Tuesday, June 29, 2010

ಅತ್ತ.. ಇತ್ತ...

on April 16, 2010

ಅತ್ತ ಅಂದ್ರೆ ಏನ್ಗುರು ಬ್ಲಾಗ್ ಅಲ್ಲಿ ಅಂದ್ರೆ ಇಲ್ಲಿ ನೆಸ್ಲೆ ಸಂಸ್ಥೆಯವರು ಕನ್ನಡಿಗರ ಮೇಲೆ "ದಹಿ" ಸುರಿತಿದಾರೆ ಅಂತ ಸುದ್ದಿ ಪ್ರಕಟ ಆಗಿ.. ವಿಚಾರದ ಪರ ವಾದಿಗಳು ವಿರೋಧಿಗಳ ಚರ್ಚೆ, ಉರಿಯುತ್ತಿರುವ ಯಜ್ಞಕುಂಡಕ್ಕೆ ತುಪ್ಪ ಸುರಿದ ಹಾಗೆ ಮಾತುಗಳು ಬರ್ತಿದೆ.. ಬೇರೆ ಯಾರ ಮಧ್ಯೆನು ಅಲ್ಲ ಕನ್ನಡಿಗರ ಮಧ್ಯೇನೆ :) ಎಂತಹ ವಿಪರ್ಯಾಸ. ಕನ್ನಡಕ್ಕೆ ಕುತ್ತು ಬರೋದು,ಇರೋದು ಕನ್ನಡಿಗರಿಂದಲೆ ಪರಭಾಷಿಕರು ಬೇಕಾಗೆ ಇಲ್ಲ..
ಇತ್ತ ಸಂಪದ ಅಲ್ಲಿ, ಕನ್ನಡ ಸಾಹಿತ್ಯ ಅಭಿರುಚಿ ಇರುವರವರ ಕನ್ನಡ ವಿಚಾರವಂತರ ತಾಣದಲ್ಲಿ ಮೊಸರಿನ ರುಚಿ ಕಂಡು ಬರುತ್ತಿಲ್ಲ.. ಅವ್ರ್ ಕಾಲೆಳಿ ಇವ್ರ್ ಕಾಲೆಳಿ ಅಂತ ವಿನೋದವಾಗಿ ಮಾತು ಕತೆ ಸಾಗ್ತಿದೆ!! ಇರ್ಲಿ ಸಂತೋಷ ಹಾಗೆಯೆ ಮೊಸರು "ಒಡೆದು" ದಹಿಯಾಗುತ್ತಿರುವ ಸಂಸ್ಕೃತಿಯ ಬಗ್ಗೆಯು ಚರ್ಚೆಯಾದರೆ ಉತ್ತಮ ಅಲ್ಲವೆ?? ಮಾವೋವಾದಿಗಳು ಇನ್ನು ೧೦೦ ಜನ ಪೋಲೀಸರನ್ನು ಸಾಯಿಸಿದರೂ ಸಹ ಸದ್ಯದ ಪರಿಸ್ಥಿತಿಯಲ್ಲಿ ಚರ್ಚೆ ಒಂದು ಬಿಟ್ಟರೆ ಬೇರೇನು ಮಾಡುವುದಕ್ಕೆ ನಮಗೆ ಸಾಧ್ಯವಿಲ್ಲ. ಈಗ ನೆಸ್ಲೆಯ ಆಕ್ರಮಣ ಕೋಟಿ ಕನ್ನಡಿಗರ ಮೇಲೆ ಆಗ್ತಿದೆ.. localization ಬಗ್ಗೆ ಎಚ್ಚರ ವಹಿಸುವ ಬಹುರಾಷ್ಟ್ರೀಯಕಂಪನಿಗಳು ಬೆಂಗಳೂರಿನಲ್ಲಿ ಎಡವಿ ಬೀಳುವಂತೆ ಸಾಗುತ್ತಿರುವುದಕ್ಕೆ ಕಾರಣವೇನು? ಈ ರೀತಿಯ ಬೆಳವಣಿಗೆ ವಿರುದ್ದ ಆ ಕಂಪನಿಯ ವಸ್ತುಗಳನ್ನು ಉಪಯೋಗಿಸುವ ಕನ್ನಡಿಗರು ನಾವು ಹೇಗೆ ಅವರಿಗೆ ತಿಳಿ ಹೇಳುವುದು? ಸರ್ಕಾರ ಅಂತು ತಣ್ಣಗೆ ಮಲಗಿದೆ ಕನ್ನಡಿಗರಿಗೆ ಜೋಗುಳ ಹಾಡುತ್ತ!! ಕನ್ನಡಿಗರು ಎಚ್ಚರ ಆದ್ರೆ ಹಿಂದಿ ಹೇರಿಕೆಗೆ ಕುತ್ತು!!
ಪಕ್ಕದ ನಾಡಿನಲ್ಲೆ World Tamil Conference ದಿನಗಳು ಹತ್ತಿರ ಬರುತ್ತಿರುವುದರ ಮುನ್ಸೂಚನೆಯಾಗಿ ಆಗತ್ಯ ಕ್ರಮಗಳನ್ನ ತೊಗೊತಿದಾರೆ ಅದು ಅತ್ಯಂತ ವೇಗದಲ್ಲಿ!! ಇವೆಲ್ಲ ಕಾರ್ಯರೂಪಕ್ಕೆ ತರ್ತಾರೆ.. ಹೇಗ್ ಗೊತ್ತಾ?? ಮೂಲ ಆಂಗ್ಲ ಪದಗಳಿಗೆ ತಮಿಳಿನ ಪರ್ಯಾಯ ಪದ "ಕಂಡು ಹಿಡಿದು" ಅದನ್ನು ಕಡ್ಡಾಯವಾಗಿ ಫಲಕಗಳಲ್ಲಿ/ಜಾಹಿರಾತಿನಲ್ಲಿ ಹಾಕಬೇಕು ಇಲ್ಲಿ ಓದಿ !!! ಚಂಡಿ ಹಿಡಿದ ಮಗೂಗೆ ಊಟ ಮಾಡಿಸಿದ ಹಾಗೆ ಕನ್ನಡದವರಿಗೆ ತಮಿಳಿನವರನ್ನೆ ತೋರಿಸಿ ಅವ್ರನ್ ನೋಡಿ ಕಲೀರಿ ಅಂತಾನೆ ಆಗ್ಬೇಕಾ ಯಾವಾಗ್ಲು? ನಮ್ಮಲ್ಲಿ ಈ ರೀತಿ ಆಗ್ಬಿಟ್ರೆ ಎದ್ದು ನಿಂತ್ಬಿಡ್ತಾರೆ ಕೆಲವರು ಬೇಳೆ ಬೇಯಿಸಿಕೊಳ್ಳುವುದಕ್ಕೆ.. ಅಯ್ಯೊ ಕನ್ನಡ ಬರದೆ ಇರುವವರಿಗೆ ಅನ್ಯಾಯ ಅಲ್ವ ಅಂತ..ಹೀಗೆ ತಮ್ಮ ಸ್ವಾರ್ಥಕ್ಕೆ ಮಣೆ ಹಾಕ್ತಿರ್ತಾರೆ. ಅವರಲ್ಲಿ(ವರದಿ ಓದಿ) ಹೇಳಿಕೊಂಡಿದ್ದಾರೆ ಇಂಥ ನಿರ್ಧಾರ ಕೈಗೊಂಡಾಗ ಒಬ್ಬರು ಕೂಡ ಇದರ ವಿರುದ್ಧ ಸೊಲ್ಲೆತ್ತದೆ ಒಪ್ಪಿದ್ದಾರೆ.
ನಮ್ಮವರಿಗೆ, ದಹಿ ಹೇರ್ತಿರೊದನ್ನ ವಿರೋಧಿಸಿ ಸಂಸ್ಥೆಯವರಿಗೆ ತಿಳಿಸಿ ಮಿಂಚೆ ಬರೆದು ದಬ್ಬಾಳಿಕೆ ತಡೆಯೋಣ ಅಂದ್ರೆ ಕೆಲವರು ಅಯ್ಯೂ ಅದ್ರಲ್ಲೇನಿದೆ ಬಿಡಿ.. ದಹಿ ಅಂದ್ರು ಅದೆ ಮೊಸರು ಅಂದ್ರು ಒಂದೆ.. ನಾವೇನು ಉಪಯೊಗಿಸೋದು ನಿಲ್ಲಿಸುವುದಿಲ್ಲವಲ್ಲ ಅಂತ!!! ಏನ್ ವಿಚಾರ ಅಂತೀನಿ.. ಹ್ಮ್ಮ್ ಇವರು ಸಹ ನಮ್ಮ್ ಕನ್ನಡ ಬಾಂಧವರು. ಮತ್ತೊಬ್ರು ಅಂತಾರೆ ಇಷ್ಟೆಲ್ಲ ಮಾತಾಡ್ತಿರೋರು ನೀವೇನು ಮಾಡ್ತಿದೀರಾ ಅಂತ!! ಅವನು ಅವನನ್ನು ಪ್ರಶ್ನಿಸಿಕೊಳ್ಳಲಿಲ್ಲ ನಾನು ಏನು ಮಾಡಬಹುದು ಅಂತ ಪ್ರಶ್ನಿಸೊ ಹಾಗಿದ್ರೆ ಅಥವಾ ಸಲಹೆ ನೀಡೊ ಹಾಗಿದ್ರೆ ಕೊಂಡಿ ಇಲ್ಲಿದೆ .. ಜೊತೆಗೆ ಸ್ವಿಟ್ಝರ್ ಲ್ಯಾಂಡ್ ಅಲ್ಲಿರೊ ಮುಖ್ಯ ಸಂಸ್ಥೆಗು ಸಹ ಕರ್ನಾಟಕದ ಬೆಂಗಳೂರಿನ ಸಂಸ್ಥೆಯವರು ಈ ರೀತಿ ಮಾರುಕಟ್ಟೆ ಮಾಡ್ತಿದಾರೆ.. ಈ ರೀತಿ ಮಾಡುವುದು ಲಾಭಕ್ಕೆ ಕುತ್ತು!! ಗ್ರಾಹಕರನ್ನು ತಲುಪಲಾಗುವುದಿಲ್ಲ ಅಂತ ತಿಳಿಹೇಳಿದರೆ ಹಿಂದಿ ಹೇರುತ್ತಿರುವವರಿಗೆ ಝಾಡಿಸುತ್ತಾರೆ..ಅವ್ರಿಗೆ ಸಹ ಬರೆದಿದ್ದು ಕಾಪಿ ಪೇಸ್ಟ್ ಮಾಡೊಕ್ಕೆ ಮತ್ತೆ ಬರೆಯುವ ಕೆಲಸ ಇಲ್ಲ, ಇಲ್ಲಿ ತಿಳಿಸಿರಿ
ಮತ್ತೊಂದು ಸಮಾಚಾರ ಅವ್ರ್ಯಾಕೆ ಹಂಗೆ ದಹಿ ಸುರಿತಿದಾರೆ ಅಂದ್ರೆ ಅವರ ಪ್ರಕಾರ ಮೊಸರು ಅಸ್ತಿತ್ವದಲ್ಲಿ ಇಲ್ಲ!!! ಎಲ್ನೋಡಿದ್ರು ದಹಿ ವಡಾ, ದಹಿ ಪುರಿ, ಕರ್ಡ್ ರೈಸ್!! ಅದಕ್ಕೆ ಈ ಬೆಳವಣಿಗೆ, ಮೊಸರು ಎಂಬ ಪರಿಚಯದ ನೆರಳು ಸಹ ಅವರ ಮೇಲೆ ಬೀಳ ಹಾಗೆ ಕನ್ನಡಿಗರು ಎಚ್ಚರ ವಹಿಸಿದ್ದಾರೆ. ಸಂಸ್ಥೆಯವರಿಗೆ ತಿಳಿ ಹೇಳಬೇಕಾಗಿದೆ ದಹಿಗೆ ಪರ್ಯಾಯವಾಗಿ ಕನ್ನಡದ್ದೆ ಆದ ಮೊಸರು ಇದೆ, ನಮ್ಗೆ ದಹಿ ಆಗ್ಬರಲ್ಲ ಮೊಸರು ಕೊಡಿ ಅನ್ಬೇಕು.
ಏನಂತೀರಾ ದಹಿನಾ ಮೊಸ್ರಾ?

ಪ್ರಸಾದ್

No comments: