಯಾಂತರ ಬಂಡವಾಳ ಹಾಕಿ 100/- ರೂಪಾಯಿಗೆ ಕಪ್ಪು ಮಾರುಕಟ್ಟೆಯಲ್ಲಿ ಹರಾಜು ಆಗೋ ಪರಿಸ್ಥಿತಿ ನಮ್ ದೇಶದಲ್ಲಿ. ಅದನ್ನ ತಪ್ಪಿಸ್ತೀರ?? ಹೊರ ದೇಶದಲ್ಲಿ ಹಾಗಿಲ್ಲ ಜನ legal software ಗಳನ್ನೇ ಕೊಳ್ಳೋದು. ನಮ್ ಸರ್ಕಾರಿ ಕಂಪನಿಗಳು ಜನರನ್ನ ಇನ್ನು "ಸಾಕ್ತ" ಇರೋದು, ಕಟ್ಟಿ ಕಡಿದು ಹಾಕಿರೋದು ಅಷ್ಟರಲ್ಲೇ ಇದ್ರೂ ಸಹ. efficient ಆಗಿ ಕೆಲಸ ಮಾಡಿದ್ರೆ ನೀವು ಹೇಳೋದೆಲ್ಲ ಆಗ್ತಿದ್ವು. ಆದ್ರೆ ವಸ್ತು ಸ್ಥಿತಿ ಹಾಗಿಲ್ವೆ? ಅದಕ್ಕೆ ಸರ್ಕಾರಿ ಕೆಲಸ ಅಂದ್ರೆ ಪ್ರತಿಭೆಯ ಛಾಪು ಮೂಡಿಸೋ ಆಸೆ ಇರೋರು ಮೂಗು ಮುರಿಯೋದು . ಅಹ್ತ್ವ "certificate" ಹಿಡ್ಕೊಂಡಿರೋರೆ ಮುಂಚೂನಿಯಲ್ಲಿ ಓಡೋದು.

ಇಂದಿಗೂ ಸಹ ISRO ದವರು ಎಷ್ಟೋ ಬಿಡಿಭಾಗಗಳನ್ನು ಅಮದು ಮಾಡಿ ತಯಾರಿಸೋದು, ಎಲ್ಲಾ manufacture ಮಾಡೋಲ್ಲ. ಯಾಕಂದ್ರೆ ಕೆಲವು ವಸ್ತುಗಳನ್ನ import ಮಾಡಿಕೊಂಡರೆ ಗುಣಮಟ್ಟ ಹಾಗು ಆ ದೇಶದವರೊಂದಿಗೆ ಒಳ್ಳೆ ಸಂಬಂಧ ಇರುತ್ತೆ. ಇಲ್ಲಾಂದ್ರೆ ನೀವು ಸ್ವಾವಲಂಬಿ, ನಾನು ಸ್ವಾವಲಂಬಿ ಹೆಂಗಾದ್ರೂ ಹಾಳಾಗಿ ಹೋಗು ನನ್ ಹತ್ರ ಬರಬೇಡ ಅಂತಾರೆ. ಜಗತ್ತು ಹೀಗೆ ನಡೆಯೋಕ್ಕೆ ಸಾಧ್ಯ ಇಲ್ಲ ಅಲ್ವ. People become lonely because they build walls instead of bridges ಅನ್ನೋ ಹಾಗೆ ಆಗಬಾರದು ಅಲ್ವ. ಪರಾವಲಂಬಿ ಆಗೋದ್ರಲ್ಲೂ ಸಹ ಅರ್ಥ ಇದೆ, ಒಂದು ಬಾಳುವೆ ಇದೆ. ಅದರ ಸರಿಯಾದ ಅರ್ಹತಾ ನಾವು ಹುಡುಕಿಕೋ ಬೇಕು ಅಷ್ಟೇ.

ಮೂರ್ತಿ, ರಾಜು, ದೊರೈ, ಪ್ರೇಮ್ಜಿ ಮುಂತಾದವರು ಇದರಲಿ ಹೆಜ್ಜೆ ಹಾಕಿದ್ದೆ ಅದಕ್ಕೆ contracter ಆಗೋಕ್ಕೆ broker ಆಗೋಕ್ಕೆ, body shop ಮಾಡೋಕ್ಕೆ. ನಮ್ ದೇಶದಲ್ಲಿ ನಡೆಯೋದೇ ಅದಲ್ವ. ಇವರೆಲ್ಲ ಸಿಕ್ಕ ಪತ್ತೆ ಜಾಣರು, ಅವಕಾಶವಾದಿಗಳು. ಅವಕಾಶ ಸಿಕ್ತು ಬಾಚಿಕೊಂಡರು, ಇಲ್ಲಾಂದ್ರೆ ನಮ್ ದೇಶದಲ್ಲಿ ೧/- ರೂಪಾಯಿಗೆ ಬೆಲೆ ಬಾಳೋ ಕಳಪೆ coca -cola ಕುಡಿಯೋಕ್ಕೆ ೧೨/- ರೂಪಾಯಿ ಯಾಕೆ ತೆತ್ತುತಾರೆ? ೧೧/- ರೂಪಾಯಿ ಹೋಗೋದು ಎಲ್ಲಿಗೆ ಅಂತ ಯಾರಾದ್ರೂ ಪ್ರಶ್ನಿಸಿದಾರ? ಇಲ್ಲ!!!. ಧೋನಿಗೆ ೨ ರೂಪಾಯಿ, carry & forwarding agent ಗೆ ೫೦ ಪೈಸೆ, ಲಾಭ ೨/- ರೂಪಾಯಿ , advertisement ಗೆ ೪/- ರೂಪಾಯಿ, ಹಿಂಗೆ ಮುಂತಾದ ಲೆಕ್ಕಕ್ಕೆ ಅದು ೧೨/-ರೂಪಾಯಿ ತಲುಪೋದು ಅಂತ ಯಾರಾದ್ರೂ ಯೋಚಿಸ್ತಾರ? ಮತ್ತೆ ಈಗ ಯಾಕೆ ಹಾರಡೋದು ಇಂತಹ contracters ಮೇಲೆ. ಅವರು ತೆಪ್ಗೆ ಅವರ ವ್ಯವಹಾರ ಮಾಡ್ತಿದಾರೆ. ಯಾರು ಯಾರಿಗೂ ಹೇಳೋ ಹಕ್ಕಿಲ್ಲ ನೀನು ಇದೆ ವ್ಯವಹಾರ ಮಾಡ್ಬೇಕು, ಹಿಂಗೆ ಮಾಡಬೇಕು ಅಂತ. ಅದು workout ಸಹ ಆಗೋಲ್ಲ ಎಲ್ಲರು ದಂಧೆ ಮಾಡೋದೇ ದುಡ್ಡಿಗೆ ಅಷ್ಟೇ.

street smartness ಅಂದ್ರೆ ಜೇಬಿಗೆ ಕತ್ರಿ ಹಾಕಿನೋ ಅಥವ avenue ರಸ್ತೆನಲ್ಲಿ 20/-ರೂಪಾಯಿ ವಸ್ತುಗೆ ಅರ್ಧ ಘಂಟೆ ಎಗಾಡಿ ೧೮/-ರೂಪಾಯಿ ಗೆ ತೊಗೊಳೋ ಬುದ್ಧಿವಂತಿಕೆ ಅನ್ಕೊಂಡಿದೀರ? ರಾತ್ರಿ ಹೊತ್ತು ಬೆಂಗಳೂರು footpath ನ ಮೇಲೆ ಮಲಗೆಬೇಕು ಅಂದ್ರೆ street gang ಗಳಿಗೆ ದುಡ್ಡು ಕೊಡಬೇಕು. incase, ಇಷ್ಟ ಇಲ್ಲ ಅಂದ್ರೆ ಸಲಿಂಗಿಗಳಿಂದ ಬಚಾವಗೆಬೇಕು, ಪೊಲೀಸರಿಗೆ ಮಾಮೂಲು ಕೊಡಬೇಕು. ಇಷ್ಟೆಲ್ಲಾ ಕಷ್ಟ ಇರೋ ಬೀದಿ ಜೀವನವನ್ನ ಎಷ್ಟು ಹಗುರವಾಗಿ ಇಲ್ಲಿ ಬಳಸಿದೀರ? street smartness ಅನ್ನೋದು ಇಂತಹ ಪರಿಸ್ಥಿತಿಗಳಲ್ಲೂ ಸಹ ಬೇಕಾಗುತ್ತೆ, ಹಾಗು ಇವೇನು ಸುಲಭ ಅಲ್ಲ.

ಈ contractargalu "IDEA" ಇದೆ ಅಂತ ಡಂಗೂರ ಹೊಡ್ಕೊತಿರ್ಬೇಕಾದ್ರೆ ಪುಟಗಟ್ಟಲೆ ಅದರ ಬಗ್ಗೆ ಬರದು ಅರ್ಧ ಪ್ರಚಾರ ಕೊಡೋದೇ ಮಾಧ್ಯಮದವರು. ಬಿದ್ರೆ ಓದಿತೀರ, ಎದ್ರೆ ತಬ್ಕೊತೀರ, ನಿಮಗೆ ಏನು ಹಕ್ಕಿದೆ ಯಾವ್ದು ಸರಿ ಯಾವ್ದು ತಪ್ಪು ಅಂತ ಮಾತಾಡೋಕ್ಕೆ? ರಾಜಕಾರಣಿಗಳು/ಸರ್ಕಾರಿ ಅಧಿಕಾರಿಗಳು ಬಾಯಲ್ಲಿ ಬೆರೆಳು ಇಟ್ಕೊಂಡು ಚೀಪ್ತಾ ಕೂತಿದ್ರ? ಗಂಡಾಂತರ ಇಲ್ದೆ ಇರೋ ಒಂದೇ ಒಂದು ವ್ಯವಹಾರದ ಬಗ್ಗೆ ಮಾತಾಡಿದ್ದಿದ್ರೆ ತುಂಬಾ ಅನುಕೂಲ ಆಗಿರೋದು, alas ವ್ಯವಹಾರ ಅಂದ್ರೆ risk ಅನ್ನೋದು ಯಾವ ಹೆಬ್ಬೆಟ್ಗಾದ್ರು ತಿಳಿದ ವಿಚಾರ. ಅದನ್ನ ಅಬ್ಬರಿಸಿ ಬೊಬ್ಬೆ ಹೊಡೆದು ಬಿಟ್ರೆ ಅದು ಬದಲಾಗಿಬಿಡೋಲ್ಲ. ಯಾರಿಗೆ ಯಾರು ಬೇಕೋ ಅಂಥವರನ್ನೇ ಆಯ್ಕೆ ಮಾಡಿಕೊಲ್ಲೋದ್ದು ಸಹಜ, ofcourse, at a price tag. ವಿದೇಶದವರು - ನಮ್ಮನು ಆಯ್ಕೆ ಮಾಡಿದರು, ನಮ್ಮ ದೇಶದ ಕಂಪನಿ - ನಮ್ಮವರನ್ನು. ತಪ್ಪೇನು? ಇಂಥಹ ಪರಿಸ್ಥಿತಿಯಲ್ಲೂ ಸಹ ನಮ್ಮ ಕನ್ನಡಿಗ ವೈದ್ಯರಿಗೆ ನರ್ಸು ಅಂತ ಅಂದ್ಬಿಟ್ರೆ ಅವರುಗಳು ಕೇರಳ ಇಂದಾನೆ ಅಮದು ಆಗಿರಬೇಕು. ಇಂಥಹ ನಾಚಿಕೆ ಗೆಡಿತನದ ಪರಿಸ್ಥಿತಿ ನಮ್ಮ ಕನ್ನಡಿಗರ ಬಾಳು? ಅವರಿಗೆ ಕನ್ನಡ ಬರೋಲ್ಲ ನಮ್ಮವರಿಗೆ ಮಲಯಾಳಂ ಯಾಕೆ ಬರಬೇಕು? ಈ ಥರ communication gap ಇರೋ ಜೀವನ-ಮೃತ್ಯು ಸನ್ನಿವೇಶದ ವಿರುದ್ಧ ಬರೆಯಿರಿ. ಯಾರಿಗಾದರು ಜ್ಞಾನೋದಯ ಮಾಡ್ಬೇಕು ಅಂದ್ರೆ.

IIT/IIM ತೊಗೊಳ್ಳಿ ಅಲ್ಲಿ ನಿಮಗೆ entrepreneur ಗಳು ಸಿಗ್ತಾರೆ :) ೧ ಕೋಟಿ ಸಂಬಳ ತಿರಸ್ಕರಿಸಿ ತಮ್ಮ ತಲೆ ಹಾಗು contacts ಉಪಯೋಗಿಸಿ ಏನೋ ಒಂದು ಸಾಧಿಸ್ತಾರೆ. mass communication ನಲ್ಲಿ PG ಮಾಡಿದ ಪದವಿ ಧರರಿಗೆ ಭಾಷೆ ಹೇಗೆ ಬಳಸಬೇಕು ಅನ್ನೋದೇ ಗೊತ್ತಿರೋಲ್ಲ. ಅಂಥಾದ್ರಲ್ಲಿ ಅವರೆಲ್ಲ entrepreneur ಯಾಕೆ ಆಗೋಲ್ಲ ?? ಯಾವ ಯಾವ ಕಂಪನಿಗೆ ಏನು ಉದ್ದೇಶ,ಧ್ಯೇಯ ಇರುತ್ತೋ ಅವರು ಅವನ್ನೇ ಮಾಡೋದು, service ಕಂಪನಿಯವರು ಸಣ್ಣದಾಗಿ product ಶುರು ಮಾಡ್ತೀವಿ ಅಂತ ಕೂತರೆ serive sector ಗು ಹೊಡೆತ ಬೀಳುತ್ತೆ ಅಥವ product group ಅನ್ನೋದು ಸಫಲ ಆಗೋಲ್ಲ. no man can sail in two boats ಅಂತಾರಲ್ಲ ಹಾಗೆ.

ಹೆಚ್ಚಿನ ತಂತ್ರಾಂಶ ಅಭಿಯಂತರರು pursuit of knowledge ಬಿಟ್ಟು pursuit of money ಹಿಂದೇನೆ ಹೋಗೋದು . ಯಾಕಂದ್ರೆ ನಾಳೆ ದಿನ ಸಮಾಜದಲ್ಲಿ ಅವರಿಗೆ ಗೌರವ, ಮನ್ನಣೆ ಸಿಗೋದು ಅವನ ಸ್ಥಿತಿ ಗತಿ ನೋಡಿನೆನೆ. ಹರ್ಕಲ್ ಚಪ್ಲಿ , ಕಿತ್ಹೊಗಿರೋ ಶರ್ಟ್ ಹಾಕೊಂಡಿರೋ ಮೆಧಾವೀನ ಯಾವನು ಕ್ಯಾ-ರೆ ಅನ್ನೋಲ್ಲ. ಆದ್ರೆ ಈ pursuit of money ಹಿಂದೆ ಹೋದವರು ಚೆನ್ನಾಗಿ ದುಡ್ಡು ಮಾಡಿ ತಾಯಿನಾಡಿಗೆ ವಾಪಸ್ಸ್ ಬಂದು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಾವಿರ ಉದಾಹರಣೆಗೆಳಿವೆ. ಇವೆಲ್ಲ ನಿಮಗೆ ತಿಳಿದಿಲ್ಲ ಅನ್ನೋದು ಆಶ್ಚರ್ಯ!! coding, design ಅಲ್ಲದೆ project management, risk management ಅನ್ನೋದನ್ನು ಸಹ ನಾವು ಕಲಿತೀವಿ. ಇವೆಲ್ಲ ಒಂದು project ಸಫಲ ಮಾಡ್ಬೇಕು ಅಂದ್ರೆ ಬೇಕಾಗಿರೋ "core skills".

ಗುತ್ತಿಗೆ ಕಾಮಗಾರಿ ಅಂದಿಗೂ ತಪ್ಪಲ್ಲ, ಇಂದಿಗೂ ತಪ್ಪಿಲ್ಲ, ಯಾಕಂದ್ರೆ service ಇಲ್ಲದೆ ಇರೋ product ಕೊಂಡುಕೊಳ್ಳುವುದಕ್ಕೆ customer ಏನು ಕಿವಿ ಮೇಲೆ ಹೂವ ಇಟ್ಕೊಂದಿರುವುದಿಲ್ಲ. product ಅಂದ್ರೇನು ಅಂತಾನೆ confuse ಆಗ್ಬೇಕು ಅಷ್ಟು ಸರ್ತಿ product, product anta ಉಲ್ಲೇಖ ಮಾಡಿದೀರ :).
product ಅನ್ನೋದು nut bolt ಇಂದ ಕೂದಿರೋ ವಸ್ತೂನೆ ಆಗಬೇಕಿಲ್ಲ. web site ಮಾಡಿದ್ರು ಸಹ ಅದು ಒಂದು product, ನೀವು ಕಂಪನಿಯೊಳಗೆ ನುಗ್ಗ ಬೇಕಾದ್ರೆ swipe ಮಾಡೋ card ಸಹ IT product, ವಿಜಯ ಕರ್ನಾಟಕಕ್ಕೇ ಸಂಭಂದಿಸಿದ ಹಾಗೆ ಇರೋ ತಂತ್ರಾಂಶ ಸಹ ಭಾರತದವರೇ ಮಾಡಿದ IT PRODUCT. Tally ಸಹ ಒಂದು accounting product .ಇದು ಯಾವ್ದ್ರಲು nut bolt ಇರೋಲ್ಲ, ಅಮದು ಮಾಡಿರೋಲ್ಲ. ನಮಗೆ ಎಷ್ಟು ಉಪಯೋಗಕ್ಕೆ ಬೇಕೋ ಅಷ್ಟು software product ಗಳನ್ನ ಒದಗಿಸೋಕ್ಕೆ ಸಾವಿರ ಕಂಪೆನಿಗಳಿವೆ ಅವಲ್ಲೇ product ಕಂಪನಿಗಳೇ. ಆದ್ರೆ ರಫ್ತು ಮಾಡೋಕ್ಕೆ ಹೋಗಿರೋಲ್ಲ ಅಷ್ಟೇ.

ವ್ಯವಹಾರ ಮಾಡೋಕ್ಕೆ ಬಂದಿರೋರಿಗೆ ಸಮಾಜ ಸೇವೇನು ಮಾಡಿ ಅಂದ್ರೆ ಹೇಗೆ? ಅವರಿಗೆ ಅದರ ಅರಿವಿದ್ದರೆ ಮಾಡ್ತಾರೆ ಇಲ್ಲಾಂದ್ರೆ compell ಮಾಡೋಕ್ಕೆ ನಾವು ಯಾರು? ಕಂಪನಿ ಶುರು ಮಾಡಿ ೧೦ ಜನಕ್ಕೆ ಕೆಲಸ ಸಿಗೋ ಹಾಗೆ ಮಾಡೋದೇ ಒಂದು ಸಮಾಜ ಸೇವೆ. ಅದ್ರಲ್ಲಿ ಹೋಗ್ಬಿತ್ತು college ಅಲ್ಲಿ ಒಂದು division ಶುರು ಮಾಡಿ ಅಂತ ಕೇಳೋದ್ರಲ್ಲಿ/ idea ಕೊಡೋದ್ರಲ್ಲಿ ಏನು ಅರ್ಥ ಇದೆ? ಅಷ್ಟಕ್ಕೂ ಇಂಥಾಹ ಘಟಕಗಳು ಕೆಲವು ಕಾಲೇಜಿನಲ್ಲಿದೆ "RV-TIFAC" ಅನ್ನೋದು ಬೆಂಗಳೂರಿನಲ್ಲಿರುವ RV ಕಾಲೇಜ್ ಜೊತೆಗೆ ಹೊಂದಿಕೊಂಡು ಕೆಲಸ ಮಾಡುವ TATA ನವರ ಒಂದು ಅಂಗ ಸಂಸ್ಥೆ. IIT ಗಳಲ್ಲಿ ಕಂಪನಿ sponsored LAB ಗಳಿರುತ್ತೆ, ಅಲ್ಲಿ ವಿಧ್ಯಾರ್ಥಿಗಳು ತಮ್ಮ ಪ್ರಯೋಗ ಸಂಶೋಧನೆ ಮಾಡ್ತಾರೆ. ಬೆಂಗಳೂರಿನ IISc ಯಲ್ಲಿ Philips,TI ಅವರಿಂದ sponsor ಆಗಿ maintain ಆಗ್ತಿರೋ Lab ಗಳಿವೆ. ಇದರ ಬಗ್ಗೆ ತಾವು ದಯವಿಟ್ಟು update ಆಗ್ಬೇಕು. ಇಲ್ಲೇನು ಲೋಕ ಕಲ್ಯಾಣ ಕೆಲಸಗಳು ನಡೆಯೋಲ್ಲ Philips,TI ನವರು ತಮ್ಮ ಸಣ್ಣ ಪುಟ್ಟ project ಗಳನ್ನು ವ್ಯಾಸಂಗ ಮಾಡುತ್ತಿರುವ ವಿಧ್ಯಾರ್ಥಿಗಳಿಂದ ಮಾಡಿಸಿಕೊಳ್ತಾರೆ ಅಷ್ಟೇ. ಆದ್ರೆ RV-TIFAC ನಲ್ಲಿ ನಾ ಕಂಡಂತೆ ಒಳ್ಳೆ ಸಂಶೋಧನಾ ಕಾರ್ಯ ನಡೆಯುತ್ತೆ. ಇವೆಲ್ಲ ಉದಾಹರಣೆಗಳು ನಾ ಕಂಡಂತೆಯೇ ನಿಮಗೆ ತಿಳಿಸುತ್ತಿದ್ದೇನೆ. ಸಂಶೋಧನಾ ಕಾರ್ಯ ನಡೆಯೋದೇ ಇಲ್ಲ ಅಂತ ಏಕ ಏಕಿ ಹೇಳಿಬಿಟ್ರೆ ಇವನ್ನೆಲ ನೋಡಿರೋ ನಂಗೆ heart attack ಆದರು ಆಗಬಹುದು :).

Pure science ಹೊಟ್ಟೆ ಹೊರೆದುಕೊಳ್ಳಬಹುದೇ?? ಮುಜರಾಯಿ ಇಲಾಖೆಗೆ ಸಂಬಂಧ ಪಟ್ಟ ದೇವಸ್ಥಾನಕ್ಕೆ ಸೇರಿ ಕೆಲಸ ಮಾಡೋ ಪೂಜಾರಿ ಥರ ಆಗೋಗುತ್ತೆ ಅವನ ಬಾಳು. ಜ್ಞಾನ, ಸಾಮರ್ಥ್ಯ ಇದ್ರೂ ತಿಂಗಳ ಕೊನೆಗೆ ೧೫೦೦-೨೦೦೦ ಸಂಬಳ ?? :-o ಈ ಗತಿ, ಆ ವೃತ್ತಿಯನ್ನೇ ನಂಬಿ ಕಷ್ಟ ಪಡೋ ಪೂಜಾರಿಗಳಿಗೆ ಬೇಕಾ? ಹಾಗೇನೇ pure science ಗೆ ಹೋಗ್ತೀನಿ ಅಂದ್ರೆ ನಮ್ ದೇಶದಲ್ಲಿ scope ಇಲ್ಲ. ಸಿಕ್ಕಾಪಟ್ಟೆ talent ಇದ್ರೆ ಅವನು ವಿದೇಶಕ್ಕೆ ಹಾರ್ತಾನೆ. ನಮಗೆ ಉಪಯೋಗಿಸಿಕೊಳ್ಳುವ talent ಬರಬೇಕು ಮೊದಲು, ಸಂಪನ್ಮೂಲ ಇದ್ದು ಸಹ ಅದನ್ನ ಸಮರ್ಪಕವಾಗಿ ಬಳಸಿಕೊಲ್ಲೋ ಜ್ಞಾನ ಇಲ್ಲ ಅಂದ್ರೆ ಅದು ಇದ್ರೆಷ್ಟು ಬಿಟ್ಟರೆಷ್ಟು. ಸರ್ಕಾರದಿಂದ ನಾವು ಯಾಕೆ ಬಯಸಬಾರದು?? vote ಮಾಡೋಲ್ವೆ? ಪಂಚ ವಾರ್ಷಿಕೆ ಯೋಜನೆ ಅಂತ ೩೦-೪೦ ವರ್ಷ ಎಳೆಯೋ ಜನರೇ ಆಳುವಾಗ dynasty rule ಇಂದ ದೇಶ ಉದ್ಧಾರ ಆಗೋದು ಹೇಗೆ? vote ಸಹ ಮಾಡ್ಬೇಕು, ತೆರಿಗೆಯನ್ನು ಕಟ್ಟಬೇಕು, ಕೊನೆಗೆ ಸಹಾಯವನ್ನು ಸಹ ನಾವೇ ಮಾಡ್ಬೇಕು. ಬಿಟ್ರೆ, ಬಂದ್ಬಿಟ್ಟು ತೊಳೆದು ಬಿಡಿ ಅಂತಾರೆ!!! ಮತ್ತೆ ಸರ್ಕಾರ ನಮಗೆ ಇರೋದ ನಾವು ಸರ್ಕಾರಕ್ಕೆ ಇರೋದ, ಸರ್ಕಾರಕ್ಕೆ ಒಳ್ಳೆ ಪ್ರಜೆಗಳಾಗಿ ಸಹಕರಿಸ್ತಿಲ್ವೆ ?? :-o ತೆರಿಗೆ ಎಲ್ಲಾ abolish ಮಾಡ್ಬಿಡಿ. ಅದೇ ದುಡ್ಡನ್ನ ಸಮಾಜ ಉದ್ಧಾರಕ್ಕಾಗಿ ಅಂತ ಮೀಸಲು ಇಟ್ಬಿಡಿ ಸಾಕು, ಆಗ India Shining ಆಗುತ್ತೆ. ಕೇಂದ್ರಕ್ಕೆ ೮೦೦೦೦ ಕೋಟಿ ಆದಾಯ ಕೊಟ್ರು ಸಹ ಪುಟಗೋಸಿ ೮೦೦೦ ಕೋಟಿ ಅನುದಾನಕ್ಕು ಅಂಗಲಾಚ್ಬೇಕು ನಾವು, ನಮ್ ನಾಡು ಉದ್ದಾರ ಹೇಗೆ ಆಗ್ಬೇಕು, ೮ ಕೋಟಿ ಸಹ ಕೊಡದೆ ಇರೋ UPA ಬೆಂಬಲಿತ ಬಿಹಾರಿಗೆ ೮೦೦೦ ಕೋಟಿ ಬೇಕಾದ್ರೂ ಅನುದಾನ ಮಾಡ್ತಾರೆ ದೇಶ ಉದ್ಧಾರ ಆಗೋಕ್ಕೆ ಅಂತ.. ಇದರ ವಿರುದ್ದ ಬರೀರಿ ಕ್ರಾಂತಿ ಮಾಡಿ, ಜಾಗೃತಿ ಮೂಡಿಸಿ ಮೊದಲು.

Venture capitalist ಗಳು ಎಲ್ಲಾ okey,private players ಗೆ ಮಾತ್ರ ಅನ್ವಯ ಆಗ್ಬೇಕು yaake? ಸರ್ಕಾರ ಏನು ಕಿಸಿತಿದೆ? ಜಾಗೃತಿ ಮೂಡಿಸಬೇಕಾದ ಮಾಧ್ಯಮದವರು ಏನು ಕಿಸಿತಿದಾರೆ (ಚಡ್ಡಿ ಹಿಂದೆ ಹೋದರೆ?) ? ಯಾವನೋ journalist ಮೇಲೆ ಕೈ ಮಾಡಿಬಿಟ್ರೆ ಬೊಬ್ಬೆ ಹೊಡ್ಕೊಂಡು ಸಾಯೋ ಇತರ journalistgalige ನಮ್ ದೇಶದ ಮೇಲೆ ರಾಜಕಾರಣಿಗಳು, ಅಧಿಕಾರ ಶಾಹಿಗಳು ವಂಶ ಪಾರಂಪರ್ಯವಾಗಿ ಮಾಡ್ತಿರೋ ಅತ್ಯಾಚಾರ ಕಂಡು ಸಹ ಕಾಣದ ಹಾಗೆ ಸುಮ್ನೆ ಯಾಕೆ ಕೂತಿರೋದು. ನಮಗೆ ಸಂಬಂಧಿತ ಅಲ್ಲ ಅನ್ನೋ ಅಸಡ್ಡೆಯೇ ಅಥವ eye catching head lines ಆಗೋಲ್ಲ ಅನ್ನೋ ವಿಚಾರವೇ? love your job but never love your company ಅಂತ Abdul kalam ಅವರು ಹೇಳಿದಾರಂತೆ . :-) ಅದಕ್ಕೆ employers ಗು employee ಗಳಿಗೂ ಕೇವಲ ಸಂಬಳದ ಸಂಬಂಧ ಅಷ್ಟೇ. ನೆಂಟನನ್ನೇ ನಂಬಿಕೊಂಡು ಹಣ ಹೂಡೋಕ್ಕೆ ಆಗೋಲ್ಲ ಇನ್ನ ಕೆಲಸ ಮಾಡೋಕ್ಕೆ ಬಂದಿರೋ ವ್ಯಕ್ತಿನ ನಂಬಿ ಹಣ ಹೂಡೋದು ಎಷ್ಟು ಸರಿ?? :-o ಎಷ್ಟೆಲ್ಲ risk ಇದೆ ಇದ್ರಲ್ಲ . ಆರಾಮಾಗಿ service ಮಾಡ್ಕೊಂಡು ತಿಂಗಳಿಗೆ ದುಡ್ಡು ಎಣೆಸಿಕೊಂಡು , ಬರೋ challenges ನ face ಮಾಡಿ ದಂಧೆ ನಡೆಸೋದೆ ಸಾಕಾಗಿರುತ್ತೆ. ಇನ್ನ, research ಗೆ ಇಳಿದು ಸುಮ್ನೆ ದುಡ್ಡು ಕಳೆದುಕೊಳ್ಳುವುದರಲ್ಲಿ ಏನ್ ಜಾಣತನ ಇದೆ ಅಂತ ಪ್ರತಿ ವ್ಯವಹಾರಿ ಯೂಚಿಸೊದ್ರಲ್ಲಿ ಅರ್ಥ ಇದೆ ಅಂತ ಅನ್ಸೊಲ್ವಾ?

software boom ಆಗಿ ೧೫ ವರ್ಷ ಆಯ್ತು ಅಂತ ಯಾರು ಹೇಳಿದ್ದು ಸ್ವಾಮಿ? ೨೦೦೦ ಅಲ್ಲೇ ನೆಲಕ್ಕೆ ಅಪ್ಪಳಿಸಿತ್ತು , e-commerce ಹೊಡೆಸಿಕೊಂಡು ಹೋಯ್ತು, ನಾಯಿ ಕೊಡೆ ಥರ ಇದ್ದಾ website ಗಳು ತರೆಗೆಲೆಗಳಂತೆ address ಗೆ ಇಲ್ಲದಂತೆ ಹಾರಿ ಹೋದವು . ಈ ರೀತಿ ಪ್ರತಿ ೬-೭ ವರ್ಷಕ್ಕೊಮೆ ಆಗೋದು ಸಹಜ. ೧೫ ವರ್ಷ ಇಂದ ಬೂಮ್ ಇದೆ ಅಂತೀರಾ ಅದರ trend ಹೇಗಿದೆ ಅಂತ ಯಾಕೆ ವಿವರಿಸಿಲ್ಲ? ಮೊದಲು ಜೇಬು ಭಾರ ಇರಲಿಲ್ಲ ಹಾಗಾಗಿ ತಲೆ ಕೆಡಿಸಿಕೊಂಡಿರಲಿಲ್ಲ ಎಲ್ರಿಗೂ ಜಾಣ ಕುರುಡು, ಜಾಣ ಕಿವುಡು, ಈಗ ಜೇಬು ಭಾರ ಆಗ್ತಿದ ಹಾಗೆ risk ಯಾಕೆ ಅನ್ನೋದನ್ನ ಹೇಳ್ಕೊಂಡು ಎಲ್ಲಾ ಜ್ಞಾನಿ ಗಳಂತೆ ಮಾತಾಡೋಕ್ಕೆ ಶುರು ಮಾಡಿದಾರೆ. ಸ್ವಲ್ಪ ಈ ವಿಚಾರದಲ್ಲಿ ಗಮನ ಹರಿಸಿ update ಮಾಡಿಕೊಳ್ಳಿ. software ಅನ್ನೋದು ಬರಿ ಏರಿಕೊಂಡು ಹೋಗ್ತಿದ್ದ ಉದ್ಯಮ ಅಲ್ಲ, ಎದ್ದು ಬಿದ್ದು ತತ್ತರಿಸಿ ಧೃತಿಗೆಡದೆ ಛಲ ತೋರಿದ ಉದ್ಯಮ. ಇದು ಹೀಗಾಗ್ತಿರೋದು ಮೊದಲಲ್ಲ, ನಿಮ್ಮ ಗಮನಕ್ಕೆ ಮೊದಲು ಬಂದಿರಬಹುದು, ವೃತ್ತಿಯಲ್ಲಿರುವವರಿಗೆ ಹೊಸತಲ್ಲ.. ಹಾಗಾಗಿ "ಜ್ಞಾನಿ"ಗಳನ್ನು ಸೃಷ್ಟಿಸೋ ಭರದಲ್ಲಿ ಇತಿಹಾಸ ಮರೆತು ಬರಿತಿದೀರ.

ಈಗ stimulus plan ಘೋಷಿಸಿದ ಬಾಮ ಅವರನ್ನ ನಾವು ದೂಶಿಸ್ತೀವಿ ಅಂತ ನೀವು ಯಾಕೆ ಬಿಂಬಿಸ್ತಿದೀರ?? ಅವರು president ಆಗಿ ತಮ್ಮ ಜನತೆಗೆ ಹೇಗೆ ಸಹಾಯ ಮಾಡಬೇಕೋ ಮಾಡ್ತಿದಾರೆ. ನಮ್ ಸರ್ಕಾರಕ್ಕೂಕಾಳಜಿ ಇದ್ರೆ ಇಂಥಾದು ಒಂದೇ ಒಂದು ಏನಾದ್ರೂ ಕಿಸೀಲಿ ನೋಡೋಣ. ಅದು ಬಿಟ್ಟು ನೀವೇ ನಮಗೆ ಸಹಕಾರ ಕೊಡಬೇಕು ಇಂಥಹ ಪರಿಸ್ಥಿತೀಲಿ ಅಂತ ಅಂಗಲಾಚಿಸಿದರೆ, ಇವರನ್ನ ಮತ್ತೆ ಬರಿ red carpet meeting, tape cutting ceremony ಗೆ ಬಂದು smile ಮಾಡಿ, ಕೈ ಬೀಸಿ, ಮಾರುದ್ದ ಭಾಷಣ ಮಾಡಿ ಹೋಗೋದು,ಗ್ರಾಮ್ಯ ವಾಸ ಅಂತ ಇವರ ನಾಟಕ ನೋಡೋಕ್ಕ ಆಯ್ಕೆ ಮಾಡಿರೋದು? ನಾವು ಬ್ರಿಟೀಷರ political system ತೊಗೊಂಡಿದೀವೆ ಹೊರತು work culture ಅಲ್ಲ ಅನ್ನೋದು ರಾಜಕಾರಣಿಗಳು ತಿಳ್ಕೊಬೇಕು, ಮಾಧ್ಯಮದವರು ಬಿಂಬಿಸಬೇಕು ಇಂತಹವನ್ನ. ಬ್ರಿಟೀಷರು ವರ್ಷಕ್ಕೆ ೧೫೯ ದಿನ ಕಾರ್ಯಾಲಾಪ ಮಾಡಿದ್ರೆ ನಮ್ಮ ದೇಶದ ರಾಜಕೀಯ ಮಾಹಾನು(ಹೊಟ್ಟೆ)ಭಾವರು record breaking ೬೪.೪ ದಿನ ಎಷ್ಟೋ ಕೆಲಸ ಮಾಡಿದಾರೆ . ಅಂಕಿ ಅಂಶ accurate ಇಲ್ಲ ಆದ್ರೆ ratio ಹಿಂಗೆ ಇರೋದು :-o ಅದರಲ್ಲೂ ಸಹ ಹೊಡೆದಾಟ, ಬಡಿದಾಟ, ಕಿರುಚಾಟ, ಎಲ್ಲಾ ನಮ್ಮ ದುಡ್ಡಿನ ಮೇಲೆ ಇವರಗೆ ದರ್ಪ .

ಕಾಲ ಮಿಂಚುತಾನೆ ಇರುತ್ತೆ ಅದನ್ನ ಉಪಯೋಗಿಸಿಕೊಳ್ಳುವ ಅವಕಾಶವಾದಿಗಳೇ ತುಂಬಿರೋ IT sector ಗೆ ಸದ್ಯಕ್ಕೆ ಗ್ರಹಣ ಹಿಡಿದಿದೆ. ಅದು ಬಿಟ್ಟ ನಂತರ ಮತ್ತದೇ ಹೊಳಪು ಮೂಡಿ ಬರುತ್ತೆ ಅಲ್ಲಿವರ್ಗು, ಯಾರೋ ಹೇಳಿದ ಮಾತು ಕೇಳ್ಕೊಂಡು, ಅರ್ಧಂಬರ್ಧ ಊಹೆ ಮಾಡಿ . ಶನಿವಾರಕ್ಕೊಂದು special ಕೊಡಲೇ ಬೇಕು ಅನ್ನೋ ಭರದಲ್ಲಿ ಆ ನಿಮ್ಮ ನಿಟ್ಟಿನಲ್ಲಿ ನಿಮ್ಮ ಅಭಿಮಾನಿಗಳಿಗೆ ನೋವ್ವು ಆಗದೆ ಇರೋ ಹಾಗೆ ಬರೆಯಿರಿ ಅನ್ನೋದೇ ನನ್ನ ಮನವಿ. ಸತ್ಯ ಯಾವತ್ತು ಕಹಿನೆ ಅದಕ್ಕೆ ಮಸಾಲೆ ಹಾಕಿ ಕೊಡಬೇಡಿ ಅಷ್ಟೇ, ಸರಳವಾದ ಕಹಿಯನ್ನೇ ಎಲ್ಲರ ಮುಂದಿಡಿ ಅಭ್ಯಂತರ ಇಲ್ಲ ಬೇಡದಿರುವ ಅಗದ್ದ ಮಸಾಲೆ ಹಾಕಬೇಡಿ.

"ಸೊಕ್ಕನ್ನು ಸಂಪಾದಿಸ್ಕೊಳ್ಳಬೇಕು, ಗರ್ವವನ್ನು ಗಳಿಸಿಕೊಳ್ಳಬೇಕು" ಅನ್ನೋದು ನಿಮ್ಮ ನಂಬಿಕೆ ಅಲ್ಲವೇ :). ನಮ್ ಭಾರತದಲ್ಲಿ ಆ ಸೊಕ್ಕು, ಗರ್ವ ಬಹು ಬೇಗ ಬರೋದು ದುಡ್ಡಿನ ಮದ ಇದ್ದಾಗಲೇ ಹೆಚ್ಚು. ಹಾಗಾಗಿ ಕೆಲವು ಶೋಕಿ ಪ್ರವೃತ್ತಿ ಅವರ ನಡುವಳಿಕೆ ಇಡಿ IT ಸಮುದಾಯದ ಪ್ರತಿಬಿಂಬ ಅಂತ ಬಿಂಬಿಸೋದು ಸುತಾರಾಂ ಒಪ್ಪಿಕೊಳ್ಳದೆ ಇರೋದಕ್ಕೆ ಆಗದ ಮಾತು. "ಒಂದು ವಿಷ್ಯ ಚೆನ್ನಾಗಿ ತಿಳ್ಕೊಂದ್ರಷ್ಟೇ ಹಠಕ್ಕೆ ಬಿದ್ದು ವಾದ ಪ್ರತಿವಾದ ಮಂಡಿಸಬಹುದು" ಅನ್ನೋದು ಸಹ ನಿಮ್ಮದೇ ವಾದ ತಾನೇ? .. ಈಗ ನಾನು ಮಂಡಿಸಿರುವ ವಾದ/ ಸಮರ್ಥನೆ /ಪ್ರತಿರೋಧ ಬಗ್ಗೆ ನಿಮಗೆ ಪ್ರತಿಕ್ರಿಯಿಸೋಕ್ಕೆ ಆಗುತ್ತಾ?? IT field ಅಲ್ಲೇ ಇದ್ದು ನಿಮಗೆ challenge ಮಾಡ್ತೀನಿ. ನಿಮ್ಮ ಉದ್ಯಮದ yellow journalism ಬಗ್ಗೆನು ಸಹ ಒಂದು ಅಂಕಣ ಬರೆಯಿರಿ, ITyalli ನಿಮಗೆ ನಿಮ್ಮ ಉದ್ಯಮದ yellow journalism ನಂತಹ ಕರಾಳ ವಿಂಗಡಣೆ ಹುಡುಕಿದರು ಸಿಗೋದಿಲ್ಲ. ಸಿಕ್ರು ಅವನ್ನು ವಿರಳ, ಬೆರಳೆಣಿಕೆ ಅಥವಾ ಸಣ್ಣ ಪುಟ್ಟ isolated ghanta ಗಳು ಅಂತ ನಿರ್ಲಕ್ಷಿಸಬಹುದು.. ಗಾಜಿನ ಮನೆಯಲ್ಲಿರುವವರು ಇತರರ ಮನೆಯ ಕಡೆ ಕಲ್ಲೋಗೆಯುವ ಪ್ರವೃತ್ತಿ ಬೆಳೆಸಿಕೊಳ್ಳಬಾರದು. ಅವರಿಗೆ ಹಾನಿಕರ ಅಲ್ವ!!!!

ಕನ್ನಡಿಗರಿಗೆ, ದಿನ ಪತ್ರಿಕೆಯಲ್ಲಿ ಏನಾದ್ರೂ ಒಳ್ಳೆ ವಿಚಾರ ಓದೋಣ ಅನ್ನೋ ಆಸೆ ಇಟ್ಕೊಂಡು ಬಂದವರಿಗೆ ಇಂತಹ ಗುಣಮಟ್ಟ ಇಲ್ದೆ ಇರೋ, ಸಂಶೋಧನೆ ಮಾಡದೆ, ಇತಿಹಾಸ ತಿಳಿಯದೆ, ಸತ್ಯಾಸತ್ಯತೆ ಬಗ್ಗೆ ಪರಾಮರ್ಶಿಸದೇ, ಊಹಾ ಪೋಹ ಗಳ ಮೇಲೆ ಆಧರಿಸಿ ವಿಚಾರ ಮಂಡಿಸಿರೋ ಲೇಖನ ಮುಂದೆ ಇಡೋದೇ ದೊಡ್ದೆ ತಪ್ಪು!!! ನಿಮ್ಮ ಧೋರಣೆ ಇನ್ನೂ ಸರಿ ಅನ್ನುವುದಿದ್ದರೆ ನಾನು ಮುಂದಿಟ್ಟಿರುವ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ... ಸಾಮ್ಯತೆ ತೋರಿದ ವಿಷಯಗಳು ತಪ್ಪು ಅಂತ ಸಾಧಿಸಿ..

--- ಇಂತಿ
ನೊಂದ ಅಭಿಮಾನಿ ಹಾಗು ತಂತ್ರಾಂಶ ಅಭಿಯಂತ

No comments: