Tuesday, June 29, 2010

ಕನ್ನಡಿಗರ ಸಹಾಯಕ್ಕೆ ಕನ್ನಡಿಗರೆ ಆಗಬೇಕು ಯೆನ್ನಡಿಗರಲ್ಲ!!!

on March 11, 2009

ಪ್ರತಿ ಹೆಮ್ಮೆಯ ಕನ್ನಡಿಗನಿಗೂ ತನ್ನ ತಾಯ್ನಾಡಿಗೋಸ್ಕರ,ಕನ್ನಡಕೋಸ್ಕರ,ಕನ್ನಡಿಗನಿಗಾಗಿ ಕೈಲಾದ ಸೇವೆ ಮಾಡಬೇಕೆಂಬ ಹಂಬಲ ತುಡಿತ ಇದ್ದದ್ದೆ. ದಾರಿ ಕಾಣದೆ ಸುಮ್ಮನಾಗುವವರು ಹಲವರು, ಮಾಡೆತೀರಬೇಕೆಂಬ ಛಲಗಾರಿಕೆ ಮತ್ತಷ್ಟು ಜನರದ್ದು. ಈ ಛಲ ಉಳಿಸಿಕೊಂಡು ಸಮಾನ ಅಭಿರುಚಿಯಿರುವವರ ಜೊತೆಗೂಡಿ ಹಲವಾರು ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಕೆಲಸ ಮಾಡ್ತಾರೆ, ಶ್ರಮಿಸುತ್ತಾರೆ. ಕೆಲಸ ಫಲಕಾರಿಯಾಗುತ್ತೆ ಅನ್ನೊದು ಸಹ ನೂರಕ್ಕೆ ನೂರು ಪ್ರತಿಶತ: ಸತ್ಯ ಕೆಲವೊಂದು ಹಂತದಲ್ಲಿ ಕುಂಟಬಹುದು ಕೆಲವೊಮ್ಮೆ ಸ್ಠಗಿತವಾಗಲೂಬಹುದು ಆದ್ರೆ ಗುರಿ ಮುಟ್ಟುವುದು ಖಚಿತ. ಆದ್ರೆ ಇದೆಲ್ಲ ಕಾರ್ಯಾಚರಣೆಯ ಬಗ್ಗೆ, ಕನ್ನಡಿಗರಿಗೆ ಇರುವ ಛಲ, ತುಡಿತದ ಮಾತಾಯಿತು, ಕಾರ್ಯವ್ಯಾಪ್ತಿ ಬಗ್ಗೆ ಮಾಹಿತಿ ನೀಡುವುದಿಲ್ಲ. ಇವರ ಯೋಜನೆಗಳು, ಇವರು ವಹಿಸುವ ಶ್ರಮ ಸುತ್ತ ಮುತ್ತಲಿನವರ ಅಥ್ವಾ ಆಪ್ತ ವಲಯಕ್ಕೆ ಮಾತ್ರ ಸೀಮಿತವಿರುತ್ತದೆ. ಕನ್ನಡ ಪರ ಕೆಲಸ ಮಾಡುವ ಕನ್ನಡಿಗರು ತಮ್ಮ ವಿಚಾರಗಳನ್ನ, ಧೋರಣೆಗಳ ಬಗ್ಗೆ ಹಾಗು ಅವರು ಮಾಡುತ್ತಿರುವ ಕನ್ನಡ ಪರ ಚಟುವಟಿಕೆಗಳನ್ನ ಆದಷ್ಟು ಜನರಿಗೆ ಮುಟ್ಟುವಂತೆ ಮಾಡಬೇಕು..

ವಿಚಾರ ಮುಟ್ಟಿಸಬೇಕು ಅಂತಂದ್ರೆ ಇರೊ ಮಾರ್ಗಗಳಾದ್ರು ಯಾವ್ದು? ಒಂದೊ ಮಿಂಚೆ,ಬ್ಲಾಗ್,ವೆಬ್ ತಾಣ,ಸಾಮಾಜಿಕ ಜಾಲತಾಣಗಳು, ದಿನಪತ್ರಿಕೆಯಲ್ಲಿ ಸುದ್ದಿ,ಆಕಾಶವಾಣಿ, ಟಿವಿ.. ನಿಸ್ವಾರ್ಥ ಸೇವೆಗೆ ನಿಂತಿರುವ ಕನ್ನಡಿಗರ ಜೇಬಿನ ಮೇಲೆ ಕೆಲವು ಮಾಧ್ಯಮ ರೀತಿಗಳು ಭಾರಿಯಾಗುತ್ತವೆ ಅಥವಾ ಇಂತಹ ಕಾರ್ಯಗಳಿಗೆ ದಾನಿಗಳು, ಸಹಾಯಕರು ಸಹ ಮುಂದೆ ಬರುತ್ತಾರೆಂಬುದು ಸಹ ನಿಜ ಆದ್ರೆ ಇವೆಲ್ಲಕಿಂತಲೂ ಪರಿಣಾಮಕಾರಿಯಾದುದು ಬಾಯ್ಮಾತಿನ ಪ್ರಕಟಣೆ.. (word of mouth advertising). ಇಂಥ ಒಂದು ಬಗೆಯ ಜಾಹಿರಾತು ಅನ್ಯ ಮಾರ್ಗಕ್ಕಿಂತಲೂ ಹೆಚ್ಚು ಪರಿಣಾಮಕಾರಿ ಏಕೆಂದರೆ ಇವು ವಿಶ್ವಾಸದ ಮಾತುಗಳಗಿರುತ್ತವೆ ವಿನಹ ಯಾವುದೆ ರಾಜಕೀಯ ನಾಯಕರ ಆಶ್ವಾಸನೆಗಳಿಗೆ ಹೋಲಿಸಿಕೊಂಡಿರುವುದಿಲ್ಲ. ಆದರೆ ಈ ಬಗೆಯ ಪ್ರಕಟಣೆಗೆ ಅತೀ ಮುಖ್ಯವಾದುದು ಜಾಲಬಂಧ... ನಮ್ಮ ರಾಜ್ಯದಲ್ಲಿ ಐದು ಕೋಟಿ ಕನ್ನಡಿಗರಿದ್ದರೂ ನೂರಾರು ಸಂಘ ಸಂಸ್ಥೆಗಳಿದ್ದರೂ, ಈ ಸಂಘಗಳ ಅಂಗ ಸಂಸ್ಥೆಗಳಿದ್ದರೂ ಅವೆಲ್ಲ ಪ್ರತ್ಯೇಕ ತುಕಡಿಗಳಂತೆ ಕಾರ್ಯನಿರ್ವಹಿಸುತ್ತವೆ.. ಒಂದಕ್ಕೊಂದು ಹೊಂದಾಣಿಕೆಯಿಲ್ಲದೆ.. ನಮ್ಮ ಸುತ್ತಮುತ್ತಲಿನ ಜನರನ್ನೆ ನೋಡಿದರೆ, ಕನ್ನಡಕ್ಕೆ ಬೆಂಗಳೂರಿನಲ್ಲಿ ಚ್ಯುತಿ ಬಂದಿದ್ದರೂ ಸಹಿತ ಕೆಲವಷ್ಟು ignorant species ತಮಗು ಅದಕ್ಕೂ ಸಂಬಂಧವಿಲ್ಲವೆಂಬಂತೆ ನಿಶ್ಚಿಂತೆಯಿಂದ ನಿರ್ವಿಣ್ಣಮನ:ಸ್ಕರಾಗಿತ್ತಾರೆ.. ಇವರೂ ಸಹ ಕನ್ನಡಿಗರೆ, ಅವರಿಗೆ ತಾತ್ಸಾರ ಇದೆ ಎಂಬುದಾಗಲಿ ಅವರಿಗೆ ಬೇಡದ ವಿಚಾರವಿದ್ದರೂ ಸಹಿತ ಅವರನ್ನು ದೂಷಿಸುವಂತಿಲ್ಲ. ಬಡಿದಂತೂ ಯಾರಿಗು ಬುದ್ಧಿ ಹೇಳಲಿಕ್ಕಾಗುವುದಿಲ್ಲ ಮೇಲಾಗಿ ಯಾರಿಗೆ ಗೊತ್ತು ಯಾವಗ ಅವರಿಗೆ ಙ್ಞ್ನಾನೋದಯವಾಗುತ್ತೊ?ಈ ಮಣ್ಣಿನ ರಕ್ತ, ಙ್ಞ್ನಾನೋದಯವಾಗದಷ್ಟು ತಿಳಿಯಾದುದಲ್ಲವೆಂದು ನನ್ನ ಭಾವನೆ. ಸರಿಯಾದ ಸಮಯಕ್ಕೆ ಸರಿಯಾದ ಉಳಿಏಟು ಬೀಳಬೇಕಷ್ಟೆ ಕಲ್ಲು ಶಿಲೆಯಾಗುವುದಕ್ಕೆ. ಆ ಸಮಯಕ್ಕೆ ಅವರಿಗೆ "ಸರಿಯಾದ" ಒಳಹರಿವು ಆಗಲಿಲ್ಲವೆಂದರೆ ಕನ್ನಡಿಗರೆ ಇಷ್ಟು ಎನ್ನುವ ತಾತ್ಸಾರ ಭಾವ ಮೂಡಿದರು ಅಚ್ಚರಿಯಲ್ಲ ಹಾಗಾಗಿ, ಜಾಲಬಂಧದಲ್ಲಿರುವುದು, ಜಾಲಬಂಧವನ್ನು ಬೆಳೆಸುವುದು ಅತ್ಯಂತ ಮುಖ್ಯವಿಚಾರವಾಗಿ ತೋರುವುದು.

ಉದಾಹರಣೆಗೆ SSS ಎನ್ನುವ ಬಳಗ ಡಿವಿಜಿ ಯವರ ನುಡಿಮುತ್ತುಗಳನ್ನು ಟಿ-ಷರ್ಟ್ ಮೇಲೆ ಅಚ್ಚಿಸಿ, ಅವನ್ನು ಐಟಿ ವರ್ಗದಲ್ಲಿ ಮಾರಿ, ಬಂದ ಹಣದಿಂದ ಗುಲ್ಬರ್ಗಾದಲ್ಲಿ ಎರಡು ಶಾಲೆಯನ್ನು ನಡೆಸುತ್ತಿದ್ದಾರೆ. ಸಂಗ್ರಹವಾಗುವ ದುಡ್ಡು ಬೆಂಗಳೂರಲ್ಲಿ, ಉಪಯುಕ್ತವಾಗುವುದು ಗುಲ್ಬರ್ಗಾದಲ್ಲಿ :-o. ಅಲ್ಲಾ, ಚಿಣ್ಣರ ಪ್ರಾಥಮಿಕ ಓದು ವಿದ್ಯೆಗೆ ಎಷ್ಟು ಮಹಾ ದುಡ್ಡಾಗುತ್ತೆ ಅಂದುಕೊಂಡಿದೀರಾ? ಅವಿರತ ಎಂಬುವ ಸಂಸ್ಥೆಯ ಪ್ರಕಾರ ೧ ಮಗುವಿಗೆ ೧ ವರ್ಷಕ್ಕೆ ತಗಲುವ ಖರ್ಚು ೧೦೦ರೂ/-, ೧೦೦ ರೂಪಾಯಿಯಲ್ಲಿ ಇಡೀ ವರ್ಷಕ್ಕೆ ಬೇಕಾಗುವ ೧೦ ಪುಸ್ತಕಕ್ಕೆ ೭೦/-, ಮಿಕ್ಕ ೩೦/- ಪೆನ್ಚಿಲ್, ಎರೇಸರ್ ಮಿಕ್ಕ ಸ್ಟೇಷನರಿ ವಸ್ತುಗಳಿಗೆ.. ಹಾಗಾಗಿ ನೀವು ೧೦೦ರೂ/- ಅವರಿಗೆ ದಾನ ಮಾಡಿದಲ್ಲಿ ಒಂದು ಮಗುವಿಗೆ ಒಂದು ಇಡೀ ವರ್ಷದ ಶಿಕ್ಷಣದ ಅಗತ್ಯಗಳನ್ನು ಪೂರೈಕೆ ಮಾಡಿದಂತೆ. ಒಂದು ಹೋಟೀಲ್ ಗೆ ಹೊಗಿ ಊಟ ಮಾಡುವ ವೆಚ್ಚದಲ್ಲಿ ೨ ಮಕ್ಕಳ ವೆಚ್ಚ ಭರಿಸಬಹುದು, ಇನ್ನ ಕುಡಿಯೋ ಪಾರ್ಟಿಗೆ ಹೋದ್ರೆ ಕೇಳಬೇಡಿ.. ಕುಡಿಯೊ ಪ್ರತಿ ೬೦ಎಮ್.ಎಲ್ ಒಂದು ವಿದ್ಯಾರ್ಥಿಯ ವೆಚ್ಚ ಭರಿಸಬಹುದು. ಕುಡಿಯೊದು ಬಿಡಿ ಅಂತಿಲ್ಲ, ತಿನ್ನೋದು ಬಿಡಿ ಅಂತಿಲ್ಲ, ಕನಿಷ್ಟ ಒಂದು ಸರ್ತಿಯಾದ್ರು ಆ ಮೋಜಿಗೆ ಹಣ ಸುರಿಯುವ ಬದಲು ನಮ್ಮ ನಾಡಿನ ಮಕ್ಕಳ ವಿದ್ಯಾಭ್ಯಾಸದಲ್ಲಿ ನೆರವಾಗಿ. ಈಗ ನೋಡಿ SSS ಬಳಗದವರು ಮಾಡುತ್ತಿರೋ ಕೆಲಸಕ್ಕೆ ಗುಲ್ಬರ್ಗಾ ಆಸು ಪಾಸು ಸ್ಥಳಗಳಿಂದ ಬೆಂಬಲವೇಕಿಲ್ಲ? ಅಲ್ಲಿ ಅವರ ಜಾಲಬಂಧವಿಲ್ಲ, ಇಲ್ಲಿ ಇವರುಗಳು ಕೆಲಸ ಮಾಡುತ್ತಾರೆ ಸಹುದ್ಯೋಗಿಗಳು ನೆರವಾಗುತ್ತಾರೆ.. ಇಷ್ಟೆ ಸಾಕ? ಇವಾರ ಈ ನಿಸ್ವಾರ್ಥ ಕ್ರಿಯೆಗೆ ಅಲಿನ ಸ್ಥೆಳೀಯರ ಬೆಂಬಲವಿದ್ದರೆ ಯೋಚಿಸಿ ಎಂತಹ momentum ಬಂದಿರೋದು ಈ ಕಾರ್ಯಕ್ಕೆ.. alas ಸದ್ಯದ ಪರಿಸ್ಥಿತಿ ಹಾಗಿಲ್ಲ :( .
ಈಗ ಕನ್ನಡಿಗರಿಗೆ ಕೆಲಸಗಳು ದೊರಕ್ಕುತ್ತಿಲ್ಲ ಎಂಬ ಕೂಗು ಅನ್ಬೇಕೊ ಅಥವಾ ಹಾಹಾಕಾರ ಎನ್ನಬೇಕೆನೊ ಆ ಲೆವೆಲ್ ಗೆ ಬೊಬ್ಬೆ ಹೊಡೆಯೊ ಹಾಗೆ ಆಗಿದೆ? ಇಂತಹ ಪರಿಸ್ಥಿತಿ ಬರೋಕ್ಕೆ ಏನಪ್ಪ ಕಾರಣ , ಖಾಲಿ ಹುದ್ದೆಗಳ ವಿಚಾರ ಕನ್ನಡಿಗರಿಗೆ ಸಮಯದಲ್ಲಿ ತಲುಪದೆ ಇರುವುದು ಅಥವಾ ತಲುಪದೇನೆ ಇರುವುದು, ಎರಡನೆಯದೆ ಜಾಸ್ತಿ ಅನ್ಕೊಳ್ಳಿ.

ನಮ್ಮ ರಾಜ್ಯದಲ್ಲಿ ಒಟ್ಟು ೧೪೦ ಎಂಜಿನೀರಿಂಗ್ ಕಾಲೇಜು, ೨೫ ಕಲಾ ಹಾಗು ವಿಙ್ಞ್ನಾನ ಕಾಲೇಜು, ೯೩ ಲಾ ಕಾಲೇಜು, ೧೫ ಕಟ್ಟಡ/ವಾಸ್ತುಕಲಾ ಕಾಲೇಜು, ೪೧ ಹೋಟಲ್ ನಿರ್ವಹಣಾ ಕಾಲೇಜು, ೪ ಫ್ಯಾಷನ್ ವಿನ್ಯಾಸ ಕಾಲೇಜು, ೪೩ ದಂತ ಕಾಲೇಜು, ೩೭ ವೈದ್ಯಕೀಯ ಕಾಲೇಜು, ೪೯ ಆಯುರ್ವೇದ ಕಾಲೇಜು, ೧೬೫ ಶೂಶೃಷ ಕಾಲೇಜು, ೩ ಉನಾನಿ ಕಾಲೇಜು, ೧೨ ಹೋಮೆಯೊಪಥಿ ಕಾಲೇಜು, ೧೧೧ ಫಾರ್ಮಸಿ ಕಾಲೇಜು, ೧೦ ಶಿಕ್ಷಣ ತರಬೇತಿ ಕಾಲೇಜು, ೧೬೯ ಪಾಲಿಟೆಕ್ನಿಕ್ ಕಾಲೇಜು, ೯೮ ಮೆನೇಜ್ಮೆಂಟ್ ಸಂಸ್ಥೆಗಳು, ೩೦ ದೈಹಿಕ ಚಿಕಿತ್ಸಾ(ಫಿಸಿಯೊ ಥೆರಪಿ) ಕಾಲೇಜು, ೪೩ ಎಮ್.ಸಿ.ಎ ಹಾಗು ಎಮ್.ಬಿ.ಎ ಕಾಲೇಜು, ೧೨ ಸಂಶೋಧನಾ ಕಾಲೇಜು, ೧೮ ಮಾಸ್ ಕಮ್ಮುನಿಕೇಷನ್ ಕಾಲೇಜು, ೫೯ ಜೈವಿಕತಂತ್ರಙ್ಞ್ನಾನ ಕಾಲೇಜು, ೨ ಕೃಷಿ ವಿಙ್ಞ್ನಾನ ಕಾಲೇಜು, ೨ ಪ್ರಾಣಿ ವಿಙ್ಞ್ನಾನ ಹಾಗು ಪಶು ಸಂಙ್ನೋಪನಾ ಕಾಲೇಜು, ೧ ಛಾಯಾಗ್ರಹಣ ಹಾಗು ಚಲನಚಿತ್ರ ಸಂಸ್ಥೆಗಳು, ೧೨ ಪ್ರವಾಸೊದ್ಯಮ ಸಂಸ್ಥೆಗಳು.

ಇದೆಲ್ಲದರ ಮೇಲೆ, ಹತ್ತನೆ ತರಗತಿಗೆ ಶರಣು ಹೊಡೆದು ಕೆಲಸ ಮಾಡಲು ಧಾವಿಸುವವರು, ಓದಿನ ಪ್ರತಿ ಹಂತದಲ್ಲೂ ನಾ ಒಲ್ಲೆ ನಾ ಒಲ್ಲೆ ಎಂದು ಹೊರ ಜಿಗಿಯುವವರು ಬೇರೆ.. ಇವರಿಗೆಲ್ಲಾ ಎಲ್ಲಿಂದಪ್ಪಾ ಕೆಲ್ಸ ಸಿಗಬೇಕು. ನಮ್ಮ ಕಂಪನಿಗಳಲ್ಲೆ ಯಾರಾದ್ರು ಜವಾನ ಬೇಕು ಅಂದ್ರೆ ತಕ್ಷಣ ಒಬ್ಬ ತಮಿಳಿನವನೊ ಅಥವಾ ಮುಖ್ಯವಾಗಿ ಪರಭಾಷಿಕನೊ ಹಲ್ಲ್ಲುಗಿಂಜುತ ಹಾಜರಾಗುತ್ತಾನೆ, ತಾ ಸಿದ್ಧ, ಸಂಬಳ ೩೦೦೦/- ಆದರೂ ಪ್ರವಾಯಿಲ್ಲವೆಂದು. ಕೆಚ್ಚೆದೆಯ ಕನ್ನಡಿಗರಿಗೆ ಕೇಳಿ ಇದೆ ಹುದ್ದೆಯ ಬಗ್ಗೆ, ಹೆಚ್ಚಾಗಿ ಬರುವ ಪ್ರಶ್ನೆಗಳು, ಆಫೀಸ್ ಎಲ್ಲಿದೆ? ತುಂಬ ದೂರ ಆಯ್ತಲ್ವ? ಹೋಗಿ ಬರಲು ತುಂಬಾ ಕಷ್ಟ. ಸಂಬಳ ಇಷ್ಟೆನಾ? ಸರಿ ನೊಡೋಣ ಅನ್ನುವ ಆಸಾಮಿ ತಿರುಗಿ ಸಹ ನೋಡುವುದಿಲ್ಲ. ಹಾಗೆಂದ ಮಾತ್ರಕ್ಕೆ ಯಾವುದೆ ಕನ್ನಡಿಗರು ಸಿದ್ಧವಿರುವುದಿಲ್ಲವೆಂದಲ್ಲ. ಅಂತಹಾ ಕನ್ನಡಿಗನನ್ನು ಸಂಪರ್ಕಿಸುವುದರಲ್ಲಿ ನಾವು ವಿಫಲರಾಗಿರುತ್ತೇವೆ ಎಂದಷ್ಟೆ ಅರ್ಥ, ಕಾರಣ ಯಾರಿಗ್ ಗೊತ್ತು ಯಾರು ಎಲ್ಲಿರ್ತಾರೆ? ಯಾರಿಗೆ ಎನು ಬೇಕು ಅಂತ. ಒಮ್ಮೆ ಯೋಚಿಸಿ ಹುಟ್ಟುವ ಪ್ರತಿ ಹುದ್ದೆಗೂ ೧೦೦ ಕನ್ನಡಿಗರು ತಯಾರಿದ್ದರೆ ನಮ್ಮವರಿಗೆ competitiveness ಇಲ್ಲ ಅಂತ ಹೇಳೊಕ್ಕೆ ಯಾರಿಗೆ ಧೈರ್ಯ ಬರುತ್ತೆ? ಈ ೧೦೦ ಕನ್ನಡಿಗರು ನಾನು ಮೇಲೆ ಪಟ್ಟಿ ಮಾಡಿದ ಕಾಲೇಜುಗಳಿಂದ ಉತ್ತೀರ್ಣರಾದವರೆ ಆಗಿರುತ್ತಾರೆ.

ನಾ ಕಂಡಂತೆ ಉತ್ತರ ಕರ್ನಾಟಕದವರಿಗೆ ಸಹಾಯ ಆಗ್ಬೇಕು ಅಂತ ಉತ್ತರ ಕರ್ನಾಟಕದವರಿಂದ ಉತ್ತರ ಕರ್ನಾಟಕದವರಿಗೋಸ್ಕರ ಇರೋ ಯಾಹೂ ಗುಂಪು nktechies@yahoogroups.com ಇದರ ಒಟ್ಟು ಸದಸ್ಯರ ಸಂಖ್ಯೆ ೨೦೦೦+ ಇದರಲ್ಲೂ ಸಹ ಪರಭಾಷಿಕರ ಹಾವಳಿ, ಕಿತ್ತೊಗೆಯೋಣವೆಂದರೆ ಸದಸ್ಯರ ಸಂಖ್ಯೆ ಕಮ್ಮಿ ಆಗುತ್ತೆ ಅನ್ನೊ ಒಂದು ಚಿಂತೆ :D. ಅಂತು ಇಂತು ಹೇಗೊ ವಿಷಯಗಳು, ಖಾಲಿ ಹುದ್ದೆಯ ಮಿಂಚೆಗಳು ಹರಿದು ಬರುತ್ತಲೆ ಇರುತ್ತವೆ. ನಮ್ಮವರಿಗೂ ಅದೆ ಕಾಲದಲ್ಲಿ ಅವರಿಗು ತಿಳಿಯುತ್ತವೆ.. ಈ ಥರ ಇದ್ರೆ ಕನ್ನಡಿಗನಿಗೆ ಹೇಗೆ ಒಳಿತು ಆಗಬೇಕು? ಪ್ರತಿ ವರ್ಷ ಓಂದು ಕಾಲೇಜಿನಿಂದ ಉತ್ತೀರ್ಣರಾಗಿ ಹೊರ ಬರುವ ಸಂಖ್ಯೆಯೆ ೨೦೦೦+ ಇರುತ್ತದೆ ಎಲ್ಲಾ ಬ್ರಾಂಚ್ ಗಳನ್ನು ಗಣನೆಗೆ ತೆಗೆದುಕೊಂಡರೆ ಅಂಥಾದ್ರಲ್ಲಿ ಈ ಅತಿ ದೊಡ್ಡ ಗುಂಪಿನ ಸದಸ್ಯತ್ವದ ಸಂಖ್ಯೆ ೨೦೦೦+ ಸಾಕಾ? ಈ ಗತಿಯಲ್ಲಿ ಕನ್ನಡಿಗರನ್ನ ತಲುಪಿದರೆ ಅವರಿಗೆ ಮಾಹಿತಿ ಕೊಡೊರು ಯಾರು? ಜಾಲಬಂಧ ಎಲ್ಲಿದೆ?

ಆರ್ಕುಟ್ನಲ್ಲಿ ಒಂದು ಸಮುದಾಯವಿದೆ ಕನ್ನಡಿಗರಿಗೆ ಖಾಲಿ ಕೆಲಸದ ವಿಚಾರ ತಿಳಿಸಲು, ಇದರಲ್ಲಿನ ಮಾಡರೇಟರ್ ಗಳು ಬಹು ಹುರುಪಿನಿಂದ ಕೆಲಸ ಮಾಡಿತ್ತಾರೆ ಸಮುದಾಯವನು ನಿರ್ವಹಿಸುತ್ತಾರೆ, ಮೆಚ್ಚ ಬೇಕಾದ ಕಾರ್ಯ ಆದರೆ ಸಮುದಾಯದ ಒಟ್ಟು ಸದಸ್ಯತ್ವ ೪೫೦ :( ಕನ್ನಡಿಗರಿಗೆ ಸಹಾಯ ಮಾಡಬೇಕೆಂಬ ಹಂಬಲದಲ್ಲಿ, ತುಕಡಿಯಾಗೆ ಕಾರ್ಯನಿರ್ವಹಿಸುತ್ತಿರುವ ಕಾರಣ ಕನ್ನಡಿಗರನ್ನು ತಲುಪ ಬೇಕೆಂಬ ಛಲದ efficiency factor ತಳ ಮುಟ್ಟಿದೆ ..
೧೪೦ ಎಂಜಿನೀರಿಂಗ್ ಕಾಲೇಜಿನಿಂದ ಪ್ರತಿ ವರ್ಷ ಒಟ್ಟು ೨,೮೦,೦೦೦ ವಿದ್ಯಾರ್ಥಿಗಳು ಹೊರಬರುತ್ತಾರೆ. ೮೦೦೦೦ ಹೊಅರ್ಗಿನವರು ಅಂತ ಲೆಕ್ಕಹಾಕಿದರು ಉಳಿದ ೨೦೦೦೦೦ ಎಲ್ಲಿ ಕಾಣೇ ಆಗ್ತಾರೆ? ಅದೂ ಪ್ರತಿ ವರ್ಷ.. ರೋಡ್ ರೋಡ್ ಅಲೆಯುತ್ತಿರುತ್ತಾರೆ ಕೆಲ್ಸ ಖಾಲಿ ಇಲ್ಲ ಕೆಲ್ಸ ಖಾಲಿ ಇಲ್ಲ ಅಂತ.. ಇಂದಿಗೂ ಸಹ ಅನುಭವವಿಲ್ಲದವರನ್ನ ತೊಗೊತಿದಾರೆ ಈ ಯಾಹೂ ಗುಂಪುಗಳಲ್ಲಿ ಹಾವಿನ ತರಹ ಹರಿದಾಡುತ್ತಿರುತ್ತವೆ ಆಗೊಮ್ಮೆ ಈಗೊಮ್ಮೆ, ಆದ್ರೆ ಅವನ್ನು www.ಕನ್ನಡಮಿತ್ರ.ಕಾಮ್ ನಲ್ಲಿ ಹಾಕಿದರೆ ಒಂದು ರೆಸುಮೆ ಸಹ ಬರುವುದಿಲ್ಲ. ಕನ್ನಡಿಗರಿಗೆ ಒಳ್ಳೆಯದು ಆಗಲಿ ಅಂತ ಬಯಸಿ ಈ ರೀತಿ ಸೇವೆ ಮಾಡಿದರೆ ಅದರ ಸಾರ್ಥಕತೆ ಎಷ್ಟಿದೆ ನೀವೆ ಊಹಿಸಿ.. ಸೊನ್ನೆ ಎಂತ ಹೇಳಲು ದುಖ: ಆಗುತ್ತದೆ. ಉನ್ನತ ಹುದ್ದೆಗಳಲ್ಲಿರುವ ಕನ್ನಡಿಗರು ಕನ್ನಡಿಗರನ್ನು ಪ್ರೊತ್ಸಾಹಿಸಬೇಕು. ಕನ್ನಡಿಗರ ಪರ ಒಲವು ತೋರಬೇಕು.

ಹಲವಾರು ಬಾರಿ ಇವರ ಪ್ರತಿಷ್ಟೆ ಮೆರೆಯಲಿಕ್ಕಷ್ಟೆ ರೆಸುಮೆ ಸ್ವೀಕರಿಸುತ್ತಾರೆ, ಆಮೇಲೆ ಅದರ ಕಥೆ ಎನಾಗುತ್ತದೆಂದು ಕಳುಹಿಸಿದವನಿಗೆ ತಿಳಿಯದೆ ಇದ್ದರೂ ತೆಗೆದುಕೊಂಡ ದೊಡ್ಡ ಮನುಷ್ಯನಿಗೆ ಖಾತ್ರಿಯಿರುತ್ತದೆ ಎಲ್ಲಿ ಸೇರಬೇಕೆಂದು, ಕ.ಬು ವನ್ನು. ಅಕಸ್ಮಾತ್ ಅವರ ಕಂಪನಿಯಲ್ಲಿ ಹುದ್ದೆ ಖಾಲಿಯಾಯಿತಪ್ಪ ಅಂತಿಟ್ಟುಕೊಳ್ಳೊಣ ಆಗ ಕನ್ನಡಿಗನ ರೆಸುಮೆ ಬಂದರೆ ಇವರ ಧೋರಣೆ ಅವನನ್ನು ಒಳಗೆ ಎಳೆದುಕೊಳ್ಳಬೇಕೆಂಬ ಉತ್ಶಾಹ ಮೂಡದೆ, ಅವನಿಗೆ talent ಅನ್ನೊದು ಇದ್ರೆ ಸಿಕ್ಕೆ ಸಿಗುತ್ತೆ ನಾನು ಯಾಕೆ ಒಡಾಡ್ಲಿ ಅನ್ನುವ ಆಲಸ್ಯ. ನಮ್ ಸುತ್ತ ,ಮುತ್ತ ನೋಡಿದರೆ ಕೆಲಸದ ಗಂಧವೆ ತಿಳಿಯದ ಪರಭಾಷಿಕನೊಬ್ಬ "ಮೇಲಿನವರ" ಕೃಪೆಯಿಂದ ಆಸನ ಅಲಂಕರಿಸಿರುತ್ತಾನೆ. ಕೆಲವು ಸರ್ತಿ ನಾವು ಅಸಹಾಯಕಾರಿ ಇರ್ತೀವಿ ಅನ್ನುವುದು ಎಷ್ಟು ಸತ್ಯವೊ, ಮನಸ್ಸು ಪಟ್ಟಲ್ಲಿ ಅದನ್ನು ಬದಲಾಯಿಸಲುಬಹುದು ಅನ್ನೊದು ಸಹ ಅಷ್ಟೆ ಸತ್ಯ. ಆದರು ಸಹ ತನ್ನ ಹೊಟ್ಟೆ ತುಂಬಿದೆಯಲ್ಲ ಅಷ್ಟು ಸಾಕು, ಎಷ್ಟು ಕಷ್ಟ ಪಟ್ಟು ಈ ಹುದ್ದೆಗೆ ಬಂದಿದೀನಿ ಈಗ ಗುರುತು ಪರಿಚಯವಿಲ್ಲದವನಿಗೆ ಕನ್ನಡಿಗ ಎಂಬ ಒಂದೆ ಕಾರಣಕ್ಕೆ ಸಹಾಯ ಮಾಡಬೇಕೆ, ಯಾವನ್ ಮಾಡ್ತಾನೆ, ನನ್ದೆ ನನ್ಗೆ ನೂರಾಎಂಟು ತಲೆ ನೊವ್ವು ಅದರ ಮಧ್ಯೆ ಇದೊಂದು, ನನ್ಗ್ಯಾಕೆ ಬೇಕು ಇಲ್ಲದ ಉಸಾಬರಿ ಅಂತ ತಲೆ ಕೊಡವಿ ಬಾಳುವವರ ಸಂಖ್ಯೆ ಏನೂ ಕಮ್ಮಿ ಇಲ್ಲ. ಆ ಲೆಕ್ಕಕ್ಕೆ ಇಂತಹವರೆ ಜಾಸ್ತಿ ಅನ್ನಿಸುತ್ತೆ. ಇಂಥಹ ದುರ್ಗತಿ ಕೇವಲ ಕನ್ನಡಿಗನಿಗೆ ಕರ್ನಾಟಕದಲ್ಲಿ ಮಾತ್ರ ಅನುಭವ ಆಗಲು ಸಾಧ್ಯ, ಇಂತಹುದರಿಂದ ಪಾರಾಗಲು ಮೊದಲು ಕನ್ನಡಿಗರು ತಮ್ಮ ಸಂಪರ್ಕವಲಯವನ್ನು ಹೆಚ್ಚಿಸಿಕೊಳ್ಳಬೇಕು. ತಿಳಿಯದವರಿಗೆ ತಿಳಿಸಬೇಕು, ಕನ್ನಡಿಗರಿಗೆ ಆಗುತ್ತಿರುವ ಶೋಷಣೆ ವಿರುದ್ಧ ಧ್ವನಿ ಏರಿಸಬೇಕು. ತುಕಡಿ ಜೀವನ ಬಿಟ್ಟು ಒಂದಾಗಿ, ಒಟ್ಟಾಗಿ ಹೋರಾಡಬೇಕು.. ಈಸ ಬೇಕು.. ಇದ್ದು ಜಯಿಸಬೇಕು..

ಇತ್ತೀಚೆಗೆ ಏನು ಆಯ್ತು ಅಂದ್ರೆ, ನಾನು ಓದಿದ ಎಂಜಿನೀರಿಂಗ್ ಕಾಲೇಜಿನವರು ಹಳೆ ವಿಧ್ಯಾರ್ಥಿಗಳ ಕೂಟ (ಅಲುಮ್ನಿ ಮೀಟ್) ಏರ್ಪಡಿಸೋಣ ಅಂತ ಯೋಜನೆ ಹಾಕಿ ಒಂದಷ್ಟು ಜನರಿಗೆ ಮಿಂಚೆ ಮಾಡಿದರು.. ಆ ಸರಣಿ ಮಿಂಚೆ ಅಂತೂ ಇಂತೂ ನನ್ ಕೈಗೆ ಬಂತು.. ಮಿಂಚೆಯ ಸಂದೇಶ ಕಂಡು ನನಗೆ ತುಂಬಾ ಖುಷಿ ಆಯ್ತು. ಏಕಂದ್ರೆ ತುಂಬಾ ವರ್ಷಗಳ ನಂತರ ನನ್ನ ಜೀವನದಲ್ಲಿ ಮರೆಯಲಾಗದ ಆ ೪ ವರ್ಷಗಳ ನಂಟು ಅಂಟಿಕೊಂಡ ಸ್ಥಳದಿಂದ ಕರೆಯೋಲೆ ಬಂದಿತ್ತು. ಆದರೆ ಮೊದಲ ಮಹತ್ವದ ಕೆಲಸ ವಿಧ್ಯಾರ್ಥಿಯ ಮಾಹಿತಿಯನ್ನು ಪಡೆಯುವುದಾಗಿತ್ತು ಹಾಗಾಗಿ ಮಿಂಚೆ ಕೈಸೇರಿದ ಪ್ರತಿ ವಿಧ್ಯಾರ್ಥಿಯು ತನ್ನ ಮಾಹಿತಿಯನ್ನು ಕೂಟ ಏರ್ಪಡಿಸುತ್ತಿದ್ದ ವ್ಯಕ್ತಿಗೆ ಮಿಂಚೆ ಮಾಡಬೇಕಿತ್ತು, ನನ್ಗೆ ಈ ಮಿಂಚೆ ಬಂದ ತಕ್ಷಣ ಹೊಳೆದ ಆಲೋಚನೆ ಯಾಕೆ ಈ ಕೂಟವನ್ನು ಕನ್ನಡ ವಿದ್ಯಾರ್ಥಿಗಳ ಒಳ್ಳೆಯದ್ದಕ್ಕಾಗಿ ಉಪಯೋಗಿಸಿಕೊಳ್ಳಬಾರದು ಅಂತ. ತತ್ ಕ್ಷಣವೆ ನಾನು ಒಂದು ಆನ್ಲೈನ್ ಗೂಗಲ್ ಅರ್ಜಿ (docs.google.com) ತಯಾರಿಸಿ ಅದರಲ್ಲಿ ಅವಶ್ಯಕವಿದ್ದ ಮಾಹಿತಿಯ ಪ್ರಶ್ನೆಯಗಳನ್ನು ಸೇರಿಸಿ. ಎಲ್ಲರಿಗೂ ಮಿಂಚೆ ಕಳಿಸಿದೆ, ನಿಮ್ಮ ಮಾಹಿತಿಯನ್ನು ನೀಡಲು ಈ ಅರ್ಜಿಯನ್ನೆ ಉಪಯೋಗಿಸಿ, ವೈಯಕ್ತಿಕ ಮಿಂಚೆಯನ್ನು ಕಳಿಸಬೇಡಿ ನಿರ್ವಹಿಸಲು ಕಷ್ಟವಾಗುತ್ತದೆ ಹಾಗಾಗಿ ಅರ್ಜಿ ಬಳಸಿ ಮಾಹಿತಿ ಆನ್ಲೈನ್ ಉಳಿದಿರುತ್ತದೆ ಹಾಗು ಲಾಗಿನ್ ಆಗಿ ವಿವರಗಳನ್ನು ನೋಡಲು ಸಹ ಸುಲಭ ಇರುತ್ತದೆಂದು ಮತ್ತೊಂದು ಸಮಜಾಯಿಷಿ ನೀಡಿದೆ. ಕಡೆಗೆ ತಾತ್ಕಾಲಿಕವಾಗಿ ಮಾಹಿತಿ ಕಲೆ ಹಾಕಲು ಸೃಷ್ಟಿಸಿದ ಆ ಅರ್ಜಿ ಹೊಸ ವೆಬ್ ಸೈಟ್ ಶುರು ಆಗೊವರೆಗು ಅಧಿಕೃತವಾಯಿತು ನನಗೆ ನೂರಾರು ಕನ್ನಡಿಗರ ಮಿಂಚೆ ಸಿಕ್ಕಿತ್ತು ಹಾಗೆಯೆ ಕೂಟದ ಕಾರ್ಯದರ್ಶಿಗಳ ಪರಿಚಯವೂ ಆಯಿತು. ಸೇವಾ ಮನೋಭಾವ ಇರುವ ಹಾಗು ಈಗಾಗಲೆ ವಿವಿಧ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ಜನರೂ ಸಿಕ್ಕರು.

ಈ ರೀತಿ ಪ್ರತಿ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ತಮ್ಮ ಕಾಲೇಜಿನ ಕನ್ನಡಿಗರ ಡೇಟಾಬೇಸ್ ಮಾಡಿಕೊಂಡರೆ ಕೇವಲ ಒಂದು ಮಿಂಚೆ ಇಡಿ ಕನ್ನಡ ವಿದ್ಯಾರ್ಥಿಗಳನ್ನು ತಲುಪಲು ಅಸಾಧ್ಯವೇನಲ್ಲ. ಕನ್ನಡಿಗರಿಗೆ ಹಿನ್ನಡೆ ಆಗಿರುವುದು ಪ್ರತಿಭೆಯ ಅಭಾವದಿಂದಲ್ಲ ಸರಿಯಾದ ಸಮಯಕ್ಕೆ ಸರಿಯಾದ ಜಾಗದಲ್ಲಿ ಇಲ್ಲದೆ ಇರುವುದು, ಇದು ಸಾಧ್ಯ ಆಗಬೇಕೆಂದರೆ ಮೊದಲು ವಿಷಯ ಙ್ಞ್ನಾನ ಮುಖ್ಯ ಹಾಗಾಗಿ ವಿಷಯ ತಲುಪಿಸಲು ನಾವು ಒಂದುಗೂಡಬೇಕಾಗಿದೆ. ಈ ವಿಧಾನವನ್ನು ನಾನು ನನ್ನ ಸ್ನೇಹಿತರೊಂದಿಗೆ ಸಹ ಚರ್ಚೆ ಮಾಡಿದೀನಿ ಈಗ ಕೈಯಲ್ಲಿ ೩ ಕಾಲೇಜಿನ ಡೇಟಾಬೇಸ್ ಕಲೆ ಹಾಕುವ ಕಾರ್ಯ ಶುರುವಾಗಿದೆ, ೩ ಕಾಲೇಜೆಂದರು ಉನ್ನತ ವ್ಯಾಸಂಗ ಮಾಡಲು ಇಚ್ಚಿಸುವವರನ್ನು, ಅನುತ್ತೀರ್ಣರಾದವರನ್ನು ಹಾಗು ಪರಭಾಷಿಕರನ್ನು ಬಿಟ್ಟು ಕನಿಷ್ಟ ೩೦೦೦ ವಿಧ್ಯಾರ್ಥಿಗಳು ಮಾಹಿತಿ ಕಲೆ ಹಾಕುವ ಗುರಿ ಇದೆ..
ಮತ್ತೊಂದು ವಿಚಾರ ಏನಂದ್ರೆ ನಾನು ಅರ್ಜಿಯಲ್ಲಿ ಒಂದು ಪ್ರಶ್ನೆಯನ್ನು ಸಹ ಹಾಕಿದೀನಿ, ನಿಮಗೆ ಸಮಾಜ ಸೇವೆ ಮಾಡುವ ಆಸಕ್ತಿ ಇದೆಯೆ? ಅಥವಾ ಈಗಾಗಲೆ ನಿಮ್ಮನ್ನು ಅಂತಹುದರಲ್ಲಿ ತೊಡಗಿಸಿಕೊಂಡಿದೀರಾ ಅಂತ.. ಇದಕ್ಕೆ ೩ ಆಯ್ಕೆ ೧. ಹೌದು, ಮಿಂಚೆ ಕಳಿಸಿ ೨. ಇಲ್ಲ, ಧನ್ಯವಾದ ೩ ಆಸಕ್ತಿ ಇದೆ, ಆದ್ರೆ ಸದ್ಯಕ್ಕೆ ಅಲ್ಲ ಅಂತ ಕೊನೆಯದು. ಆಶ್ಚರ್ಯವೆಂದರೆ ಇಷ್ಟು ಆಯ್ಕೆಯಲ್ಲಿ ೩ನೇಯದನ್ನೆ ಹೆಚ್ಚು ಜನರು ಆಯ್ಕೆ ಮಾಡಿಕೊಂಡವರು. ಇಂದೇ ಆಲೋಚಿಸದವರು ಮುಂದೆ ಏನು ಆಲೋಚಿಸಿಯಾರು? ಅಂತ ತಲೆ ಕೆರೆದುಕೊಂಡು ನಿರ್ಲಕ್ಷ್ಯ ಮಾಡಿದೆ, ಕಾರಣಗಳು ಕೇಳುವ ಅವಶಯಕತೆಯಿಲ್ಲ ಏಕೆಂದರೆ ಇವರಿಗೆ ಜೀವನದುದ್ದಕ್ಕೂ ಏನಾದರು ಒಂದು ಕಾರಣ ಇದ್ದೆ ಇರುತ್ತದೆ ಇಂತಹವನ್ನು ತಳ್ಳಿ ಹಾಕಲು. ನಿಮ್ಮಲ್ಲಿ ಯಾರಿಗಾದರು ಈ ಆಲೊಚನೆಯಲ್ಲಿ ಹುರುಳಿದೆ ಅಂತ ಅನಿಸಿ ಕೈ ಜೋಡಿಸುವ ಮನಸ್ಸು ಮೂಡಿದರೆ ದಯವಿಟ್ಟು ನನಗೆ ತಿಳಿಸಿ, ಮುಂದಿನ ವಿಚಾರಗಳನ್ನು ಮಾತನಾಡುವ ಹಾಗೆಯೆ ನಿಮಗೆ ಈ ಯೋಜನೆಯಲ್ಲಿ ಏನಾದರು ಬದಲಾವಣೆ ಮಾಡಿದರೆ ಇನ್ನೂ ಒಳಿತು ಎನ್ನುವ ಹಾಗಿದ್ದರೆ ದಯವಿಟ್ಟು ತಿಳಿಸಿ...

೧. ಡಿವಿಜಿ ಯವರ ೧೨೨ನೇಯ ಜನ್ಮದಿನದ ಅಂಗವಾಗಿ SSS ಬಳಗದವರಿಂದ ೧೭ ಮಾರ್ಚಿ ಬೆಂಗಳೂರಿನಲ್ಲಿರುವ ADA ರಂಗ ಮಂದಿರ ಟೌನ್ ಹಾಲ್ ನ ಹತ್ತಿರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಡಿವಿಜಿಯವರ ಅಭಿಮಾನಿಗಳು ದೇಣಿಗೆ ನೀಡಲು ಅಥವಾ ಕಾರ್ಯಕ್ರಮದ ಬಗ್ಗೆ ತಿಳಿದುಕೊಳ್ಳಲು sssamaja-at-gmail-dot-com ಗೆ ಮಿಂಚೆ ಕಳಿಸಿ. ಕಾರ್ಯಕರ್ತರ ವಿಳಾಸ ಅಥವಾ ಮೊಬೈಲ್ ಸಂಖ್ಯೆ ಬೇಕಿದ್ದಲ್ಲಿ ನನಗೆ ಮಿಂಚೆಯನ್ನು ಕಳಿಸಿ.
೨. ಅವಿರತ ಸಂಸ್ಥೆಯು ಹಮ್ಮಿ ಕೊಂಡಿರುವ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು kts_gowda-at-yahoo-dot-com ಇವರಿಗೆ ಮೈಲ್ ಮಾಡಿ. ನೀವು ನಿಮ್ಮ ಕಂಪನಿಯಲ್ಲಿ ಒಂದಷ್ಟು ಜನ ಸೇರಿ ಕೂಡ ದಾನ ಮಾಡಬಹುದು. ಹಣ ಕಳಿಸಲು ಆನ್ಲೈನ್ ಸೌಕರ್ಯ ಸಹ ಇದೆ. ಆನ್ಲೈನ್ ಖಾತೆಯ ಸಂಖ್ಯೆ ಹಾಗು ಇತರ ಮಾಹಿತಿಗೆ ಅವಿರತ ಸಂಸ್ಥೆಯ ಅಧ್ಯಕ್ಷರಾದ ಗೌಡ ಅವರನ್ನು ಸಂಪರ್ಕಿಸಬಹುದು.

*ಯೆನ್ನಡಿಗ ಅಂದರೆ ಪರಭಾಷಿಕ ಅಂತ ಅರ್ಥೈಸಬಹುದು ಆದರೂ ಮೂಲ ಪದ ತಮಿಳಿನ "ಯೆನ್ನ - ಏನು" ಅನ್ನುವುದನ್ನು ತೆಗೆದುಕೊಂಡಿದ್ದೇನೆ. "ಕನ್ನಡ ಅಂದ್ರೆ ಯೆನ್ನ-ಡ" ಅನ್ನೊ ಪರಿಸ್ಥಿತಿ ಅಲ್ಲವೆ!!!

ನಿಮ್ಮ ಅನಿಸಿಕೆ ಅಭಿಪ್ರಾಯಗಳು ಸ್ವಾಗತ..
ಪ್ರಸಾದ್

No comments: