Tuesday, June 29, 2010

ಪ್ರಾದೇಶಿಕ ಪಕ್ಷಕ್ಕೆ ಮತ ಹಾಕ್ಬೇಕ? ರಾಷ್ಟ್ರೀಯ ಪಕ್ಷಕ್ಕೆ ಮತ ಹಾಕ್ಬೇಕ?

on April 16, 2009

ಎಲ್ಲಿ ನೋಡಿದ್ರು ಚುನಾವಣೆ ಭರಾಟೆ, ಅದರದ್ದೆ ಚರ್ಚೆ,ಮಾತು,ಕಾಡು ಹರಟೆ, ಎಲ್ಲವು ಅದಕ್ಕೆ ಮೀಸಲು. ಚುನಾವಣೆ ಫಲಿತಾಂಶ ಹೊರಗೆ ಬೀಳೋವರ್ಗು ಇದು ತಪ್ಪಿದ್ದಲ್ಲ. ಆದ್ರೆ ವೋಟ್ ಮಾಡೊನಿಗೆ ಇರೊ ತಲೆನೋವು ಯಾರಿಗೆ ಮತ ಹಾಕ್ಲಿ ಅಂತ!!! ಪ್ರಾದೇಶಿಕ ಪಕ್ಷಕ್ಕೆ ಮತ ಹಾಕ್ಬೇಕ?ರಾಷ್ಟ್ರೀಯ ಪಕ್ಷಕ್ಕೆ ಮತ ಹಾಕ್ಬೇಕ?ಅಥವಾ ಇಷ್ಟು ವರ್ಷದಿಂದ ಕಣ್ಣ್ ಮುಂಚ್ಕೊಂಡು ವಂಶಪಾರಂಪರ್ಯವಾಗಿ ದೇಶವನ್ನ ಆಳುತ್ತಾ ಬಂದ ಪಕ್ಷಕ್ಕೆ ಮತ ಹಾಕ್ಲಾ ಅಂತ.ಇಷ್ಟು ವರ್ಷ ಉದ್ಧಾರ ಮಾಡಿದ್ದು ಅಷ್ರಲ್ಲೆ ಇದೆ ನಾ ಕಂಡಿಲ್ವಾ ಇವರ ಬಂಡವಾಳಾನ, ಈ ಸರ್ತಿ ಆರಾಮಾಗಿ ರಜೆ ಮಜೆ ಮಾಡಿದ್ರೆ ಸಾಕು, ಯಾವನಿಗೆ ಬೇಕು ಈ ಚುನಾವಣೆ ಅನ್ನೊ ಬೃಹಸ್ಪತಿಗಳಿಗು ಏನು ಕಮ್ಮಿ ಇಲ್ಲ. ಒಟ್ನಲ್ಲಿ ಮತ ಹಾಕೋವರ್ಗು ದ್ವಂದ್ವ ಇದ್ದದ್ದೆ...

ಈಗ ನೋಡಿ ಒಬ್ರು ಪ್ರಾದೇಶಿಕ ಪಕ್ಷಾನೆ ಒಳ್ಳೆದು, ನಮ್ ನಾಡಿಗೆ ಸೌಕರ್ಯ ಒದಗಿಸ್ತಾರೆ,ರೈಲು ಬರ್ತದೆ,ನಮ್ ಜನಕ್ಕೆನೆ ಕೆಲ್ಸ ಸಿಗ್ತದೆ,ನಮ್ ನಾಡಿನ ನೆಲ ಕಸಿಯೊಲ್ಲ,ನಮ್ ನಾಡಿನ ನೀರು ಬಿಡುವ ಅವಶ್ಯಕತೆಯಿಲ್ಲ ಅಂತೆಲ್ಲಾ ಅಂತ. ಯಾಕಂದ್ರೆ ಕೇಂದ್ರದಾಗೆ ರಚನೆ ಆಗೊ ಸರ್ಕಾರಕ್ಕೆ ನಮ್ ನಾಡಿನ್ ಸರ್ಕಾರ ಸಹಾಯ ತಗಂಡಿರ್ತದೆ ಅಂದ್ಬುಟ್ಟು ನಾವ್ ಕೇಳಿದ್ನ ಅವ್ರು ಕೊಡ್ತಾರೆ ಅನ್ನೊ ನಂಬಿಕೆ ಅಲ್ವ!! ಇದಕ್ಕೆ ಒಪ್ಪೊ ಉದಾಹರ್ಣೆ ಅಂದ್ರೆ ತ್ಯಮುಳುನಾಡ್ನೋರು ಕೇಳಿದ್ದು, ಕೇಂದ್ರ ಸರ್ಕಾರ ಮಾಡ್ಕೊಡ್ಲಿಲ್ಲಾ ಅಂದ್ರೆ ಬೆಂಬಲ ವಾಪನ್ ಪಡಿತೀವಿ ಅಂತ್ ಇವರು ರೋಪ್ ಹಾಕ್ತಾರೆ!! ಆಷ್ಟಕ್ಕು ತ್ಯಮುಳುನಾಡ್ನಲ್ಲಿ ಆಗಿರೋದೇನು? ಒಡಕು ನೀತಿ ರಾಜಕೀಯ,ಉತ್ತರ ಭಾರತೀಯರು ಅರ್ಯನ್ನರು ರಾಷ್ಟ್ರೀಯ ಪಕ್ಷಗಳು ಆರ್ಯನ್ರದ್ದು.ಅವರು ನಮ್ಮ ಶತ್ರುಗಳು ಅನ್ನೋ ಭಾವನೆ ಹೊತ್ತು ಬೆಳೆಯೊ ದಡ್ಡ ಜನರು.ಆರ್ಯನ್ -ದ್ರಾವಿಡ್ ಥಿಯರಿ ಸುಳ್ಳು ಅಂತ ಗೊತ್ತಿದ್ರು ಸೈತಾ ತಮ್ಮ ಬೇಳೆ ಬೇಯ್ಸ್ಕಳಕ್ಕೆ ಜನರಿಗೆ ಸತ್ಯ ತಿಳಿಸ್ದೆ ಮೋಸ ಮಾಡ್ತ ಆಳ್ತಿರೋರು. ಮೇಲಾಗಿ ಪೆರಿಯಾರ್,ಅಣ್ಣಾ ಅನ್ಕೊಂಡು ದೇವ್ರು ಇಲ್ಲ ದಿಂಡ್ರು ಇಲ್ಲಾ ಹಿಂದುಗಳದ್ದೆಲ್ಲಾ ಪೊಳ್ಳುವಾದ ಅಂತ ಒಂದು ಕಡೆ ಶಂಖ ಹೊಡ್ಕೊಂಡು ಮೈನಾರಿಟಿಯವರಿಗೆ ಕುಮ್ಮಕ್ಕು ನೀಡ್ತಾ ಮತಾಂತರದಂತಹ ಆತ್ಮ ವ್ಯಭಿಚಾರಕ್ಕೆ ಆಸ್ಪದ ಕೊಡ್ತಾ ವೋಟ್ ಬ್ಯಾಂಕ್ ಗಟ್ಟಿ ಮಾಡ್ಕಂಡ್ರೆ ಮಾತ್ತೊಂದ್ ಕಡೆ ಮೆಜಾರಿಟಿಯವರ ಜೊತ್ಗೂನು ಕೈ ಕೈ ಮಿಲಾಯಿಸ್ತಾ ಆಸನ ಭದ್ರ ಮಾಡ್ಕೊತಾರೆ. ಸರಿನಪ್ಪಾ ಹಿಂಗೆಲ್ಲಾ ಮಾಡಿದ್ರೆ ರೈಲ್ ಬರ್ತದೆ,ಅಂಚೆ ಚೀಟಿ ಬಿಡುಗಡೆ ಮಾಡ್ತಾರೆ,ನೀರು ಬಿಡೊ ಹಾಗೆ ಮಾಡ್ತಾರೆ, ಇಷ್ಟೆ ಅಲ್ವಾ.. ಅವರ ನಾಡಿನಲ್ಲಿ ಅವರಿಗೆ ಕೆಲ್ಸ ದಕ್ಕೋದಾಗ್ಲಿ ಅಥ್ವಾ ಅವರಿಗೆ ಅವರ ಜಾಗದಲ್ಲಿ ಪ್ರಾಮುಖ್ಯತೆ ಇರೊದಾಗ್ಲಿ ಅದು ಬರಿ ಅವರ ಭಾಷಾಭಿಮಾನ,ನಾಡ್ ಮ್ಯಾಗ್ ಇರೊ ಪಿರೂತಿ ಮೇಲೆ ಮಾತ್ರ ನಿಂತಿರೋದು ಅಟೆಯಾ ಕೇಂದ್ರಕ್ಕೆ ಬೆಂಬಲ ಕೊಟ್ಟಿದೀವಿ ಅಂತಲ್ಲ.

ಈ ವರಸೆ ಕೂಡ ತ್ಯಪ್ಪು ಅನ್ಕಳಣ,ಈ ಪ್ರಾದೇಶಿಕ ಪಕ್ಷ್ದೋರು ಕಡೆನಾಗೆ ರಾಷ್ಟ್ರೀಯ ಪಕ್ಷಕ್ಕೆ ತಾನೆ ಬೆಂಬಲ ಕೊಡೊದು ಆ ರಾಷ್ಟ್ರೀಯ ಪಕ್ಷ ನಮ್ ದೇಸಾನ ಹೆಂಗ್ ಆಳ್ತಾರೆ ಅನ್ನೊದು ಮುಖ್ಯ ಆಗೊಲ್ವಾ?? ಟೆರರಿಸ್ಟ್‌ಗೆ ವೇತನ ಕೋಡೊದು ಕೇಳಿದೀರಾ? ಸಿಕ್ಕಿಬಿದ್ದಿರೊ ಟೆರರಿಸ್ಟ್‌ಗೆ ಗಲ್ಲು ಕೊಡೊಕ್ಕೆ ಆಗಿಲ್ಲಾ!! ನಮ್ ದೇಸ್ದಾಗೆ ಪಾಕಿಸ್ತಾನ ಬಾವುಟ ಹಾರಿಸ್ತಾರೆ!! ಸಾವಿರ ಜನ ಸತ್ರು ತಲೆ ಕೆಡಿಸ್ಕೊಳ್ಳೊರು ಇಲ್ಲಾ!! ಹಿಂಗೆಲ್ಲಾ ನಮ್ ದೇಸ್ದಾಗೆ ಮಾತ್ರ ನಡಿತೈತೆ. ತ್ಯಮುಳುನಾಡಿಗೆ ರೈಲ್ ಬಂದಿರ್ಬೋದು,ಅಂಚೆ ಚೀಟಿ ಬಿಡುಗಡೆ ಮಾಡಿರ್ಬೋದು,ನೀರು ಬಿಡೊಕ್ಕೆ ಒತ್ತಾಯ ಮಾಡಿರ್ಬೋದು, ಆದ್ರೆ ಕೊಯಂಬತ್ತೊರ್ ಅಲ್ಲಿ ಜನ ಬಾಂಬ್ ಹಿಡ್ಕಂಡು ಒಡಾಡ್ತಾರಲ್ಲ ಎನ್ ಅಂತೀರಾ ಈ ಮಾತ್ಗೆ?ಬಾಂಬ್ ಸ್ಫೊಟದ ಕೇಸ್ನಾಗೆ ಸಿಕ್ಕಿಬಿದ್ದಿರೋನು ಮುಸ್ಲಿಂ ರಾಜಕೀಯ ವ್ಯಕ್ತಿ.ಎಲ್ಲ ಪುರಾವೆ ಇದ್ರು ಅವನಿಗೆ ಶಿಕ್ಷೆ ಕೊಡ್ಸೊಕ್ಕೆ ಆಗ್ಲಿಲ್ಲ ಅನ್ನೋದಕ್ಕಿಂತ ಶಿಕ್ಷೆ ಆಗೊಕ್ಕೆ ಬುಡ್ಲಿಲ್ಲಾ ಅನ್ನಿ.ಇವರು ಬೆಂಬಲ ಕೊಟ್ಟಿರೊ ರಾಷ್ಟ್ರೀಯ ಪಕ್ಷದ ನೀತಿ ದೇಸದ್ ಹಿತಾಸಕ್ತಿಗೆ ವಿರುದ್ಧ ಇದ್ರೆ ಎನ್ ಬಂತು ಸುಖಾ.. ನಾವಾಯ್ತು,ನಮ್ ನಾಡು ಆಯ್ತು ಅಂತ ಸಣ್ಣದಾಗಿ ಯೋಚಿಸಿದ್ರೆ ಮಣ್ ತಿನ್ಬೇಕು ನಾವು ಭಾರತೀಯರಾಗಿ ಆಷ್ಟೆ,ಕನ್ನಡದವರಾಗಿ ಉದ್ಧಾರ ಆಗಬೈದೇನೊ ಆದ್ರೆ ಭಾರ್ತೀಯನಾಗಿ ಮಾತ್ರ ಮಾನ ಮರ್ವಾದೆ ಹರಾಜ್ ಹಾಕೊಂಡಿರ್ತೀವಿ ಅಂತ ಅನ್ಸಾಕಿಲ್ವಾ?

ದೇಶದ್ ಹಿತಾಸಕ್ತಿ ಮುಖ್ಯ.. ನಾಡಿನ್ ಹಿತಾಸಕ್ತಿ ಮುಖ್ಯಾ.. ಈಗ ನೋಡಿ ಗುಜರಾತ್‌ನಾಗೆ ಇರೋದು ರಾಷ್ಟ್ರೀಯ ಪಕ್ಷ ಅಲ್ವರಾ? ಅದು ಹೆಂಗೈತೆ? ಏಟ್ ಖದರ್ ನಿಂದ ಕೇಂದ್ರಕ್ಕೆ ಸಡ್ಡು ಹೊಡೆದು ನಿಲ್ತದೆ.ಪ್ರಾದೇಶಿಕ ಪಕ್ಷ ಇಲ್ಲ ಅಂದ್ಬುಟ್ಟು ಅಲ್ಲೆನು ಅಭಿವೃದ್ಧಿ ಕೆಲ್ಸ ನಿಂತೊಗೈತಾ?ಜನಕ್ಕೆ ಕೆಲ್ಸಾ ಇಲ್ವಾ?ಅಥ್ವಾ ಆರ್.ಜೆ.ಡಿ ಪ್ರಾದೇಶಿಕ ಪಕ್ಷ ಇದ್ದಾಗ ಬಿಹಾರ ಎಂಗಪ್ಪಾ ಬೆಳೀತು,ಅಲ್ಲಿ ಜನ ಇನ್ನಾನುವ ಆಯ್ಕಂಡ್ ತಿಂತಿಲ್ವಾ? ತಾಕತ್ತು ಅಂದ್ರೆ ಗುಜರಾತ್ ಜನರದ್ದು,ಜನ ಬಲ ಅಂದ್ರೆ ಅದು,ಒಗ್ಗಟ್ಟು ಅಂದ್ರೆ ಅದು.ಅಭಿವೃದ್ಧಿ ಪರ ಇರೊ ಯಾವ್ದು ಜಾತಿ ಮತದವ್ರು ಆದ್ರು ಸಹ ಮೋದಿಗೆ ಕಣ್ ಮುಚ್ಕೊಂಡು ಮತ ಹಾಕ್ತಾರೆ.ಯಾಕಂದ್ರೆ ಅಲ್ಲಿ ಪ್ರಾದೇಶಿಕ ಅಥ್ವಾ ರಾಷ್ಟ್ರೀಯ ಅಂತ ಒಡಕು ಇಲ್ಲಾ, ಏನಿದ್ರು ಗುಜರಾತ್‌ನ ಭವ್ಯ ಕನ್ಸು ಐತೆ ಜನ್ರ ಮನ್ಸ್ನಾಗೆ.ಹಿಂಗಿದ್ರೆ ನಮ್ಗೆ
ಸಮಾಜ್ದಾಗೆ ಪ್ರೀತಿ,ಸೌಹಾರ್ದತೆ,ಪರಸ್ಪರ ನಂಬಿಕೆ ಅಂತ ಕಾಣೊದು,ಬರೊದು,ನಾಡು ಚಿನ್ನದ ಬೀಡಾಗೋದು. ನಂ ನಾಡ್ಗೆ ಒಳ್ಳೆದು ಆಗ್ಬೆಕು ಅಂದ್ರೆ ನಾವು ಮೊದ್ಲು ಸರಿ ಇರ್ಬೇಕು,ನಾವು ಮೊದ್ಲು ಒಳ್ಳೆ ಪ್ರಜೆ ಆಗಿ ಬಾಳೊದು ಕಲಿಬೇಕು.ಬರಿ ನಂ ಕೋಣೆ ಮಾತ್ರ ಶುಚಿಯಾಗಿದ್ರೆ ಸಾಕಾ? ಮನೆ ಅಂದ್ವಾಗಿಡೊದು ಬೇಡ್ವಾ?

ಪ್ರಾದೇಶಿಕ,ರಾಷ್ಟ್ರೀಯ ಅಂತ ಅನ್ದೆ ಭಾರ್ತೀಯನಂಗೆ ಯೊಚಿಸಿ ದೇಸದ್ ಹಿತಾಸಕ್ತಿ ನೋಡ್ಕಂಡು ಮತ ಚಲಾಯಿಸ್ಬೇಕು. ಜನ ಹಿನ್ಗೆ ಮೆರಿತಾ ಇರ್ಲಿ ಬತ್ತದೆ ಒಂದ್ ದಿನಾ ಕಾಶ್ಮೀರ್ದಾಗೆ ಪಾಕಿಸ್ತಾನ್ ಬಾವುಟ,ನಾಗಲ್ಯಾಂಡ್ ನಮ್ ದೇಸ್ದಿಂದ ಹೊರಗಾಗ್ಬೇಕು ಅಂತ ಅಮೇರಿಕದಾಗೆ ಕುಂತ್ಕೊಂಡು ಮತಾಂತರಕ್ಕೆ ಕುಮ್ಮಕ್ಕು ಕೊಟ್ಟು ಅದನ್ನ ಕ್ರೈಸ್ತ ನಾಡನ್ನ ಮಾಡುದ್ರಲ್ಲ ಅವ್ರು ಬಡ್ಕತ ಅವ್ರೆ. ಹಿಂಗೆನೆಯಾ ನಾವು ಕಚ್ಚಾಡ್ಕಂಡು ಸಾಯ್ತಿದ್ರೆ ಒಂದು ದಿನ ತಲೆ ಮ್ಯಾಗೆ ಟವಲ್ ಹಾಕೊಂಡು ಕುಂತ್ಕೊಂಡು ಲಬೊ,ಲಬೊ,ಲಬೊ ಅಂತಾ ಹೊಯ್ಕಬೇಕು ಅಷ್ಟೆ..

ಪ್ರಾದೇಶಿಕ ಪಕ್ಷಾ ಇದ್ಕಂಡು ರೈಲ್ ಬರಸ್ಕಂಡು,ಅಂಚೆ ಚೀಟಿ ಬಿಡುಗಡೆ ಮಾಡ್ಕಂಡು,ನೀರು ಬಿಡ್ಬೇಕಾಗಿ ಬರೊ ಹಾಗೆ ಒತ್ತಡ ತರಿಸಿ,ಮತಾಂತರಕ್ಕೆ ಕುಮ್ಮಕ್ಕು ಕೊಡ್ತಾ,ಬಾಂಬ್ ಹಾಕಿರೊ ವ್ಯಕ್ತಿಗಳೆಲ್ಲ ಕೇವಲ ಬೆಂಬಲ ನೀಡೊ ವೋಟ್ ಬ್ಯಾಂಕ್ ಪ್ರತಿನಿಧಿ ಆಗಿರೋದ್ರಿಂದ ಆರಮಾಗಿ ಓಡಾಡ್ತಿರೊ ತ್ಯಮುಳುನಾಡ್ ಥರ ನಮ್ ನಾಡು ಇರ್ಬೇಕಾ ಅಥ್ವಾ ರಾಷ್ಟ್ರೀಯ ಪಕ್ಷಾ ಇದ್ಕಂಡು ಮತಾಂತರದ ವಿರುದ್ಧ ಸಿಡಿದು,ಬಾಲ ಬಿಚ್ಚೊ ಕುನ್ನಿಗಳ ಬಾಲ ಕತ್ತರಿಸಿ,ನಾಡಿಗೆ ನ್ಯಾನೊ ಕೀರ್ತಿ ತಂದು,ಒಂದು ವರ್ಷದಾಗೆ ೮೦೦೦೦ ಕೋಟಿ ಅಂದ್ರೆ ೮೦೦೦೦೦೦೦೦೦೦೦೦ ರೂಊಊಊಊಪಾಯಿ ಆದಾಯ ತಂದು ತಮ್ಮ ನಾಡಿನ ಕೀರ್ತಿ ಹೆಚ್ಚಿಸ್ಕೊಂಡು ಯಾವ್ದೆ ಜಾತಿ/ಮತದವರ ಮ್ಯಾಗೆ ದೌರ್ಜನ್ಯ ಮಾಡ್ದೆ, ಕಾರಣವಿಲ್ಲದೆ ಶಿಕ್ಷಿಸ್ದೆ,ಯಾವ್ದೆ ತಂಟೆ ತಕರಾರು ಇಲ್ದೆ,ಎಲ್ರು ಸೌಹಾರ್ದತೆ ಇಂದ ಬದುಕೋ ಹಾಗೆ ಇರೊ ಗುಜರಾತ್ ಮಾದರಿಯ ರಾಷ್ಟ್ರೀಯ ಪಕ್ಷಾ ಇರೊ ನಾಡು ಬೇಕಾ? ಯೋಚ್ನೆ ಮಾಡ್ಬುಟ್ಟು ನಂಗೆ ವಸಿ ಯೊಳಿ.. ಯಾವ್ದ್ ಸರಿ ಯಾವ್ದ್ ತಪ್ಪು ಅಂತಾ

No comments: